Last Updated:
ಅಯೋಗ್ಯ-2 ಚಿತ್ರದ ನಾಯಕ ನಟ ಸತೀಶ್ ನೀನಾಸಂ ಡೈರೆಕ್ಷನ್ ಮಾಡ್ತಿದ್ದಾರೆ. ಉತ್ತರ ಕರ್ನಾಟಕ ಭಾಷೆಯ ಸಿನಿಮಾವನ್ನೆ ಮಾಡ್ತಿದ್ದಾರೆ. ಹುಬ್ಬಳ್ಳಿ ಹುಡುಗಿಯನ್ನ ಹಾಕಿಕೊಂಡು ಚಿತ್ರ ಮಾಡ್ತಿದ್ದಾರೆ. ಈ ಚಿತ್ರದ ಕುರಿತು ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಅಯೋಗ್ಯ-2 ಚಿತ್ರದ (Ayogya-2 Movie) ನಾಯಕ ನಟ ಸತೀಶ್ ನೀನಾಸಂ (Sathish Ninasam) ಡೈರೆಕ್ಟರ್ ಆಗುತ್ತಿದ್ದಾರೆ. ಹುಬ್ಬಳ್ಳಿ ಭಾಷೆಯಲ್ಲಿಯೇ (Hubballi Language) ಚಿತ್ರ ಮಾಡುವ ಕನಸು ಕಂಡಿದ್ದಾರೆ. ಹುಬ್ಬಳ್ಳಿ ಹುಡುಗಿಯನ್ನ ಹಾಕಿಕೊಂಡು ಚಿತ್ರ ಮಾಡೋ ಪ್ಲಾನ್ ಅಲ್ಲಿಯೇ ಇದ್ದಾರೆ. ಈ ಒಂದು ವಿಷಯವನ್ನ ಸ್ವತಃ ಸತೀಶ್ ನೀನಾಸಂ (Sathish Ninasam) ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ ಮಾತುಕತೆಯಲ್ಲಿ ಇದನ್ನ ಹೇಳಿಕೊಂಡಿದ್ದಾರೆ. ಇದರ ವಿವರ ಇಲ್ಲಿದೆ ಓದಿ.














