WTC 2025-27: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂತಿಮ ದಿನಾಂಕ ಘೋಷಣೆ! ಈ ಬಾರಿ ಫೈನಲ್ ಪಂದ್ಯ ನಡೆಯೋದು ಎಲ್ಲಿ ಗೊತ್ತಾ? | ಕ್ರೀಡಾ ಸುದ್ದಿ | ACTPnews

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್


Last Updated:

2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಸಂಬಂಧಿಸಿದಂತೆ ಐಸಿಸಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂತಿಮ ದಿನಾಂಕ ಘೋಷಣೆಯಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್

ಮುಂದಿನ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ನಡೆಯಲಿದೆ. ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ. ಪ್ರಶಸ್ತಿ ಹಣ ಮತ್ತು ಯಾವ ತಂಡಗಳು (Teams) ಆಡುತ್ತವೆ ಎಂದು ಇನ್ನೂ ತಿಳಿದಿಲ್ಲವಾದರೂ, ಫೈನಲ್‌ನ ದಿನಾಂಕ (Date) ಮತ್ತು ಸ್ಥಳವನ್ನು ಘೋಷಿಸಲಾಗಿದೆ. ಈ ಬಾರಿಯೂ ಫೈನಲ್ ಇಂಗ್ಲೆಂಡ್‌(England)ನಲ್ಲಿ ನಡೆಯಲಿದೆ ಎಂದು ದೃಢಪಡಿಸಲಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ನಾಲ್ಕನೇ ಸುತ್ತಿನ ಪಂದ್ಯಗಳು ಈಗ ನಡೆಯುತ್ತಿವೆ. ಇದರ ನಡುವೆ ಮುಂದಿನ ವರ್ಷ ಫೈನಲ್ ನಡೆಯಲಿದೆ ಎಂದು ಐಸಿಸಿ ಘೋಷಿಸಿದೆ. ಅಂಕಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಎರಡು ತಂಡಗಳು ಪ್ರಶಸ್ತಿಗಾಗಿ ಸ್ಪರ್ಧಿಸುತ್ತವೆ. ಜೂನ್ 9 ರಿಂದ 13 ರವರೆಗೆ ಇಂಗ್ಲೆಂಡ್‌ನ ದಿ ಓವಲ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ದಿ ಓವಲ್ ಮೈದಾನವು ಡಬ್ಲ್ಯೂಟಿಸಿ ಫೈನಲ್ ಪಂದ್ಯವನ್ನು ಆಯೋಜಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಯೋಜಿಸಲಾಗಿದ್ದ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪ್ರಸ್ತುತ ಆವೃತ್ತಿಯ ಫೈನಲ್ ಪಂದ್ಯವನ್ನು ಲಾರ್ಡ್ಸ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈಗ ಸ್ಥಳವನ್ನು ಲಾರ್ಡ್ಸ್‌ನಿಂದ ದಿ ಓವಲ್‌ಗೆ ಸ್ಥಳಾಂತರಿಸಲಾಗಿದೆ.

ಮುಂದಿನ ಫೈನಲ್ ಪಂದ್ಯಗಳು!

ಇದೇ ಮೈದಾನದಲ್ಲಿ 2023ರಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಸೋಲಿಸಿ ಮೊದಲ ಬಾರಿಗೆ ಡಬ್ಲ್ಯೂಟಿಸಿ ಪ್ರಶಸ್ತಿ ಗೆದ್ದಿತು. ಕಳೆದ ವರ್ಷ ಐಸಿಸಿ 2027, 2029 ಮತ್ತು 2031ರ ಡಬ್ಲ್ಯೂಟಿಸಿ ಫೈನಲ್‌ಗಳನ್ನು ಇಂಗ್ಲೆಂಡ್ (ECB)ಗೆ ನೀಡಿದೆ. ಇದರಲ್ಲಿ 2027ರ ಫೈನಲ್ ಓವಲ್ ಮೈದಾನದಲ್ಲಿ ನಡೆಯಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ

ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಟೇಬಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನದಲ್ಲಿದೆ. ಆಸೀಸ್ 8 ಪಂದ್ಯಗಳನ್ನು ಆಡಿ 7 ಗೆದ್ದು 1 ಸೋತಿದ್ದು, ಪಿಸಿಟಿ 87.50 ಆಗಿದೆ. ದಕ್ಷಿಣ ಆಫ್ರಿಕಾ 4 ಪಂದ್ಯಗಳನ್ನು ಆಡಿ 3 ಗೆದ್ದು 1 ಸೋತಿದೆ. ಪಿಸಿಟಿ 75.00 ಯೊಂದಿಗೆ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ, ಬಾಂಗ್ಲಾದೇಶ ನಾಲ್ಕನೇ ಸ್ಥಾನದಲ್ಲಿದರೆ, ಟೀಮ್ ಇಂಡಿಯಾ ಐದನೇ ಸ್ಥಾನದಲ್ಲಿದೆ.

ಟೀಮ್ ಇಂಡಿಯಾ ಗೆಲುವಿನ ಚಾನ್ಸ್?

ಭಾರತ ತಂಡವು ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ 9 ಪಂದ್ಯಗಳನ್ನು ಆಡಿದೆ. ಅವುಗಳಲ್ಲಿ ಕೇವಲ 4 ಪಂದ್ಯಗಳನ್ನು ಮಾತ್ರ ಗೆದ್ದಿದ್ದು, 4 ಪಂದ್ಯಗಳಲ್ಲಿ ಸೋತಿದೆ. ಒಂದು ಪಂದ್ಯ ಡ್ರಾ ಆಗಿದೆ. ಆದ್ದರಿಂದ ಟೀಮ್ ಇಂಡಿಯಾ ಪ್ರಸ್ತುತ ಪಾಯಿಂಟ್ ಪರ್ಸೆಂಟೇಜ್ 48.15 ಆಗಿದೆ.

ಈಗ ಆಗಸ್ಟ್‌ನಲ್ಲಿ ಭಾರತ ತಂಡವು ಶ್ರೀಲಂಕಾ ಪ್ರವಾಸಕ್ಕೆ ಹೋಗಲಿದೆ. ಅಲ್ಲಿ ಎರಡು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರುತ್ತದೆ. ಈ ಸರಣಿಯಲ್ಲಿ ಭಾರತ ಗೆದ್ದರೆ ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೆ ಏರಲು ಸಹಾಯವಾಗುತ್ತದೆ. ಆದರೆ ಈ ಸರಣಿ ಸುಲಭವಲ್ಲ. ಶ್ರೀಲಂಕಾ ಸರಣಿಯ ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports