Women’s T20 World Cup: ಪಂದ್ಯ ಗೆದ್ದರೂ ಬಾಂಗ್ಲಾದೇಶದ ವಿರುದ್ಧ ಕೆಟ್ಟ ದಾಖಲೆ ಬರೆದ ಭಾರತ ಮಹಿಳಾ ತಂಡ! ಟಿ20 ಇತಿಹಾಸದಲ್ಲೇ ಇದೇ ಮೊದಲು | ಕ್ರೀಡಾ ಸುದ್ದಿ | ACTPnews

ಭಾರತ ತಂಡ


Last Updated:

ಮಹಿಳಾ ಟಿ 20 ಅಂತರರಾಷ್ಟ್ರೀಯ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ ತಂಡವೊಂದು ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟಿದ್ದು ಇದು ಎರಡನೇ ಬಾರಿ, ಆದರೆ ಭಾರತ ಕೇವಲ 17 ಎಸೆತಗಳಲ್ಲಿ 4 ಕ್ಯಾಚ್ ಬಿಟ್ಟು ಕಳಪೆ ಸಾಧನೆ ಮಾಡಿತು.

ಭಾರತ ತಂಡ
ಭಾರತ ತಂಡ

ಮ್ಯಾಂಚೆಸ್ಟರ್​​ನ ಓಲ್ಡ್ ಟ್ರಾಫರ್ಡ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ (Bangladesh vs India) ನಿರ್ಣಾಯಕ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ (India Women Team) ತಂಡವು ಅನಗತ್ಯ ದಾಖಲೆ ಬರೆದಿದೆ. ಯಾವುದೇ ತಂಡವು ಎಂದಿಗೂ ನೆನಪಿಟ್ಟುಕೊಳ್ಳಲು ಬಯಸದಂತಹ ಕೆಟ್ಟ ದಾಖಲೆಗೆ ಪಾತ್ರವಾಗಿದೆ. ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದ ಫೀಲ್ಡರ್‌ಗಳು ಮೈದಾನದಲ್ಲಿ ಕಳಪೆ ಫೀಲ್ಡಿಂಗ್ ಮೂಲಕ ಕ್ಯಾಚ್​ಗಳನ್ನ ಕೈಚೆಲ್ಲಿ ನಾಚಿಕೆಗೇಡಿನ ದಾಖಲೆಗೆ ಪಾತ್ರರಾದರು. ಮಹಿಳಾ ಟಿ 20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಪಂದ್ಯದ ಮೊದಲ ಐದು ಓವರ್‌ಗಳಲ್ಲಿ ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟ ಮೊದಲ ತಂಡ ಎನಿಸಿಕೊಂಡಿತು. ಮಹಿಳಾ ಟಿ 20 ಅಂತರರಾಷ್ಟ್ರೀಯ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ ತಂಡವೊಂದು ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟಿದ್ದು ಇದು ಎರಡನೇ ಬಾರಿ, ಆದರೆ ಭಾರತ ಕೇವಲ 17 ಎಸೆತಗಳಲ್ಲಿ 4 ಕ್ಯಾಚ್ ಬಿಟ್ಟು ಕಳಪೆ ಸಾಧನೆ ಮಾಡಿತು.

ನಾಲ್ಕು ಕ್ಯಾಚ್ ಬಿಟ್ಟ ಭಾರತ

ಭಾರತ ತಂಡದ ಈ ಕ್ಯಾಚ್ ಕೈಚೆಲ್ಲುವ ಕಳಪೆ ಆಟ ಮೂರನೇ ಓವರ್‌ನ ಐದನೇ ಎಸೆತದಲ್ಲಿ ಪ್ರಾರಂಭವಾಯಿತು. ಬಾಂಗ್ಲಾದೇಶದ ಆರಂಭಿಕ ಆಟಗಾರ್ತಿ ಜುವೇರಿಯಾ ಫಿರ್ದೌಸ್ ಬೌಲರ್ ಶ್ರೀ ಚರಣಿ ಅವರ ಎಸೆತವನ್ನು ಸ್ವೀಪ್ ಶಾಟ್ ಮಾಡಲು ಯತ್ನಿಸಿದರು. ಚೆಂಡು ಗಾಳಿಯಲ್ಲಿ ಹಾರಿ ಶಾರ್ಟ್ ಫೈನ್ ಲೆಗ್ ಕಡೆಗೆ ಹೋಯಿತು. ಚೆಂಡನ್ನು ಗುರುತಿಸಿದ ಯಾಸ್ತಿಕಾ ಭಾಟಿಯಾ ವೇಗವಾಗಿ ಓಡಿ ಅದ್ಭುತವಾದ ಡೈವ್ ಅನ್ನು ಮಾಡಿದರು. ಆದರೆ ಯಾಸ್ತಿಕಾ ಚೆಂಡನ್ನ ಹಿಡಿಯಲು ವಿಫಲರಾದರು. ಡ್ರಾಪ್ ಕ್ಯಾಚ್ ಆಯಿತು.

ಬುದ್ದಿ ಕಲಿಯದ ರಾಧಾ ಯಾದವ್

ನಾಲ್ಕನೇ ಓವರ್‌ನ ಕೊನೆಯ ಎಸೆತದಲ್ಲಿ ಜುವೇರಿಯಾಗೆ ಎರಡನೇ ಜೀವ ಸಿಕ್ಕಿತು. ಈ ಬಾರಿ, ಬೌಲರ್ ರೇಣುಕಾ ಸಿಂಗ್ ಬೌಲಿಂಗ್​​ನಲ್ಲಿ ರಾಧಾ ಯಾದವ್​ ಕೈಬಿಟ್ಟರು. ರೇಣುಕಾ ನೀಡಿದ ಶಾರ್ಟ್ ಎಸೆತವನ್ನ ಜುವೇರಿಯಾ ಪುಲ್ ಮಾಡಲು ಪ್ರಯತ್ನಿಸಿದರು. ಚೆಂಡು ನೇರವಾಗಿ ಡೀಪ್ ಮಿಡ್‌ ವಿಕೆಟ್‌ನಲ್ಲಿ ನಿಂತಿದ್ದ ರಾಧಾ ಯಾದವ್ ಅವರ ಕೈಗೆ ಹೋಯಿತು. ಇದು ಸರಳ ಮತ್ತು ನೇರವಾದ ಕ್ಯಾಚ್ ಆಗಿತ್ತು, ಆದರೆ ಚೆಂಡು ರಾಧಾ ಅವರ ಕೈಯಿಂದ ಜಾರಿ ಬಾಂಡರಿ ಸೇರಿತು. ಇಂತಹ ಸುಲಭ ಕ್ಯಾಚ್ ಬಿಟ್ಟಿದ್ದಕ್ಕೆ ಮೈದಾನದಲ್ಲಿದ್ದ ಎಲ್ಲರೂ ದಿಗ್ಭ್ರಮೆಗೊಂಡರು.

ಎರಡು ಕ್ಯಾಚ್ ಕೈಚೆಲ್ಲಿದ ನಂದನಿ 

ಶೋಭನಾ ಮೊಸ್ತಾರಿ ಶ್ರೀ ಚರಣಿಯ ಬೌಲಿಂಗ್​​ನಲ್ಲಿ ಡ್ರೈವ್ ಶಾಟ್ ಮಾಡಿದರು. ಚೆಂಡು ಅವರ ಬ್ಯಾಟ್‌ನ ಹೊರ ಅಂಚನ್ನು ಸವರಿ ಫೀಲ್ಡರ್ ನಂದನಿ ಶರ್ಮಾ ನಿಂತಿದ್ದ ಕವರ್‌ಗಳ ಕಡೆಗೆ ಹಾರಿತು. ನಂದಿನಿ ತನ್ನ ಎಡಕ್ಕೆ ಡೈವ್ ಮಾಡಿ, ಎರಡೂ ಕೈಗಳಿಂದ ಚೆಂಡನ್ನ ಪಡೆದರಾದರೂ, ಅದು ಅವರ ಹಿಡಿತದಿಂದ ಜಾರಿತು.

ಕೇವಲ ಒಂದು ಎಸೆತದ ನಂತರ, ಜುವೇರಿಯಾ ಫಿರ್ದೌಸ್ ಮತ್ತೊಮ್ಮೆ ಭಾರತೀಯ ಫೀಲ್ಡರ್‌ಗಳನ್ನು ಮತ್ತೊಮ್ಮೆ ಪರೀಕ್ಷಿಸಿದರು. ಜುವೇರಿಯಾ ಅವರ ಟಾಪ್-ಎಡ್ಜ್ಡ್ ಆಗಿ ಶಾರ್ಟ್ ಥರ್ಡ್ ಕಡೆಗೆ ಹಾರಿಸಿತು. ತನ್ನ ಹಿಂದಿನ ತಪ್ಪಿಗೆ ತಕ್ಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಂದನಿ ಶರ್ಮಾ ವೇಗವಾಗಿ ಓಡಿ ಚೆಂಡಿನ ಕಡೆಗೆ ಹಾರಿದರು. ಆದರೆ ಈ ಬಾರಿಯೂ ಚೆಂಡನ್ನ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾದರು. ಈ ಮೂಲಕ 17 ಎಸೆತಗಳಲ್ಲಿ ಭಾರತದ ನಾಲ್ಕನೇ ಡ್ರಾಪ್ ಕ್ಯಾಚ್ ಮಾಡಿತು.

ತಪ್ಪು ಸರಿಪಡಿಸಿಕೊಳ್ಳದಿದ್ದರೆ ಸೋಲು ಖಚಿತ

ಬಾಂಗ್ಲಾದೇಶ ತಂಡವಾಗಿದ್ದರಿಂದ ಈ ಕ್ಯಾಚ್​ಗಳು ದೊಡ್ಡ ಪರಿಣಾಮ ಬೀರಲಿಲ್ಲ. ಆದರೆ ಕಳೆದ ಪಂದ್ಯದಲ್ಲಿ ಇದರ ಪರಿಣಾಮ ಭಾರತ ಅನುಭವಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಹಿಂದಿನ ಪಂದ್ಯದಲ್ಲಿ ಅವರು ಎರಡು ನಿರ್ಣಾಯಕ ಕ್ಯಾಚ್‌ಗಳನ್ನು ಕೈಬಿಟ್ಟಿದ್ದರು. ಅದರಲ್ಲಿ ಮರಿಝಾನ್​ ಕಾಪ್ ಅವರ ಮ್ಯಾಚ್​ ವಿನ್ನಿಂಗ್ ಕ್ಯಾಚ್ ಕೂಡ ಒಂದು. ಈ ತಪ್ಪು ಈ ಪಂದ್ಯದಲ್ಲಿ ತಂಡಕ್ಕೆ ಭಾರಿ ಹೊಡೆತ ನೀಡಿತು. ಭಾರತ ಕೊನೆಯ ಓವರ್​​ನಲ್ಲಿ ಪಂದ್ಯವನ್ನ ಸೋತು ನೇರವಾಗಿ ಸೆಮಿಫೈನಲ್ ಪ್ರವೇಶಿಸಉವ ಅವಕಾಶ ಕಳೆದುಕೊಂಡಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed