Virender Sehwag: ಆಫರ್ ಬಂದ್ರು ಅದೊಂದು ಕಾರಣಕ್ಕೆ​​ ಸೆಹ್ವಾಗ್ ಟೀಮ್ ಇಂಡಿಯಾ ಕೋಚ್ ಆಗಲು ಒಪ್ಪಲಿಲ್ಲವಂತೆ! 10 ವರ್ಷಗಳ ನಂತರ ಕಾರಣ ಬಹಿರಂಗ | ಕ್ರೀಡಾ ಸುದ್ದಿ | ACTPnews

ವೀರೇಂದ್ರ ಸೆಹ್ವಾಗ್


Last Updated:

ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಯನ್ನು ವೀರೇಂದ್ರ ಸೆಹ್ವಾಗ್ ಏಕೆ ತಿರಸ್ಕರಿಸಿದರು ಎಂಬುದು ಈಗ ಬಹಿರಂಗವಾಗಿದೆ. 2017ರಲ್ಲಿ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಅಧಿಕಾರಿಗಳು ಸ್ವತಃ ಕೇಳಿದಾಗಲೂ ಅವರು ಇಲ್ಲ ಎಂದು ಹೇಳಿದ್ದರಂತೆ.

ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್

ಭಾರತ(India)ದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag) ತಮ್ಮ ವೃತ್ತಿಜೀವನದ ಒಂದು ಕುತೂಹಲಕರ ಸಂಗತಿಯನ್ನು ಹೇಳಿದ್ದಾರೆ. ಈ ಹಿಂದೆ ಟೀಮ್ ಇಂಡಿಯಾದ ಹೆಡ್ ಕೋಚ್ (Head Coach) ಹುದ್ದೆಯನ್ನು ನೀಡಲಾಗಿದ್ದರೂ, ಅವರು ಆ ಆಫರ್ ಅನ್ನು ಏಕೆ ತಿರಸ್ಕರಿಸಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆಗಿನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಬಿಸಿಸಿಐ (BCCI) ಕಾರ್ಯದರ್ಶಿ ಸ್ವತಃ ಬಂದು ಕೇಳಿದರೂ, ಅವರು ಆ ಆಫರ್ ತಿರಸ್ಕರಿಸಲು ನಿಜವಾದ ಕಾರಣಗಳನ್ನು ವಿವರಿಸಿದ್ದಾರೆ. 

ಈ ಘಟನೆ 2017ರಲ್ಲಿ ನಡೆದಿತ್ತು ಎಂದು ಸೆಹ್ವಾಗ್ ಹೇಳಿದ್ದಾರೆ. ಆಗ ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿದ್ದರು. ಆದರೆ ನಾಯಕ ವಿರಾಟ್ ಕೊಹ್ಲಿ ಮತ್ತು ಕುಂಬ್ಳೆ ನಡುವೆ ಭಿನ್ನಾಭಿಪ್ರಾಯಗಳು ಬಂದು ಸಂಬಂಧ ಹದಗೆಟ್ಟಿತು. ತೀವ್ರ ಒತ್ತಡದ ನಡುವೆ ಜೂನ್ 2017ರಲ್ಲಿ ಕುಂಬ್ಳೆ ಹೆಡ್ ಹುದ್ದೆಗೆ ರಾಜೀನಾಮೆ ನೀಡಿದರು.

ಆ ಸಮಯದಲ್ಲಿ ವಿರಾಟ್ ಕೊಹ್ಲಿ ಮತ್ತು ಆಗಿನ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಸೆಹ್ವಾಗ್ ಬಳಿಗೆ ಬಂದು ವಿಶೇಷ ಸಭೆ ನಡೆಸಿದ್ದರು. ಕುಂಬ್ಳೆಯೊಂದಿಗೆ ವಿಷಯಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಹೇಳಿ, ಅವರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಕೇಳಿಕೊಂಡರು ಎಂದು ಸೆಹ್ವಾಗ್ ಹೇಳಿದ್ದಾರೆ.

ಮಹತ್ವ ಚರ್ಚೆಯಲ್ಲಿ ಏನಿತ್ತು?

2017ರ ಚಾಂಪಿಯನ್ಸ್ ಟ್ರೋಫಿ ಸಮಯದಲ್ಲಿ ನಾನು ಕಾಮೆಂಟರಿ ಪ್ಯಾನೆಲ್‌ನಲ್ಲಿದ್ದೆ. ಆ ಟೂರ್ನಮೆಂಟ್ ನಂತರ ವೆಸ್ಟ್ ಇಂಡೀಸ್ ಪ್ರವಾಸದಿಂದ ನಾನು ಟೀಮ್ ಇಂಡಿಯಾದ ಕೋಚ್ ಆಗಬೇಕೆಂಬ ಯೋಜನೆ ಇತ್ತು. ಆದರೆ ಆ ಪ್ರಸ್ತಾಪವನ್ನು ತಕ್ಷಣ ಒಪ್ಪಲಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.

ಅದೊಂದು ಕಾರಣ!

ಟೀಮ್ ಇಂಡಿಯಾ ಕೋಚ್ ಆಗುವ ಆಫರ್ ಬಂದಾಗ ನಾನು ಹೌದು ಅಥವಾ ಇಲ್ಲ ಎಂದು ಹೇಳಲಿಲ್ಲ. ನಾನು ಕೋಚ್ ಆಗಬೇಕಾದರೆ ನನ್ನ ಆಯ್ಕೆಯ ಸಹಾಯಕ ಸಿಬ್ಬಂದಿ ಬೇಕು ಎಂದು ಸ್ಪಷ್ಟಪಡಿಸಿದೆ. ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್, ಫಿಸಿಯೋ ಮತ್ತು ಇತರ ಸಹಾಯಕರು ನನ್ನ ಆಯ್ಕೆಯವರಾಗಿರಬೇಕು. ಆದರೆ ಬಿಸಿಸಿಐ ಅದನ್ನು ಒಪ್ಪಲಿಲ್ಲ. ಆದ್ದರಿಂದ ನಾನು ಆ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದು 10 ವರ್ಷಗಳ ನಂತರ ಸೆಹ್ವಾಗ್ ಮೌನ ಮುರಿದಿದ್ದಾರೆ.

ಸೆಹ್ವಾಗ್ ನಿರ್ಧಾರ!

ಮೈದಾನದಲ್ಲಿ ತನ್ನ ಸ್ಪೋಟಕ ಬ್ಯಾಟಿಂಗ್‌ನಿಂದ ಎದುರಾಳಿ ಬೌಲರ್‌ಗಳನ್ನು ಕಷ್ಟಕ್ಕೆ ಸಿಲುಕಿಸುತ್ತಿದ್ದ ಸೆಹ್ವಾಗ್, ಮೈದಾನದ ಹೊರಗೂ ಅಷ್ಟೇ ಸ್ಪಷ್ಟ ಮನಸ್ಸಿನವರು ಎಂದು ಈ ಘಟನೆ ತೋರಿಸುತ್ತದೆ. ಅವರ ಆದ್ಯತೆಗಳು ಮತ್ತು ತಂಡ ನಿರ್ವಹಣಾ ಶೈಲಿಗೆ ಹೊಂದಿಕೆಯಾಗದ ಕಾರಣ, ಸೆಹ್ವಾಗ್ ಕೋಚ್ ಹುದ್ದೆಯ ದೊಡ್ಡ ಜವಾಬ್ದಾರಿಯನ್ನು ಸುಲಭವಾಗಿ ಬಿಟ್ಟುಕೊಟ್ಟರು. ಇದಾದ ನಂತರ ರವಿಶಾಸ್ತ್ರಿ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Virender Sehwag: ಆಫರ್ ಬಂದ್ರು ಅದೊಂದು ಕಾರಣಕ್ಕೆ​​ ಸೆಹ್ವಾಗ್ ಟೀಮ್ ಇಂಡಿಯಾ ಕೋಚ್ ಆಗಲು ಒಪ್ಪಲಿಲ್ಲವಂತೆ! 10 ವರ್ಷಗಳ ನಂತರ ಕಾರಣ ಬಹಿರಂಗ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed