ಈ ಚಿತ್ರದ ಟ್ರೈಲರ್ ಇಂಟ್ರಸ್ಟಿಂಗ್ ಆಗಿದೆ. ಇಡೀ ಚಿತ್ರದ ಕಂಟೆಂಟ್ ಏನು ಅನ್ನೋದು ತಿಳಿಯುತ್ತದೆ. ಚಿತ್ರದ ಸ್ಟಾರ್ ಕಾಸ್ಟ್ ಪರಿಚಯ ಇಲ್ಲಿ ಚೆನ್ನಾಗಿದೆ.
ಜೂನ್-26 ರಂದು ರಿಲೀಸ್
(ಚಿತ್ರ ಕೃಪೆ: ಅಕ್ಷಯ್ ಕುಮಾರ್ ಇನ್ಸ್ಟಾಗ್ರಾಮ್)
ಹಾಡಿನ ಮೂಲಕವೇ ಚಿತ್ರದ ಕಲಾವಿದರ ಪರಿಚಯ ಆಗುತ್ತದೆ. ಕಲಾವಿದರ ಹೆಸರುಗಳನ್ನ ಇಲ್ಲಿ ಹಾಡಿನ ರೂಪದಲ್ಲಿ ಒಂದೊಂದಾಗಿಯೇ ಹೇಳ್ತಾ ಹೋಗಿದ್ದಾರೆ.
ವೆಲ್ ಕಮ್ ಟು ದಿ ಜಂಗಲ್ ಚಿತ್ರದಲ್ಲಿ ಒಂದು ಸಿನಿಮಾ ಇದೆ.ಇದು 2000 ಕೋಟಿ ಬಜೆಟ್ನ ಫೇಕ್ ಫೀಲ್ಮ್ ಇದಾಗಿದೆ. ಆದರೆ, ಇಲ್ಲಿ ಜಂಗಲ್ ರಿಯಲ್ ಆಗಿದೆ. ತೊಂದರೆಗಳು ರಿಯಲ್ ಆಗಿವೆ. ಇಲ್ಲಿರೋ ದಡ್ಡರು ರಿಯಲ್ ಆಗಿಯೇ ಇದ್ದಾರೆ ಅನ್ನೋದು ಪೋಸ್ಟರ್ ಅಲ್ಲೂ ಇದೆ. ಟ್ರೈಲರ್ ನೋಡಿದಾಗಲೂ ಫೀಲ್ ಆಗುತ್ತದೆ.
ವೆಲ್ ಕಮ್ ಟು ದಿ ಜಂಗಲ್ ಚಿತ್ರ ಜೂನ್-26 ರಂದು ರಿಲೀಸ್ ಆಗುತ್ತಿದೆ. ಬಹು ತಾರೆಯರ ಈ ಚಿತ್ರದ ಟ್ರೈಲರ್ ಮಜಾ ಕೊಡುತ್ತದೆ. ಪ್ಲಾಪ್ ಹೀರೋ ಅನ್ನುವ ಅಕ್ಷಯ್ ಬಗೆಗಿನ ಮಾತು ಇಲ್ಲಿ ಕಾಮಿಡಿ ಕಿಕ್ ಕೊಡುತ್ತದೆ.
ವೆಲ್ ಕಮ್ ಟು ದಿ ಜಂಗಲ್
(ಚಿತ್ರ ಕೃಪೆ: ಅಕ್ಷಯ್ ಕುಮಾರ್ ಇನ್ಸ್ಟಾಗ್ರಾಮ್)
ಜಾಕಿ ಶ್ರಾಫ್ ಇಲ್ಲಿ ಒಂದು ಮಾತು ಹೇಳುತ್ತಾರೆ. ನಿನ್ನ ಎಲ್ಲೋ ನೋಡಿದ್ದೇನೆ ಅಂತ ಅಕ್ಷಯ್ ಕುಮಾರ್ ನೋಡಿ ಹೇಳ್ತಾರೆ. ಆಗ ಪಕ್ಕದಲ್ಲಿದ್ದ ಸುನಿಲ್ ಶೆಟ್ಟಿ ನೀವು ಫ್ಲಾಪ್ ಚಿತ್ರವನ್ನು ನೋಡ್ತೀರಾ ಅಂತಲೂ ಕಾಮಿಡಿ ಮಾಡ್ತಾರೆ. ಈ ಮಾತು ಇಲ್ಲಿ ಮಜಾ ಕೊಡುತ್ತದೆ.
ಸುನಿಲ್ ಶೆಟ್ಟಿ ಹಾಗೂ ಅಕ್ಷಯ್ ಕುಮಾರ್ ಇಲ್ಲಿ ಸದಾ ಟಾಮ್ ಆ್ಯಂಡ್ ಜರ್ರಿ ತರವೇ ಕಿತ್ತಾಡ್ತಾ ಇರ್ತಾರೆ. ಇವರ ಈ ಕಿತ್ತಾಟವೇ ಇಡೀ ಚಿತ್ರದಲ್ಲಿ ಹಾಸ್ಯದ ಹೊನಲು ಹರಿಸುತ್ತದೆ.
ಈ ಚಿತ್ರದಲ್ಲಿ ನಟಿಮಣಿಯರ ದಂಡು ಇದೆ. ಫರಿದಾ ಜಲಾಲ್, ಜಾಕ್ವಲಿನ್ ಫರ್ನಾಂಡಿಸ್, ಲಾರಾ ದತ್ತಾ, ದಿಶಾ ಪಟಾನಿ ರವೀನಾ ಟಂಡನ್, ನಟರ ದಂಡು ದೊಡ್ಡದೇ ಇದೆ.
ಹೀಗೆ ಬಹು ಕಲಾವಿದರ ಈ ಚಿತ್ರವನ್ನ ಅಹ್ಮದ್ ಖಾನ್ ಡೈರೆಕ್ಷನ್ ಮಾಡಿದ್ದಾರೆ. ಕಬೀರ್ ಲಾಲ್ ಕ್ಯಾಮರಾವರ್ಕ್ ಮಾಡಿದ್ದಾರೆ. ಜೂನ್-26 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ.












