Rishab Shetty: ಸ್ಪೈಡರ್ ಮ್ಯಾನ್ ಜೊತೆ ರಿಷಬ್ ಶೆಟ್ಟಿ! ಕಾಂತಾರ ಶಿವನ ವಿಡಿಯೋ ಫುಲ್ ವೈರಲ್! | | ACTPnews

ಸ್ಪೈಡರ್ ಮ್ಯಾನ್ ಮತ್ತು ಕಾಂತಾರ ಶಿವ; ವಿಡಿಯೋ ಫುಲ್ ವೈರಲ್!


Last Updated:

ಹಾಲಿವುಡ್ ನಾಯಕನಿಗೆ ಸಾಥ್ ಕೊಟ್ಟ ಕಾಂತಾರ ಶಿವ. ಸ್ಪೈಡರ್ ಮ್ಯಾನ್ ಲೋಕಕ್ಕೆ ಎಂಟ್ರಿ ಕೊಟ್ಟ ಕಾಂತಾರ ರಿಷಬ್ ಶೆಟ್ರು. ಆದರೆ, ಅಸಲಿಗೆ ಏನಿದು ಮ್ಯಾಟರ್ ಅನ್ನುವ ಕುತೂಹಲಕ್ಕೆ ಇಲ್ಲೊಂದಿಷ್ಟು ಮಾಹಿತಿ ಇದೆ ಓದಿ.

ಸ್ಪೈಡರ್ ಮ್ಯಾನ್ ಮತ್ತು ಕಾಂತಾರ ಶಿವ; ವಿಡಿಯೋ ಫುಲ್ ವೈರಲ್!
ಸ್ಪೈಡರ್ ಮ್ಯಾನ್ ಮತ್ತು ಕಾಂತಾರ ಶಿವ; ವಿಡಿಯೋ ಫುಲ್ ವೈರಲ್!

ಹಾಲಿವುಡ್‌ನ ಸ್ಪೈಡರ್ ಮ್ಯಾನ್‌ಗೂ ಕಾಂತಾರ ಚಿತ್ರದ (Kantara Movie) ಶಿವನಿಗೂ ಏನ್ ಸಂಬಂಧ? ಒಟ್ಟಿಗೆ ಇವರು ಕಾಣಿಸಿಕೊಂಡಿರೋದ್ಯಾಕೆ? ಸ್ಪೈಡರ್ ಮ್ಯಾನ್‌ (Spider Man) ಬಗ್ಗೆ ಕಾಂತಾರ ಚಿತ್ರದ ರಿಷಬ್ ಶೆಟ್ರು ಯಾಕೆ ಹೇಳ್ಬೇಕು? ಮರೆತು ಹೋದ ಸ್ಪೈಡರ್ ಮ್ಯಾನ್ (Spider Man) ಪರಿಚಯಿಸೋ ಕೆಲಸ ಯಾಕೆ ಮಾಡ್ಬೇಕು? ಇವರು ಹಾಲಿವುಡ್‌ಗೇನಾದರೂ (Hollywood) ಪ್ರವೇಶ ಮಾಡಿದರೇ? ಸದ್ದೇ ಇಲ್ಲದೆ ಜುಲೈ-30 ರಂದು ಹಾಲಿವುಡ್ ಚಿತ್ರದಲ್ಲಿ ಏನಾದರೂ ಕಾಣಿಸಿಕೊಳ್ತಾರಾ? ಈ ಎಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ, ಈ ಪ್ರಶ್ನೆ ಹುಟ್ಟಿಕೊಳ್ಳಲು ರಿಷಬ್ ಶೆಟ್ರು ಹಂಚಿಕೊಂಡಿರೋ ವಿಡಿಯೋನೆ ಕಾರಣ ಆಗಿದೆ. ಅದರ ಇತರ ಮಾಹಿತಿ ಇಲ್ಲಿದೆ ಓದಿ.

ವಿಡಿಯೋದಲ್ಲಿ ಏನಿದೆ

ರಿಷಬ್ ಶೆಟ್ರು ಸೆಟ್‌ಗೆ ಬರ್ತಾರೆ. ಆದರೆ, ಯಾರಿಗೂ ಆಶ್ಚರ್ಯ ಆಗೋದೇ ಇಲ್ಲ. ಕಾರಣ, ರಿಷಬ್ ಶೆಟ್ರ ಪಾತ್ರವನ್ನ ಮಾಡೋಕೆ ಬಂದಿರೋ ಡ್ಯೂಪ್ ಅಂತಲೇ ಸೆಟ್ ಹುಡುಗರು ತಿಳಿದುಕೊಳ್ಳುತ್ತಾರೆ.
Rishab Shetty Spider Man Brand New Day Movie Video got viral

ಜುಲೈ-30 ರಂದು ಚಿತ್ರ ರಿಲೀಸ್

ಆದರೆ, ಶೆಟ್ರು ನಾನೇ ಕಾಂತಾರ ಚಿತ್ರದ ಡೈರೆಕ್ಟರ್ ರಿಷಬ್ ಶೆಟ್ಟಿ ಅಂತಲೂ ಹೇಳ್ತಾರೆ. ಆಗಲೂ ಅಲ್ಲಿರೋರು ಜೋಕ್ ಮಾಡ್ತಾರೆ. ನೀನು ಕಾಂತಾರ ಡೈರೆಕ್ಟರ್ ಆದರೆ, ನಾನು ಕಾಂತಾರ ಒನ್ ಡೈರೆಕ್ಟರ್ ಅಂತಲೇ ಹೇಳ್ತಾರೆ.

ಅಷ್ಟರಲ್ಲಿ ಸ್ಪೈಡರ್ ಮ್ಯಾನ್

ಈ ಎಲ್ಲ ಗದ್ದಲದ ನಡುವೆ ಸ್ಪೈಡರ್ ಮ್ಯಾನ್ ಬರ್ತಾನೆ. ಆ ತಲೆ ಹರಟೆಗಳನ್ನ ತನ್ನ ಜಾಲದಿಂದ ಆ ಕಡೆಗೆ ಎತ್ತಿ ಬಿಸಾಕುತ್ತಾನೆ. ಆಗಲೆ ರಿಷಬ್ ಶೆಟ್ಟಿ ಈ ಸ್ಪೈಡರ್ ಮ್ಯಾನ್ ನೋಡಿ ಆಶ್ಚರ್ಯ ಪಡ್ತಾರೆ.

ಹೇ.. ಸ್ಪೈಡಿ, ಏನು ನೀನು ಇಲ್ಲಿ ಅಂತಲೇ ಕೇಳ್ತಾರೆ. ಆತ್ಮೀಯವಾಗಿಯೇ ಸ್ಪೈಡರ್ ಮ್ಯಾನ್ ಹೆಗಲ ಮೇಲೆ ಕೈ ಹಾಕುತ್ತಾರೆ ನೋಡಿ. ಹೀಗೆ ಎಂಡ್ ಆಗುವ ಈ ವಿಡಿಯೋದಲ್ಲಿ ಇನ್ನೂ ಒಂದು ವಿಷಯ ಇದೆ.

ಜುಲೈ-30 ರಂದು ಚಿತ್ರ ರಿಲೀಸ್

ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ ಚಿತ್ರ ಇದೇ ತಿಂಗಳು ಕೊನೆಯಲ್ಲಿ ಬರ್ತಿದೆ. ಜುಲೈ-30 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರಚಾರಕ್ಕೆ ರಿಷಬ್ ಶೆಟ್ರು ಸಾಥ್ ಕೊಟ್ಟಿದ್ದಾರೆ.

Rishab Shetty Spider Man Brand New Day Movie Video got viral

ವಿಡಿಯೋ ಫುಲ್ ವೈರಲ್

ಸ್ಪೈಡರ್ ಮ್ಯಾನ್‌ ಅನ್ನ ಜನ ಮರೆತಿದ್ದಾರೆ. ಆತ ಈಗ ಮತ್ತೆ ಬಂದಿದ್ದಾನೆ ಅನ್ನೋದನ್ನ ರಿಷಬ್ ಶೆಟ್ರು ತಮ್ಮದೇ ವಿಶೇಷ ಶೈಲಿಯಲ್ಲಿಯೆ ಹೇಳಿದ್ದಾರೆ. ಅದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಪ್ರಮೋಷನ್‌ಗೆ ಶೆಟ್ರ ಆಯ್ಕೆ

ಸ್ಪೈಡರ್ ಮ್ಯಾನ್ ಚಿತ್ರವನ್ನ ಪ್ರಮೋಟ್ ಮಾಡೋಕೆ ಇಂಡಿಯಾದಲ್ಲಿ ರಿಷಬ್ ಶೆಟ್ರೇ ಆಯ್ಕೆ ಆಗಿದ್ದಾರೆ. ಬೇರೆ ಯಾವುದೇ ನಟರು ಈ ಒಂದು ಚಿತ್ರವನ್ನ ಪ್ರಮೋಟ್ ಮಾಡಿಲ್ಲ ಅನ್ನುವ ಮಾಹಿತಿನೂ ಸಿಗುತ್ತದೆ.

ಕೆರಾಡಿಯಿಂದ ಬಂದ ರಿಷಬ್ ಶೆಟ್ಟಿ ಇದೀಗ ಕಾಂತಾರ ಚಿತ್ರದಿಂದಲೇ ಎಲ್ಲೆಡೆ ರೀಚ್ ಆಗಿದ್ದಾರೆ. ಹಾಲಿವುಡ್‌ನ ಸ್ಪೈಡರ್ ಮ್ಯಾನ್ ಚಿತ್ರವನ್ನ ಪ್ರಮೋಟ್ ಮಾಡೋಕೆ ಸಾಥ್ ಕೊಟ್ಟಿದ್ದಾರೆ ಅನ್ನೋದೇ ವಿಶೇಷವಾಗಿದೆ. ಈ ಮೂಲಕ ಸ್ಪೈಡರ್ ಮ್ಯಾನ್ ಲೋಕವನ್ನ ಶೆಟ್ರು ಎಂಟ್ರಿ ಆಗಿದ್ದಾರೆ. ಆದರೆ, ಇದು ಕೇವಲ ಪ್ರಮೋಷನ್ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports