Last Updated:
ಪ್ಯಾರಿಸ್ ಸಮೀಪದ ಬುಸ್ಸಿ-ಸೇಂಟ್-ಜಾರ್ಜಸ್ನ ಮೇಯರ್ ಯಾನ್ ಡುಬೋಸ್ಕ್, ಕಳೆದ ಹತ್ತು ವರ್ಷಗಳಲ್ಲಿ ನಗರದೊಂದಿಗೆ BAPS ಹೊಂದಿರುವ ಸಕಾರಾತ್ಮಕ ಮತ್ತು ಪಾರದರ್ಶಕ ಬಾಂಧವ್ಯವನ್ನ ಶ್ಲಾಘಿಸಿದ್ದಾರೆ.
ಹತ್ತು ವರ್ಷಗಳ ನಂಬಿಕೆ ಮತ್ತು ಪಾರದರ್ಶಕತೆಯನ್ನು ಉಲ್ಲೇಖಿಸಿ BAPS ಅನ್ನು ಶ್ಲಾಘಿಸಿದ ಫ್ರೆಂಚ್ ಮೇಯರ್ ಯಾನ್ ಡುಬೋಸ್ಕ್ (Yann Dubosc) ಅವರು ಬುಸ್ಸಿ-ಸೇಂಟ್-ಜಾರ್ಜಸ್ನಲ್ಲಿ BAPS ನ ಮುಕ್ತತೆ, ಗೌರವಯುತ ನಡವಳಿಕೆ ಮತ್ತು ಅಂತರ್-ಧರ್ಮೀಯ ಸಾಮರಸ್ಯಕ್ಕೆ ನೀಡಿದ ಸಕ್ರಿಯ ಕೊಡುಗೆ ಬಗ್ಗೆ ಕೊಂಡಾಡಿದ್ದಾರೆ. BAPS ಸ್ವಾಮಿನಾರಾಯಣ ಹಿಂದೂ ಮಂದಿರದ ವಿಚಾರವಾಗಿ ಮತ್ತು ಧಾರ್ಮಿಕ ಸಾಮರಸ್ಯದ ಕುರಿತು ಯಾನ್ ಡುಬೋಸ್ಕ್ ಹೇಳಿಕೆ ಜಾಗತಿಕವಾಗಿ ಗಮನ ಸೆಳೆದಿದ್ದಾರೆ.














