Sathish Ninasam: ನಿರ್ಮಾಪಕರಲ್ಲಿ ಮತ್ತೆ ಕ್ಷಮೆ ಕೇಳಿದ ಸತೀಶ್ ನೀನಾಸಂ! ಆ ಮೇಲೆ ಹೇಳಿದ್ದೇನು ಗೊತ್ತಾ? | | ACTPnews

Sathish Ninasam apologizes for his statement against producers


ಮತ್ತೆ ಕ್ಷಮೆ ಕೇಳಿದ ಸತೀಶ್ ನೀನಾಸಂ

ಸತೀಶ್ ನೀನಾಸಂ ತಾವು ಬೇರೆ ಅರ್ಥದಲ್ಲಿ ಏನೂ ಹೇಳಿಲ್ಲ. ಸಿನಿಮಾ ಜ್ಞಾನದ ಬಗ್ಗೆ ಹೇಳಿದ್ದೇನೆ. ಇದು ತಿಳಿದುಕೊಳ್ಳದೆ ಸಿನಿಮಾ ಮಾಡ್ತಾರೆ. ಸೋತು ಹೋದ್ಮೇಲೆ ಅಷ್ಟು ಹೋಗ್ತದೆ. ಇಷ್ಟು ಹೋಯಿತು ಅಂತ ಹೇಳ್ತಾರೆ.
ನಾವೆಲ್ಲ ಒಟ್ಟಾಗಿ ಹೋಗೋಣ

(ಚಿತ್ರ ಕೃಪೆ: ಸತೀಶ್ ನೀನಾಸಂ ಇನ್‌ಸ್ಟಾಗ್ರಾಮ್)

ಇದರಿಂದ ನಮಗೂ ಬೇಸರ ಆಗುತ್ತದೆ. ಸಿನಿಮಾ ಸೋತು ಹೋಯಿತಲ್ಲ ಅಂತಲೇ ನೋವಾಗುತ್ತದೆ. ಅದು ಬಿಟ್ಟರೆ, ನಾನು ಬೇರೆ ಉದ್ದೇಶದಿಂದ ಏನೂ ಹೇಳಿಲ್ಲ ಅಂತ ಇಲ್ಲಿ ಹೇಳಿಕೊಂಡಿದ್ದಾರೆ.

ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುವ

ನನ್ನ ಮಾತುಗಳಿಂದ ನಿರ್ಮಾಪಕರಿಗೆ ಬೇಸರ ಆಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ ಅಂತ ನಿರ್ಮಾಪಕರ ಪ್ರೆಸ್ ಮೀಟ್ ಅಲ್ಲಿ ಸತೀಶ್ ನೀನಾಸಂ ಮತ್ತೆ ಕ್ಷಮೆ ಕೇಳಿದ್ದಾರೆ.

ಇದನ್ನ ಕೇಳಿದ್ಮೇಲೆ ತಮಗೆ ಅನಿಸಿರೋದನ್ನು ಹೇಳಿದ್ದಾರೆ. ಈ ಒಂದು ವಿವಾದಕ್ಕಾಗಿಯೇ ನಾನು ಇಲ್ಲಿಗೆ ಬಂದಿರೋದು ನಿಜಕ್ಕೂ ಬೇಸರ ಆಗಿದೆ. ಆದರೆ, ನಾವು ಇದನ್ನ ಇಲ್ಲಿಗೆ ಬಿಟ್ಟು ಬಿಡೋಣ ಅಂತಲೂ ಹೇಳಿದ್ದಾರೆ.

ನಾವೆಲ್ಲ ಒಟ್ಟಾಗಿ ಹೋಗೋಣ

ಇನ್ಮುಂದೆ ನಾವು ಇದೆಲ್ಲ ಬಿಟ್ಟು ಬಿಡೋಣ. ಒಟ್ಟಾಗಿಯೇ ಹೋಗೋಣ. ಸಬ್ಸಿಡಿ ಮತ್ತು ರಾಜ್ಯ ಪ್ರಶಸ್ತಿ ಬಗ್ಗೆ ಗಮನ ಹರಿಸೋಣ ಅಂತಲೂ ಸತೀಶ್ ಹೇಳಿಕೊಂಡಿದ್ದಾರೆ.

ನಾವು ಕೇವಲ ನಮ್ಮ ಬಗ್ಗೆ ಯೋಚನೆ ಮಾಡೋದಲ್ಲ. ಸಿನಿಮಾ ಜ್ಞಾನ ಇಲ್ಲದೆ ನಿರ್ಮಾಪಕರು ಬಂದರೆ ಪ್ರಶ್ನೆ ಮಾಡೋಕೆ ಆಗೋದಿಲ್ಲ. ಹಾಗೆ ಸಿನಿಮಾ ಮಾಡಿ ಸೋತರೆ ನಮಗೂ ಬೇಸರ ಆಗುತ್ತದೆ ಅಂತಲೂ ಸತೀಶ್ ಹೇಳಿದ್ದಾರೆ.

Sathish Ninasam apologizes for his statement against producers

ಮುಂದಿನ ಜನರೇಷನ್ ಬಗ್ಗೆ ಯೋಚಿಸೋಣ

(ಚಿತ್ರ ಕೃಪೆ: ಸತೀಶ್ ನೀನಾಸಂ ಇನ್‌ಸ್ಟಾಗ್ರಾಮ್)

ಮುಂದಿನ ಜನರೇಷನ್ ಬಗ್ಗೆ ಯೋಚಿಸೋಣ

ನಾವು ನಮ್ಮ ಬಗ್ಗೆ ಮಾತ್ರ ಯೋಚಿಸೋದಲ್ಲ, ನಮ್ಮ ಮುಂದಿನ ಜನರೇಷನ್ ಕುರಿತು ಯೋಚನೆ ಮಾಡ್ಬೇಕಿದೆ ಅಂತೂ ಸತೀಶ್ ಇಲ್ಲಿ ಹೇಳಿದ್ದಾರೆ.

ನಿರ್ಮಾಪಕರ ಸಂಘದಲ್ಲಿ ನಡೆದ ಪ್ರೆಸ್ ಮೀಟ್ ಅಲ್ಲಿಯೇ ಸತೀಶ್ ನೀನಾಸಂ ಕ್ಷಮೆ ಕೇಳಿದ್ದಾರೆ. ಜೂನ್-21 ರಂದು ಇದೇ ವಿಚಾರವಾಗಿಯೇ ವಿಡಿಯೋ ಮಾಡಿ ಕ್ಷಮೆ ಕೂಡ ಕೇಳಿದ್ದರು.

ಜೂನ್-20 ರಂದು ಅಯೋಗ್ಯ-2 ಇವೆಂಟ್

ಅಯೋಗ್ಯ-2 ಚಿತ್ರದ ಸಾಂಗ್ ರಿಲೀಸ್ ಇವೆಂಟ್ ಶನಿವಾರ ನಡೆದಿತ್ತು. ಮುದ್ದುಲಕ್ಷ್ಮಿಹಾಡು ಈ ಒಂದು ಇವೆಂಟ್ ಅಲ್ಲಿಯೇ ರಿಲೀಸ್ ಆಗಿತ್ತು. ಏನಮ್ಮಿ ಹಾಡಿನ ತರ ಇದು ಇಲ್ಲ ಅನ್ನುವ ಅಭಿಪ್ರಾಯವು ಬಂದವು. ಇನ್ನು ಕೆಲವರು ಈ ಹಾಡನ್ನ ಮೆಚ್ಚಿಕೊಂಡರು.

ಇದೇ ಇವೆಂಟ್ ಅಲ್ಲಿಯೇ ನಾಯಕ ನಟ ಸತೀಶ್ ನೀನಾಸಂ ತಮ್ಮ ಮನಮದ ಆಕ್ರೋಶವನ್ನ ಹೊರಗೆ ಹಾಕಿದ್ದರು. ಅದರ ಪರಿಣಾಮ ಕೆಲವು ನಿರ್ಮಾಪಕರಿಗೆ ಹರ್ಟ್ ಕೂಡ ಆಗಿತ್ತು ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed