Last Updated:
Yash Toxic: ‘ಟಾಕ್ಸಿಕ್’ ಬಿಗ್ ಹಿಂಟ್ ರಿವೀಲ್ ಮಾಡಿದ ಕಿಯಾರಾ ಅಡ್ವಾಣಿ! ಬ್ಲಾಕ್ ಬಾಸ್ಟರ್ ಪಕ್ಕನಾಬಾಂಬೆ ಟೈಮ್ಸ್ ಜೊತೆ ಮಾತನಾಡಿದ ಕಿಯಾರಾ ಅಡ್ವಾಣಿ, ತಮ್ಮ ಪಾತ್ರ, ನಾಡಿಯಾ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಪಾತ್ರವು ಪ್ರೀತಿ, ಸಂಬಂಧಗಳು ಮತ್ತು ವ್ಯಕ್ತಿಗಳನ್ನು ನೋಡುವ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಯ ಕುರಿತ ಗೊಂದಲಗಳು ಈಗ ಭಾರತೀಯ ಚಿತ್ರರಂಗದಲ್ಲೇ ಚರ್ಚೆಯಾಗಿವೆ. ಆರಂಭದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ಈ ಸಿನಿಮಾ, ಪದೇ ಪದೇ ಬಿಡುಗಡೆಯ ದಿನಾಂಕ ಮುಂದಕ್ಕೆ ಸರಿಯುತ್ತಿರುವ ಕಾರಣ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಚರ್ಚೆಗಳು ಹೆಚ್ಚುತ್ತಿವೆ. ಈ ನಡುವೆ, ನಟಿ ಕಿಯಾರಾ ಶೂಟಿಂಗ್ ಅನುಭವ ಹಂಚಿಕೊಂಡಿರುವುದು ಸಿನಿಮಾ ಬಗ್ಗೆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಟಾಕ್ಸಿಕ್ ಚಿತ್ರದ ರಿಲೀಸ್ ಡೇಟ್ ಘೋಷಣೆ ಆಗುತ್ತಿದ್ದಂತೆ ರಾಷ್ಟ್ರಮಟ್ಟದಲ್ಲಿ ಭಾರೀ ಕುತೂಹಲ ಸೃಷ್ಟಿಸಿತು. ಸ್ಟಾರ್ ಕಾಸ್ಟ್, ವಿಭಿನ್ನ ಥೀಮ್ ಹಾಗೂ ಗೀತು ಮೋಹನ್ದಾಸ್ ಅವರ ನಿರ್ದೇಶನ ಶೈಲಿ, ಈ ಸಿನಿಮಾವನ್ನು ಹೆಚ್ಚು ದೊಡ್ಡ ಮಟ್ಟಕ್ಕೆ ಕೊಂಡುಹೋಗಿತ್ತು. ಆದರೆ, ಚಿತ್ರದ ಬಿಡುಗಡೆಯ ದಿನಾಂಕ ನಿರಂತರವಾಗಿ ಮುಂದೂಡುತ್ತಿರುವುದು ಅಭಿಮಾನಿಗಳಲ್ಲಿ ಚರ್ಚೆ ಹುಟ್ಟುಹಾಕಿದೆ.
ಬಾಂಬೆ ಟೈಮ್ಸ್ ಜೊತೆ ಮಾತನಾಡಿದ ಕಿಯಾರಾ ಅಡ್ವಾಣಿ, ತಮ್ಮ ಪಾತ್ರ, ನಾಡಿಯಾ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಪಾತ್ರವು ಪ್ರೀತಿ, ಸಂಬಂಧಗಳು ಮತ್ತು ವ್ಯಕ್ತಿಗಳನ್ನು ನೋಡುವ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಸ್ಕ್ರಿಪ್ಟ್ ನಿರೂಪಿಸಿದಾಗ, ಪಾತ್ರದ ಅನೇಕ ಮುಖ್ಯ ಅಂಶಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸ್ವಲ್ಪ ಸಮಯ ಬೇಕಾಯಿತು. ಆದರೆ ಅದೇ ಪಾತ್ರದ ವಿಶೇಷತೆ ಎಂದು ನಟಿ ಹೇಳಿಕೊಂಡಿದ್ದಾರೆ.
ಈ ಚಿತ್ರವನ್ನು Kvn ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿವೆ. ಪ್ರಮುಖ ಪಾತ್ರಗಳಲ್ಲಿ ಯಶ್ ಜೊತೆಗೆ ನಯನತಾರ , ಕಿಯಾರಾ ಅಡ್ವಾಣಿ, ಹುಮಾ ಖುರೇಷಿ , ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ನಟಿಸುತ್ತಿದ್ದಾರೆ.
ಆರಂಭದಲ್ಲಿ 2026ರ ಜೂನ್ 4 ರಂದು ಬಿಡುಗಡೆಯಾಗಬೇಕಿದ್ದ ಟಾಕ್ಸಿಕ್ ಈಗ ಮತ್ತೊಮ್ಮೆ ಮುಂದೂಡಲಾಗಿದೆ. ಹೊಸ ಬಿಡುಗಡೆಯ ದಿನಾಂಕವನ್ನು ಇನ್ನೂ ಅಧಿಕೃತವಾಗಿ ತಿಳಿಸಿಲ್ಲ. ನಿರ್ಮಾಪಕರಿಂದ ಯಾವುದೇ ಸ್ಪಷ್ಟನೆ ಬರದಿದ್ದರೂ, ಪ್ರಾಜೆಕ್ಟ್ನ ದೊಡ್ಡ ಪ್ರಮಾಣ, ಗ್ರಾಫಿಕ್ ಕೆಲಸಗಳು ಮತ್ತು ತಾಂತ್ರಿಕ ಕೆಲಸಗಳು ವಿಳಂಬಕ್ಕೆ ಕಾರಣ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ಇನ್ನು ಟಾಕ್ಸಿಕ್ ಸಿನಿಮಾ ತಂಡ ಇದೀಗ ಮುಂಬೈನಲ್ಲಿ ಪ್ರಮುಖ ದೃಶ್ಯಗಳನ್ನು ಮರು ಚಿತ್ರೀಕರಿಸುತ್ತಿದೆ. ರೀ ಶೂಟ್ ಸೆಟ್ನಿಂದ ಹಲವು ಮೇಕಿಂಗ್ ಫೋಟೋಗಳು ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ವಿಶೇಷವಾಗಿ ಯಶ್ ಅವರ ಪಾತ್ರ ‘ರಾಯ’ನ ಹೊಸ ಗೇಟ್ಅಪ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ತಂಡ ರೀ ಶೂಟ್ ಮಾಡುವುದಕ್ಕೆ ಕಾರಣವನ್ನು ಅಧಿಕೃತವಾಗಿ ತಿಳಿಸದಿದ್ದರೂ, ಚಿತ್ರದ ಗುಣಮಟ್ಟವನ್ನು ಹೆಚ್ಚಿಸಲು ಈ ಪ್ರಕ್ರಿಯೆ ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಟಾಕ್ಸಿಕ್ ಚಿತ್ರದ ಅತೀ ದೊಡ್ಡ ಆಕರ್ಷಣೆ ಎಂದರೆ ಯಶ್ ಅವರ ಡಬಲ್ ಆಕ್ಟಿಂಗ್. ಎರಡು ವಿಭಿನ್ನ ಶೇಡ್ಗಳ ಪಾತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದು, ಈ ಬಾರಿ ಅವರ ಅಭಿಮಾನಿಗಳು ಹಿಂದೆಂದೂ ನೋಡದ ರೀತಿಯ ಹೊಸ ಅವತಾರಗಳನ್ನು ಪರದೆಯ ಮೇಲೆ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ರಾಯ ಎಂಬ ಮುಖ್ಯ ಪಾತ್ರದ ಹೊಸ ಫೋಟೋಗಳನ್ನು ಚಿತ್ರತಂಡ ರಿವೀಲ್ ಮಾಡಿತ್ತು.
Bangalore [Bangalore],Bangalore,Karnataka













