Spandana Somanna: ಆ ಹುಡುಗ ಸೂರಜ್ ಅಲ್ಲ; ಮದುವೆ ವದಂತಿಗೆ ಸ್ಪಂದನಾ ಸೋಮಣ್ಣ ಸ್ಪಷ್ಟನೆ | | ACTPnews

ಸ್ಪಂದನಾ ಸೋಮಣ್ಣ


Last Updated:

ಸ್ಪಂದನಾ ಸೋಮಣ್ಣ ಇತ್ತೀಚೆಗೆ ತಮ್ಮ ಭಾವಿ ಪತಿಯೊಂದಿಗಿನ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದರಲ್ಲೂ ಪ್ಯಾರಿಸ್‌ನ ಐಫೆಲ್ ಟವರ್ ಎದುರು ತೆಗೆದ ಫೋಟೋ ಅಭಿಮಾನಿಗಳ ಗಮನ ಸೆಳೆದಿತ್ತು.

ಸ್ಪಂದನಾ ಸೋಮಣ್ಣ
ಸ್ಪಂದನಾ ಸೋಮಣ್ಣ

ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ (Spandana Somanna) ಸದ್ಯ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲಿರುವುದಾಗಿ ತಿಳಿಸಿರುವ ಸ್ಪಂದನಾ , ಭಾವಿ ಪತಿಯೊಂದಿಗೆ ಫೋಟೋ ಹಂಚಿಕೊಂಡಿದ್ದರು. ಆದರೆ, ಫೋಟೋದಲ್ಲಿ ಹುಡುಗನ ಮುಖವನ್ನು ರಿವೀಲ್ ಮಾಡಿರಲಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಊಹಾಪೋಹಗಳು ಶುರುವಾಗಿದ್ದವು. ಇದೀಗ ಸ್ವತಃ ಸ್ಪಂದನಾ ಈ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದು, ಮದುವೆಯಾಗಲಿರುವ ಹುಡುಗ ಯಾರು ಎಂಬ ಕುತೂಹಲಕ್ಕೆ ಇನ್ನಷ್ಟು ಕುತೂಹಲ ಸೇರಿದೆ.

ಸ್ಪಂದನಾ ಸೋಮಣ್ಣ ಇತ್ತೀಚೆಗೆ ತಮ್ಮ ಭಾವಿ ಪತಿಯೊಂದಿಗಿನ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದರಲ್ಲೂ ಪ್ಯಾರಿಸ್‌ನ ಐಫೆಲ್ ಟವರ್ ಎದುರು ತೆಗೆದ ಫೋಟೋ ಅಭಿಮಾನಿಗಳ ಗಮನ ಸೆಳೆದಿತ್ತು. ಫೋಟೋದಲ್ಲಿ ಸ್ಪಂದನಾ ಮದುವೆ ಆಗಲಿರುವ ಹುಡುಗನ ಮುಖವನ್ನು ರಿವೀಲ್ ಮಾಡಿರಲಿಲ್ಲ.

ಇದರಿಂದಾಗಿ ಆ ವ್ಯಕ್ತಿ ಯಾರು ಎಂಬ ಬಗ್ಗೆ ಅಭಿಮಾನಿಗಳು ಮತ್ತು ನೆಟ್ಟಿಗರು ತಮ್ಮದೇ ಆದ ಊಹೆಗಳನ್ನು ಆರಂಭಿಸಿದ್ದರು. ಕೆಲವರು ಬಿಗ್ ಬಾಸ್ ಮಾಜಿ ಸ್ಪರ್ಧಿ ಸೂರಜ್ ಅವರೇ ಸ್ಪಂದನಾ ಭಾವಿ ಪತಿ ಇರಬಹುದು ಎಂದು ಭಾವಿಸಿದ್ದರು.

ಬೇರೆ ಹುಡುಗರ ಹೆಸರುಗಳೂ ವೈರಲ್

ಸೂರಜ್ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಬೇರೆ ಬೇರೆ ಹುಡುಗರ ಹೆಸರನ್ನೂ ಸ್ಪಂದನಾ ಮದುವೆಯೊಂದಿಗೆ ಜೋಡಿಸಿದ್ದಾರೆ. ಕೆಲವರನ್ನು ಟ್ಯಾಗ್ ಮಾಡಲಾಗಿದ್ದು, ಅವರೇ ಸ್ಪಂದನಾ ಭಾವಿ ಪತಿ ಇರಬಹುದು ಎಂಬ ಚರ್ಚೆಯೂ ನಡೆದಿದೆ. ಅದೂ ಕೂಡಾ ಸುಳ್ಳು ಎಂದು ಸ್ಪಂದನಾ ಹೇಳಿದ್ದಾರೆ.

ತಮ್ಮ ಭಾವಿ ಪತಿಯ ಗುರುತನ್ನು ಸದ್ಯಕ್ಕೆ ಬಹಿರಂಗಪಡಿಸದಿರುವ ಸ್ಪಂದನಾ, ಸರಿಯಾದ ಸಮಯದಲ್ಲಿ ಈ ವಿಚಾರವನ್ನು ತಾವೇ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳಲ್ಲಿ ಭಾವಿ ಪತಿ ಯಾರು ಎಂಬ ಕುತೂಹಲ ಮುಂದುವರಿದಿದೆ.

ತಮ್ಮ ಮದುವೆಗೆ ಸಂಬಂಧಿಸಿದ ಪ್ರತಿಯೊಂದು ವಿಶೇಷ ಕ್ಷಣವನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಸ್ಪಂದನಾ ನಿರ್ಧರಿಸಿದ್ದಾರೆ. ನಿಶ್ಚಿತಾರ್ಥದ ದಿನಾಂಕ, ಮದುವೆಯ ದಿನಾಂಕ, ಮದುವೆಯ ಸಿದ್ಧತೆ, ಶಾಪಿಂಗ್ ಸೇರಿದಂತೆ ಹಲವು ವಿಚಾರಗಳನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

ಬಿಗ್ ಬಾಸ್ ಕಾರ್ಯಕ್ರಮದ ಮೂಲಕವೂ ಸಾಕಷ್ಟು ಜನಪ್ರಿಯತೆ ಗಳಿಸಿರುವ ಸ್ಪಂದನಾ, ಕಿರುತೆರೆಯಲ್ಲೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಅವರ ಮದುವೆಯ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವುದರಿಂದ, ಭಾವಿ ಪತಿ ಯಾರು ಎಂಬುದು ಅವರ ಅಭಿಮಾನಿಗಳ ಪ್ರಮುಖ ಕುತೂಹಲವಾಗಿದೆ.

ಆದರೆ ಸದ್ಯಕ್ಕೆ ಒಂದು ವಿಚಾರ ಮಾತ್ರ ಸ್ಪಷ್ಟವಾಗಿದೆ. ಸ್ಪಂದನಾ ಮದುವೆಯಾಗುತ್ತಿರುವ ಹುಡುಗ ಸೂರಜ್ ಅಲ್ಲ. ಉಳಿದ ಮಾಹಿತಿಯನ್ನು ಶೀಘ್ರದಲ್ಲೇ ಸ್ವತಃ ಸ್ಪಂದನಾ ಬಹಿರಂಗಪಡಿಸುವ ಸಾಧ್ಯತೆಯಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed