Last Updated:
ಐಪಿಎಲ್ 2026 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಆರ್‌ಸಿಬಿ ಫ್ರಾಂಚೈಸಿ ಮಾಜಿ ಮಾಲೀಕ ವಿಜಯ್ ಮಲ್ಯ ಹಾಲಿ ಚಾಂಪಿಯನ್ ತಂಡಕ್ಕೆ ವಿಶೇಷ ಸಂದೇಶವನ್ನು ನೀಡಿದ್ದಾರೆ.
ಐಪಿಎಲ್ (IPL) 2026 ರ ಮೊದಲ ಕ್ವಾಲಿಫೈಯರ್ (Qualifier) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವೆ ನಡೆಯಲಿದೆ. ಧರ್ಮಶಾಲಾ (Dharamshala) ದ ಕ್ರಿಕೆಟ್ ಅಸೋಸಿಯೇಷನ್ (Cricket Association) ಕ್ರೀಡಾಂಗಣವು ಈ ಹೈವೋಲ್ಟೇಜ್ ಪಂದ್ಯವನ್ನು ಆಯೋಜಿಸುತ್ತಿದೆ. ಕ್ವಾಲಿಫೈಯರ್ -1 ರಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್ (Final) ಗೆ ಮುನ್ನಡೆಯುತ್ತದೆ. ಆರ್‌ಸಿಬಿ ಸತತ ಎರಡನೇ ಬಾರಿ ಫೈನಲ್ ತಲುಪುವ ಉತ್ಸಾಹದಲ್ಲಿದೆ. ಮತ್ತೊಂದೆಡೆ ಈ ಪಂದ್ಯದಲ್ಲಿ ಗುಜರಾತ್ ತನ್ನಅದ್ಭುತ ಫಾರ್ಮ್ ಅನ್ನು ಮುಂದುವರಿಸಲು ಎದುರು ನೋಡುತ್ತಿದೆ.
ಆರ್‌ಸಿಬಿ ಮತ್ತು ಜಿಟಿ ಕ್ವಾಲಿಫೈಯರ್ -1 ರ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ಸೃಷ್ಟಿಕರ್ತೃ ವಿಜಯ್ ಮಲ್ಯ ಪೋಸ್ಟ್ ವೈರಲ್ ಆಗುತ್ತಿದೆ. ವಿಜಯ್ ಮಲ್ಯ ತಮ್ಮ ನೆಚ್ಚಿನ ಆರ್‌ಸಿಬಿ ತಂಡಕ್ಕೆ ವಿಶೇಷ ಸಂದೇಶವನ್ನು ಕೊಟ್ಟಿದ್ದಾರೆ. ಇದು ವಿಜಯ್ ಮಲ್ಯ ಅವರ ಆರ್‌ಸಿಬಿ ಮೇಲಿನ ಪ್ರೀತಿಯನ್ನು ತೋರಿಸುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
2008 ರಲ್ಲಿ ಆರ್‌ಸಿಬಿ ಫ್ರಾಂಚೈಸಿಯನ್ನು ಸೃಷ್ಟಿಸಿದ ವಿಜಯ್ ಮಲ್ಯ, ಗುಜರಾತ್ ಟೈಟಾನ್ಸ್ ವಿರುದ್ಧ ಕ್ವಾಲಿಫೈಯರ್- 1 ರ ಪಂದ್ಯಕ್ಕೂ ಮೊದಲು ತಂಡಕ್ಕೆ ಶುಭಾಶಯಗಳನ್ನು ಕಳುಹಿಸಿದ್ದಾರೆ. ಭಾರತದಿಂದ ಪಲಾಯನ ಮಾಡಿ ಲಂಡನ್‌ನಲ್ಲಿ ಅಡಗಿಕೊಂಡಿರುವ ಮಲ್ಯ ಅವರಿಗೆ ಆರ್‌ಸಿಬಿ ಮೇಲಿನ ಅಭಿಮಾನ ಸ್ವಲ್ಪವೂ ಕಡಿಮೆ ಆಗಿಲ್ಲ. ಮಲ್ಯ, ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, “ನಮ್ಮ ಆರ್‌ಸಿಬಿಯ ದೊಡ್ಡ ಸಿಂಹಗಳಿಗೆ ಶುಭಾಶಯಗಳು. ನಮ್ಮ ಬೆಂಗಳೂರಿನ ಸಿಂಹಗಳು ನೇರವಾಗಿ ಐಪಿಎಲ್ ಫೈನಲ್ ತಲುಪಲು ಇದು ಒಂದು ಉತ್ತಮ ಅವಕಾಶ. ನಿರ್ಭಯವಾಗಿ ಆಟವಾಡಿ ಮತ್ತು ಜೋರಾಗಿ ಘರ್ಜಿಸಿ. ದೇವರು ನಿಮ್ಮನ್ನು ಆಶೀರ್ವದಿಸಲಿ” ಎಂದು ಬರೆದುಕೊಂಡಿದ್ದಾರೆ.
ಮೊದಲ ಕ್ವಾಲಿಫೈಯರ್‌ನಲ್ಲಿ ಟಾಸ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಐಪಿಎಲ್ 2026 ರಲ್ಲಿ ಧರ್ಮಶಾಲಾ ಮೈದಾನದಲ್ಲಿ ಮೂರು ಪಂದ್ಯಗಳನ್ನು ಆಡಲಾಗಿದೆ . ಈ ಪಂದ್ಯಗಳಲ್ಲಿ ಎರಡು ಪಂದ್ಯಗಳು ರಾತ್ರಿಯಲ್ಲಿ ನಡೆದವು, ಮತ್ತು ಎರಡರಲ್ಲೂ, ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ತಂಡ ಗೆದ್ದಿತು. ರಾತ್ರಿಯಾಗುತ್ತಿದ್ದಂತೆ ಬ್ಯಾಟಿಂಗ್ ಸುಲಭವಾಗುತ್ತದೆ.
ಆದ್ದರಿಂದ, ಮೊದಲ ಕ್ವಾಲಿಫೈಯರ್‌ನಲ್ಲಿ ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಬಹುದು. ಪಂದ್ಯವು ಹೆಚ್ಚಿನ ಸ್ಕೋರಿಂಗ್ ಆಗುವ ನಿರೀಕ್ಷೆಯಿದೆ. ಇಲ್ಲಿಯವರೆಗೆ, ಐಪಿಎಲ್‌ನಲ್ಲಿ ಇಲ್ಲಿ 17 ಪಂದ್ಯಗಳನ್ನು ಆಡಲಾಗಿದೆ. ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 192 ರನ್‌ಗಳು.
ಆರ್‌ಸಿಬಿ ಕ್ವಾಲಿಫೈಯರ್ 1 ರಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ಆರ್‌ಸಿಬಿ ತಂಡವು ಐಪಿಎಲ್‌ನಲ್ಲಿ ಮೂರು ಬಾರಿ ಕ್ವಾಲಿಫೈಯರ್ 1 ರಲ್ಲಿ ಆಡಿದೆ. ಎರಡು ಬಾರಿ ಗೆದ್ದು ಒಂದು ಬಾರಿ ಸೋತಿದೆ. 2011 ರಲ್ಲಿ ಸಿಎಸ್‌ಕೆ ವಿರುದ್ಧ ಸೋತಿತ್ತು. ಇದಾದ ಬಳಿಕ 2016 ರಲ್ಲಿ ಗುಜರಾತ್ ಜೈಂಟ್ಸ್ ಮತ್ತು 2025 ರಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಸೋಲಿಸಿದೆ. ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ಎರಡು ಬಾರಿ ಕ್ವಾಲಿಫೈಯರ್ 1 ರಲ್ಲಿ ಆಡಿದೆ. 2022 ರಲ್ಲಿ ತಮ್ಮ ಚೊಚ್ಚಲ ಆವೃತ್ತಿಯಲ್ಲಿ ರಾಜಸ್ಥಾನವನ್ನು ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಸೋಲಿಸಿತು. 2023 ರಲ್ಲಿ ಸಿಎಸ್‌ಕೆ ವಿರುದ್ಧ ಗುಜರಾತ್ ಸೋಲನ್ನು ಅನುಭವಿಸಿತ್ತು.
RCB vs GT: ದೇಶ ಬಿಟ್ರೂ ಆರ್‌ಸಿಬಿ ಮೇಲಿನ ಅಭಿಮಾನ ಮರೆಯದ ವಿಜಯ್ ಮಲ್ಯ! ಕಾಲ್ವಿಫೈಯರ್-1 ಮ್ಯಾಚ್ಗೂ ಮುನ್ನ ಮಾಜಿ ಮಾಲೀಕನಿಂದ ಬಂತು ವಿಶೇಷ ಸಂದೇಶ













