Stampedes: 10 ರಾಜ್ಯಗಳಲ್ಲೇ ಅತೀ ಹೆಚ್ಚು ಜನ ಕಾಲ್ತುಳಿತಕ್ಕೆ ಬಲಿಯಾಗಿದ್ದಂತೆ! ಈ ಲಿಸ್ಟ್‌ನಲ್ಲಿ ಕರ್ನಾಟಕಕ್ಕೆ ಎಷ್ಟನೇ ಸ್ಥಾನ? | Explainers | ACTPnews

Stampedes: 10 ರಾಜ್ಯಗಳಲ್ಲೇ ಅತೀ ಹೆಚ್ಚು ಜನ ಕಾಲ್ತುಳಿತಕ್ಕೆ ಬಲಿಯಾಗಿದ್ದಂತೆ! ಈ ಲಿಸ್ಟ್‌ನಲ್ಲಿ ಕರ್ನಾಟಕಕ್ಕೆ ಎಷ್ಟನೇ ಸ್ಥಾನ? | Explainers


ಪುರಿ ಜಗನ್ನಾಥ ಯಾತ್ರೆಯಲ್ಲಿ ಕಾಲ್ತುಳಿತ

ಇತ್ತೀಚಿಗೆ ಒಡಿಶಾ ರಾಜ್ಯದ ಸುಪ್ರಸಿದ್ಧ ತೀರ್ಥಕ್ಷೇತ್ರ ಪುರಿಯ ಜಗನ್ನಾಥ ರಥೋತ್ಸವದ ವೇಳೆ ಕಾಲ್ತುಳಿತ ಉಂಟಾಗಿತ್ತು. ಪುರಿಯಲ್ಲಿ ರಥಯಾತ್ರೆಯಲ್ಲಿ ಜನರ ಗುಂಪು ಹೆಚ್ಚಾಗಿ ಭಯ ಬಂದು, ಓಡುತ್ತಿದ್ದಂತೆ ಕಾಲ್ತುಳಿತ ಉಂಟಾಗಿತ್ತು. ಪರಿಣಾಮ ಈ ದುರ್ಘಟನೆಯಲ್ಲಿ ಎರಡು ಜನ ಪ್ರಾಣ ಬಿಟ್ಟರು, ಅಲ್ಲದೇ 100ಕ್ಕೂ ಹೆಚ್ಚು ಜನ ಗಾಯಗೊಂಡು ಆಸ್ಪತ್ರೆಗೆ ಸೇರಿದರು. ಹಲವು ರೀತಿಯ. ಬಂದೋಬಸ್ತ್, ಖಡಕ್ ಸೂಚನೆ, ಸುರಕ್ಷತಾ ಕ್ರಮ ಕೈಗೊಂಡರೂ ಇಂತಹ ಘಟನೆಗಳು ಕಳೆದ 20 ವರ್ಷಗಳಿಂದ ಮತ್ತೆ ಮತ್ತೆ ನಡೆಯುತ್ತಿವೆ ಎನ್ನುವುದು ವಿಪರ್ಯಾಸ.

10 ರಾಜ್ಯಗಳಲ್ಲಿ ಶೇಕಡಾ 84ರಷ್ಟು ಸಾವು

NCRB ಅಂದರೆ National Crime Records Bureau (ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ) ವರದಿ ಪ್ರಕಾರ 2001 ರಿಂದ 2024ರಲ್ಲಿ ಭಾರತದಲ್ಲಿ ಕಾಲ್ತುಳಿತದಿಂದ ಸಂಭವಿಸಿದ ಸಾವುಗಳು ನಿಯಮಿತವಾಗಿ ಕಡಿಮೆಯಾಗುತ್ತಿಲ್ಲ. ಅವು ಅನಿಯಮಿತವಾಗಿ ಹೆಚ್ಚುತ್ತವೆ. 2024ರಲ್ಲಿ 147 ಜನ ಸತ್ತರು. ಅತಿ ಹೆಚ್ಚು ಸಾವುಗಳು 2011ರಲ್ಲಿ ಆಗಿದ್ದು ಆಗ 489 ಮಂದಿ ಸತ್ತಿದ್ದರು. ಈ ವರದಿಗಳ ಪ್ರಕಾರ  ಕೇವಲ 10 ರಾಜ್ಯಗಳಲ್ಲಿ 84% ಸಾವುಗಳು ಸಂಭವಿಸಿವೆ ಎನ್ನಲಾಗಿದೆ.

ಈ ಡೇಟಾ ಯಾರು ಸಂಗ್ರಹಿಸುತ್ತಾರೆ?

ಗೃಹ ಸಚಿವಾಲಯದ ಅಡಿಯಲ್ಲಿರುವ NCRB (ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ) ಪ್ರತಿ ವರ್ಷ ರಾಜ್ಯಗಳ ಪೊಲೀಸರಿಂದ ಮಾಹಿತಿ ಪಡೆದು ADSI ವರದಿಯಲ್ಲಿ ಪ್ರಕಟಿಸುತ್ತದೆ. ಕೆಲವು ಘಟನೆಗಳು ಮತ್ತು ಗಾಯಗಳು ವರದಿಯಾಗದೇ ಇರಬಹುದು.

ಅತೀ ಹೆಚ್ಚು ಸಾವುಗಳು ಆಗಿದ್ಯಾವಾಗ?

ಈ ವರದಿಯ ಪ್ರಕಾರ ಕಾಲ್ತುಳಿತದಿಂದ ಸಾವುಗಳು ಇನ್ನೂ ನಡೆಯುತ್ತಿವೆ. ಕಳೆದ 24 ವರ್ಷಗಳಲ್ಲಿ ಸಾವುಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿಲ್ಲ. ಕೆಲವು ವರ್ಷಗಳಲ್ಲಿ ತುಂಬಾ ಹೆಚ್ಚು ಸಾವುಗಳು ಆಗಿವೆ.

2011 489 ಸಾವುಗಳು
2015 480 ಸಾವುಗಳು
2008 434 ಸಾವುಗಳು
2013 400 ಸಾವುಗಳು
2005 346 ಸಾವುಗಳು

ಇದರ ಪ್ರಕಾರ 2011ರಲ್ಲಿ ಅತೀ ಹೆಚ್ಚು ಅಂದರೆ 489 ಸಾವುಗಳಾಗಿವೆ. 2015ರಲ್ಲಿ 480, 2008ರಲ್ಲಿ 434. 2013ರಲ್ಲಿ 400 ಹಾಗೂ 2005ರಲ್ಲಿ 346 ಸಾವುಗಳು ಕಾಲ್ತುಳಿತದಿಂದ ಸಂಭವಿಸಿವೆ. ಇನ್ನು 2023ರಲ್ಲಿ ಕೇವಲ 32 ಸಾವುಗಳಿದ್ದರೆ, 2024ರಲ್ಲಿ 147 ಆಗಿವೆ. ಒಂದು ದೊಡ್ಡ ಘಟನೆಯಿಂದಲೇ ಸಂಖ್ಯೆ ಹೆಚ್ಚಾಗುತ್ತದೆ.

ಅತೀ ಹೆಚ್ಚು ಸಾವು ಸಂಭವಿಸಿದ ರಾಜ್ಯಗಳು

  1. ಜಾರ್ಖಂಡ್
  2. ಮಹಾರಾಷ್ಟ್ರ
  3. ಆಂಧ್ರಪ್ರದೇಶ
  4. ಉತ್ತರಪ್ರದೇಶ
  5. ತಮಿಳುನಾಡು
  6. ರಾಜಸ್ಥಾನ
  7. ಮಧ್ಯಪ್ರದೇಶ
  8. ಹರಿಯಾಣ
  9. ಛತ್ತೀಸ್‌ಗಢ್
  10. ಕರ್ನಾಟಕ

2001-2024ರ ನಡುವೆ ಅತಿ ಹೆಚ್ಚು ಸಾವುಗಳು ಕೆಲವೇ ರಾಜ್ಯಗಳಲ್ಲಿ ಆಗುತ್ತಿವೆ. ಜಾರ್ಖಂಡ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರಪ್ರದೇಶ, ತಮಿಳುನಾಡಲ್ಲಿ ಅತೀ ಹೆಚ್ಚು ಸಾವುಗಳು ಸಂಭವಿಸಿವೆ. ಇವುಗಳ ಜೊತೆಗೆ ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ, ಛತ್ತೀಸ್‌ಘಢ್ ಮತ್ತು ಕರ್ನಾಟಕದಲ್ಲಿ ಹೆಚ್ಚು ಸಾವುಗಳು ಸಂಭವಿಸುತ್ತವೆ. ಒಟ್ಟು ಈ 10 ರಾಜ್ಯಗಳಲ್ಲಿ 84% ಸಾವುಗಳು. ಉಳಿದ ರಾಜ್ಯಗಳಲ್ಲಿ ಕೇವಲ 16%ರಷ್ಟು ಸಾವುಗಳು ಸಂಭವಿಸಿವೆ.

ಕಾರಣವೇನು ಗೊತ್ತಾ?

ಈ ರಾಜ್ಯಗಳಲ್ಲಿ ದೊಡ್ಡ ಧಾರ್ಮಿಕ ಯಾತ್ರೆಗಳು, ದೇವಾಲಯದ  ಹಬ್ಬಗಳು ಮತ್ತು ಜಾತ್ರೆಗಳು ಹೆಚ್ಚು ನಡೆಯುತ್ತವೆ. ದೊಡ್ಡ ಘಟನೆಗಳಿಂದ ಹೆಚ್ಚು ಸಾವುಗಳು ಸಂಭವಿಸಿವೆ. ಒಂದು ಅಥವಾ ಎರಡು ದೊಡ್ಡ ಕಾಲ್ತುಳಿತದಿಂದಲೇ ಆ ವರ್ಷದ ಸಾವುಗಳ ಸಂಖ್ಯೆ ಹೆಚ್ಚಾಗುತ್ತದೆ.

ಪ್ರಮುಖ ಕಾಲ್ತುಳಿತದ ಘಟನೆಗಳು

2011ರಲ್ಲಿ 489 ಸಾವುಗಳು ಸಂಭವಿಸಿದವು. ಕೇರಳದ ಸಬರಿಮಲೆ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿ 106 ಜನ ಸಾವನ್ನಪ್ಪಿದ್ರು. ಇನ್ನು ಹರಿದ್ವಾರದ ಕುಂಭಮೇಳ ಸೇರಿದಂತೆ ಹಲವೆಡೆ ಕಾಲ್ತುಳಿತ ಸಂಭವಿಸಿದವು.

  • 2015ರಲ್ಲಿ 480 ಸಾವುಗಳು ಸಂಭವಿಸಿದ್ದವು. ಜಾರ್ಖಂಡ್‌ನ ಬಾಬಾ ಬೈದ್ಯನಾಥ್ ಧಾಮ್ ಮತ್ತು ಆಂಧ್ರಪ್ರದೇಶದ ಗೋದಾವರಿ ಪುಷ್ಕರಂ ಸೇರಿದಂತೆ ಹಲವೆಡೆ ಕಾಲ್ತುಳಿತ ಸಂಭವಿಸಿತ್ತು.
  • 2008ರಲ್ಲಿ 434 ಜನ ಸತ್ತಿದ್ದರು. ಹಿಮಾಚಲಪ್ರದೇಶದ ನೈನಾ ದೇವಿ ಮತ್ತು ರಾಜಸ್ಥಾನದ ಚಾಮುಂಡಾ ದೇವಿ ದೇವಾಲಯಗಳಲ್ಲಿ ದುರಂತ ಸಂಭವಿಸಿದ್ದವು.
  • 2013 ರಲ್ಲಿ 400 ಸಾವುಗಳು ಸಂಭವಿಸಿತ್ತು. ಮಧ್ಯಪ್ರದೇಶದ ರತನ್‌ಘಢ್ ದೇವಾಲಯ ಮತ್ತು ಅಲಹಾಬಾದ್ ಕುಂಭಮೇಳ ರೈಲ್ವೇ ನಿಲ್ದಾಣದಲ್ಲಿ ದುರಂತವಾಗಿತ್ತು.
  • 2005ರಲ್ಲಿ 346 ಸಾವು ಸಂಭವಿಸಿತ್ತು. ಮಹಾರಾಷ್ಟ್ರದ ಮಂದರ್‌ದೇವಿ ದೇವಾಲಯವೊಂದರಲ್ಲೇ 265ಕ್ಕೂ ಹೆಚ್ಚು ಸಾವು  ಸಂಭವಿಸಿತ್ತು.

ಅತಿ ಹೆಚ್ಚು ವಾರ್ಷಿಕ ಸಾವುಗಳು: 489 – 2011

ಎರಡನೇ ಅತೀ ಹೆಚ್ಚು ಸಾವುಗಳು: 480 – 2015

ಮೂರನೇ ಅತೀ ಹೆಚ್ಚು ಸಾವುಗಳು: 434 (2008)

ಅತಿ ಹೆಚ್ಚು ಸಾವುಗಳ ರಾಜ್ಯ:

  • ಝಾರ್ಖಂಡ್ – 456 ಸಾವುಗಳು
  • ಮಹಾರಾಷ್ಟ್ರ – 393 ಸಾವುಗಳು
  • ಆಂಧ್ರಪ್ರದೇಶ – 391 ಸಾವುಗಳು
  • ಉತ್ತರಪ್ರದೇಶ – 353 ಸಾವುಗಳು
  • ತಮಿಳುನಾಡು – 266 ಸಾವುಗಳು
ಕಾಲ್ತುಳಿತವನ್ನು ತಡೆಯುವುದು ಹೇಗೆ?

ಕಾಲ್ತುಳಿತಗಳು ತಡೆಯಬಹುದಾದ ಅಪಘಾತಗಳು ಎನ್ನುತ್ತಾರೆ ತಜ್ಞರು. ಜನರ ಗುಂಪು ಹೆಚ್ಚಾಗಿ, ಮೂಲಸೌಕರ್ಯ ಮತ್ತು ಸುರಕ್ಷತೆ ಸಾಕಷ್ಟಿಲ್ಲದಾಗ ಇವು ನಡೆಯುತ್ತವೆ. ಉತ್ತಮ ಮಾರ್ಗ ಯೋಜನೆ, ಜನರ ಗುಂಪನ್ನು ನೈಜ ಸಮಯದಲ್ಲಿ ಗಮನಿಸುವುದು, ನಿಯಂತ್ರಿತ ಪ್ರವೇಶ ಮತ್ತು ನಿರ್ಗಮನ, ಸರಿಯಾದ ಮಾಹಿತಿ ಮತ್ತು ತುರ್ತು ಸಹಾಯ ವ್ಯವಸ್ಥೆಯಿಂದ ಅಪಾಯವನ್ನು ಕಡಿಮೆ ಮಾಡಬಹುದು ಎಂದು factly ವೆಬ್‌ಸೈಟ್ ತನ್ನ ವರದಿಯಲ್ಲಿ ತಿಳಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports