Women’s T20 WC 2026: ವಿರಾಟ್ ಕೊಹ್ಲಿ ಅಭಿಮಾನಿಯ ಸ್ಪೋಟಕ ಶತಕ! ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ತಂಡಕ್ಕೆ ಶುಭಾರಂಭ | ಕ್ರೀಡಾ ಸುದ್ದಿ | ACTPnews

ಡ್ಯಾನಿ ವೈಟ್


Last Updated:

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ನಲ್ಲಿ ಆತಿಥೇಯ ಇಂಗ್ಲೆಂಡ್ ಗ್ರೂಪ್ ಬಿ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿ ಗೆಲುವಿನ ಶುಭಾರಂಭ, ಡ್ಯಾನಿ ವೈಟ್ ಶತಕದ ಮಿಂಚು

ಡ್ಯಾನಿ ವೈಟ್
ಡ್ಯಾನಿ ವೈಟ್

ಐಸಿಸಿ (ICC) 2026 ರ ಮಹಿಳಾ ಟಿ20 ವಿಶ್ವಕಪ್ (World Cup) ಅಬ್ಬರದಿಂದ ಆರಂಭವಾಯಿತು. ಆರಂಭಿಕ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ (England) ತಂಡವು ಗ್ರೂಪ್ ಬಿ ನಲ್ಲಿ ಶ್ರೀಲಂಕಾ (Sri Lanka) ವನ್ನು ಎದುರಿಸಿತು. ಇಂಗ್ಲೆಂಡ್ ಮಹಿಳಾ ತಂಡವು ಪಂದ್ಯದಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿತು. ಶ್ರೀಲಂಕಾ ತಂಡವನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ಶುಭಾರಂಭ ಮಾಡಿದೆ. ಬರ್ಮಿಂಗ್ಹ್ಯಾಮ್‌(Birmingham)ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿ ಮತ್ತು ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಡ್ಯಾನಿ ವೈಟ್ (Danny White) ಸ್ಪೋಟಕ ಶತಕ (Century) ಸಿಡಿಸಿ ಮಿಂಚಿದರು. ಟಿ20 ವಿಶ್ವಕಪ್ 2026 ರ ಟೂರ್ನಿಯಲ್ಲಿ ಇಂಗ್ಲೆಂಡ್ ಅದ್ಭುತ ಆರಂಭವನ್ನು ಪಡೆಯುವಲ್ಲಿ ಡ್ಯಾನಿ ಪ್ರಮುಖ ಪಾತ್ರ ವಹಿಸಿದರು. 

ಇಂಗ್ಲೆಂಡ್ ಅದ್ಭುತ ಆರಂಭವನ್ನು ಪಡೆಯುವಲ್ಲಿ ಡ್ಯಾನಿ ಪ್ರಮುಖ ಪಾತ್ರ ವಹಿಸಿದರು. 

ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆಮಿ ಜೋನ್ಸ್ ಮತ್ತು ಡ್ಯಾನಿ ವೈಟ್-ಹಾಡ್ಜ್ ತಂಡಕ್ಕೆ 135 ರನ್‌ಗಳ ಜೊತೆಯಟವನ್ನು ಹಂಚಿಕೊಂಡರು. 14 ನೇ ಓವರ್‌ನಲ್ಲಿ ಮಲ್ಕಿ ಮದಾರ ಬೌಲಿಂಗ್‌ನಲ್ಲಿ ಶಾಟ್ ಹೊಡೆಯಲು ಪ್ರಯತ್ನಿಸುವಾಗ ಜೋನ್ಸ್ ತನ್ನ ವಿಕೆಟ್ ಕಳೆದುಕೊಂಡರು. ಈ ಮೂಲಕ ಅವರ 53 ರನ್‌ಗಳ ಇನ್ನಿಂಗ್ಸ್ ಕೊನೆಗೊಂಡಿತು.

ನಂತರ ನ್ಯಾಟ್ ಸಿವರ್-ಬ್ರಂಟ್ ಅವರೊಂದಿಗೆ ಡ್ಯಾನಿ ವೈಟ್ ಅದ್ಭುತ ಜೊತೆಯಾಟ ಆಡಿದರು. ಡ್ಯಾನಿ 20ನೇ ಓವರ್‌ನ ಐದನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತನ್ನ ಶತಕವನ್ನು ಪೂರೈಸಿದರು. ಅವರು 62 ಎಸೆತಗಳಲ್ಲಿ 105 ರನ್ ಗಳಿಸಿದರು. ನ್ಯಾಟ್ 22 ಎಸೆತಗಳಲ್ಲಿ 46 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.  ಪರಿಣಾಮ ಇಂಗ್ಲೆಂಡ್ ಮಹಿಳಾ ತಂಡವು 20 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 219 ರನ್‌ಗಳನ್ನು ತಲುಪಿತು.

ರನ್​ ಚೇಸ್​​ನಲ್ಲಿ ಹಳಿ ತಪ್ಪಿದ ಲಂಕಾ

ಇಂಗ್ಲೆಂಡ್ ನೀಡಿದ 220 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವುದು ಶ್ರೀಲಂಕಾ ತಂಡಕ್ಕೆ ಸುಲಭದ ಕೆಲಸವಾಗಿರಲಿಲ್ಲ. ಶ್ರೀಲಂಕಾ ಮಹಿಳಾ ತಂಡವು ಪವರ್‌ಪ್ಲೇ ಒಳಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭವನ್ನು ಪಡೆಯಿತು. ಹರ್ಷಿತಾ ಸಮರವಿಕ್ರಮ 18 ಎಸೆತಗಳಲ್ಲಿ 29 ರನ್ ಗಳಿಸಿದರೆ, ನೀಲಾಕ್ಷಿಕಾ ಸಿಲ್ವಾ 33 ಎಸೆತಗಳಲ್ಲಿ 39 ರನ್ ಗಳಿಸಿದರು.

ಇಂಗ್ಲೆಂಡ್ ಬೌಲಿಂಗ್ ಎದುರು ಶ್ರೀಲಂಕಾದ ಬ್ಯಾಟಿಂಗ್ ಲೈನ್ ಅಪ್ ಸಂಪೂರ್ಣ ವಿಫಲವಾಯಿತು.  ಪರಿಣಾಮ ಲಂಕಾ ತಂಡ 132 ರನ್ ಗಳಿಗೆ ಆಲೌಟಾಯಿತು. ಇಂಗ್ಲೆಂಡ್ ಪರ, ಫ್ರೇಯಾ ಕ್ಯಾಂಪ್ ನಾಲ್ಕು ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದರೆ, ಷಾರ್ಲೆಟ್ ಡೀನ್ ಮತ್ತು ಸೋಫಿ ಎಕ್ಲೆಸ್ಟೋನ್ ತಲಾ ಎರಡು ವಿಕೆಟ್ ಕಬಳಿಸಿದರು. ಇಂಗ್ಲೆಂಡ್ ಆರಂಭಿಕ ಪಂದ್ಯವನ್ನು 87 ರನ್ ಗಳಿಂದ ಗೆದ್ದುಕೊಂಡಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed