ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾತ್ರವಲ್ಲ, ಬೌಲಿಂಗ್ ಕೂಡ ಅತಿ ಮುಖ್ಯ. ಪರ್ಪಲ್ ಕ್ಯಾಪ್ (Purple cap) ರೇಸ್‌ನಲ್ಲಿ ಜಿಟಿಯ ಕಗಿಸೊ ರಬಾಡಾ 28 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದರೆ, ಆರ್‌ಸಿಬಿಯ ಭುವನೇಶ್ವರ್ ಕುಮಾರ್ 26 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಭುವಿ ಇಂದು 3-4 ವಿಕೆಟ್ ಪಡೆದು ರಬಾಡಾ ಮಂಕಾದರೆ, ಪರ್ಪಲ್ ಕ್ಯಾಪ್ ಭುವಿ ಪಾಲಾಗಲಿದೆ. ಇವರಿಬ್ಬರ ಬೌಲಿಂಗ್ ಪ್ರದರ್ಶನವೇ ಇಂದಿನ ಪಂದ್ಯದ ಗೆಲುವಿನ ನಿರ್ಣಾಯಕ ಅಂಶವಾಗಲಿದೆ.
ಇಲ್ಲಿಯವರೆಗೆ ಈ ಎರಡು ತಂಡಗಳು 9 ಬಾರಿ ಮುಖಾಮುಖಿಯಾಗಿವೆ. ಆರ್‌ಸಿಬಿ 5 ಪಂದ್ಯಗಳಲ್ಲಿ ಗೆದ್ದಿದ್ದರೆ, ಗುಜರಾತ್ 4 ರಲ್ಲಿ ಜಯ ಸಾಧಿಸಿದೆ. ಈ ವರ್ಷದ ಮೂರು ಪಂದ್ಯಗಳಲ್ಲಿ ಆರ್‌ಸಿಬಿ 2ರಲ್ಲಿ ಜಯಿಸಿ ಮೇಲುಗೈ ಸಾಧಿಸಿದೆ. ಆದರೂ ಫೈನಲ್ ಪಂದ್ಯದಲ್ಲಿ ಒತ್ತಡ ನಿರ್ವಹಣೆ (Pressure handling) ಮಾಡುವುದರಲ್ಲಿ ಯಾರು ಜಾಣ್ಮೆ ತೋರುತ್ತಾರೋ ಅವರೇ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ.
ಅಹಮದಾಬಾದ್ ಗುಜರಾತ್ ತಂಡಕ್ಕೆ ತವರಿನ ಅಂಗಳ (Home ground). ಇಲ್ಲಿನ ಪಿಚ್ ಮತ್ತು ವಾತಾವರಣದ ಅನುಭವ ಅವರಿಗೆ ಪ್ಲಸ್ ಪಾಯಿಂಟ್. ಕಳೆದ 28 ಪಂದ್ಯಗಳಲ್ಲಿ ಅವರು 17 ರಲ್ಲಿ ಜಯಿಸಿದ್ದಾರೆ. ಆದರೆ, ಆರ್‌ಸಿಬಿ ಕಳೆದ ವರ್ಷದ ಫೈನಲ್ ಗೆದ್ದಿರುವ ಅನುಭವವನ್ನು ಹೊಂದಿದ್ದು, ದೊಡ್ಡ ಪಂದ್ಯಗಳನ್ನು ಹೇಗೆ ಗೆಲ್ಲಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಈ ಅನುಭವವೇ ಅವರಿಗೆ ದೊಡ್ಡ ಆಧಾರ.
ಆರ್‌ಸಿಬಿ ಗೆಲ್ಲಬೇಕೆಂದರೆ ಜಿಟಿಯ ಟಾಪ್ ಆರ್ಡರ್ ಬ್ಯಾಟರ್‌ಗಳಾದ ಶುಭಮನ್ ಗಿಲ್, ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಅವರನ್ನು ಬೇಗ ಪೆವಿಲಿಯನ್‌ಗೆ ಕಳಿಸಬೇಕು. ಗಿಲ್ ಶತಕದ ಲಯದಲ್ಲಿದ್ದಾರೆ, ಸುದರ್ಶನ್ ಮತ್ತು ಬಟ್ಲರ್ ಅಬ್ಬರಿಸಿದರೆ ಆರ್‌ಸಿಬಿ ಬೌಲರ್‌ಗಳಿಗೆ ಕಷ್ಟವಾಗಬಹುದು. ಕ್ವಾಲಿಫೈಯರ್ 1ರಲ್ಲಿ ಈ ಮೂವರನ್ನು ಕಟ್ಟಿಹಾಕಿದಂತೆ, ಇಂದೂ ಕೂಡ ಅವರ ವಿಕೆಟ್ ಬೇಗ ಬಿದ್ದರೆ ಆರ್‌ಸಿಬಿಯ ಗೆಲುವು ಸುಲಭವಾಗುತ್ತದೆ.
ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಫಿಲ್ ಸಾಲ್ಟ್ ಅಂತಹ ಆಟಗಾರರಿದ್ದರೆ, ಗುಜರಾತ್ ತಂಡದಲ್ಲಿ ಗಿಲ್, ರಶೀದ್ ಖಾನ್ ಮತ್ತು ರಬಾಡ ಅವರಂತಹ ದಿಗ್ಗಜರಿದ್ದಾರೆ. ಉಭಯ ತಂಡಗಳೂ ಸಮಬಲವಾಗಿದ್ದು, ಇಂಪ್ಯಾಕ್ಟ್ ಪ್ಲೇಯರ್ (Impact player) ಪಾತ್ರ ಈ ಬಾರಿ ತುಂಬಾ ಮಹತ್ವದ್ದಾಗಲಿದೆ. ಯಾರು ಅಂದು ಅಂಗಳದಲ್ಲಿ ಹೆಚ್ಚು ಶಿಸ್ತಿನಿಂದ ಆಡುತ್ತಾರೋ ಅವರೇ ವಿಜೇತರು.
ಒಟ್ಟಿನಲ್ಲಿ ಫೈನಲ್ ಕದನ ರಂಗೇರಿದೆ. ಆರ್‌ಸಿಬಿ ತನ್ನ ಅಭಿಮಾನಿಗಳಿಗೆ ಮತ್ತೊಂದು ಸಂಭ್ರಮ ಕೊಡುತ್ತಾ ಅಥವಾ ಗುಜರಾತ್ ತನ್ನ ತವರಿನಲ್ಲಿ ಕಪ್ ಗೆಲ್ಲುತ್ತಾ ಎಂಬುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ. ಕ್ರಿಕೆಟ್ ಪಂಡಿತರು ಆರ್‌ಸಿಬಿ ಬ್ಯಾಟಿಂಗ್ ಲೈನ್-ಅಪ್‌ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇಂದು ಯಾರು ಒತ್ತಡವನ್ನು ಮೀರಿ ನಿಲ್ಲುತ್ತಾರೋ ಅವರೇ 2026ರ ಐಪಿಎಲ್ ಚಾಂಪಿಯನ್!
ಸಂಭಾವ್ಯ ಪ್ಲೇಯಿಂಗ್ 11
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್‌ಕೊಹ್ಲಿ, ವೆಂಕಟೇಶ್ ಅಯ್ಯರ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್(ನಾಯಕ), ಕೃನಾಲ್ ಪಾಂಡ್ಯ, ಜಿತೇಶ್ ಶರ್ಮಾ(ವಿ,ಕೀ), ಟಿಮ್ ಡೇವಿಡ್, ಭುವನೇಶ್ವರ್ ಕುಮಾರ್, ಜಾಕೋಬ್ ಡಫಿ, ರಸಿಕ್ ದಾರ್. ಜಾಸ್ ಹೇಜ಼ರ್‌ಹುಡ್
ಇಂಪ್ಯಾಕ್ ಪ್ಲೇಯರ್: ಸುಯಾಶ್ ಶರ್ಮ, ರೊಮಾರಿಯೋ ಶೆಫಾರ್ಡ್, ಜಾರ್ಡನ್ ಕಾಕ್ಸ್, ಮಂಗೇಶ್ ಯಾದವ್
ಪ್ಲೇಯಿಂಗ್ 11ನಲ್ಲಿ ಗಾಯದಿಂದ ಚೇತರಿಸಿಕೊಂಡಿರುವ ಫಿಲ್ ಸಾಲ್ಟ್ ಕೂಡ ಸ್ಥಾನ ಪಡೆಯುವ ನಿರೀಕ್ಷೆಯಿದೆ.
ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೀ), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಕುಲ್ವಂತ್ ಖೆಟ್ರೋಲಿಯಾ, ಪ್ರಸಿದ್ಧ ಕೃಷ್ಣ
ಇಂಪ್ಯಾಕ್ ಪ್ಲೇಯರ್: ರಾಹುಲ್ ತೇವಾಟಿಯ, ಗ್ಲೆನ್ ಫಿಲಿಪ್ಸ್, ಅನುಜ್ ರಾವತ್,












