ಶೀಘ್ರದಲ್ಲೇ ಇವರನ್ನು ಸಿಬಿಐ ಬಂಧಿಸಿತು. ಈಗ ಅವರು ಭೋಪಾಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದೆ. ಇದರ ಮಧ್ಯೆ, ಗಿರಿಬಾಲಾ ಸಿಂಗ್ ಅವರ ಮೊದಲ ಸೊಸೆ ತನ್ನ ವಿಚ್ಛೇದನದ ಬಗ್ಗೆ ಹೇಳಿದ್ದಾರೆ.
ನಿವೃತ್ತ ನ್ಯಾಯಾಧೀಶರ ಹಿರಿಯ ಮಗ ಸಿದ್ಧಾರ್ಥ್ ಸಿಂಗ್ ಅವರೊಂದಿಗಿನ ವಿವಾಹ ಹಾಗೂ ಡಿವೋರ್ಸ್ ಬಗ್ಗೆ ಬಹಿರಂಗಪಡಿಸಿದ್ದಾರೆ.
ಗಿರಿಬಾಲಾ ಸಿಂಗ್ ಅವರ ಮೊದಲ ಸೊಸೆ, GAG ಆದೇಶದಿಂದ ಬದ್ಧಳಾಗಿದ್ದು, ಅವರ ಮದುವೆ ಅಥವಾ ಕುಟುಂಬದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ.
ಗಿರಿಬಾಲಾ ಸಿಂಗ್ ಅವರ ಮೊದಲ ಸೊಸೆ, ನಿವೃತ್ತ ನ್ಯಾಯಾಧೀಶರ ಹಿರಿಯ ಮಗ ಸಿದ್ಧಾರ್ಥ್ ಸಿಂಗ್ ಅವರೊಂದಿಗಿನ ವಿವಾಹದ ಬಗ್ಗೆ ಮೌನ ಮುರಿದಿದ್ದಾರೆ. ಸ್ಪಷ್ಟವಾಗಿ ಏನೂ ಹೇಳದೆ ಅವರು ಎರಡು ಹೇಳಿಕೆಗಳನ್ನು ಕೊಟ್ಟಿದ್ದು ಇನ್ನಷ್ಟು ಪ್ರಶ್ನೆಗಳು ಹುಟ್ಟುವಂತೆ ಮಾಡಿದ್ದಾರೆ.
ಕಾನೂನು ಸೂಕ್ಷ್ಮತೆಗಳಿಂದಾಗಿ ತನ್ನ ಹೆಸರು ಮತ್ತು ಗುರುತನ್ನು ಅನಾಮಧೇಯವಾಗಿಟ್ಟಿದ್ದು, ಮೋಜೋ ಸ್ಟೋರಿಗೆ ಮಾತನಾಡಿ, ಸಿದ್ಧಾರ್ಥ್ ಸಿಂಗ್ ಜೊತೆಗಿನ ಮದುವೆ ಅಥವಾ ಸಿಂಗ್ ಕುಟುಂಬದೊಂದಿಗಿನ ವೈವಾಹಿಕ ಸಂಬಂಧದ ಬಗ್ಗೆ ಮಾತನಾಡುವುದನ್ನು ತಡೆಯುವ ಕಾನೂನು ಒಪ್ಪಂದಕ್ಕೆ ತಾನು ಸೈನ್ ಹಾಕಿರವುದಾಗಿ ರಿವೀಲ್ ಮಾಡಿದ್ದಾರೆ.
ತ್ವಿಶಾ ಶರ್ಮಾ ಅವರ ಮರಣದ ನಂತರ ಗಿರಿಬಾಲಾ ಸಿಂಗ್ ಮತ್ತು ಅವರ ಕುಟುಂಬವು ಸುದ್ದಿಯಲ್ಲಿದೆ. ಆದಾಗ್ಯೂ, ತನಿಖೆಯ ಮಧ್ಯೆ, ಗಿರಿಬಾಲಾ ಅವರಿಗೆ ಮತ್ತೊಬ್ಬ ಸೊಸೆ ಕೂಡ ಇದ್ದಾರೆ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ, ಗಿರಿಬಾಲಾ ಅವರ ಹಿರಿಯ ಮಗ ಸ್ಕ್ವಾಡ್ರನ್ ಲೀಡರ್ ಸಿದ್ಧಾರ್ಥ್ ಸಿಂಗ್ ಅವರು ಈ ಹಿಂದೆ ವಿವಾಹವಾಗಿದ್ದರು. ಆದರೆ 2024 ರಲ್ಲಿ ತಮ್ಮ ಪತ್ನಿಯಿಂದ ಬೇರ್ಪಟ್ಟರು. ಮೋಜೋ ಸ್ಟೋರಿಗೆ ದೊರೆತ ದಾಖಲೆಗಳ ಪ್ರಕಾರ, ಸಿದ್ಧಾರ್ಥ್ ಮತ್ತು ಅವರ ಮಾಜಿ ಪತ್ನಿಗೆ 2024 ರಲ್ಲಿ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ನೀಡಲಾಯಿತು.
ದಂಪತಿ ಆರು ವರ್ಷಗಳ ಕಾಲ ವಿವಾಹವಾಗಿದ್ದರು. ಆದರೆ ಸುಮಾರು ಎರಡು ವರ್ಷಗಳ ಕಾಲ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.
ವರದಿಗಳ ಪ್ರಕಾರ, ಸಿದ್ಧಾರ್ಥ್ ಸಿಂಗ್ ಮತ್ತು ಅವರ ಮಾಜಿ ಪತ್ನಿ ತಮ್ಮ ವಿವಾಹ ಮುರಿದು ಬೀಳಲು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಕಾರಣವೆಂದು ಹೇಳಿ ಬೇರ್ಪಟ್ಟರು. “ಇಬ್ಬರ ನಡುವೆ ಯಾವುದೇ ವಿವಾದವಿರಲಿಲ್ಲ ಮತ್ತು ಇಬ್ಬರೂ ಸ್ವಯಂಪ್ರೇರಣೆಯಿಂದ ವಿಚ್ಛೇದನವನ್ನು ಕೋರಿದ್ದರು” ಎಂದು ದಾಖಲೆಗಳಲ್ಲಿ ಹೇಳಲಾಗಿದೆ.
ವಿಚ್ಛೇದನದ ಸಮಯದಲ್ಲಿ ಗಿರಿಬಾಲಾ ಸಿಂಗ್ ಅವರ ಹಿರಿಯ ಮಗ ಪಾವತಿಸಿದ ಜೀವನಾಂಶವನ್ನು ನ್ಯಾಯಾಲಯದ ದಾಖಲೆಗಳಲ್ಲಿ ಕಾಣಬಹುದು. ಸ್ಕ್ವಾಡ್ರನ್ ನಾಯಕ ಸಿದ್ಧಾರ್ಥ್ ಸಿಂಗ್ ತಮ್ಮ ಮಾಜಿ ಪತ್ನಿಗೆ ಶಾಶ್ವತ ಜೀವನಾಂಶವಾಗಿ ರೂ. 25 ಲಕ್ಷ ಪಾವತಿಸಿದ್ದಾರೆ ಎಂದು ಹೇಳಲಾಗಿದೆ. ನಂತರ ಅವರು ಅವರ ವಿರುದ್ಧ ಭವಿಷ್ಯದಲ್ಲಿ ಯಾವುದೇ ಆರ್ಥಿಕ ಸಹಾಯ ಅಥವಾ ಬೇರೆ ಸೌಲಭ್ಯ ಪಡೆಯೋಕಾಗಲ್ಲ.
ವರದಿಗಳು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನವಾಗಿದೆ ಎಂದು ಹೇಳುತ್ತಿದ್ದರೂ, GAG ಆದೇಶವು ಸಿದ್ಧಾರ್ಥ್ ಸಿಂಗ್, ಪರಸ್ಪರ ಸಮ್ಮತಿಯ ವಿಚ್ಛೇದನದ ಹೊರತಾಗಿಯೂ, ಮೊದಲ ಸೊಸೆ ತಾನು ಮದುವೆಯಾಗಿ ಹೋಗಿದ್ದ ಕುಟುಂಬದ ಬಗ್ಗೆ ಮಾತನಾಡಿಲ್ಲ. ಇಂದಿಗೂ ಅವರು ಸಿಂಗ್ ಕುಟುಂಬದ ಬಗ್ಗೆ ಮೌನವಾಗಿದ್ದಾರೆ. ಇದು ಎಲ್ಲರ ಸಂಶಯಕ್ಕೆ ಕಾರಣವಾಗಿದೆ.












