Sports Equipment: ಮೈಸೂರಿನ ಯುವ ಸಂಘಗಳಿಗೆ ಸುವರ್ಣಾವಕಾಶ, ಉಚಿತ ಕ್ರೀಡಾ ಸಾಮಗ್ರಿ ಪಡೆಯಲು ಜೂನ್ 3ರೊಳಗೆ ಅರ್ಜಿ ಸಲ್ಲಿಸಿ! | ಮೈಸೂರು ನ್ಯೂಸ್ (Mysuru News) | ACTPnews

ಕ್ರೀಡಾ ಸಲಕರಣೆ ವಿತರಣೆ


Last Updated:

ಮೈಸೂರು ಮೈ ಭಾರತ್ ಕೇಂದ್ರದಿಂದ ಯುವ ಸಂಘಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ, ಮೈ ಭಾರತ್ ಪೋರ್ಟಲ್ ನೋಂದಣಿ ಕಡ್ಡಾಯ, ಜೂನ್ 03ರೊಳಗೆ ಅರ್ಜಿ, ಸಕ್ರಿಯ ಸಂಘಗಳಿಗೆ ಆದ್ಯತೆ

ಕ್ರೀಡಾ ಸಲಕರಣೆ ವಿತರಣೆ
ಕ್ರೀಡಾ ಸಲಕರಣೆ ವಿತರಣೆ

ಮೈಸೂರಿನ (Mysuru) ಯುವಕರಲ್ಲಿ ಕ್ರೀಡಾ ಹುಮ್ಮಸ್ಸು ಹೆಚ್ಚಿಸಲು ಮತ್ತು ದೈಹಿಕ ಸದೃಢತೆಯನ್ನು ಉತ್ತೇಜಿಸಲು ಇದೀಗ ಮೈ ಭಾರತ್ ಕೇಂದ್ರ ಭರ್ಜರಿ ಅವಕಾಶವೊಂದನ್ನು ಕಲ್ಪಿಸಿಕೊಟ್ಟಿದೆ. ಕ್ರೀಡಾ ಸಾಮಗ್ರಿಗಳ (Sports Equipment) ವಿತರಣೆಗಾಗಿ ಮೈ ಭಾರತ್ ಕೇಂದ್ರದ ವತಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಯುವ ಸಂಘಗಳು (Youth Association) ಈ ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ.

ಯಾರಿಗೆ ಸಿಗಲಿದೆ ಮೊದಲ ಆದ್ಯತೆ?

ಈ ಯೋಜನೆಯಡಿ, ಮೈ ಭಾರತ್‍ನ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಯುವ ಸಂಘಗಳಿಗೆ ಆದ್ಯತೆ ನೀಡಲಾಗುತ್ತದೆ. ಮುಖ್ಯವಾಗಿ, ಕಳೆದ ಹಣಕಾಸು ವರ್ಷದಲ್ಲಿ ಕ್ರೀಡಾ ಸಾಮಗ್ರಿಗಳನ್ನು ಪಡೆಯದ ಯುವ ಸಂಘಗಳಿಗೆ ಈ ಬಾರಿ ಮೊದಲ ಆದ್ಯತೆ ಸಿಗಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನೋಂದಣಿ ಕಡ್ಡಾಯ, ಮರೆಯದಿರಿ

ನೀವು ಅರ್ಜಿ ಸಲ್ಲಿಸಲು ಬಯಸಿದರೆ, ನಿಮ್ಮ ಯುವ ಸಂಘ ಮತ್ತು ಅದರ ಸದಸ್ಯರು ಮೈ ಭಾರತ್ ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳದಿದ್ದರೆ ನಿಮ್ಮ ಅರ್ಜಿ ಪರಿಗಣನೆಗೆ ಬರುವುದಿಲ್ಲ. ಆದ್ದರಿಂದ, ಅರ್ಜಿ ಸಲ್ಲಿಸುವ ಮುನ್ನ ಪೋರ್ಟಲ್‍ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅತ್ಯಗತ್ಯ.
ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಯುವ ಸಂಘಗಳು ಅಗತ್ಯ ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ಜೂನ್ 03ರೊಳಗೆ ತಮ್ಮ ಅರ್ಜಿಯನ್ನು ಜಿಲ್ಲಾ ಯುವ ಅಧಿಕಾರಿ, ಮೈ ಭಾರತ್ ಕೇಂದ್ರ, ಮೈಸೂರು ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಎಲ್ಲಿ ಸಂಪರ್ಕಿಸಬೇಕು?

ನೀವು ಹೆಚ್ಚಿನ ಮಾಹಿತಿ ಪಡೆಯಲು ಅಥವಾ ಕಚೇರಿಗೆ ಭೇಟಿ ನೀಡಲು ಬಯಸಿದರೆ, #26/ಎ, ರಾಜರಾಜೇಶ್ವರಿ ದೇವಸ್ಥಾನದ ರಸ್ತೆ, ವಿಶ್ವೇಶ್ವರ ನಗರ, 3ನೇ ಹಂತ, ಮೈಸೂರು–570008 ವಿಳಾಸಕ್ಕೆ ಭೇಟಿ ನೀಡಬಹುದು. ಅಲ್ಲದೆ, 0821-2489858 ಅಥವಾ 7736426247 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed