Last Updated:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಗೆಲುವಿನ ನಂತರ ಕೆಲವು ಸೀಕ್ರೆಟ್ ಬಿಚ್ಟಿಟ್ಟಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿಗೆ ಐಪಿಎಲ್ (IPL) ಟ್ರೋಫಿಯನ್ನು ಎತ್ತಿ ಹಿಡಿದಿದೆ. ಭಾನುವಾರ ಅಹಮದಾಬಾದ್ (Ahmedabad) ನಲ್ಲಿ ನಡೆದ ಐಪಿಎಲ್ 2026 ರ ಫೈನಲ್ನಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಆರ್ಸಿಬಿ 5 ವಿಕೆಟ್ಗಳಿಂದ ಜಯಗಳಿಸಿತು. ಚೇಸಿಂಗ್ ಮಾಸ್ಟರ್ (Chasing Master) ವಿರಾಟ್ ಕೊಹ್ಲಿ (Virat Kohli) ಕೊನೆಯವರೆಗೂ ಪಂದ್ಯದಲ್ಲಿ ಉಳಿಯುವ ಮೂಲಕ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ ನಂತರ ಕಿಂಗ್ (King) ಕೊಹ್ಲಿ ಎರಡನೇ ಟ್ರೋಫಿ (Trophy) ಗೆಲುವಿನ ಸೀಕ್ರೆಟ್ ಬಗ್ಗೆ ಮಾತನಾಡಿದರು.
ಐತಿಹಾಸಿಕ ಗೆಲುವಿನ ನಂತರ ಮಾತನಾಡಿದ ವಿರಾಟ್ ಕೊಹ್ಲಿ ತಮ್ಮ ಆಟಗಾರರ ಮೇಲೆ ಪ್ರಶಂಸೆಯ ಮಳೆಗರೆದರು. ‘ಕಳೆದ ವರ್ಷದಂತೆ ಈ ಬಾರಿ ನಮ್ಮ ಆಟಗಾರರಲ್ಲಿ ಹೆಚ್ಚಿನ ಒತ್ತಡವಿಲ್ಲ ಎಂದು ನಾನು ಹೇಳಿದ್ದೆ. ನಮ್ಮ ತಂಡವು ಯಾವ ರೀತಿಯ ಪ್ರತಿಭೆಯನ್ನು ಹೊಂದಿದೆ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ನಾವು ಬೇರೆಯವರಿಗಿಂತ ಮೊದಲು ಫೈನಲ್ ತಲುಪಲು ಕಾರಣವಿದೆ ಎಂದು ಹೇಳಿದರು.
ನಾವು ನಮ್ಮ ನೈಸರ್ಗಿಕ ಕ್ರಿಕೆಟ್ ಅನ್ನು ನಂಬಿ ನಮ್ಮ ಯೋಜನೆಯನ್ನು ಸರಿಯಾಗಿ ಕಾರ್ಯಗತಗೊಳಿಸಿದರೆ ಈ ಟೂನರ್ನಿಲ್ಲಿ ನಾವು ಅತ್ಯುತ್ತಮ ತಂಡವಾಗುತ್ತೇವೆ ಎಂದು ಅಂದುಕೊಂಡಿದ್ದೇವೆ. ಗುಂಪು ಹಂತದಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸಲು ಇದೇ ಕಾರಣ’ ಎಂದು ವಿರಾಟ್ ಬಹಿರಂಗಪಡಿಸಿದ್ದಾರೆ.
ನಮ್ಮ ಆಟಗಾರರ ಕೌಶಲ್ಯ, ಅವರ ಪ್ರಬುದ್ಧತೆ ಮತ್ತು ಒತ್ತಡವನ್ನು ನಿಭಾಯಿಸುವಲ್ಲಿ ಮಾನಸಿಕ ಸ್ಥಿರತೆ ಫೈನಲ್ ಪಂದ್ಯದಲ್ಲಿ ಮತ್ತೊಮ್ಮೆ ಮೈದಾನದಲ್ಲಿ ಸ್ಪಷ್ಟವಾಗಿ ಕಂಡುಬಂದವು. ಹಿಂದೆ ಒಂದು ಪಂದ್ಯವನ್ನು ಸೋತ ನಂತರ, ನಾವು ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಪಂದ್ಯವನ್ನು ಗೆದ್ದಿದ್ದೇವೆ. ಆ ಪಂದ್ಯವನ್ನು ಗೆದ್ದ ನಂತರ, ನಮ್ಮ ಆತ್ಮವಿಶ್ವಾಸ ಡಬಲ್ ಆಯಿತು ಎಂದು ಹೇಳಿದ್ದಾರೆ. ಆರ್ಸಿಬಿ ಲೀಗ್ ಹಂತದಲ್ಲಿ ಸ್ವಲ್ಪ ಹಳ್ಳಿ ತಪ್ಪಿದ್ದರೂ, ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವು ತಂಡಕ್ಕೆ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತು ಎಂದು ಕೊಹ್ಲಿ ಹೇಳಿದ್ದಾರೆ.
ಮುಂಬೈ ಪಂದ್ಯದ ನಂತರ ನಾವು ಕೆಕೆಆರ್ ವಿರುದ್ಧ ಭಾರೀ ಗೆಲುವು ಸಾಧಿಸಿದ್ದೇವೆ. ನಾವು ಟೇಬಲ್ ಟಾಪರ್ಗಳಾದೆವು. ಈಗ ನಾವು ಮತ್ತೆ ಪ್ರಶಸ್ತಿಯನ್ನು ಗೆದ್ದಿದ್ದೇವೆ. ನಮ್ಮ ತಂಡದಲ್ಲಿ ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲಿಸಬಲ್ಲ ಆಟಗಾರರಿದ್ದಾರೆ. ನಮ್ಮ ತಂಡದಲ್ಲಿರುವ ಅನೇಕ ವಿಭಿನ್ನ ಆಟಗಾರರು ‘ಪಂದ್ಯಶ್ರೇಷ್ಠ’ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಎಂಬುದು ಇದಕ್ಕೆ ಸಾಕ್ಷಿ” ಎಂದು ಕೊಹ್ಲಿ ಹೇಳಿದರು.
ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಆರ್ಸಿಬಿ ತಂಡಕ್ಕೆ ಗೆಲುವು ತಂದು ಕೊಟ್ಟರು. ವಿರಾಟ್ ಕೊಹ್ಲಿ ಕೇವಲ 25 ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಅತ್ಯಂತ ವೇಗದ ಅರ್ಧಶತಕವನ್ನು ಬಾರಿಸಿದರು. ಕೊನೆವರೆಗೂ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ ಕೊಹ್ಲಿ 42 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ ಅಜೇಯ 75 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
Jun 01, 2026 10:32 AM IST













