Last Updated:
West Bengal: ಬಹುಚರ್ಚಿತ ಪ್ರಕರಣದಲ್ಲಿ ಐದನೇ ಆರೋಪಿಯನ್ನು ಬಂಧಿಸಿರುವ ಸಿಬಿಐ, ತನಿಖೆಯಲ್ಲಿ ಹೊರಬಂದ ಮಾಹಿತಿಗಳು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿವೆ. ಅಲ್ಲದೇ ಕಾರಣವಾದ ಗಾಢ ಅನುಮಾನ ಯಾವುದು ಗೊತ್ತಾ?
ಪಶ್ಚಿಮ ಬಂಗಾಳ ರಾಜಕೀಯವನ್ನು ನಡುಗಿಸಿದ್ದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ (Chandranath Rath) ಹತ್ಯೆ ಪ್ರಕರಣದಲ್ಲಿ (Case) ಸಿಬಿಐ ಮತ್ತೊಂದು ದೊಡ್ಡ ತಿರುವು ನೀಡಿದೆ. ಈ ಬಹುಚರ್ಚಿತ ಪ್ರಕರಣದಲ್ಲಿ ಐದನೇ ಆರೋಪಿಯನ್ನು ಬಂಧಿಸಿರುವ ಸಿಬಿಐ (CBI), ತನಿಖೆಯಲ್ಲಿ (Investigation) ಹೊರಬಂದ ಮಾಹಿತಿಗಳು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿವೆ. ಅಲ್ಲದೇ ಕಾರಣವಾದ ಗಾಢ ಅನುಮಾನ ಯಾವುದು ಗೊತ್ತಾ?
ಸಿಬಿಐ ಇತ್ತೀಚೆಗೆ ಉತ್ತರ ಪ್ರದೇಶದ ಬಲ್ಲಿಯಾದಿಂದ ವಿನಯ್ ರೈ ಎಂಬಾತನನ್ನು ಬಂಧಿಸಿದೆ. ಈತನೇ ಪ್ರಕರಣದ ಐದನೇ ಆರೋಪಿ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಪ್ರಮುಖ ಶೂಟರ್ ರಾಜ್ಕುಮಾರ್ ಸಿಂಗ್ನ್ನು ಮುಜಫ್ಫರ್ನಗರದ ಟೋಲ್ಪ್ಲಾಜಾ ಬಳಿ ಬಂಧಿಸಲಾಗಿತ್ತು. ಆತ ತನ್ನ ಕುಟುಂಬದೊಂದಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಬಿಐ ಬಲೆಗೆ ಬಿದ್ದಿದ್ದಾನೆ ಎನ್ನಲಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಆರೋಪಿಗಳ ವಿಚಾರಣೆಯ ವೇಳೆ ದೊರೆತ ಸುಳಿವುಗಳಿಂದಲೇ ವಿನಯ್ ರೈ ಬಂಧನ ಸಾಧ್ಯವಾಗಿದೆ.
ಸಿಬಿಐ ತನಿಖೆಯಲ್ಲಿ ಮತ್ತೊಂದು ಸ್ಫೋಟಕ ಅಂಶವೂ ಹೊರಬಂದಿದೆ. ಹತ್ಯೆಗೆ ಬಳಸಿದ ಶಸ್ತ್ರಾಸ್ತ್ರವನ್ನು ಆರೋಪಿಗಳೇ ಒದಗಿಸಿದ್ದರೇ? ಅಥವಾ ಅದು ಸ್ಥಳೀಯ ಜಾಲದ ಮೂಲಕ ತಲುಪಿತೇ? ಎಂಬ ಪ್ರಶ್ನೆಗೆ ಉತ್ತರ ಹುಡುಕಲಾಗುತ್ತಿದೆ. ಈಗಾಗಲೇ ಒಂದು ಶಸ್ತ್ರಾಸ್ತ್ರವನ್ನು ವಶಪಡಿಸಿಕೊಂಡಿರುವ ಸಿಬಿಐ, ಅದನ್ನು ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಿದೆ. ಇದೇ ಗನ್ನಿಂದ ಚಂದ್ರನಾಥ್ ಮೇಲೆ ಗುಂಡಿನ ದಾಳಿ ನಡೆದಿದೆಯೇ ಎಂಬುದು ಪರೀಕ್ಷೆಯಿಂದ ಸ್ಪಷ್ಟವಾಗಲಿದೆ. ಇದೇ ಪ್ರಕರಣದ ಗೂಢಚರ್ಯೆಯ ಮಟ್ಟವನ್ನು ತೋರಿಸುತ್ತಿದೆ.
ತನಿಖೆಯಲ್ಲಿ ಇದು ಪೂರ್ವನಿಯೋಜಿತ ‘ಕಾಂಟ್ರಾಕ್ಟ್ ಕಿಲ್ಲಿಂಗ್’ ಆಗಿರಬಹುದೆಂಬ ಅನುಮಾನ ಬಲವಾಗಿದೆ. ಸುಮಾರು ಒಂದು ಕೋಟಿ ರೂಪಾಯಿಗೆ ಈ ಹತ್ಯೆಯ ಸುಪಾರಿ ನೀಡಲಾಗಿರಬಹುದು ಎಂದು ಸಿಬಿಐ ಶಂಕಿಸಿದೆ. ಚಂದ್ರನಾಥ್ ರಾಥ್ ಸಂಚರಿಸುತ್ತಿದ್ದ ವಾಹನದ ಚಲನವಲನ, ಅವರ ದಿನಚರಿ, ಮನೆ ತಲುಪುವ ಸಮಯ ಎಲ್ಲವೂ ಮುಂಚಿತವಾಗಿ ಗಮನಿಸಿ, ಸೂಕ್ತ ಕ್ಷಣದಲ್ಲಿ ದಾಳಿ ನಡೆಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಇನ್ನೊಂದೆಡೆ, ರಾಜ್ಯ ಪೊಲೀಸರ ಆರಂಭಿಕ ತನಿಖೆಯಲ್ಲೇ ಗಂಭೀರ ಲೋಪಗಳಿದ್ದವು ಎಂಬುದು ಸಿಬಿಐ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ತಪ್ಪಾಗಿ ಬಂಧಿಸಲ್ಪಟ್ಟಿದ್ದ ಒಬ್ಬ ವ್ಯಕ್ತಿಯನ್ನು ನ್ಯಾಯಾಲಯ ಬಿಡುಗಡೆ ಮಾಡಿರುವುದು ಈ ತನಿಖೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಎಬ್ಬಿಸಿದೆ. ಇದೇ ಕಾರಣಕ್ಕೆ ಸಿಬಿಐ ತನಿಖೆ ಈಗ ರಾಜಕೀಯವಾಗಿ ಮತ್ತಷ್ಟು ಸಂಚಲನ ಸೃಷ್ಟಿಸಿದೆ.
ಮೇ 6ರಂದು ಮಧ್ಯಮ್ಗ್ರಾಮ್ ಸಮೀಪ ಚಂದ್ರನಾಥ್ ರಾಥ್ ಮೇಲೆ ಬೈಕ್ ಸವಾರರು ಅಟ್ಟಹಾಸಿಯಾಗಿ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. ಚುನಾವಣಾ ಫಲಿತಾಂಶ ಹೊರಬಿದ್ದ ಕೆಲವೇ ದಿನಗಳಲ್ಲಿ ನಡೆದ ಈ ಹತ್ಯೆ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ ಸಿಬಿಐ ಕ್ರಮೇಣ ಆರೋಪಿಗಳನ್ನು ಬಂಧಿಸುತ್ತಿರುವುದರಿಂದ, ಇದರ ಹಿಂದಿನ ನಿಜವಾದ ಸೂತ್ರಧಾರ ಯಾರು ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಪ್ರಕರಣದ ಅಂತಿಮ ಸತ್ಯ ಬಯಲಾಗುವ ಕ್ಷಣಕ್ಕಾಗಿ ರಾಜ್ಯವೇ ಕಾದಿದೆ.
May 21, 2026 10:00 PM IST













