Viral News: ಗರ್ಲ್​ಫ್ರೆಂಡ್ಸ್​ಗಾಗಿ ಟ್ಯಾಪ್ ಕದಿಯುತ್ತಿದ್ದ ಯುವಕರ ಗ್ಯಾಂಗ್! ಅಬ್ಬಬ್ಬಾ ಹಿಂಗೂ ಇರ್ತಾರಾ? | ಟ್ರೆಂಡಿಂಗ್ ಸುದ್ದಿ | ACTPnews

Viral News: ಗರ್ಲ್​ಫ್ರೆಂಡ್ಸ್​ಗಾಗಿ ಟ್ಯಾಪ್ ಕದಿಯುತ್ತಿದ್ದ ಯುವಕರ ಗ್ಯಾಂಗ್! ಅಬ್ಬಬ್ಬಾ ಹಿಂಗೂ ಇರ್ತಾರಾ? | ಟ್ರೆಂಡಿಂಗ್ ಸುದ್ದಿ


ನಾಗ್ಪುರದ (Nagpura) ಇಬ್ಬರು ಯಂಗ್ ಬಾಯ್ಸ್ ಏನು ಕದ್ದಿದ್ದಾರೆ ಅಂತ ಗೊತ್ತಾದ್ರೆ ಶಾಕ್ ಆಗೋದು ಗ್ಯಾರೆಂಟಿ. ಇವರು ಚಿನ್ನ, ದುಡ್ಡು ಕದ್ದಿಲ್ಲ, ನೀರಿನ ಟ್ಯಾಪ್ (Water Tap) ಕದ್ದಿದ್ದಾರೆ. ಅಚ್ಚರಿಯಾಗುತ್ತೆ ಅಲ್ವಾ? ಯಾರಾದ್ರೂ ಕಳ್ಳತನ ಮಾಡುವಾಗ ಟ್ಯಾಪ್ ಕದಿಯುತ್ತಾರಾ ಅಂತೀರಾ? ಹಾಗಿದ್ದರೆ ಈ ಇಂಟ್ರೆಸ್ಟಿಂಗ್ ಸ್ಟೋರಿ ಓದಿ.

ಇಬ್ಬರು ಹದಿಹರೆಯದ ಹುಡುಗರು ಟ್ಯಾಪ್‌ಗಳನ್ನು ಕದ್ದಿರುವ ಎಂಬ ವಿಚಿತ್ರ ಕಳ್ಳತನ ಪ್ರಕರಣವನ್ನು ನಾಗ್ಪುರ ಪೊಲೀಸರು ತನಿಖೆ ಮಾಡಿ ಕೊನೆಗೂ ಕೇಸ್ ಬ್ರೇಕ್ ಮಾಡಿದ್ದಾರೆ. ತಮ್ಮ ಗೆಳತಿಯರಿಗೆ ಐಫೋನ್ ಖರೀದಿಸಲು ಹಣ ಇರಲಿಲ್ಲ. ಆ ಹಣಕ್ಕಾಗಿ ಈ ಯುವಕರು ಗೋಡೌನ್​ನಿಂದ ಸುಮಾರು 6.5 ಲಕ್ಷ ರೂ. ಮೌಲ್ಯದ ಐಷಾರಾಮಿ ಡಿಸೈನರ್ ಟ್ಯಾಪ್​ಗಳನ್ನು ಕದ್ದಿದ್ದಾರೆ.

ಆದರೆ, ನಂತರ ದುಬಾರಿ ಸ್ಯಾನಿಟರಿ ಫಿಟ್ಟಿಂಗ್‌ಗಳನ್ನು ಕೇವಲ 20,000 ರೂ.ಗೆ ಸ್ಕ್ರ್ಯಾಪ್ ಡೀಲರ್‌ಗೆ ಮಾರಾಟ ಮಾಡಿದ್ದಾರೆ ಎಂದು NDTV ವರದಿ ಮಾಡಿದೆ.

ನಾಗ್ಪುರದ ರಾಹುಲ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕ ರಾಹುಲ್ ಜಯಚಂದ್ ಬಾತ್ರಾ ಪೊಲೀಸರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ಕಂಪನಿಯು ಟೈಲ್ಸ್, ಸ್ಯಾನಿಟರಿ ವೇರ್ ಮತ್ತು ಸಿಪಿ ಫಿಟ್ಟಿಂಗ್‌ಗಳ ವ್ಯವಹಾರ ನಡೆಸುತ್ತದೆ.

ದೂರಿನ ಪ್ರಕಾರ, ಕಳ್ಳರು ಮೇ 27-28ರ ರಾತ್ರಿ ಛಾವಣಿ ಮೂಲಕ ಟಿನ್ ಶೀಟ್‌ಗಳನ್ನು ತೆಗೆದು ಗೋದಾಮಿನೊಳಗೆ ನುಗ್ಗಿದ್ದಾರೆ ಎಂದು ವರದಿಯಾಗಿದೆ. ಕಳ್ಳರು ಹಲವಾರು ಅತ್ಯಾಧುನಿಕ ಸ್ಯಾನಿಟರಿ ಪ್ರಾಡಕ್ಸ್ಟ್ ತೆಗೆದುಕೊಂಡು ಪರಾರಿಯಾಗಿದ್ದು, ಸುಮಾರು 6.5 ಲಕ್ಷ ರೂಪಾಯಿಗಳ ನಷ್ಟ ಉಂಟಾಗಿದೆ

ಕಳ್ಳತನವಾದ ವಸ್ತುಗಳಲ್ಲಿ 3.94 ಲಕ್ಷ ರೂಪಾಯಿ ಮೌಲ್ಯದ ಐದು ಚಿನ್ನದ ಬಣ್ಣದ ಡಿಸೈನರ್ ಟ್ಯಾಪ್‌ಗಳು, 67,000 ರೂಪಾಯಿ ಮೌಲ್ಯದ ಮೂರು ಸ್ಟ್ಯಾಂಡರ್ಡ್ ಚಿನ್ನದ ಬಣ್ಣದ ಟ್ಯಾಪ್‌ಗಳು, 1.3 ಲಕ್ಷ ರೂಪಾಯಿ ಮೌಲ್ಯದ ಒಂಬತ್ತು ಗುಲಾಬಿ ಚಿನ್ನದ ಟ್ಯಾಪ್‌ಗಳು ಮತ್ತು 58,000 ರೂಪಾಯಿ ಮೌಲ್ಯದ ನಾಲ್ಕು ಬೆಳ್ಳಿ ಬಣ್ಣದ ಟ್ಯಾಪ್‌ಗಳು ಸೇರಿವೆ ಎಂದು NDTV ವರದಿ ತಿಳಿಸಿದೆ.

ದೂರಿನ ನಂತರ, ವಿಶೇಷ ಪೊಲೀಸ್ ತಂಡ ತನಿಖೆ ಆರಂಭಿಸಿತು. ಅಧಿಕಾರಿಗಳು ಗೋದಾಮು ಮತ್ತು ಹತ್ತಿರದ ಸ್ಥಳಗಳಲ್ಲಿ ಅಳವಡಿಸಲಾದ 20 ರಿಂದ 35 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅವರು ಸ್ಥಳೀಯ ಮಾಹಿತಿದಾರರಿಂದ ಮಾಹಿತಿಯನ್ನು ಸಂಗ್ರಹಿಸಿದರು. ಟೆಕ್ನಿಕಲ್ ಎವಿಡೆನ್ಸ್ ಮತ್ತು ಉಳಿದ ಮಾಹಿತಿಯ ಆಧಾರದ ಮೇಲೆ ಶಂಕಿತರನ್ನು ಪತ್ತೆಹಚ್ಚಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರು ಅಂತಿಮವಾಗಿ ಇಬ್ಬರು ಅಪ್ರಾಪ್ತ ವಯಸ್ಕರನ್ನು ಬಂಧಿಸಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅವರನ್ನು ಪ್ರಶ್ನಿಸಿದರು. ವಿಚಾರಣೆಯ ಸಮಯದಲ್ಲಿ, ಹುಡುಗರು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

NDTV ವರದಿಯ ಪ್ರಕಾರ, ಕದ್ದ ವಸ್ತುಗಳ ಮೌಲ್ಯ ಹೆಚ್ಚಿದ್ದರೂ, ಡಿಸೈನರ್ ಟ್ಯಾಪ್‌ಗಳನ್ನು ಸ್ಥಳೀಯ ಸ್ಕ್ರ್ಯಾಪ್ ಡೀಲರ್‌ಗೆ ಕೇವಲ 20,000 ರೂ.ಗೆ ಮಾರಾಟ ಮಾಡಿದ್ದೇವೆ ಎಂದು ಹದಿಹರೆಯದವರು ಬಹಿರಂಗಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed