Rocking Star Yash: ಕಾಮಿಕ್ ಕಾನ್​ನಲ್ಲಿ ಯಶ್ ಹವಾ, ‘ಡ್ಯಾಡಿಸ್ ಹೋಮ್’ ಎಂದ ಫ್ಯಾನ್ಸ್! | | ACTPnews

'ಡ್ಯಾಡಿಸ್ ಹೋಮ್' ಎಂದ ಫ್ಯಾನ್ಸ್!


Last Updated:

ಅಮೆರಿಕಾದ ಕಾಮಿಕ್ ಕಾನ್-2026 ಅಲ್ಲಿ ಯಶ್ ಹವಾ ಜೋರಾಗಿಯೇ ಇತ್ತು. ಯಶ್ ಬರೋದೇ ತಡ, ಡ್ಯಾಡೀಸ್ ಹೋಮ್ ಅಂತ ಟಾಕ್ಸಿಕ್ ಚಿತ್ರದ ಡೈಲಾಗ್ ಅನ್ನ ಫ್ಯಾನ್ಸ್ ಕೂಗಿ ಹೇಳಿಯೇ ಬಿಟ್ಟರು. ಸೆಲ್ಫಿಗಾಗಿ ಇಲ್ಲಿ ಮುಗಿ ಬಿದ್ದಿರೋದು ಇದೆ. ಇದರ ನಡುವೆ ವೇದಿಕೆ ಮೇಲೆ ಕೆಜಿಎಫ್ ಚಿತ್ರಗಳ ಯಶಸ್ಸನ್ನ ಹೇಳುತ್ತಲೇ ಯಶ್ ಸ್ವಾಗತವೂ ಆಗಿದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.

'ಡ್ಯಾಡಿಸ್ ಹೋಮ್' ಎಂದ ಫ್ಯಾನ್ಸ್!
‘ಡ್ಯಾಡಿಸ್ ಹೋಮ್’ ಎಂದ ಫ್ಯಾನ್ಸ್!

ರಾಕಿಂಗ್ ಸ್ಟಾರ್ ಯಶ್ (Yash) ಕ್ರೇಜ್ ಕಡಿಮೆ ಆಗೋದೇ ಇಲ್ಲ. ಎಲ್ಲೆ ಹೋದರೂ ಸದ್ಯ ‘ಡ್ಯಾಡಿಸ್ ಹೋಮ್’ (Daddy’s Home) ಅಂತಲೇ ಫ್ಯಾನ್ಸ್ ಕೂಗುತ್ತಿದ್ದಾರೆ. ಅಮೆರಿಕಾದಲ್ಲಿರೋ ಭಾರತೀಯರ ಮನದಲ್ಲೂ ಯಶ್ ಜಾಗ ಮಾಡಿಕೊಂಡಿದ್ದಾರೆ. ಟಾಕ್ಸಿಕ್ ಚಿತ್ರದ (Toxic Movie) ರಾಯ ಪಾತ್ರ ಹೇಳುವ ‘ಡ್ಯಾಡಿಸ್ ಹೋಮ್’ ಅನ್ನುವ ಡೈಲಾಗ್ ಅನ್ನ ಅಮೆರಿಕಾದ ಭಾರತೀಯರು ಕೂಗಿ ಕೂಗಿ ಹೇಳಿದ್ದಾರೆ. ಇಲ್ಲಿ ನಡೆದ ಕಾಮಿಕ್-ಕಾನ್ -2026 ರಲ್ಲಿ ಯಶ್ ತಮ್ಮ ರಾಮಾಯಣ ಚಿತ್ರವನ್ನ (Ramayana Movie) ಪ್ರಮೋಟ್ ಮಾಡಿದ್ದಾರೆ. ಈ ಸಮಯದಲ್ಲಿ ಫ್ಯಾನ್ಸ್ ‘ಡ್ಯಾಡಿಸ್ ಹೋಮ್’ ಅಂತಲೇ ಕೂಗಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕಾಮಿಕ್-ಕಾನ್ ಅಲ್ಲಿ ರಾಕಿ ಭಾಯ್

ರಾಕಿಂಗ್ ಸ್ಟಾರ್ ಯಶ್ ಎಲ್ಲೆ ಹೋದರೂ ಒಂದು ಖದರ್ ಉಳಿಸಿಕೊಂಡಿದ್ದಾರೆ. ಅದು ಕೆಜಿಎಫ್ ಚಿತ್ರದಿಂದಲೇ ಬಂದಿದೆ. ಅದನ್ನ ಕಳೆದುಕೊಳ್ತಿಲ್ಲ. ಬೆಳೆಸುತ್ತಲೇ ಇದ್ದಾರೆ. ದೂರದ ಅಮೆರಿಕಾದಲ್ಲಿರೋ ಭಾರತಿಯರು ‘ಡ್ಯಾಡಿಸ್ ಹೋಮ್’ ಅಂತ ಡೈಲಾಗ್ ಹೊಡೀತಿದ್ದಾರೆ.
yash craze at comic con fans calls him daddys home

ಕಾಮಿಕ್ ಕಾನ್ ಅಲ್ಲಿ ಯಶ್ ಹವಾ

ಟಾಕ್ಸಿಕ್ ಚಿತ್ರದಲ್ಲಿ ಈ ಡೈಲಾಗ್ ಬರುತ್ತದೆ. ಯಶ್ ನಿರ್ವಹಿಸಿರೋ ಎರಡು ಪಾತ್ರದಲ್ಲಿ ರಾಯ ಅನ್ನುವ ಪಾತ್ರ ಈ ಒಂದು ಮಾತನ್ನ ಹೇಳುತ್ತದೆ. ಅಪ್ಪ ‘ರಾಯ’ನ ಪಾತ್ರದಲ್ಲೂ ಯಶ್ ಅಬ್ಬರಿಸಿದ್ದಾರೆ. ಹಾಗೆ ಟಾಕ್ಸಿಕ್ ಚಿತ್ರದಲ್ಲಿ ಅಪ್ಪ ರಾಯ ಮತ್ತು ಮಗ ಟಕೆಟ್‌ ವಿಷಯವೂ ಇದೆ. ಈ ಒಂದು ಚಿತ್ರದ ಕ್ರೇಜ್ ಇನ್ನಿಲ್ಲದಂತೆ ಎಲ್ಲೆಡೆನೂ ಇದೆ.

ಟಾಕ್ಸಿಕ್ ಡೈಲಾಗ್ ಹೇಳಿದ ಫ್ಯಾನ್ಸ್

ಕಾಮಿಕ್ ಕಾನ್ ಅಲ್ಲಿ ರಾಮಾಯಣ ಚಿತ್ರದ ಟ್ರೈಲರ್ ಪ್ರದರ್ಶನ ಆಗಿದೆ. ಇದನ್ನ ಜನ ನೋಡಿದ ಬಳಿಕ ಯಶ್ ಹಾಗೂ ರಣಬೀರ್ ಕಪೂರ್, ಡೈರೆಕ್ಟರ್ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಸ್ಕ್ರಿನ್ ಮುಂದೆ ಬಂದು ನಿಲ್ಲುತ್ತಾರೆ.

ಆಗಲೇ ಇಲ್ಲಿದ್ದ ಫ್ಯಾನ್ಸ್ ಕೂಗಿ ಕೂಗಿ ಒಂದೇ ಮಾತು ಹೇಳ್ತಾರೆ. ಟಾಕ್ಸಿಕ್ ಚಿತ್ರದ Daddy’s Home ಡೈಲಾಗ್ ಅನ್ನ ಆ ಕೂಡಲೇ ಹೇಳ್ತಾರೆ. ಯಶ್ ನೋಡಿಯೇ ಇದನ್ನ ಅವರು ಹೇಳ್ತಾರೆ ನೋಡಿ.

ಕಾಮಿಕ್ ಕಾನ್ ಅಲ್ಲಿ ಯಶ್‌ಗೆ ಗೌರವ

ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಡಿಯಾಗೋ ಕನ್ವೆನ್ಷನ್ ಸೆಂಟರ್‌ನಲ್ಲಿ ಕಾಮಿಕ್ ಕಾನ್ -2026 ನಡೆದಿದೆ. ಇಲ್ಲಿಗೆ ರಾಮಾಯಣ ಚಿತ್ರದ ನಾಯಕ ರಣಬೀರ್ ಕಪೂರ್, ನಿರ್ಮಾಪಕ ನಮಿತ್ ಮಲ್ಹೋತ್ರಾ, ಡೈರೆಕ್ಟರ್ ನಿತೇಶ್ ತಿವಾರಿ ಕೂಡ ಆಗಮಿಸಿದ್ದಾರೆ.

yash craze at comic con fans calls him daddys home

‘ಡ್ಯಾಡಿಸ್ ಹೋಮ್’ ಎಂದ ಫ್ಯಾನ್ಸ್!

ಇದೇ ವೇದಿಕೆ ಮೇಲೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ಅಷ್ಟೆ ಗೌರವದಿಂದಲೇ ಸ್ವಾಗತಿಸಿದ್ದಾರೆ. ಕೆಜಿಎಫ್ ಒನ್ ಮತ್ತು ಕೆಜಿಎಫ್-2 ಚಿತ್ರದ ಯಶಸ್ಸಿನ ಬಗ್ಗೆ ಇಲ್ಲಿ ಹೇಳ್ತಾನೇ ಇಲ್ಲಿ ಯಶ್ ಅವರನ್ನ ಆ್ಯಂಕರ್ ಸ್ವಾಗತಿಸುತ್ತಾರೆ. ಯಶ್ ಆಗಮಿಸುತ್ತಿದ್ದಾಗ ನಟ ರಣಬೀರ್ ಕಪೂರ್, ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಎದ್ದು ನಿಂತು ಗೌರವ ಕೊಡೋದು ಇದೆ.

ಸೆಲ್ಫಿಗೆ ಮುಗಿಬಿದ್ದ ಜನ

ಕಾಮಿಕ್ ಕಾನ್ ಅಲ್ಲಿ ಯಶ್ ಹವಾ ಜೋರಾಗಿಯೇ ಇತ್ತು. ಈ ಒಂದು ಸಂಭ್ರಮದಲ್ಲಿ ಭಾಗಿ ಆಗಿರೋ ಸಿನಿಮಾ ಪ್ರೇಮಿಗಳು ಯಶ್ ಕಂಡು ಖುಷಿ ಆಗಿದ್ದರು.

ಇವರು ಇಲ್ಲಿಂದ ಹೊರಡುವ ಸಮಯದಲ್ಲಿಯೇ ಅನೇಕರು ಯಶ್ ಅವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದಿದ್ದರು. ಈ ಒಂದು ಕ್ಷಣದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಆಗಿದೆ. ಎಲ್ಲರ ಗಮನ ಕೂಡ ಸೆಳೆಯುತ್ತಿದೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports