Tollywood: ಟಾಲಿವುಡ್​ಗೆ ಬ್ಯಾಡ್ ಟೈಮ್! ಸಿನಿಮಾ ಮಾಡೋ ಸ್ಟಾರ್ಸ್​ಗಳಿಗೆಲ್ಲ ವಾರಗಟ್ಟಲೆ ರೆಸ್ಟ್, ರಾಮ್ ಚರಣ್ To ರಶ್ಮಿಕಾ, ಯಾವಾಗ ಹುಷಾರಾಗ್ತಾರೆ? | | ACTPnews

ತೆಲುಗು ನಟರು


Last Updated:

Tollywood: ಟಾಲಿವುಡ್ ಟೈಮ್ ಸರಿ ಇಲ್ವಾ? ಒಬ್ಬರ ನಂತರ ಒಬ್ಬರಂತೆ ಗಂಭೀರ ಗಾಯ, ಸರ್ಜರಿಗೆ ಒಳಗಾಗುತ್ತಲೇ ಇದ್ದಾರೆ ಸ್ಟಾರ್ಸ್.

ತೆಲುಗು ನಟರು
ತೆಲುಗು ನಟರು

ಯಾಕೋ ಏನೋ ತೆಲುಗು ಚಿತ್ರರಂಗದಿಂದ (Tollywood) ಇತ್ತೀಚೆಗೆ ಕೇಳಿ ಬರುತ್ತಿರುವ ಸುದ್ದಿ ನೋಡಿದರೆ ಸದ್ಯಕ್ಕೆ ಟಾಲಿವುಡ್​ನಲ್ಲಿ ಶೂಟಿಂಗ್​​ಗೆ (Shooting) ತಾತ್ಕಾಲಿಕ ಬ್ರೇಕ್ ಬೀಳೋದು ಗ್ಯಾರೆಂಟಿ ಎನ್ನಲಾಗುತ್ತಿದೆ. ತೆಲುಗು ಸ್ಟಾರ್ ನಟರು (Actors) ಇತ್ತೀಚೆಗೆ ಸರ್ಜರಿ, ಅಪಘಾತ ಎಂದು ವಾರಗಟ್ಟಲೆ ರೆಸ್ಟ್​ಗೆ ಹೋಗುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ರಾಮ್ ಚರಣ್, ಪವನ್ ಕಲ್ಯಾಣ್, ಬಾಲಯ್ಯ, ಜೂನಿಯರ್ ಎನ್​ಟಿಆರ್, ರಶ್ಮಿಕಾ (Rashmika Mandanna) ಸೇರಿ ಹಲವರಿಗೆ ಸಮಸ್ಯೆಯಾಗಿದೆ.

ಎಲ್ಲಾ ಆ್ಯಕ್ಷನ್​ಗಳನ್ನು ತಾವೇ ಮಾಡೋಕೆ ಇಷ್ಟಪಡೋ ಬಾಲಯ್ಯ ಅವರಿಗೆ ಇತ್ತೀಚೆಗೆ ಸೆಟ್​ನಲ್ಲಿ ಅಪಘಾತವಾಗಿತ್ತು. ಇತ್ತೀಚೆಗೆ ತೆಲುಗು ಸಿನಿಮಾ ರಂಗದ ಕೆಲವು ದೊಡ್ಡ ಸ್ಟಾರ್​​ಗಳು ಗಾಯಗೊಂಡಿದ್ದಾರೆ.

ಇವರಲ್ಲಿ ಬಹಳಷ್ಟು ಸ್ಟಾರ್​ಗಳಿಗೆ ವಾರಗಟ್ಟಲೆ ರೆಸ್ಟ್ ನೀಡಲಾಗಿದ್ದು ಹಲವಾರು ತೆಲುಗು ಸಿನಿಮಾ ನಿರ್ಮಾಣ ಶೆಡ್ಯೂಲ್ ತಲೆಗೆಳಗಾಗಲಿದೆ ಎನ್ನುವುದು ಗ್ಯಾರೆಂಟಿ.

ರಶ್ಮಿಕಾಗೆ ಗಂಭೀರ ಗಾಯ

ನಟಿ ರಶ್ಮಿಕಾ ಮಂದಣ್ಣ ಅವರ ಮುಂಬರುವ ಚಿತ್ರಗಳಾದ ರಣಬಾಲಿ ಮತ್ತು ಮೈಸಾ ಚಿತ್ರಗಳ ಚಿತ್ರೀಕರಣದ ವೇಳೆ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ದೈಹಿಕವಾಗಿ ಕಷ್ಟಕರವಾದ ಆಕ್ಷನ್ ಮತ್ತು ಡ್ಯಾನ್ಸ್ ಮಾಡುವಾಗ ಗಂಭೀರವಾಗಿ ಸಮಸ್ಯೆಯಾಗಿದೆ ಎನ್ನಲಾಗಿದೆ.

6 ವಾರ ರೆಸ್ಟ್

ತುಂಬಾ ಗಾಯವಾಗಿದ್ದು ವೈದ್ಯರೇ ಶಾಕ್ ಆಗಿದ್ದಾರೆ ಎಂದು ಹೇಳಲಾಗಿದ್ದು, ಕಠಿಣ ದೈಹಿಕ ತರಬೇತಿ ಪಡೆಯುವವರಲ್ಲಿ ಮಾತ್ರ ಇಂತಹ ಸ್ನಾಯು ಹಾನಿ ಸಾಮಾನ್ಯವಾಗಿ ಕಂಡುಬರುತ್ತದೆ ಎನ್ನಲಾಗಿದೆ. “ವೈದ್ಯಕೀಯ ತಜ್ಞರು ರಶ್ಮಿಕಾಗೆ ಆರು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ನಟಿಯ ಆಪ್ತ ಮೂಲಗಳು ತಿಳಿಸಿವೆ.

ಜೂನಿಯರ್​ ಎನ್​ಟಿಆರ್​ಗೆ 8 ವಾರ ರೆಸ್ಟ್

ಈ ಹಿಂದೆ, ಭುಜದ ಗಾಯದಿಂದ ಬಳಲುತ್ತಿದ್ದ ಜೂನಿಯರ್ ಎನ್‌ಟಿಆರ್‌ಗೆ ಆರರಿಂದ ಎಂಟು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿತ್ತು. ನಟ ಪ್ರಸ್ತುತ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಅವರು ನಿಯಮಿತವಾಗಿ ಫಿಸಿಯೋಥೆರಪಿಗೆ ಒಳಗಾಗುತ್ತಿದ್ದಾರೆ. ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಕೆಲಸದಿಂದ ದೂರವಿರಲು ವೈದ್ಯರು ಅವರಿಗೆ ಸೂಚಿಸಿದ್ದಾರೆ.

ಡ್ರ್ಯಾಗನ್ ವಿಳಂಬ

ಈ ಗಾಯದಿಂದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರು ಡ್ರ್ಯಾಗನ್ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಜೂನಿಯರ್ ಎನ್ಟಿಆರ್ ಮತ್ತು ರುಕ್ಮಿಣಿ ವಸಂತ್ ಒಳಗೊಂಡ ಸಾಂಗ್ ಶೂಟಿಂಗ್ ಶ್ರೀಲಂಕಾ ಶೆಡ್ಯೂಲ್ ಅನ್ನು ತಂಡ ರದ್ದುಗೊಳಿಸಿದೆ.

ಬಾಲಯ್ಯಗೂ ರೆಸ್ಟ್

ಹಿರಿಯ ನಟ ನಂದಮೂರಿ ಬಾಲಕೃಷ್ಣ ಕೂಡ ತಮ್ಮ ಮುಂಬರುವ ಚಿತ್ರ NBK 111 ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡರು. ಕಾಕಿನಾಡದಲ್ಲಿ ಹೈ-ವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಸಮಯದಲ್ಲಿ ಅವರ ಸ್ನಾಯುಗಳಿಗೆ ಸಣ್ಣಪುಟ್ಟ ಗಾಯವಾಗಿದೆ. ಬಾಲಕೃಷ್ಣ ಅವರಿಗೆ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸೂಚಿಸಲಾಗಿದೆ.

ರಾಮ್ ಚರಣ್ ಅವರಿಗೂ ಗಾಯ

ಕೆಲವು ತಿಂಗಳ ಹಿಂದೆ, ರಾಮ್ ಚರಣ್ ಕೂಡ ಪೆದ್ದಿ ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡು ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದು ಅವರ ಅಭಿಮಾನಿಗಳಲ್ಲಿ ಕಳವಳವನ್ನುಂಟುಮಾಡಿತು. “ಅವರು ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ನಿರ್ದೇಶಕ ಹೇಮಂತ್ ಮಧುಕರ್ ಹೇಳಿದ್ದಾರೆ.

ಇದನ್ನೂ ಓದಿ: Jana Nayagan: ಕರ್ನಾಟಕದಲ್ಲಿ ವಿಜಯ್ ಕೊನೆಯ ಸಿನಿಮಾಗೆ ಸಂಕಷ್ಟ!

ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ದೊಡ್ಡ ನಟರು ಗಾಯಗಳಿಂದ ಬಳಲುತ್ತಿದ್ದು ರೆಸ್ಟ್​ನಲ್ಲೊದ್ದಾರೆ. ಇದರಿಂದಾಗಿ ತೆಲುಗು ಸಿನಿಮಾಗಳ ಶೂಟಿಂಗ್ ಶೆಡ್ಯೂಲ್ ಎಫೆಕ್ಟ್ ಆಗಲಿದ್ದು, ಬಜೆಟ್ ವಿಷಯದಲ್ಲೂ ಸಮಸ್ಯೆಯಾಗಲಿದೆ. ಮಾತ್ರವಲ್ಲದೆ ನಿರ್ಮಾಣದ ಸಮಯ, ಬಿಡುಗಡೆ ವೇಳಾಪಟ್ಟಿ ಮತ್ತು ದೊಡ್ಡ ಬಜೆಟ್ ಚಿತ್ರಗಳ ಹಣಕಾಸು ಯೋಜನೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಟಾಲಿವುಡ್ ಮತ್ತೊಮ್ಮೆ ವೀಕ್ಷಿಸುತ್ತಿದೆ.

ಕನ್ನಡ ಸುದ್ದಿ/ ನ್ಯೂಸ್/ಮನರಂಜನೆ/

Tollywood: ಟಾಲಿವುಡ್​ಗೆ ಬ್ಯಾಡ್ ಟೈಮ್! ಸಿನಿಮಾ ಮಾಡೋ ಸ್ಟಾರ್ಸ್​ಗಳಿಗೆಲ್ಲ ವಾರಗಟ್ಟಲೆ ರೆಸ್ಟ್, ರಾಮ್ ಚರಣ್ To ರಶ್ಮಿಕಾ, ಯಾವಾಗ ಹುಷಾರಾಗ್ತಾರೆ?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed