ಅಂಬರೀಶ್ ಅವರು ಮಕ್ಕಳನ್ನ ತುಂಬಾನೆ ಪ್ರೀತಿಸ್ತಾ ಇದ್ದರು. ತಮ್ಮ ಮಗ ಅಷ್ಟೆ ಅಲ್ಲ. ಬೇರೆಯವರ ಮಕ್ಕಳನ್ನು ಅಷ್ಟೆ ಪ್ರೀತಿಯಿಂದಲೆ ನೋಡುತ್ತಿದ್ದರು.
ನಮ್ಮ ಮೊಮ್ಮಗ ತುಂಬಾ ತುಂಟ
(ಚಿತ್ರ ಕೃಪೆ: ಸಮಲತಾ ಅಂಬರೀಶ್ ಇನ್‌ಸ್ಟಾಗ್ರಾಮ್)
ನಮ್ಮ ಮೊಮ್ಮಗನಿಗೆ ಇದೀಗ ಒಂದೂವರೆ ವರ್ಷ ಆಗಿದೆ. ತುಂಟತನ ಅಂತು ಜಾಸ್ತಿನೇ ಇದೆ. ತುಂಬಾನೆ ತುಂಟಾಟ ಮಾಡ್ತಾನೆ. ಮೊಮ್ಮಗನ ಈ ತುಂಟಾಟಗಳನ್ನ ನೋಡಿ ಅಂಬರೀಶ್ ಅದೆಷ್ಟು ಖುಷಪಡ್ತಾ ಇದ್ದರೋ ಏನೋ.
ಆದರೆ, ಅವರಿಲ್ಲ ಅನ್ನುವ ಬೇಸರ ಇದ್ದೇ ಇದೆ. ಇದ್ದರೆ ಮೊಮ್ಮಗನನ್ನ ಒಂದು ಸೆಕೆಂಡ್ ಕೂಡ ಬಿಟ್ಟು ಇರ್ತಾ ಇರಲಿಲ್ಲ. ಆ ರೀತಿನೆ ಮಕ್ಕಳ ಬಗ್ಗೆ ಅಂಬರೀಶ್ ಪ್ರೀತಿ ಹೊಂದಿದ್ದರು. ಹಾಗೆ ಮೊಮ್ಮಗನ ತುಂಟಾಟದ ಖುಷಿನೂ ಇದೆ ಅಂತಲೂ ಹೇಳಿಕೊಂಡಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ 74 ನೇ ಜನ್ಮ ಆಚರಿಸಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿರೋ ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ. ಪುತ್ರ ಅಭಿಷೇಕ್ ಅಂಬರೀಶ್, ಸುಮಲತಾ ಅಂಬರೀಶ್ ಹಾಗೂ ಕಲಾವಿದ-ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಬಂದು ಅಂಬರೀಶ್ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.
ಅದೆಷ್ಟು ಪ್ರೀತಿಸ್ತಿದ್ದರೋ…
(ಚಿತ್ರ ಕೃಪೆ: ಸಮಲತಾ ಅಂಬರೀಶ್ ಇನ್‌ಸ್ಟಾಗ್ರಾಮ್)
ಅಂಬರೀಶ್ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಒಂದು ಪೋಸ್ಟ್ ಹಾಕಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಅಲ್ಲೂ ಇದನ್ನ ಬರೆದುಕೊಂಡಿದ್ದಾರೆ. ಅದು ಹೀಗೆ ಇದೆ..
ಇಂದು ಅವರ 74ನೇ ಜನ್ಮದಿನ. ಅಭಿಮಾನಿಗಳು ಪ್ರೀತಿಯಿಂದ ಕೊಂಡಾಡುವ “ರೆಬಲ್ ಸ್ಟಾರ್”, ತನ್ನ ಬಳಿ ಸಹಾಯ ಕೇಳಿ ಬಂದವರನ್ನು ಎಂದಿಗೂ ಬರಿಗೈಯ್ಯಲ್ಲಿ ಕಳುಹಿಸದ “ಕಲಿಯುಗದ ಕರ್ಣ”… ಈ ಎರಡೂ ಅಂಕಿತಗಳಿಗೆ ಪ್ರತಿರೂಪವಾಗಿದ್ದ ಅಂಬರೀಶ್ ಅವರ ಬದುಕೇ ಒಂದು ಹಬ್ಬವಾಗಿತ್ತು. ಅವರಲ್ಲಿದ್ದ ಆ ಕರುಣೆ, ಔದಾರ್ಯ, ಸದಾ ಹಸನ್ಮುಖಿ ವ್ಯಕ್ತಿತ್ವ ಮತ್ತು ಜನರ ಮೇಲಿದ್ದ ಪ್ರೀತಿಗೆ ಬೆಲೆ ಕಟ್ಟಲಾಗದು. ಅವರ ಮನಸ್ಸು ಸಮುದ್ರದಷ್ಟೇ ವಿಶಾಲವಾಗಿತ್ತು. ಕಣ್ಣೆದುರು ಬಂದ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಅಪ್ಪಿಕೊಳ್ಳುವ ದೊಡ್ಡ ಗುಣ ಅವರದ್ದಾಗಿತ್ತು. ಅವರ ಒಡನಾಟ ಸಿಕ್ಕಿದ್ದೇ ನಮ್ಮ ಪುಣ್ಯ ಅಂತ ಅದೆಷ್ಟೋ ಜನ ಇವತ್ತಿಗೂ ಹೆಮ್ಮೆಯಿಂದ ಹೇಳುತ್ತಾರೆ.
ಇವತ್ತು ಈ ನಮ್ಮ ಕುಟುಂಬ ಮಾತ್ರವಲ್ಲ, ಕೋಟ್ಯಂತರ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ. ಅವರ ನೆರಳಲ್ಲಿ ಬೆಳೆದು, ಅವರೊಂದಿಗಿನ ಆಪ್ತ ಕ್ಷಣಗಳನ್ನು ಆನಂದಿಸಿದ ಅದೆಷ್ಟೋ ಆತ್ಮೀಯ ಸ್ನೇಹಿತರು ಇಂದಿಗೂ ಅವರನ್ನ ಸ್ಮರಿಸಿ, ಭಾವುಕರಾಗುತ್ತಾರೆ.
ಅವರು ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆ ಮಾತ್ರವಲ್ಲ, ಅಸಂಖ್ಯಾತ ಜನರಿಗೆ ಅವರು ಹಂಚಿದ ಆ ಪ್ರೀತಿ ಮತ್ತು ಬಿಟ್ಟುಹೋದ ಮರೆಯಲಾಗದ ನೆನಪುಗಳು ಅವರನ್ನು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಜೀವಂತವಾಗಿಟ್ಟಿದೆ.
ನಮ್ಮೆಲ್ಲರ ಮನಸ್ಸಿನಲ್ಲಿ ನೀವು ಸದಾ ಅಮರ… ಅನು ದಿನವೂ, ಅನುಕ್ಷಣವೂ ನಮ್ಮ ಕುಟುಂಬದ ಉಸಿರಾಗಿರುವ ನೀವೆಂದಿಗೂ ನಮ್ಮ ಹೆಮ್ಮೆಯ “ರೆಬೆಲ್ ಸ್ಟಾರ್” ಅಂತಲೇ ಬರೆದಿದ್ದಾರೆ ಅಂತ ಹೇಳಬಹುದು.












