Special Course: ರೈತರ ಮಕ್ಕಳಿಗೆ 50% ಸೀಟ್‌ ಮೀಸಲು, SSLC ಮುಗೀತಾ? ತಡ ಮಾಡದೇ ಈ ಕೋರ್ಸ್‌ಗೆ ಸೇರಿ, ಕನ್ನಡದಲ್ಲೇ ಕಲಿತು ಎಲ್ಲಿ ಬೇಕಾದರೂ ಉದ್ಯೋಗ ಪಡೆಯಿರಿ! | | ACTPnews

ವಿಶೇಷ ಕೋರ್ಸ್


Last Updated:

KVAFSU ಗ್ರಾಮೀಣ ವಿದ್ಯಾರ್ಥಿಗಳಿಗೆ 2 ವರ್ಷದ ಪಶುಸಂಗೋಪನಾ ಡಿಪ್ಲೊಮಾ ಪ್ರವೇಶ ಆರಂಭ, ತಿಂಗಳಿಗೆ 1000 ರೂ ಶಿಷ್ಯವೇತನ, AHVS, KMF ಮತ್ತು ಖಾಸಗಿ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳು

ವಿಶೇಷ ಕೋರ್ಸ್
ವಿಶೇಷ ಕೋರ್ಸ್

ಬೆಂಗಳೂರು: ಎಸ್‌ಎಸ್‌ಎಲ್‌ಸಿ (SSLC) ಮುಗಿಸಿ ಮುಂದೆನು ಓದುವುದು, ಯಾವ ಕೋರ್ಸ್ ತೆಗೆದುಕೊಂಡರೆ ಬೇಗ ಕೆಲಸ ಸಿಗುತ್ತದೆ ಎಂದು ತಲೆಕೆಡಿಸಿಕೊಂಡಿದ್ದೀರಾ? ಹಾಗಾದರೆ ಗ್ರಾಮೀಣ ಭಾಗದ (Rural Area) ವಿದ್ಯಾರ್ಥಿಗಳಿಗೆಂದೇ ಸರ್ಕಾರಿ ವಿಶ್ವವಿದ್ಯಾಲಯವೊಂದು ಬಂಪರ್ ಆಫರ್ ನೀಡಿದೆ. ಕೋರ್ಸ್ (Course) ಓದುವಾಗಲೇ ನಿಮ್ಮ ಜೇಬಿಗೆ ಪ್ರತಿ ತಿಂಗಳು ಹಣ ಬರುತ್ತದೆ, ಜೊತೆಗೆ ಕೋರ್ಸ್ ಮುಗಿದ ತಕ್ಷಣ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಕೈತುಂಬಾ ಸಂಬಳದ ಉದ್ಯೋಗಗಳು ನಿಮಗಾಗಿ ಕಾಯುತ್ತಿವೆ! ಹೌದು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು (KVAFSU) 2026-27ನೇ ಸಾಲಿನ  2 ವರ್ಷದ ‘ಪಶುಸಂಗೋಪನಾ ಡಿಪ್ಲೊಮಾ’ (Veterinary Diploma)  ಪ್ರವೇಶಾತಿಗೆ ಅಧಿಕೃತ ಚಾಲನೆ ನೀಡಿದೆ.

ಓದುವಾಗಲೇ ತಿಂಗಳಿಗೆ 1,000 ರೂ. ಜೇಬಿಗೆ!

ಈ ಕೋರ್ಸ್‌ನ ಅತಿದೊಡ್ಡ ಆಕರ್ಷಣೆ ಎಂದರೆ, ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ವ್ಯಾಸಂಗದ ಅವಧಿಯಲ್ಲಿ ಪ್ರತಿ ತಿಂಗಳು ರೂ. 1,000 ಗಳ ಶಿಷ್ಯವೇತನ (Stipend) ನೀಡಲಾಗುತ್ತದೆ. ಕನ್ನಡ ಮಾಧ್ಯಮದಲ್ಲೇ ತರಗತಿಗಳು ನಡೆಯಲಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಇದು ಹೇಳಿಮಾಡಿಸಿದ ಕೋರ್ಸ್ ಆಗಿದೆ.

ಕೋರ್ಸ್ ಮುಗಿದರೆ ಯಾವೆಲ್ಲಾ ಕೆಲಸ ಸಿಗುತ್ತೆ? ಸಂಬಳ ಎಷ್ಟು?

ಈ ಎರಡು ವರ್ಷದ ಡಿಪ್ಲೊಮಾ ಮುಗಿಸಿದರೆ ನಿರುದ್ಯೋಗಿಗಳಾಗಿ ಕೂರುವ ಪ್ರಮೇಯವೇ ಇಲ್ಲ. ಪಶುಪಾಲನಾ ಕ್ಷೇತ್ರದಲ್ಲಿ ಇಂದು ವಿಪರೀತ ಬೇಡಿಕೆಯಿದ್ದು, ಈ ಕೆಳಗಿನ ಹುದ್ದೆಗಳನ್ನು ನೀವು ಅಲಂಕರಿಸಬಹುದು

  1. ಲೈವ್‌ಸ್ಟಾಕ್ ಇನ್ಸ್‌ಪೆಕ್ಟರ್ / ಪಶುವೈದ್ಯಕೀಯ ಸಹಾಯಕ: ಪಶು ಆಸ್ಪತ್ರೆಗಳಲ್ಲಿ ಪಶುವೈದ್ಯಾಧಿಕಾರಿಗಳ (VO) ಮಾರ್ಗದರ್ಶನದಲ್ಲಿ ಕೆಲಸ. ಪ್ರಥಮ ಚಿಕಿತ್ಸೆ, ಲಸಿಕೆ ಹಾಕುವುದು ಇದರ ಪ್ರಮುಖ ಜವಾಬ್ದಾರಿ.
  2. ಕೃತಕ ಗರ್ಭಧಾರಣಾ (AI) ತಂತ್ರಜ್ಞ:  ಹಳ್ಳಿಗಳಲ್ಲಿ ಜಾನುವಾರು ತಳಿ ಅಭಿವೃದ್ಧಿ ಮತ್ತು ಗರ್ಭಧಾರಣೆ ತಪಾಸಣೆ.
  3. ಡೈರಿ ಮತ್ತು ಪೌಲ್ಟ್ರಿ ಫಾರ್ಮ್ ಸೂಪರ್‌ವೈಸರ್:  ಖಾಸಗಿ ಫಾರ್ಮ್‌ಗಳಲ್ಲಿ ಮೇಲ್ವಿಚಾರಣೆ.
  4. ಲ್ಯಾಬ್ ಟೆಕ್ನಿಷಿಯನ್: ರಕ್ತ, ಸಗಣಿ ಮುಂತಾದ ಜೈವಿಕ ಮಾದರಿಗಳ ಸಂಗ್ರಹ ಮತ್ತು ಪರೀಕ್ಷೆ.
ಭರ್ಜರಿ ಸಂಬಳ

ಪಶುಸಂಗೋಪನಾ ಇಲಾಖೆ (AHVS) ಅಥವಾ KMF (ನಂದಿನಿ) ನಲ್ಲಿ ಸರ್ಕಾರಿ/ಅರೆ-ಸರ್ಕಾರಿ ಕೆಲಸ ಸಿಕ್ರೆ  ಆರಂಭಿಕ ವೇತನವೇ ₹21,000 ದಿಂದ ₹25,000 ವರೆಗೆ ಇರುತ್ತದೆ! ಸುಗುಣ, ಗೋದ್ರೆಜ್‌ನಂತಹ ಖಾಸಗಿ ಕಂಪನಿಗಳಲ್ಲೂ ಫ್ರೆಶರ್‌ಗಳಿಗೆ ₹15,000 ದಿಂದ ₹22,000 ವರೆಗೆ ಸುಲಭವಾಗಿ ಸಂಬಳ ಸಿಗುತ್ತದೆ.

ಯಾರೆಲ್ಲಾ ಅರ್ಜಿ ಹಾಕಬಹುದು?

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಓದಿ ಕನಿಷ್ಠ ಶೇ.45 ಅಂಕಗಳೊಂದಿಗೆ ಪಾಸ್ ಆಗಿರಬೇಕು (ಪ.ಜಾ/ಪ.ಪಂ/ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಶೇ.40 ಸಾಕು).

ಗ್ರಾಮೀಣ ಕಡ್ಡಾಯ:  1ನೇ ತರಗತಿಯಿಂದ 10ನೇ ತರಗತಿಯವರೆಗೆ ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿರಬೇಕು.

ವಯೋಮಿತಿ:  30.06.2026 ಕ್ಕೆ 20 ವರ್ಷ ಮೀರಿರಬಾರದು.

ರೈತರ ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಬರೋಬ್ಬರಿ ಶೇ.50% ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ!

ಸಮಯ ಮೀರುವ ಮುನ್ನವೇ ಅರ್ಜಿ ಹಾಕಿ!

ದಾಖಲಾತಿ ಪರಿಶೀಲನೆ, ರೋಸ್ಟರ್ ಮತ್ತು ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ನಡೆಯಲಿದೆ. ಅರ್ಜಿ ಸಲ್ಲಿಕೆ ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿದ್ದು, ಕೊನೆಯ ಕ್ಷಣದವರೆಗೆ ಕಾಯಬೇಡಿ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 01-06-2026 ರಿಂದ ಅಧಿಕೃತವಾಗಿ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು 30-06-2026 ಕೊನೆಯ ದಿನಾಂಕವಾಗಿದೆ. ತದನಂತರ, ಅರ್ಹ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯು 13-07-2026 ರಿಂದ ಪ್ರಾರಂಭವಾಗಲಿದೆ. ಈ ಪ್ರಕ್ರಿಯೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ನೀವು ಅಧಿಕೃತ ವೆಬ್‌ಸೈಟ್ ಆದ kvafsu.edu.in ಗೆ ಭೇಟಿ ನೀಡಬಹುದು.

ವಿಪುಲ ಉದ್ಯೋಗಾವಕಾಶ ಲಭ್ಯ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed