Sharmiela Mandre: ಶರ್ಮಿಳಾ-ಸುಧನ್ ನಿಶ್ಚಿತಾರ್ಥದಲ್ಲಿ ಸಂಗೀತ ಸುಧೆ | | ACTPnews

ಶರ್ಮಿಳಾ-ಸುಧನ್ ನಿಶ್ಚಿತಾರ್ಥದಲ್ಲೂ ಸಂಗೀತ ಸುಧೆ; ಸುಂದರ ಕ್ಷಣದ ವಿಡಿಯೋ ವೈರಲ್!


Last Updated:

ಶರ್ಮಿಳಾ ಮಾಂಡ್ರೆ ಹಾಗೂ ನಿರ್ಮಾಪಕ ಸುಧನ್ ಅವರ ನಿಶ್ಚಿತಾರ್ಥದಲ್ಲಿ ಸಂಗೀತ ಸುಧೆ ಹರಿದಿದೆ. ವಯಲಿನಿಸ್ಟ್ ಇಲ್ಲಿ ವಿಶೇಷ ಹಾಡುಗಳನ್ನ ನುಡಿಸಿ ವಿಭಿನ್ನವಾದ ವೈಬ್ರೇಷನ್ ಕ್ರಿಯೇಟ್ ಮಾಡಿದ್ದಾರೆ. ಈ ಕ್ಷಣದ ವಿಡಿಯೋವನ್ನ ಸ್ವತಃ ವಯಲಿನಿಸ್ಟ್ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

 ಶರ್ಮಿಳಾ-ಸುಧನ್ ನಿಶ್ಚಿತಾರ್ಥದಲ್ಲೂ ಸಂಗೀತ ಸುಧೆ; ಸುಂದರ ಕ್ಷಣದ ವಿಡಿಯೋ ವೈರಲ್!
ಶರ್ಮಿಳಾ-ಸುಧನ್ ನಿಶ್ಚಿತಾರ್ಥದಲ್ಲೂ ಸಂಗೀತ ಸುಧೆ; ಸುಂದರ ಕ್ಷಣದ ವಿಡಿಯೋ ವೈರಲ್!

ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಹಾಗೂ ನಿರ್ಮಾಪಕ ಸುಧನ್ ಸುಂದರಂ (Sudhan Sundaram) ಅವರ ನಿಶ್ಚಿತಾರ್ಥ (Engagement) ಅದ್ದೂರಿಯಾಗಿಯೇ ನಡೆದಿದೆ. ಬೆಂಗಳೂರಿನಲ್ಲಿ ನಡೆದ ಈ ನಿಶ್ಚಿತಾರ್ಥದಲ್ಲಿ ಮನೆಯ ಮಂದಿ ಇದ್ದರು. ಕೆಲವೇ ಕೆಲವು ಅಪ್ತರು ಮತ್ತು ಸ್ನೇಹಿತರಿಗೆ ಆಹ್ವಾನ ಇತ್ತು. ಹಾಫ್ ವೈಟ್ ಬಣ್ಣದ ಥೀಮ್ ಡ್ರೆಸ್ ತೊಟ್ಟು ಶರ್ಮಿಳಾ ಮಾಂಡ್ರೆ ಹಾಗೂ ಸುಧನ್ ಸುಂದರಂ ರೆಡಿ ಆಗಿದ್ದರು. ವಿಶೇಷವೆಂದ್ರೆ ಇಲ್ಲಿ ಸಂಗೀತ ಸುಧೆನೂ ಹರೆಯಿತು. ಅಂದ್ರೆ, ವಾಯಲಿನ್ ಬ್ಯಾಂಡ್ ಕೂಡ ಬಂದಿತ್ತು. ಆ ವಾಯಲಿನ್ ಬ್ಯಾಂಡ್‌ ವಯಲಿನಿಸ್ಟ್ ಶ್ರೀಜಿತ್ ಸರಳಾಯ (Violinist Sreejith Saralaya) ಈಗೊಂದು ಇಂಟ್ರಸ್ಟಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ. ಇದರ ವಿವರ ಇಲ್ಲಿದೆ ಓದಿ.

ನಿಶ್ಚಿತಾರ್ಥದಲ್ಲಿ ಸಂಗೀತ ಸುಧೆ

ಶರ್ಮಿಳಾ ಮಾಂಡ್ರೆ ಹಾಗೂ ಸುಧನ್ ಸುಂದರಂ ಅವರ ನಿಶ್ಚಿತಾರ್ಥ ಸಿಂಪಲ್ ಅನಿಸುತ್ತದೆ. ಆದರೆ, ಅದ್ದೂರಿಯಾಗಿಯೇ ನಡೆದಿದೆ. ಹಾಫ್ ವೈಟ್ ಥೀಮ್ ಅಲ್ಲಿಯೇ ಈ ಒಂದು ನಿಶ್ಚಿತಾರ್ಥ ನಡೆದಿದೆ.
Violinist Sreejith Saralaya share video of Sharmiela Mandre and Sudhan Sundarams engagement ceremony on social media

ಶರ್ಮಿಳಾ-ಸುಧುನ್ ಸುಂದರಂ

(ಚಿತ್ರ ಕೃಪೆ: ವಯಲಿನಿಸ್ಟ್ ಶ್ರೀಜಿತ್ ಸರಳಾಯ ಇನ್‌ಸ್ಟಾಗ್ರಾಮ್)

ನಟಿ ಶರ್ಮಿಳಾ ಮಾಂಡ್ರೆ ಹಾಗೂ ಸುಧನ್ ಸುಂದರಂ ಇಲ್ಲಿ ಹಾಫ್ ವೈಟ್ ಡ್ರೆಸ್ ಅಲ್ಲಿಯೇ ಕಾಣಿಸಿಕೊಂಡಿದ್ದಾರೆ. ಹಾಫ್ ವೈಟ್ ಸೀರೆಯಲ್ಲಿ ಶರ್ಮಿಳಾ ಮಿಂಚಿದ್ದಾರೆ. ಸುಧನ್ ಇಲ್ಲಿ ಹಾಫ್ ವೈಟ್ ಕುರ್ತಾ ಧರಿಸಿದ್ದಾರೆ.

ಹಾಫ್ ವೈಟ್ ಅಲ್ಲಿ ವಯಲಿನಿಸ್ಟ್

ಈ ಒಂದು ಕಾರ್ಯಕ್ರಮದಲ್ಲಿ ವಯಲಿನ್ ಬ್ಯಾಂಡ್ ಕೂಡ ಇತ್ತು. ಇಡೀ ಕಾರ್ಯಕ್ರಮದಲ್ಲಿ ವಯಲಿನ್‌ ಗಾನ ಸುಧಿ ಇಡೀ ಕಾರ್ಯಕ್ರಮಕ್ಕೆ ಬೇರೆ ಬೆರಗು ನೀಡಿತ್ತು.

ವಿಶೇಷವೆಂದ್ರ ವಯಲಿನ್ ವಾದಕರ ಬ್ಯಾಂಡ್‌ನ ಸದಸ್ಯರು ಸಹ ಹಾಫ್ ವೈಟ್ ಬಣ್ಣದ ಕಾಸ್ಟೂಮ್ ಧರಿಸಿದ್ದರು. ಈ ಒಂದು ಕಾರ್ಯಕ್ರಮದ ಒಂದು ಪುಟ್ಟ ವಿಡಿಯೋವನ್ನ ವಯಲಿನಿಸ್ಟ್ ಶ್ರೀಜಿತ್ ಸರಳಾಯ ಹಂಚಿಕೊಂಡಿದ್ದಾರೆ.

ಹೀಗೂ ಹೇಳಿದ್ದಾರೆ

ಶರ್ಮಿಳಾ ಮಾಂಡ್ರೆ ಹಾಗೂ ಸುಧನ್ ಸುಂದರಂ ಅವರೇ ಧನ್ಯವಾದಗಳು..ನಿಮ್ಮ ಈ ಒಂದು ವಿಶೇಷ ದಿನಕ್ಕೆ ನಮ್ಮನ್ನ ಆಯ್ಕೆ ಮಾಡಿರೋದಕ್ಕೆ ಥ್ಯಾಂಕ್ಸ್ ಅಂತಲೇ ಹೇಳಿದ್ದಾರೆ.

Violinist Sreejith Saralaya share video of Sharmiela Mandre and Sudhan Sundarams engagement ceremony on social media

ನಿಶ್ಚಿತಾರ್ಥದಲ್ಲಿ ಸಂಗೀತ ಸುಧೆ

(ಚಿತ್ರ ಕೃಪೆ: ವಯಲಿನಿಸ್ಟ್ ಶ್ರೀಜಿತ್ ಸರಳಾಯ ಇನ್‌ಸ್ಟಾಗ್ರಾಮ್)

ನಿಮ್ಮ ಜೀವನದಲ್ಲಿ ಸದಾ ಪ್ರೀತಿ ಮತ್ತು ಸಂತೋಷ ಸಿಗಲಿ ಅಂತಲೂ ಹಾರೈಸಿದ್ದಾರೆ. ಇವರ ಈ ಒಂದು ವಿಶೇಷ ಕ್ಷಣದ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.

ವಯಲಿನಿಸ್ಟ್ ಶ್ರೀಜಿತ್ ಸರಳಾಯ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿಯೇ ಈ ಕ್ಷಣದ ವಿಡಿಯೋ ಹಂಚಿಕೊಂಡಿದ್ದಾರೆ ಅಂತ ಹೇಳಬಹುದು.

ಶರ್ಮಿಳಾ-ಸುಧುನ್ ಸುಂದರಂ

ಶರ್ಮಿಳಾ ಮಾಂಡ್ರೆ ಅವರು ಇತ್ತೀಚಿಗೆ ಎಂಗೇಜ್ ಆಗಿದ್ದಾರೆ. ತಮಿಳು ಮಹಾರಾಜ ಚಿತ್ರದ ನಿರ್ಮಾಪಕ ಸುಧನ್ ಸುಂದರಂ ಅವರ ಜೊತೆಗೆ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಜೂನ್-25 ರಂದು ಬೆಂಗಳೂರಿನಲ್ಲಿ ಶರ್ಮಿಳಾ ಮಾಂಡ್ರೆ ಹಾಗೂ ಸುಧನ್ ಸುಂದರಂ ನಿಶ್ಚಿತಾರ್ಥ ಮಾಡಿಕೊಂಡಿಕೊಂಡಿದ್ದಾರೆ. ಈ ನಿಶ್ಚಿತಾರ್ಥಕ್ಕೆ ಹಾಫ್ ವೈಟ್ ಸೀರೆಯನ್ನ ಶರ್ಮಿಳಾ ಮಾಂಡ್ರೆ ಉಟ್ಟುಕೊಂಡು ರೆಡಿ ಆಗಿದ್ದರು ಸುಧನ್ ಸುಂದರಂ ಇಲ್ಲಿ ಹಾಫ್ ವೈಟ್ ಕುರ್ತಾ ತೊಟ್ಟಿದ್ದರು.

ಸುಧನ್ ಸುಂದರಂ ಹಿನ್ನೆಲೆ

ಸುಧನ್ ಸುಂದರಂ ತಮಿಳು ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡಿಕೊಂಡಿದ್ದಾರೆ. ತಮಿಳಿನ ಮಹಾರಾಜ ಚಿತ್ರವನ್ನ ಇವರೇ ನಿರ್ಮಾಣ ಮಾಡಿದ್ದಾರೆ. ಇವರು ಪ್ಯಾಷನ್ ಸ್ಟುಡಿಯೋಸ್ ಅನ್ನುವ ಒಂದು ಪ್ರೊಡಕ್ಷನ್ ಹೌಸ್ ಕೂಡ ಮಾಡಿಕೊಂಡಿದ್ದಾರೆ.

ಈ ಮೂಲಕವೇ ತಮಿಳು ಚಿತ್ರಗಳನ್ನ ನಿರ್ಮಿಸುತ್ತಾರೆ. ಇವರ ಮಹಾರಾಜ ಚಿತ್ರದಲ್ಲಿ ವಿಜಯ್ ಸೇತುಪತಿ ಅಭಿನಯಿಸಿದ್ದಾರೆ. ಇದು ಸೂಪರ್ ಹಿಟ್ ಕೂಡ ಆಗಿದೆ. ಶರ್ಮಿಳಾ ವಿಚಾರಕ್ಕೆ ಬಂದ್ರೆ, ದರ್ಶನ್ ಅಭಿನಯದ ಡೆವಿಲ್ ಚಿತ್ರದಲ್ಲಿ ಒಂದು ವಿಶೇಷ ರೋಲ್ ಮಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed