ದರ್ಶನ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ಪ್ರಕರಣ 4ನೇ ಆರೋಪಿಗೆ ಜಾಮೀನು ಮಂಜೂರಾಗಿದೆ. ಹುಬ್ಬಳ್ಳಿ ಪೆಂಟ್ರೋಲ್ ಬಂಕ್ ಮ್ಯಾನೇಜರ್ ಆಗಿದ್ದ ನಿಂಗರಾಜ್ನನ್ನು ಜನವರಿಯಲ್ಲಿ ಅರೆಸ್ಟ್ ಮಾಡಲಾಗಿತ್ತು. ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಪೀಠದಿಂದ ಆರೋಪಿಗೆ ಜಾಮೀನು ಮಂಜೂರು ಮಾಡಲಾಗಿದೆ.
ನಿಂಗರಾಜ್ ಗುಲಾಪ್ಪ ತಲ್ವಾರ್ ಜಾಮೀನು ಮಂಜೂರಾಗಿದೆ. ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಪೀಠದಿಂದ ಜಾಮೀನು ಮಂಜೂರು ಮಾಡಲಾಗಿದ್ದು, ಹುಬ್ಬಳ್ಳಿ ಪೆಂಟ್ರೋಲ್ ಬಂಕ್ ಮ್ಯಾನೇಜರ್ ಆಗಿದ್ದ ನಿಂಗರಾಜ್ ಪ್ರಕರಣದ 4 ನೇ ಆರೋಪಿಯಾಗಿದ್ದ. ಜನವರಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಪೆಟ್ರೋಲ್ ಬಂಕ್ ಮ್ಯಾನೇಜರ್ ಆಗಿದ್ದ ನಿಂಗರಾಜ್ ಒಂದೇ ಒಂದು ಕಮೆಂಟ್ನಿಂದ ಬರೋಬ್ಬರಿ 7 ತಿಂಗಳು ಜೈಲಿನಲ್ಲಿ ಮುದ್ದೆ ಮುರಿಯುವ ಹಾಗಾಗಿದೆ. ಸೋಷಿಯಲ್ ಮೀಡಿಯಾವನ್ನು ಸರಿಯಾಗಿ ಬಳಸದೇ, ಅಶ್ಲೀಲವಾಗಿ ಕಮೆಂಟ್ ಮಾಡುವರು, ಫೋಟೋ ಮಾರ್ಫಿಂಗ್ ಮಾಡುವವರಿಗೆ ಇದು ಎಚ್ಚರಿಕೆ ಪಾಠವಾಗಲಿದೆ.
ಧನ್ವೀರ್ ಜೊತೆ ಸಿನಿಮಾ ಪ್ರಮೋಷನ್ಗೆಂದು ಹೋದ ವಿಜಯಲಕ್ಷ್ಮಿ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋ ಜೊತೆಗೆ ಕೆಟ್ಟ, ಕೆಟ್ಟದಾಗಿ ಕಮೆಂಟ್ ಹಾಕಿ ಟ್ರೋಲ್ ಮಾಡಿದ್ದರು. ಇವರೇ ನೋಡಿ ಕ್ರಿಮಿನಲ್ ದರ್ಶನ್ ಹೆಂಡತಿ ಎಂದು ಬರೆದಿರೋ ಕಿಡಿಗೇಡಿಗಳು, ವಿಜಯಲಕ್ಷ್ಮಿಯ ವೈಯಕ್ತಿಕ ಬದುಕನ್ನು ಗುರಿಯಾಗಿಸಿ ಟ್ರೋಲ್ ಮಾಡಿದ್ದರು.
ಗಂಡ ಜೈಲಿನಲ್ಲಿ ಇದ್ದಾನೆ, ಇತ್ತ ವಿಜಯಲಕ್ಷ್ಮಿ ರ್ಯಾಪಿಡ್ ಡ್ರೈವರ್ ಕಾರಿನಲ್ಲಿ ಓಡಾಟ ಎಂದೆಲ್ಲಾ ಅಶ್ಲೀಲ ಪದ ಬಳಸಿ ನಿಂದನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.
ನಿರಂತರ ಟ್ರೋಲಿಂಗ್‌ಗೆ ಬೇಸತ್ತ ವಿಜಯಲಕ್ಷ್ಮಿ, ಸೋಷಿಯಲ್ ಮೀಡಿಯಾ ಕಿಡಿಗೇಡಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ವೈರಲ್ ಆಗ್ತಿರೋ ಕಮೆಂಟ್ ಹಾಗೂ ಪೋಸ್ಟ್ ಬಗ್ಗೆ ಪೊಲೀಸರ ಗಮನಕ್ಕೂ ತಂದಿದ್ದರು.
ನಕಲಿ ಅಕೌಂಟ್ ತೆರೆದು ಅಶ್ಲೀಲ ಪದಗಳಿಂದ ನಿಂದನೆ ಮಾಡ್ತಿರುವವರ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಸೈಬರ್ ಕಿರುಕುಳಕ್ಕೆ ಬ್ರೇಕ್ ಹಾಕುವಂತೆ ಪೊಲೀಸರ ಬಳಿ ವಿಜಯಲಕ್ಷ್ಮಿ ಮನವಿ ಮಾಡಿದ್ದು, ನಕಲಿ ಖಾತೆಗಳನ್ನು ಹಚ್ಚಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು.
ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಇತ್ತೀಚೆಗೆ ವಿಜಯಲಕ್ಷ್ಮಿ ಅವರು ತಮ್ಮ ಮಗನ ಜೊತೆ ಆ್ಯನಿವರ್ಸರಿ ಸಮಯದಲ್ಲಿ ಬಂದು ಭೇಟಿ ಮಾಡಿದ್ದರು. ಇದೀಗ ಅವರು ಮತ್ತೊಮ್ಮೆ ಗಂಡನನ್ನು ಭೇಟಿ ಮಾಡೋಕೆ ಬಂದಿದ್ದಾರೆ.
ಪತ್ನಿ ಮತ್ತು ಸ್ನೇಹಿತೆ ಈಗ ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟಿ ರಕ್ಷಿತಾ ಪ್ರೇಮ್ ದರ್ಶನ್ ಭೇಟಿಗೆ ಬಂದಿದ್ದಾರೆ.
ವರದಿ: ಮಂಜುನಾಥ್ ಎನ್. ನ್ಯೂಸ್18 ಕನ್ನಡ ಪ್ರತಿನಿಧಿ ಬೆಂಗಳೂರು













