Last Updated:
Vijay-Trisha: ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಹಾಗೂ ನಟಿ ತ್ರಿಷಾ ಬಗ್ಗೆ ಎಐಎಡಿಎಂಕೆ ಹಿರಿಯ ನಾಯಕರೊಬ್ಬರು ಲಘು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ), ಎಐಎಡಿಎಂಕೆ ಪಕ್ಷದ ಹಿರಿಯ ಶಾಸಕ ಆರ್‌ಬಿ ಉದಯ್ ಕುಮಾರ್ ಎಂಬುವರು ತ್ರಿಷಾ ಹಾಗೂ ವಿಜಯ್ ಕುರಿತಂತೆ ಹೇಳಿಕೆ ನೀಡಿದ್ದಾರೆ!
ಚೆನ್ನೈ: ತಮಿಳುನಾಡು ಸಿಎಂ (Tamil Nadu CM) ಸಿ. ಜೋಸೆಫ್ ವಿಜಯ್ (C. Joseph Vijay) ಹಾಗೂ ನಟಿ ತ್ರಿಷಾ ಬಗ್ಗೆ ಎಐಎಡಿಎಂಕೆ (AIADMK) ಹಿರಿಯ ನಾಯಕರೊಬ್ಬರು ಲಘು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ), ಎಐಎಡಿಎಂಕೆ ಪಕ್ಷದ ಹಿರಿಯ ಶಾಸಕ ಆರ್‌ಬಿ ಉದಯ್ ಕುಮಾರ್ (RB Udaykumar) ಎಂಬುವರು ತ್ರಿಶಾ ಹಾಗೂ ವಿಜಯ್ ಕುರಿತಂತೆ ಹೇಳಿಕೆ ನೀಡಿದ್ದಾರೆ. “ವಿಜಯ್‌ರವರ ಪ್ರೀತಿಯ ತ್ರಿಷಾ ಯಾವಾಗ ತಮಿಳುನಾಡಿನ ಉಪಮುಖ್ಯಮಂತ್ರಿ (Tamil Nadu DCM) ಆಗುತ್ತಾರೆ?” ಅಂತ ಉದಯ್ ಕುಮಾರ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.














