Last Updated:
ಬೆಂಗಳೂರಿನಲ್ಲಿ ಜುಲೈ 31ರಂದು ಕಾವೇರಿ 5ನೇ ಹಂತದ ಕೊಳವೆ ಮಾರ್ಗ ದುರಸ್ತಿ ಹಿನ್ನೆಲೆ, ಹಲವು ಪ್ರದೇಶಗಳಲ್ಲಿ 15 ಗಂಟೆಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ.
ಬೆಂಗಳೂರು (Bengaluru) ಜನತೆಗೆ ಜಲಮಂಡಳಿಯು ದೊಡ್ಡ ಆಘಾತವೊಂದನ್ನು ನೀಡಿದೆ. ಕಾವೇರಿ (Cauvery) 5ನೇ ಹಂತದ ಕೊಳವೆ ಮಾರ್ಗದ ತುರ್ತು ನಿರ್ವಹಣಾ ಹಾಗೂ ಸೋರಿಕೆ ತಡೆಗಟ್ಟುವ ಕಾಮಗಾರಿಯ ಹಿನ್ನೆಲೆಯಲ್ಲಿ, ಮುಂಬರುವ ಜುಲೈ 31ರಂದು ನಗರದ ನೂರಾರು ಬಡಾವಣೆಗಳಲ್ಲಿ (Areas) ಕುಡಿಯುವ ನೀರಿನ (Drinking Water) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಜುಲೈ 31ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಅಂದರೆ ಬರೋಬ್ಬರಿ 15 ಗಂಟೆಗಳ ಕಾಲ ಪ್ರಮುಖ ಪ್ರದೇಶಗಳಲ್ಲಿ ನಳಗಳು ಒಣಗಲಿವೆ. 3000 ಮಿ.ಮೀ. ವ್ಯಾಸದ ಬೃಹತ್ ಕಾವೇರಿ ಕೊಳವೆ ಮಾರ್ಗದಲ್ಲಿ ತುರ್ತು ದುರಸ್ಥಿ ಕಾರ್ಯ ನಡೆಯುತ್ತಿರುವುದರಿಂದ ಈ ವ್ಯತ್ಯಯ ಅನಿವಾರ್ಯವಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧಿಕೃತವಾಗಿ ಪ್ರಕಟಿಸಿದೆ.
ಉತ್ತರ ಹಾಗೂ ಪೂರ್ವ ಭಾಗ: ಥಣಿಸಂದ್ರ, ಹೊರಮಾವು, ಬೈರತಿ, ವರ್ತೂರು, ಕಾಡುಗೋಡಿ, ಚನ್ನಸಂದ್ರ, ಕೆ.ಚನ್ನಸಂದ್ರ.
ಈ ಪ್ರದೇಶಗಳ ನಿವಾಸಿಗಳು ಒಂದು ದಿನ ಮುಂಚಿತವಾಗಿ ಅಗತ್ಯವಿರುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಜಲಮಂಡಲಿ ಮನವಿ ಮಾಡಿದೆ. ಅನಿರೀಕ್ಷಿತ ನೀರಿನ ಕಡಿತದಿಂದಾಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತುರ್ತು ಕೆಲಸದ ವೇಳೆ ಎಚ್ಚರ ವಹಿಸುವುದು ಒಳಿತು.
ಬೆಂಗಳೂರು ಜನತೆಗೆ ಬೆಸ್ಕಾಂ ಕಡೆಯಿಂದ ಒಂದು ಪ್ರಮುಖ ಮತ್ತು ತುರ್ತು ಎಚ್ಚರಿಕೆ ನೀಡಲಾಗಿದೆ. ಜುಲೈ 29 ರಂದು ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಮನವಿ ಮಾಡಲಾಗಿದೆ. ಕೆಪಿಟಿಸಿಎಲ್ ವತಿಯಿಂದ ಕೈಗೊಳ್ಳಲಾಗುತ್ತಿರುವ ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ, ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಈ ಪವರ್ ಕಟ್ ಇರಲಿದೆ.
Bangalore,Karnataka














