Last Updated:
ಗ್ರಾಮಾಯಣ ಚಿತ್ರ ನೋಡಿದ್ಮೇಲೆ ಶಿವಣ್ಣ ಹೇಳಿದ್ದೇನು? ಡೈರೆಕ್ಟರ್ ಪುಟ್ಟಣ್ಣ ಕಣಗಾಲ್ ಹಾಗೂ ಸಿದ್ಧಲಿಂಗಯ್ಯನವರನ್ನ ನೆನಪಿಸಿಕೊಂಡಿರೋದು ಯಾಕೆ? ಈ ಎಲ್ಲ ವಿವರ ಇಲ್ಲಿದೆ ಓದಿ.
ಗ್ರಾಮಾಯಣ ಚಿತ್ರ (Graamaayana Movie) ನೋಡಿದ ಶಿವರಾಜ್ ಕುಮಾರ್ (Shiva Rajkumar) ಅವರು ಪುಟ್ಟಣ್ಣ ಕಣಗಾಲ್ (Puttanna Kanagal) ಅವರನ್ನ ನೆನಪಿಸಿಕೊಂಡಿದ್ದಾರೆ. ಬಂಗಾರದ ಮನುಷ್ಯ ಚಿತ್ರದ ಡೈರೆಕ್ಟರ್ ಸಿದ್ದಲಿಂಗಯ್ಯನವರನ್ನ ನೆನಪಿಸಿಕೊಂಡಿದ್ದಾರೆ. ತಮಿಳು ಡೈರೆಕ್ಟರ್ ಭಾರತಿರಾಜ ಅವರ ಹೆಸರನ್ನೂ ಹೇಳಿದ್ದಾರೆ. ಕಳೆದ 8 ವರ್ಷದ ಹಿಂದೆ ಈ ಚಿತ್ರ ಶುರು ಆಗಿತ್ತು. ಆಗ ತೆಗೆದುಕೊಂಡ ಈ ಕತೆ ಈಗಲೂ ಪ್ರಸ್ತುತವಾಗಿದೆ. ಪ್ರತಿ ಪಾತ್ರಕ್ಕೂ ಇಲ್ಲಿ ಬೆಲೆ ಇದೆ. ಹಾಗೆ ಬಂದು ಹೀಗೆ ಹೋಗೋದೇ ಇಲ್ಲ. ಗ್ರಾಮಾಯಣ ಚಿತ್ರ (Graamaayana Movie) ನೋಡಿ ಬಂದ ಶಿವಣ್ಣ ಹೀಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಈ ಚಿತ್ರದ ಡೈರೆಕ್ಟರ್ ದೇವನೂರು ಚಂದ್ರು ಅವರಿಗೆ ಹ್ಯಾಟ್ಸ್ ಆಫ್ ಹೇಳುತ್ತೇನೆ. ಈ ಚಿತ್ರದಲ್ಲಿ ಸಮಾಜಮುಖಿ ವಿಷಯ ಎತ್ತಿಕೊಂಡಿದ್ದಾರೆ. 8 ವರ್ಷದ ಹಿಂದೆ ಈ ಚಿತ್ರ ಶುರು ಆಗಿತ್ತು.
ಪುಟ್ಟಣ್ಣನವರನ್ನ ನೆನಪಿಸಿಕೊಂಡಿದ್ದು ಯಾಕೆ?
(ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್ಸ್ಟಾಗ್ರಾಮ್)
ಆದರೆ, ಅಂದು ತೆಗೆದುಕೊಂಡ ವಿಷಯ ಈಗಲೂ ಪ್ರಸ್ತುತವಾಗಿದೆ. ಹಾಗೆ ಈ ಚಿತ್ರದ ಪ್ರತಿ ಪಾತ್ರಕ್ಕೂ ಬೆಲೆ ಇದೆ. ಹಾಗೆ ಬಂದು ಹೀಗೆ ಹೋಗೋದೇ ಇಲ್ಲ. ಲೂಸ್ ಮಾದ ಯೋಗಿ ಪಾತ್ರಕ್ಕೆ ಬೆಲೆ ಇದೆ. ಗೋಪಾಲಕೃಷ್ಣ ದೇಶಪಾಂಡೆ, ಅಪರ್ಣಾ ಹೀಗೆ ಚಿತ್ರದ ಪ್ರತಿ ಪಾತ್ರಕ್ಕೂ ಒಂದು ಎಂಡ್ ಇದೆ.
ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಲ್ಲಿ ಈ ರೀತಿ ಇರ್ತಾ ಇತ್ತು. ಪ್ರತಿ ಪಾತ್ರಕ್ಕೂ ಒಂದು ಪೂರ್ಣತೆ ಇರ್ತಾ ಇತ್ತು. ಡೈರೆಕ್ಟರ್ ಸಿದ್ಧಲಿಂಗಯ್ಯನವರ ಚಿತ್ರದಲ್ಲೂ ಈ ರೀತಿನೇ ಪ್ರತಿ ಪಾತ್ರಕ್ಕೂ ಮಹತ್ವ ಇರ್ತಾ ಇತ್ತು.
ಪುಟ್ಟಣ್ಣ ಚಿತ್ರದಲ್ಲಿ….
ತಮಿಳು ಚಿತ್ರದ ವಿಚಾರಕ್ಕೆ ಬಂದ್ರೆ, ಡೈರೆಕ್ಟರ್ ಭಾರತಿರಾಜ ಅವರ ಸಿನಿಮಾಗಳ ಪ್ರತಿ ಪಾತ್ರಕ್ಕೂ ಮಹತ್ವ ಇರ್ತಾ ಇತ್ತು. ಹಾಗೆ ಡೈರೆಕ್ಟರ್ ದೇವನೂರು ಚಂದ್ರು ಅವರು ಗ್ರಾಮಾಯಣ ಚಿತ್ರದಲ್ಲಿ ಎಲ್ಲ ಕ್ಯಾರೆಕ್ಟರ್ಗಳಿಗೂ ಬೆಲೆ ಕೊಟ್ಟಿದ್ದಾರೆ.z
ವಿನಯ್ ರಾಜ್ ಕುಮಾರ್ ತುಂಬಾನೆ ಚೆನ್ನಾಗಿ ಮಾಡಿದ್ದಾರೆ. ಈ ಹಿಂದಿನ ಚಿತ್ರಗಳಲ್ಲಿ ಈ ರೀತಿ ಇರಲಿಲ್ಲ. ಆದರೆ, ಗ್ರಾಮಾಯಣ ಚಿತ್ರದಲ್ಲಿ ವಿನಯ್ ತುಂಬಾನೆ ಚೆನ್ನಾಗಿ ಅಭಿನಯಿಸಿದ್ದಾರೆ.
ಜುಲೈ-3 ರಂದು ಚಿತ್ರ ರಿಲೀಸ್
ಗ್ರಾಮಾಯಾಣ ಚಿತ್ರ ಜುಲೈ-3 ರಂದು ರಿಲೀಸ್ ಆಗಿದೆ. ಈ ಚಿತ್ರದ ಪ್ರಚಾರವೂ ಜೋರಾಗಿಯೇ ಆಗಿದೆ. ಚಿತ್ರದ ನಾಯಕಿ ಮೇಘಾ ಶೆಟ್ಟಿ, ವಿನಯ್ ರಾಜ್ಕುಮಾರ್ ಸಿಕ್ಕಾಪಟ್ಟೆ ಪ್ರಚಾರ ಮಾಡಿದ್ದಾರೆ.
ಈ ಚಿತ್ರ ಇದೀಗ ಎರಡನೇ ವಾರಕ್ಕೂ ಕಾಲಿಟ್ಟಿದೆ. ಹಾಗೆ ಈ ಚಿತ್ರವನ್ನ ಶಿವಣ್ಣ ಬೆಂಗಳೂರಿನ ಓರಾಯನ್ ಮಾಲ್ ಮಲ್ಟಿಪ್ಲೆಕ್ಸ್ ಥಿಯೇಟರ್ ಅಲ್ಲಿಯೇ ನೋಡಿದ್ದಾರೆ. ಚಿತ್ರ ನೋಡಿದ್ಮೇಲೆ ತಮಗೆ ಏನ್ ಅನಿಸ್ತೋ ಅದನ್ನ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 09, 2026 12:26 PM IST













