Last Updated:
ಖಲೀಲ್ ಹಕ್ಕಾನಿ ಅಫ್ಘಾನಿಸ್ತಾನದ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿಯ ಚಿಕ್ಕಪ್ಪ ಮತ್ತು ತಾಲಿಬಾನ್‌ಗೆ ಪ್ರಮುಖ ನಿಧಿಸಂಗ್ರಹಗಾರರಾಗಿದ್ದ ಇವರ ಸಾವು ತಾಲಿಬಾನ್ ಶ್ರೇಣಿಯೊಳಗೆ ಹೆಚ್ಚುತ್ತಿರುವ ಆಂತರಿಕ ಉದ್ವಿಗ್ನತೆಯ ಬಗ್ಗೆ ಕಳವಳವನ್ನು ಹೆಚ್ಚಿಸಿದೆ.
ಕಾಬೂಲ್: ಅಫ್ಘಾನಿಸ್ತಾನದ (Afghanistan) ರಾಜಧಾನಿ ಕಾಬೂಲ್‌ನಲ್ಲಿ (Kabul) ಬುಧವಾರ ಮಸೀದಿಯೊಳಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್‌ನ (Taliban) ನಿರಾಶ್ರಿತರ ಮತ್ತು ವಾಪಸಾತಿ ಖಾತೆಯ ಉಸ್ತುವಾರಿ ಸಚಿವ ಖಲೀಲ್ ರಹಮಾನ್ ಹಕ್ಕಾನಿ (Khalil Rahman Haqqani) ಎಂದು ಅವರ ಸೋದರಳಿಯ ತಿಳಿಸಿದ್ದಾರೆ. ಇವರೊಂದಿಗೆ ಇತರೆ ಆರು ಜನರು ಸಹ ಸಾವನ್ನಪ್ಪಿದ್ದು, ಇಸ್ಲಾಮಿಕ್ ಸ್ಟೇಟ್ ಖೊರಾಸನ್ (ಐಎಸ್-ಕೆ – Islamic State Khorasan) ದಾಳಿಯ ಹೊಣೆ ಹೊತ್ತುಕೊಂಡಿದೆ.
ಖಲೀಲ್ ಹಕ್ಕಾನಿ ಅವರು ಅಫ್ಘಾನಿಸ್ತಾನದ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿಯ ಚಿಕ್ಕಪ್ಪ ಮತ್ತು ತಾಲಿಬಾನ್‌ಗೆ ಪ್ರಮುಖ ನಿಧಿಸಂಗ್ರಹಗಾರರಾಗಿದ್ದರು. ಹಕ್ಕಾನಿ ಅವರು ಮಾತನಾಡಿ, ನಾವು ಅತ್ಯಂತ ಧೈರ್ಯಶಾಲಿ ಮುಜಾಹಿದ್ ಅನ್ನು ಕಳೆದುಕೊಂಡಿದ್ದೇವೆ, ನಾವು ಅವರನ್ನು ಮತ್ತು ಅವರ ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ಗೆ ತಿಳಿಸಿದರು. ಇದರೊಂದಿಗೆ ಖಲೀಲ್ ಹಕ್ಕಾನಿ ನೆಟ್‌ವರ್ಕ್‌ನ ಹಿರಿಯ ನಾಯಕ ಮತ್ತು ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಸಂಘರ್ಷದ ಉದ್ದಕ್ಕೂ ಪ್ರಮುಖ ದಾಳಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಬಲವಾದ ಸ್ಫೋಟವು ಮಸೀದಿ ಆವರಣದಲ್ಲಿ ಹಕ್ಕಾನಿ ಮತ್ತು ಇತರ ಆರು ಜನರನ್ನು ಬಲಿ ತೆಗೆದುಕೊಂಡಿತು. ಹಕ್ಕಾನಿಯ ಸೋದರಳಿಯ ಪ್ರಕಾರ, ಖಲೀಲ್ ಹಕ್ಕಾನಿ ಮಧ್ಯಾಹ್ನ ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರಡುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಇದರೊಂದಿಗೆ ಈ ಹತ್ಯೆಯು ತಾಲಿಬಾನ್ ಶ್ರೇಣಿಯೊಳಗೆ ಹೆಚ್ಚುತ್ತಿರುವ ಆಂತರಿಕ ಉದ್ವಿಗ್ನತೆಯ ಬಗ್ಗೆ ಕಳವಳವನ್ನು ಹೆಚ್ಚಿಸಿದೆ.
ತಾಲಿಬಾನ್‌ನ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂದ್‌ಝಾದ ನಾಯಕತ್ವದ ಶೈಲಿಯನ್ನು ಸಿರಾಜುದ್ದೀನ್ ಹಕ್ಕಾನಿ ಬಹಿರಂಗವಾಗಿ ಟೀಕಿಸಿದ ಕೇವಲ ಮೂರು ದಿನಗಳ ನಂತರ ಈ ಹತ್ಯೆ ನಡೆದಿದೆ.
ಇನ್ನು ಖಲೀಲ್‌ನ ಸಾವನ್ನು ತಾಲಿಬಾನ್‌ಗೆ ಗಣನೀಯ ಹೊಡೆತವೆಂದು ಪರಿಗಣಿಸಲಾಗಿದೆ ಏಕೆಂದರೆ ಅವರು ವಿದೇಶಿ ದಾನಿಗಳೊಂದಿಗೆ ತಾಲಿಬಾನ್ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು ಮತ್ತು ತಾಲಿಬಾನ್ ಮತ್ತು ಹಕ್ಕಾನಿ ನೆಟ್‌ವರ್ಕ್ ಪರವಾಗಿ ನಿಧಿಸಂಗ್ರಹಣೆ ಚಟುವಟಿಕೆಗಳಿಗೆ ಕಾರಣರಾಗಿದ್ದರು. ಇನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕವು ಆತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿ ಇತನ ಬಂಧನಕ್ಕೆ ಕಾರಣವಾಗುವ ಮಾಹಿತಿಗಾಗಿ $5 ಮಿಲಿಯನ್ ಬಹುಮಾನವನ್ನು ಘೋಷಿಸಿತ್ತು. ಇನ್ನೊಂದೆಡೆ ISIS-K ಅಫ್ಘಾನಿಸ್ತಾನದಲ್ಲಿ ಸಕ್ರಿಯವಾಗಿದೆ ಮತ್ತು ನಿಯಮಿತವಾಗಿ ತಾಲಿಬಾನ್ ಆಡಳಿತದ ಅಧಿಕಾರಿಗಳು ಮತ್ತು ನಾಗರಿಕರನ್ನು ಗುರಿಯಾಗಿಸುತ್ತಾ ದಾಳಿ ಮಾಡುತ್ತಿದೆ. ಉನ್ನತ ಗುಪ್ತಚರ ಮೂಲಗಳ ಪ್ರಕಾರ, ದಾಳಿಯ ಹಿಂದಿನ ಒಂದು ಸಂಭವನೀಯ ಕಾರಣವೆಂದರೆ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಲು ಐಸಿಸ್-ಕೆ ಮತ್ತು ತಾಲಿಬಾನ್ ನಡುವಿನ ಪೈಪೋಟಿಯಾಗಿದೆ.
ಅಧಿಕೃತ ಕಾರ್ಯಕ್ರಮಗಳು ಮತ್ತು ಸಭೆಗಳ ಸಂದರ್ಭದಲ್ಲಿ ಹಕ್ಕಾನಿ ಆಗಾಗ್ಗೆ ರೈಫಲ್ ಅನ್ನು ಹೊತ್ತೊಯ್ಯುತ್ತಿದ್ದರು. ಹಕ್ಕಾನಿ ನೆಟ್‌ವರ್ಕ್‌ನಲ್ಲಿ ಅವರ ಹಿಂದಿನ ಮತ್ತು ನಾಯಕತ್ವದ ಪಾತ್ರವು ಅವರನ್ನು ಪ್ರಮುಖ ಗುರಿಯನ್ನಾಗಿ ಮಾಡಿದ್ದು, ಅವರ ಸಾವು ತಾಲಿಬಾನ್ ಮತ್ತು ಅದರ ಅಂಗಸಂಸ್ಥೆಗಳೊಳಗಿನ ಆಂತರಿಕ ಅಧಿಕಾರದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ.
ತಾಲಿಬಾನ್‌ನ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂದ್‌ಝಾದ ನಾಯಕತ್ವದ ಶೈಲಿಯನ್ನು ಸಿರಾಜುದ್ದೀನ್ ಹಕ್ಕಾನಿ ಬಹಿರಂಗವಾಗಿ ಟೀಕಿಸಿದ ಕೇವಲ ಮೂರು ದಿನಗಳ ನಂತರ ಈ ಹತ್ಯೆ ನಡೆದಿದೆ. ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಸಿರಾಜುದ್ದೀನ್, “ನಾನು ಅಧಿಕಾರದಲ್ಲಿದ್ದೇನೆ ಎಂಬ ಕಾರಣಕ್ಕೆ ಎಲ್ಲರೂ ನನ್ನ ಮಾತನ್ನು ಒಪ್ಪಿಕೊಳ್ಳಬೇಕು, ಇಲ್ಲದಿದ್ದರೆ ಆಕಾಶವೇ ನೆಲಕ್ಕುರುಳುತ್ತದೆ ಎಂದು ನೀವು ಭಾವಿಸಬಾರದು” ಎಂದು ಹಿಬತುಲ್ಲಾ ಅವರ ಆಡಳಿತದ ಸಮಸ್ಯೆಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.
Dec 11, 2024 11:22 PM IST













