Last Updated:
ಟಾಕ್ಸಿಕ್ ಚಿತ್ರದಲ್ಲಿ ಭಟ್ರು ಹೃದಯ ತಟ್ಟುವ ಒಂದು ಹಾಡು ಬರೆದಿದ್ದಾರೆ. ಕಲ್ಪನೆಯಲ್ಲಿ ಜೀವನ ಹೂವು..ಜೀವಿಸುವಾಗ ಸಾವಿರ ನೋವು ಅಂತಲೇ ಚರಣದಲ್ಲಿ ಬರುತ್ತದೆ. ಇದರ ಪಲ್ಲವಿ ಇನ್ನೂ ಟಚ್ ಆಗುತ್ತೆ. ಆರದ ಗಾಯಕವ ಕೊರೆದು, ಸಮಯ ನಗುತ್ತಿದೆ ಅನ್ನುವ ಸಾಲು ಎಳೆದು ಬಿಡುತ್ತದೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದಲ್ಲಿ (Toxic Movie) ವೈಲ್ಡ್ ರೋಮ್ಯಾನ್ಸ್ (Wild Romance) ಇದೆ. ಇದರಲ್ಲಿ ಎಲ್ಲವೂ ಓವರ್ ಅನ್ನುವ ಭಾವನೆ ಮೂಡಿದೆ. ಆದರೆ,ಇಲ್ಲೊಂದು ಆಳವಾದ ನೋವು ಇದೆ. ಇನ್ನೂ ಆಳಕ್ಕೆ ಕರೆದುಕೊಂಡು ಹೋಗುವ ಪ್ರೀತಿನೂ ಇದೆ. ಇದನ್ನ ಯೋಗರಾಜ್ ಭಟ್ರ (Yogaraj Bhat) ಸಾಲುಗಳಲ್ಲಿಯೇ ಫೀಲ್ ಮಾಡಿಕೊಳ್ಳಬಹುದು. ಆರದ ಗಾಯ (Aaradha Gaaya) ಅನ್ನುವ ಹಾಡಿನಲ್ಲಿಯೆ ಇದರ ಚಿತ್ರಣ ದೊರೆಯುತ್ತಿದೆ. ಈ ಹಾಡಿನ ಸುತ್ತ ಇರೋ ಒಂದು ಸ್ಟೋರಿ ಇಲ್ಲಿದೆ ಓದಿ.














