Vaibhav Sooryavanshi: ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಪದಾರ್ಪಣೆಗೆ ಆತನೇ ಅಡ್ಡಿ! ಕಾರಣ ಇಲ್ಲಿದೆ | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ


Last Updated:

ಯೂನಿವರ್ಸಲ್ ಬೇಬಿ ಬಾಸ್ ಎಂದು ಕರೆಯಲ್ಪಡುವ ಟೀಮ್ ಇಂಡಿಯಾದ ಯುವ ಪ್ರತಿಭೆಯ ಅಂತರರಾಷ್ಟ್ರೀಯ ಪದಾರ್ಪಣೆಗಾಗಿ ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ. ಕೇವಲ 15 ನೇ ವಯಸ್ಸಿನಲ್ಲಿ ವಿಶ್ವ ದಾಖಲೆಗಳನ್ನು ಪುಡಿಗಟ್ಟಲು ವಿಶ್ವ ದರ್ಜೆಯ ಬೌಲರ್‌ಗಳನ್ನು ಬೆರಗುಗೊಳಿಸಲು ಬಿಹಾರದ ಈ ಯುವ ಪ್ರತಿಭೆ ಸಜ್ಜಾಗಿದ್ದಾರೆ

ವೈಭವ್  ಸೂರ್ಯವಂಶಿ
ವೈಭವ್ ಸೂರ್ಯವಂಶಿ

ಭಾರತ ತಂಡ ಐರ್ಲೆಂಡ್ (India vs Ireland)​ ವಿರುದ್ಧ ಸರಣಿ ಸೋಲಿನ ಆಘಾತದಿಂದ ಚೇತರಿಸಿಕೊಳ್ಳುವ ಹಾದಿಯಲ್ಲಿದೆ. ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ಗಮನ ಸೆಳೆದಿತ್ತಾದರೂ, ಮಳೆ ಫಲಿತಾಂಶ ಬರದಂತೆ ಮಾಡಿತು. ಇನ್ನು ಸೀನಿಯರ್ ತಂಡಕ್ಕೆ ಪದಾರ್ಪಣೆ ಮಾಡಲು ಕಾಯುತ್ತಿರುವ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಇಂಗ್ಲೆಂಡ್ ಸರಣಿಯ ಮೊದಲ ಪಂದ್ಯದಲ್ಲೂ ಅವಕಾಶ ಸಿಕ್ಕಿಲ್ಲ. ಯೂನಿವರ್ಸಲ್ ಬೇಬಿ ಬಾಸ್ ಎಂದು ಕರೆಯಲ್ಪಡುವ ಟೀಮ್ ಇಂಡಿಯಾದ ಯುವ ಪ್ರತಿಭೆಯ ಅಂತರರಾಷ್ಟ್ರೀಯ ಪದಾರ್ಪಣೆಗಾಗಿ ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ. ಕೇವಲ 15ನೇ ವಯಸ್ಸಿನಲ್ಲಿ ವಿಶ್ವ ದಾಖಲೆಗಳನ್ನು ಪುಡಿಗಟ್ಟಲು ವಿಶ್ವ ದರ್ಜೆಯ ಬೌಲರ್‌ಗಳನ್ನು ಬೆರಗುಗೊಳಿಸಲು ಬಿಹಾರದ ಈ ಯುವ ಪ್ರತಿಭೆ ಸಜ್ಜಾಗಿದ್ದಾರೆ. ಆದರೆ ಆತನೊಬ್ಬನ ಕಾರಣದಿಂದ ಇನ್ನೂ ಆ ಭಾಗ್ಯ ಸಿಕ್ಕಿಲ್ಲ.

ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಪಡೆದ ಅದ್ಭುತ ಪ್ರದರ್ಶನದ ನಂತರ, ವೈಭವ್ ಸೂರ್ಯವಂಶಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗೆ ಭಾರತೀಯ ತಂಡದಲ್ಲಿ ಸ್ಥಾನ ಪಡೆದರು. ಆದರೆ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿ ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅವರು ನಿರಾಶೆಯನ್ನು ಎದುರಿಸಿದರು, ಸತತ ಮೂರು ಪಂದ್ಯಗಳಿಗೆ ಬೆಂಚ್‌ಗೆ ಸೀಮಿತರಾಗಿದ್ದರು.

ಗಂಭೀರ್ ವಿಧಾನದಿಂದ ವಿಳಂಬ

ವೈಭವ್ ಪದಾರ್ಪಣೆಯ ವಿಳಂಬಕ್ಕೆ ಪ್ರಮುಖ ಕಾರಣ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅಳವಡಿಸಿಕೊಂಡ ನಿರ್ದಿಷ್ಟ ವಿಧಾನ. ಐಸಿಸಿ ಟಿ20 ವಿಶ್ವಕಪ್ 2026, ಏಷ್ಯಾ ಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಯಶಸ್ಸಿನಲ್ಲಿ ತೇಲುತ್ತಿರುವ ಗಂಭೀರ್ ನೇತೃತ್ವದ ಮ್ಯಾನೇಜ್​ಮೆಂಟ್, ಅವರು ಎಚ್ಚರಿಕೆಯಿಂದ ಕಟ್ಟಿರುವ ತಂಡದ ವಾತಾವರಣವನ್ನು ಅಡ್ಡಿಪಡಿಸುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ. ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರಂತಹ ಹಿರಿಯ ಆಟಗಾರರು ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮ್ಯಾನೇಜ್‌ಮೆಂಟ್ ನಂಬುತ್ತದೆ. ಒಂದು ಅಥವಾ ಎರಡು ಪಂದ್ಯಗಳಲ್ಲಿ ವಿಫಲವಾದ ಕಾರಣ 15 ವರ್ಷದ ಯುವಕನ ಪರವಾಗಿ ನಿಂತು ಅವರನ್ನ ಸೈಡ್​ ಲೈನ್​ ಮಾಡುವುದು ತಪ್ಪು ಸಂದೇಶವನ್ನು ಸಾರಬಹುದು ಎಂದು ಅವರು ಭಾವಿಸುತ್ತಿದ್ದಾರೆ.

ಸಹಾಯಕ ಕೋಚ್ ರಯಾನ್ ಟೆನ್ ಡೋಶಾಟ್ ವೈಭವ್​​ ಪದಾರ್ಪಣೆ ಬಗ್ಗೆ ಮಾತನಾಡುತ್ತಾ “ವೈಭವ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ 100 ಪ್ರತಿಶತ ಸಿದ್ಧರಾಗಿದ್ದಾರೆ. ಆದರೆ, ಕೇವಲ ಮೂರು ತಿಂಗಳ ಹಿಂದೆ ವಿಶ್ವಕಪ್ ಗೆಲ್ಲಲು ನಮಗೆ ಸಹಾಯ ಮಾಡಿದ ಸಂಜು ಸ್ಯಾಮ್ಸನ್ ಅವರನ್ನ ಕಡೆಗಣಿಸಲು ಸಾಧ್ಯವಿಲ್ಲ” ಎಂದಿದ್ದಾರೆ. ಹೊಸ ನಾಯಕ ಶ್ರೇಯಸ್ ಅಯ್ಯರ್ ಕೂಡ ಇದೇ ಭಾವನೆಯನ್ನು ಪ್ರತಿಧ್ವನಿಸುತ್ತಾ, ಹಿರಿಯ ಆಟಗಾರರಲ್ಲಿ ಭದ್ರತೆ ಮತ್ತು ಆತ್ಮವಿಶ್ವಾಸವನ್ನು ತುಂಬುವ ಮಹತ್ವವನ್ನು ಸಾರಿದ್ದಾರೆ.

ಮಾಜಿ ಕ್ರಿಕೆಟಿಗರಿಂದ ಅಸಮಾಧಾನ

ವೈಭವ್ ಸತತ ಮೂರು ಪಂದ್ಯಗಳಿಗೆ ಬೆಂಚ್‌ಗೆ ಸೀಮಿತವಾಗಿದ್ದಕ್ಕೆ ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್ ಮತ್ತು ರವಿಶಾಸ್ತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಐರ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ವೈಭವ್ ಅವರನ್ನು ಪರೀಕ್ಷಿಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಿರ್ದಿಷ್ಟವಾಗಿ ರವಿಶಾಸ್ತ್ರಿ ಕೆಲವು ತೀಕ್ಷ್ಣವಾದ ಹೇಳಿಕೆಗಳನ್ನು ನೀಡಿ ಮ್ಯಾನೇಜ್​ಮೆಂಟ್​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

“ವೈಭವ್ ಐರ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಆಡಬೇಕಿತ್ತು. ಅವರು ಅಲ್ಲಿ ಆಡಿದ್ದರೆ, ಅವರು ಸಿಕ್ಸರ್‌ಗಳನ್ನು ಮಳೆ ಸುರಿಸುತ್ತಿದ್ದರು. ಅವರೇನಾದರೂ ಸಿಡಿದಿದ್ದರೆ, ಅದು ಐರಿಶ್ ಬೌಲರ್‌ಗಳನ್ನ ಬೆಚ್ಚಿ ಬೀಳಿಸುತ್ತಿದ್ದರು. ಇಂಗ್ಲೆಂಡ್‌ನಲ್ಲಿ ಅವರಿಗೆ ಅವಕಾಶ ಸಿಗುತ್ತದೆಯೇ ಎಂದು ನನಗೆ ತಿಳಿದಿಲ್ಲ, ಆದರೆ ವೈಭವ್‌ಗೆ ಸಾಧ್ಯವಾದಷ್ಟು ಬೇಗ ಅವಕಾಶ ನೀಡಬೇಕು” ಎಂದು ಅವರು ಸೋನಿ ಸ್ಪೋರ್ಟ್ಸ್‌ನಲ್ಲಿ ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports