Shiva Rajkumar: ಜನ್ಮ ದಿನದಂದು ಶಿವಣ್ಣನ ಮಹತ್ವದ ಘೋಷಣೆ! ರಾತ್ರಿ 12ಕ್ಕೆ ಸಂಭ್ರಮ ಶುರು | | ACTPnews

ಜನ್ಮ ದಿನದಂದು ಶಿವಣ್ಣನ  ಮಹತ್ವದ ಘೋಷಣೆ; ರಾತ್ರಿ 12 ಕ್ಕೇನೆ ಸಂಭ್ರಮ ಶುರು!


Last Updated:

ಶಿವರಾಜ್ ಕುಮಾರ್ ತಮ್ಮ 64 ನೇ ಜನ್ಮ ದಿನಕ್ಕೆ ವಿಶೇಷ ಘೋಷಣೆ ಮಾಡುತ್ತಿದ್ದಾರೆ. ಈ ದಿನ ಅಭಿಮಾನಿಗಳು ಸಾಕಷ್ಟು ಪ್ಲಾನ್ ಕೂಡ ಮಾಡಿಕೊಂಡಿದ್ದಾರೆ. ಈ ಎಲ್ಲದರ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.

ಜನ್ಮ ದಿನದಂದು ಶಿವಣ್ಣನ  ಮಹತ್ವದ ಘೋಷಣೆ; ರಾತ್ರಿ 12 ಕ್ಕೇನೆ ಸಂಭ್ರಮ ಶುರು!
ಜನ್ಮ ದಿನದಂದು ಶಿವಣ್ಣನ ಮಹತ್ವದ ಘೋಷಣೆ; ರಾತ್ರಿ 12 ಕ್ಕೇನೆ ಸಂಭ್ರಮ ಶುರು!

ಶಿವಣ್ಣನ (Shivanna) ವಾಕಿಂಗ್ ಫ್ರೆಂಡ್ಸ್ ಅಮರಾನಾಥ್‌ಗೆ ಹೋಗಿದ್ದಾರೆ. ಶಿವಣ್ಣನಿಗೆ ಒಳ್ಳೆಯದಾಗಲಿ, ಗೀತಕ್ಕನಿಗೆ ಒಳ್ಳೆಯದಾಗಲಿ, ಇವರ ಜನ್ಮ ದಿನದ ಪ್ರಯುಕ್ತವೇ ಈ ಸ್ನೇಹಿತರು ಅಮರನಾಥ್‌ಗೆ (Amarnath) ಹೋಗಿದ್ದಾರೆ. ಅಲ್ಲಿಂದಲೇ ವಿಶ್ ಮಾಡಿದ್ದಾರೆ. ವಿಡಿಯೋನೂ ಕಳಿಸಿದ್ದಾರೆ. ಇದರ ಹೊರತಾಗಿ ಶಿವಣ್ಣ ತಮ್ಮ ಜನ್ಮ ದಿನದಂದು (Birthday) ಜುಲೈ-12 ರಂದು ಒಂದು ಮಹತ್ವದ ಘೋಷಣೆ ಮಾಡುತ್ತಿದ್ದಾರೆ. ಅದೇನು ಅನ್ನುವ ಕುತೂಹಲವೂ ಹೆಚ್ಚಾಗಿದೆ. ಇದರ ನಡುವೆ ಜುಲೈ-11 ರಂದು ಮಧ್ಯ ರಾತ್ರಿ 12 ಗಂಟೆಗೆ ಸೆಲೆಬ್ರೇಷನ್ (Celebration) ಶುರು ಆಗುತ್ತದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಮಹತ್ವದ ಘೋಷಣೆ

ಶಿವಣ್ಣ ತಮ್ಮ ಜನ್ಮ ದಿನದಂದು ಒಂದು ಮಹತ್ವದ ಘೋಷಣೆ ಮಾಡುತ್ತಿದ್ದಾರೆ. ಅದೇನು ಅನ್ನುವ ಕುತೂಹಲ ಇದೆ. ಆದರೆ, ಅಧಿಕೃತವಾಗಿಯೇ ಬಂದಿರೋ ಈ ಮಾಹಿತಿಯನ್ನ ಈ ರೀತಿ ಮಾತ್ರ ಕೊಡಲಾಗಿದೆ.
shiva rajkumar birthday special announcement fans celebration

ಮಹತ್ವದ ಘೋಷಣೆ

“ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರ ಜನ್ಮದಿನದ ಅಂಗವಾಗಿ, ಜುಲೈ 12, 2026 ರಂದು ಬೆಳಿಗ್ಗೆ 10.00 ಗಂಟೆಗೆ ಡಾ. ಶಿವರಾಜ್‌ಕುಮಾರ್ ಅವರ ನಿವಾಸದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ವಿಶೇಷ ಸಂದರ್ಭದಲ್ಲಿ, ತಮ್ಮ ಪ್ರೀತಿಯ ಅಭಿಮಾನಿಗಳಿಗಾಗಿ ಡಾ. ಶಿವರಾಜ್‌ಕುಮಾರ್ ಅವರು ಒಂದು ಮಹತ್ವದ ಘೋಷಣೆಯನ್ನು ಮಾಡಲಿದ್ದು, ಜನ್ಮದಿನದ ಸಂಭ್ರಮದ ಭಾಗವಾಗಿ ಇನ್ನೂ ಕೆಲವು ವಿಶೇಷ ಅಚ್ಚರಿಗಳನ್ನೂ ಸಿದ್ಧಪಡಿಸಲಾಗಿದೆ.” ಅಂತಲೇ ಮಾಹಿತಿ ಕೊಡಲಾಗಿದೆ.

ಮಧ್ಯ ರಾತ್ರಿನೇ ಸಂಭ್ರಮ

ಶಿವಣ್ಣನ ಜನ್ಮ ದಿನ ಜುಲೈ-12 ರಂದು ಇರುತ್ತದೆ. ಆದರೆ, ಅಭಿಮಾನಿಗಳು ಈ ಸಂಭ್ರಮವನ್ನ ಜುಲೈ-11 ರಂದು ರಾತ್ರಿಯಿಂದಲೇ ಶುರು ಮಾಡುತ್ತಿದ್ದಾರೆ.

ಕರೆಕ್ಟ್ ಆಗಿ ರಾತ್ರಿ 12 ಗಂಟೆಗೆ ಸಿಡಿಮದ್ದು ಸಿಡಿಸಿ ಬರ್ತ್ ಡೇ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಅಭಿಮಾನಿಗಳ ಪರವಾಗಿಯೇ ಶಿವಣ್ಣ ಒಂದು ಕೇಕ್ ಕಟ್ ಮಾಡಲಿದ್ದಾರೆ. ಕೇಕ್ ಮತ್ತು ಇತರ ಉಡುಗೊರೆಯನ್ನ ತರಬೇಡಿ ಅಂತಲೇ ಈಗಾಗಲೇ ಸ್ವತಃ ಶಿವಣ್ಣ ವಿಡಿಯೋ ಮೂಲಕವೂ ಹೇಳಿದ್ದಾರೆ.

ಜನ್ಮ ದಿನಕ್ಕೆ ಅನ್ನ ಸಂತರ್ಪಣೆ

ಶಿವಣ್ಣ ಮನೆಯಲ್ಲಿಯೇ ಈ ಒಂದು ಬರ್ತ್ ಡೇ ಸೆಲೆಬ್ರೇಷನ್ ಇರುತ್ತದೆ. ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಕೂಡ ಮಾಡುತ್ತಿದ್ದಾರೆ.

shiva rajkumar birthday special announcement fans celebration

ಶಿವಣ್ಣನ ವಾಕಿಂಗ್ ಫ್ರೆಂಡ್ಸ್

ಈ ದಿನ ಅಭಿಮಾನಿಗಳು ಇನ್ನೂ ಒಂದು ಕೆಲಸ ಮಾಡುತ್ತಿದ್ದಾರೆ. ಮೈಸೂರಿನಲ್ಲಿರೋ ಶಕ್ತಿಧಾಮಕ್ಕೆ ಧನಸಹಾಯ ಮಾಡಲು ಮುಂದಾಗಿದ್ದಾರೆ. ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಸ್ಥಾಪಿಸಿರೋ ಈ ಶಕ್ತಿಧಾಮವನ್ನ ಗೀತಾ ಶಿವರಾಜ್‌ಕುಮಾರ್ ನೋಡಿಕೊಳ್ಳುತ್ತಿದ್ದಾರೆ.

ಅಪ್ಪು ಹಾಡಿನ ದುಡ್ಡು…

ಪುನೀತ್ ರಾಜ್‌ಕುಮಾರ್ ಅವರು ಬೇರೆ ಬೇರೆ ಚಿತ್ರಗಳಿಗೆ ಹಾಡುತ್ತಿದ್ದರು. ಹಾಗೆ ಹಾಡಿರೋ ಹಾಡುಗಳಿಂದ ಬಂದ ದುಡ್ಡನ್ನ ಮೈಸೂರಿನ ಈ ಶಕ್ತಿಧಾಮಕ್ಕೆ ಕೊಡ್ತಾ ಇದ್ದರು. ಆದರೆ, ಈ ಸಲ ಶಿವಣ್ಣನ ಅಭಿಮಾನಿಗಳು ಈ ಶಕ್ತಿಧಾಮಕ್ಕೆ ತಮ್ಮ ಕೈಲಾದಷ್ಟು ಧನ ಸಹಾಯ ಮಾಡೋಕೆ ಯೋಚನೆ ಮಾಡಿದ್ದಾರೆ.

ಇದನ್ನೂ ಓದಿ: Vijay Sethupathi: ವಿಜಯ್ ಸೇತುಪತಿ ಸಖತ್ ಸ್ಲಿಮ್.! ಈ ಲುಕ್ ಯಾವ ಚಿತ್ರಕ್ಕೆ ಗೊತ್ತಾ?

ಇದು ಬಿಟ್ಟರೆ, ವರಪುತ್ರ ಡಾಕ್ಟರ್ ಶಿವರಾಜ್ ಕುಮಾರ್ ಹಾಗೂ ಡಾಕ್ಟರ್ ಪುನೀತ್ ರಾಜ್‌ಕುಮಾರ್ ಕನ್ನಡ ಸೇನೆ ವಿಶೇಷ ಪೂಜೆ ಮಾಡಿಸುತ್ತಿದೆ. ವೀರೇಶ್ ಥಿಯೇಟರ್ ಸಮೀಪದಲ್ಲಿರೋ ಶ್ರೀ ಮುತಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶಿವಣ್ಣನ ಬರ್ತ್ ಡೇ ಪ್ರಯುಕ್ತ ಪೂಜೆ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡುತ್ತಿದ್ದಾರೆ.

ಶಿವಣ್ಣನ ವಾಕಿಂಗ್ ಫ್ರೆಂಡ್ಸ್

ಶಿವರಾಜ್ ಕುಮಾರ್ ಪ್ರತಿ ದಿನ ವಾಕಿಂಗ್ ಮಾಡುತ್ತಾರೆ. ಇಲ್ಲಿ ಇವರಿಗೆ ಅನೇಕ ವಾಕಿಂಗ್ ಫ್ರೆಂಡ್ಸ್ ಕೂಡ ಇದ್ದಾರೆ. ಈ ವಾಕಿಂಗ್ ಫ್ರೆಂಡ್‌ಗಳಲ್ಲಿ ಕೆಲವರು ಶಿವಣ್ಣನ ಜನ್ಮ ದಿನದ ಹಿನ್ನೆಲೆಯಲ್ಲಿಯೇ ಅಮರನಾಥ್ ಯಾತ್ರೆ ಕೈಗೊಂಡಿದ್ದಾರೆ.

ಶಿವಣ್ಣ ಹಾಗೂ ಗೀತಕ್ಕ ಅವರಿಗೆ ಒಳ್ಳೆಯದಾಗಲಿ, ಆರೋಗ್ಯವು ಚೆನ್ನಾಗಿ ಇರಲಿ ಅಂತ ಹಾರೈಸಿದ್ದಾರೆ. ಅಲ್ಲಿಂದಲೇ ಶಿವಣ್ಣನ ಜನ್ಮ ದಿನ್ಕೆ ವಿಶ್ ಕೂಡ ಮಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed