Saanvi Sudeep: ಕಾಲಿವುಡ್‌ಗೆ ಸಾನ್ವಿ ಸುದೀಪ್ ಗ್ರ್ಯಾಂಡ್ ಎಂಟ್ರಿ; ವಿಜಯ್ ಪುತ್ರನ ಸಿನಿಮಾಗೆ ಹಾಡಿದ ಕಿಚ್ಚನ ಮಗಳು! | | ACTPnews

News18


Last Updated:

ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ (Saanvi Sudeep) ತಮ್ಮ ಗಾಯನದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲೂ ನಿಧಾನವಾಗಿ ತಮ್ಮದೇ ಗುರುತನ್ನು ಮೂಡಿಸಿಕೊಳ್ಳುತ್ತಿದ್ದಾರೆ.

News18
News18

ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ (Saanvi Sudeep) ತಮ್ಮ ಗಾಯನದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲೂ ನಿಧಾನವಾಗಿ ತಮ್ಮದೇ ಗುರುತನ್ನು ಮೂಡಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಸುದೀಪ್ ಅಭಿನಯದ ಮಾರ್ಕ್ ಸಿನಿಮಾದ ಮಸ್ತ್ ಮಲೈಕಾ ಹಾಡಿನ ಮೂಲಕ ಗಮನ ಸೆಳೆದಿದ್ದ ಸಾನ್ವಿ, ಇದೀಗ ತಮಿಳು ಚಿತ್ರರಂಗದತ್ತ ಹೆಜ್ಜೆ ಇಟ್ಟಿದ್ದಾರೆ. ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಸಿಗ್ಮಾ ಚಿತ್ರದ ಸುಲೋಚನ ಎಂಬ ರೋಮ್ಯಾಂಟಿಕ್ ಹಾಡಿಗೆ ಸಾನ್ವಿ ಧ್ವನಿ ನೀಡಿದ್ದು, ಈ ಮೂಲಕ ಗಾಯನದ ಪಯಣ ಮತ್ತೊಂದು ಹಂತ ತಲುಪಿದೆ.

ಸಾನ್ವಿ ಸುದೀಪ್ ಗಾಯನದ ಬಗ್ಗೆ ಕನ್ನಡ ಸಿನಿಪ್ರಿಯರಿಗೆ ಈಗಾಗಲೇ ಪರಿಚಯವಿದೆ. ಸುದೀಪ್ ಅಭಿನಯದ ಮಾರ್ಕ್ ಸಿನಿಮಾದ ಮಸ್ತ್ ಮಲೈಕಾ ಹಾಡು ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಹಾಡಿನ ಸಂಗೀತದ ಜೊತೆಗೆ ಸಾನ್ವಿ ವಿಭಿನ್ನ ಧ್ವನಿ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ವಿಶೇಷವಾಗಿ ಯುವಜನರಲ್ಲಿ ಈ ಹಾಡು ಜನಪ್ರಿಯವಾಗಿತ್ತು.

ಸಾನ್ವಿ ಧ್ವನಿಯಲ್ಲಿರುವ ಹೊಸತನ ಮತ್ತು ಹಾಡನ್ನು ಪ್ರಸ್ತುತಪಡಿಸಿದ ರೀತಿಗೆ ಸಂಗೀತ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊದಲ ಹಾಡಿನ ಯಶಸ್ಸಿನ ಬಳಿಕ ಅವರಿಗೆ ಗಾಯನ ಕ್ಷೇತ್ರದಲ್ಲಿ ಮತ್ತಷ್ಟು ಅವಕಾಶಗಳು ಹುಡುಕಿಕೊಂಡು ಬಂದಿವೆ ಎನ್ನಲಾಗುತ್ತಿದೆ. ಇದೀಗ ಮತ್ತೊಂದು ಪ್ರಮುಖ ಹಾಡಿಗೆ ಧ್ವನಿ ನೀಡುವ ಮೂಲಕ ತಮ್ಮ ಪ್ರತಿಭೆಯ ಮತ್ತೊಂದು ಮುಖವನ್ನು ಪರಿಚಯಿಸುತ್ತಿದ್ದಾರೆ.

ಇದನ್ನೂ ಓದಿ: Darshan Case: ಅನಧಿಕೃತವಾಗಿ ಮಾತಾಡಿ ಅಪ್ರೂವರ್ ಆಗೋ ಪ್ರಯತ್ನ! ಪ್ರದೋಷ್ ಬಗ್ಗೆ ಸ್ಫೋಟಕ ಹೇಳಿಕೆ

ತಮಿಳು ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶಿಸುತ್ತಿರುವ ಚೊಚ್ಚಲ ಸಿನಿಮಾ ಸಿಗ್ಮಾ ಸದ್ಯ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರಗಳಲ್ಲಿ ಒಂದಾಗಿದೆ. ವಿದೇಶದಲ್ಲಿ ಚಿತ್ರ ನಿರ್ದೇಶನಕ್ಕೆ ಸಂಬಂಧಿಸಿದ ತರಬೇತಿ ಪಡೆದಿರುವ ಜೇಸನ್ ಸಂಜಯ್, ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲೇ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಜೇಸನ್ ಸಂಜಯ್ ನಿರ್ದೇಶನದ ಮೊದಲ ಚಿತ್ರವಾಗಿರುವುದರಿಂದ ‘ಸಿಗ್ಮಾ’ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಈ ಚಿತ್ರಕ್ಕೆ ಜನಪ್ರಿಯ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. ದೊಡ್ಡ ನಿರ್ಮಾಣ ಸಂಸ್ಥೆಯ ಮೂಲಕ ತಮ್ಮ ನಿರ್ದೇಶನದ ಪಯಣ ಆರಂಭಿಸಿರುವ ಜೇಸನ್ ಸಂಜಯ್ ಅವರ ಸಿನಿಮಾದಲ್ಲಿ ಸಾನ್ವಿ ಸುದೀಪ್ ಹಾಡಿರುವುದು ಮತ್ತೊಂದು ವಿಶೇಷವಾಗಿದೆ.

ಇದನ್ನೂ ಓದಿ: KVN Production: ಟಾಕ್ಸಿಕ್ ಸಿನಿಮಾ ನಿರ್ಮಾಣ ಸಂಸ್ಥೆ ಹೆಸರಲ್ಲಿ ವಂಚನೆ! ದೂರು ದಾಖಲು

ಕನ್ನಡದ ಬಳಿಕ ತಮಿಳು ಸಿನಿಮಾದ ಹಾಡಿಗೆ ಧ್ವನಿ ನೀಡಿರುವುದು ಸಾನ್ವಿ ಸುದೀಪ್ ಅವರ ಗಾಯನ ಪಯಣದಲ್ಲಿ ಮಹತ್ವದ ಹೆಜ್ಜೆಯಾಗಿದೆ. ‘ಸುಲೋಚನ’ ಹಾಡಿನ ಮೂಲಕ ಅವರು ಕಾಲಿವುಡ್‌ಗೆ ಪ್ರವೇಶ ಪಡೆದಿದ್ದಾರೆ. ಈಗಾಗಲೇ‘ಮಸ್ತ್ ಮಲೈಕಾ ಮೂಲಕ ಕನ್ನಡಿಗರ ಗಮನ ಸೆಳೆದಿರುವ ಸಾನ್ವಿ, ತಮಿಳು ಪ್ರೇಕ್ಷಕರಿಗೂ ತಮ್ಮ ಧ್ವನಿಯ ಮೂಲಕ ಪರಿಚಯವಾಗಲಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಸಾನ್ವಿ ಸುದೀಪ್ ಮುಂದಿನ ಹೆಜ್ಜೆಗಳ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿದೆ. ಒಂದು ಯಶಸ್ವಿ ಹಾಡಿನ ಬಳಿಕ ಮತ್ತೊಂದು ವಿಭಿನ್ನ ಭಾಷೆಯ ಚಿತ್ರಕ್ಕೆ ಹಾಡಿರುವುದು ಅವರ ಗಾಯನದ ಮೇಲಿನ ಆಸಕ್ತಿ ಮತ್ತು ಹೊಸ ಪ್ರಯೋಗಗಳತ್ತ ಇರುವ ಒಲವನ್ನು ತೋರಿಸುತ್ತದೆ. ‘ಸುಲೋಚನ’ ಹಾಡು ಬಿಡುಗಡೆಯಾದ ಬಳಿಕ ಸಾನ್ವಿ ಅವರ ಗಾಯನಕ್ಕೆ ತಮಿಳು ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports