RCB 2026 IPL Champions : ಗುಜರಾತ್ ಮಣಿಸಿದ ಆರ್​​ಸಿಬಿಗೆ ಚಾಂಪಿಯನ್ ಪಟ್ಟ! ಸತತ 2ನೇ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ ಬೆಂಗಳೂರು | ಕ್ರೀಡಾ ಸುದ್ದಿ | ACTPnews

ಸತತ 2ನೇ ಬಾರಿ ಟ್ರೋಫಿ ಗೆದ್ದ ಆರ್​ಸಿಬಿ


Last Updated:

ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ಆರ್ಸಿಬಿ ತಂಡ 2026ರ ಫೈನಲ್​​ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್​ಗಳಿಂದ ಗೆಲ್ಲುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಸತತ 2 ಪ್ರಶಸ್ತಿ ಗೆದ್ದ 3ನೇ ತಂಡ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಸತತ 2ನೇ ಬಾರಿ ಟ್ರೋಫಿ ಗೆದ್ದ ಆರ್​ಸಿಬಿ
ಸತತ 2ನೇ ಬಾರಿ ಟ್ರೋಫಿ ಗೆದ್ದ ಆರ್​ಸಿಬಿ

ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ 2026ರ ಐಪಿಎಲ್ ಫೈನಲ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಮಣಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ಆರ್ಸಿಬಿ ತಂಡ 2026ರ ಆವೃತ್ತಿಯನ್ನೂ ಗೆಲ್ಲುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಸತತ 2 ಪ್ರಶಸ್ತಿ ಗೆದ್ದ 3ನೇ ತಂಡ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಹೈವೋಲ್ಟೇಜ್ ಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ಬ್ಯಾಟಿಂಗ್ ವೈಫಲ್ಯ ಅನುಭಿಸಿ 20 ಓವರ್​​ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 155 ರನ್​ಗಳಿಸಿತ್ತು. ಆರ್​ಸಿಬಿ 156 ರನ್​ಗಳ ಗುರಿಯನ್ನ ಕೇವಲ 18 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಗೆಲುವು ಸಾಧಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ 2010 ಹಾಗೂ 2011ರಲ್ಲಿ ಹಾಗೂ ಮುಂಬೈ ಇಂಡಿಯನ್ಸ್ 2019 ಹಾಗೂ 2020ರಲ್ಲಿ ಬ್ಯಾಕ್​ ಟು ಬ್ಯಾಕ್ ಪ್ರಶಸ್ತಿ ಜಯಿಸಿತ್ತು. ಇದೀಗ ಆ ಸಾಲಿಗೆ ಆರ್​​​​ಸಿಬಿ ಕೂಡ ಸೇರಿಕೊಂಡಿದೆ.

ಆರ್​ಸಿಬಿ ಉತ್ತಮ ಆರಂಭ

156 ರನ್​ಗಳ ಗುರಿಯನ್ನ ಬೆನ್ನಟ್ಟಿದ ಆರ್​ಸಿಬಿ ಸ್ಫೋಟಕ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ 62 ರನ್​ಗಳಿಸಿದರು. ವೆಂಕಟೇಶ್​ ಅಯ್ಯರ್ 16 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​ಗಳ ಸಹಿತ 32 ರನ್​ಗಳಿಸಿ ಸಿರಾಜ್ ಬೌಲಿಂಗ್​​ನಲ್ಲಿ ರಬಾಡಗೆ ಕ್ಯಾಚ್ ನೀಡಿ ಔಟ್ ಆದರು. ಮೊದಲ ವಿಕೆಟ್ ಕಳೆದುಕೊಂಡ ಬಳಿಕ ಆರ್​​ಸಿಬಿಗೆ ದೊಡ್ಡ ಜೊತೆಯಾಟ ಬರಲಿಲ್ಲ. ದೇವದತ್ ಪಡಿಕ್ಕಲ್ 4 ಎಸೆತಗಳಲ್ಲಿ ಕೇವಲ 1 ರನ್​ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು.

ಮಧ್ಯಮ ಕ್ರಮಾಂಕ ವಿಫಲ

ನಂತರ ಬಂದ ನಾಯಕ ರಜತ್ ಪಾಟೀದಾರ್ 13 ಎಸೆತಗಳಲ್ಲಿ ತಲಾ 1 ಬೌಂಡರಿ, 1 ಸಿಕ್ಸರ್​ ಸಹಿತ 15 ರನ್​ಗಳಿಸಿ ರಶೀದ್ ಖಾನ್​ ಬೌಲಿಂಗ್​​ನಲ್ಲಿ ರಬಾಡಗೆ ಕ್ಯಾಚ್ ನೀಡಿದರೆ, ಕೃನಾಲ್ ಪಾಂಡ್ಯ ಅದೇ ಓವರ್​​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ಕೊಹ್ಲಿ ಜೊತೆ ಸೇರಿದ ಟಿಮ್ ಡೇವಿಡ್​ 5ನೇ ವಿಕೆಟ್ ಜೊತೆಯಾಟದಲ್ಲಿ 41 ರನ್​ಗಳಿಸಿದರು. ಟಿಮ್ ಡೇವಿಡ್ 17 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 24 ರನ್​ಗಳಿಸಿ ಗೆಲುವಿಗೆ 25 ರನ್​ಗಳ ಅಗತ್ಯವಿದ್ದಾಗ ಅರ್ಷದ್ ಖಾನ್​ಗೆ ವಿಕೆಟ್ ಒಪ್ಪಿಸಿದರು.

ಗೆಲುವಿನ ಗಡಿ ದಾಟಿಸಿದ ಕೊಹ್ಲಿ-ಜಿತೇಶ್​

ಆದರೆ ವಿರಾಟ್ ಕೊಹ್ಲಿ ಕೊನೆಯವರೆಗೂ ಕ್ರೀಸ್​​ನಲ್ಲಿ ಗಟ್ಟಿಯಾಗಿ ನಿಂತು ತಂಡವನ್ನ ಗೆಲುವಿನ ಗಡಿ ದಾಟಿಸಿದರು. ವಿರಾಟ್ 42 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್​ಗಳ ಸಹಿತ ಅಜೇಯ 75 ರನ್​ಗಳಿಸಿದರು. ಜಿತೇಶ್ ಶರ್ಮಾ 14 ಎಸೆತಗಳಲ್ಲಿ ಅಜೇಯ 14 ರನ್​ಗಳಿಸಿದರು.

ಗುಜರಾತ್ ಟೈಟನ್ಸ್ ಪರ ರಶೀದ್ ಖಾನ್ 25ಕ್ಕೆ2, ಕಗಿಸೋ ರಬಾಡ 44ಕ್ಕೆ1, ಮೊಹಮ್ಮದ್ ಸಿರಾಜ್ 36ಕ್ಕೆ1, ಅರ್ಷದ್ ಖಾನ್ 32ಕ್ಕೆ1 ವಿಕೆಟ್ ಪಡೆದರು.

ಗುಜರಾತ್ ಟೈಟನ್ಸ್ ಇನ್ನಿಂಗ್ಸ್ ಹೈಲೈಟ್ಸ್

ಫೈನಲ್ ಪಂದ್ಯದಲ್ಲಿ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಈ ನಿರ್ಧಾರಕ್ಕೆ ತಕ್ಕಂತೆ ಹೇಜಲ್​ವುಡ್ ಮತ್ತು ಭುವಿ ಕ್ರಮವಾಗಿ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರನ್ನು ಬೇಗನೆ ಔಟ್ ಮಾಡಿದರು. ಸಾಯಿ 12 ರನ್ ಗಳಿಗೆ ಔಟಾದರೆ, ಗಿಲ್ 10 ರನ್ ಗಳಿಸಿ ಔಟಾದರು. ಇದರ ನಂತರ ಬಂದ ಬಟ್ಲರ್ (19, 23 ಎಸೆತ) ಕೃನಾಲ್ ಪಾಂಡ್ಯ ಬೌಲಿಂಗ್​​​ನಲ್ಲಿ ಸ್ಟಂಪ್ ಆದರು. ಬಟ್ಲರ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಗುಜರಾತ್ ಕುಸಿತ ಅನುಭವಿಸಿತು.

ಮಧ್ಯಮ ಕ್ರಮಾಂಕ ವಿಫಲ

ನಂತರ 6ನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಅರ್ಷದ್ ಖಾನ್ 6 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್​ ಸಹಿತ 15 ರನ್​ಗಳಿಸಿ ಹ್ಯಾಜಲ್​ವುಡ್​ಗೆ ವಿಕೆಟ್ ಒಪ್ಪಿಸಿದರು. ತೆವಾಟಿಯಾ 7, ಜೇಸನ್ ಹೋಲ್ಡರ್ 7, ರಶೀದ್ ಖಾನ್ 7 ರನ್​ಗಳಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ವಾಷಿಂಗ್ಟನ್ ಸುಂದರ್ ಕೊನೆಯ ಓವರ್​ವರೆಗೂ ಕ್ರೀಸ್​ನಲ್ಲಿ ಗಟ್ಟಿಯಾಗಿ ನಿಗದಿತ 20 ಓವರ್ ಗಳಲ್ಲಿ ಜಿಟಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲು ನೆರವಾದರು. ವಾಷಿಂಗ್ಟನ್ ಸುಂದರ್ 37 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ ಅಜೇಯ 50 ರನ್ ಗಳಿಸಿದರು.

ಆರ್​ಸಿಬಿ ಪರ ಅದ್ಭುತ ಬೌಲಿಂಗ್ ಮಾಡಿದ ರಸಿಕ್ ಸಲಾಂ 27ಕ್ಕೆ3, ಜೋಸ್ ಬಟ್ಲರ್ 37ಕ್ಕೆ2, ಭುವನೇಶ್ವರ್ ಕುಮಾರ್ 29ಕ್ಕೆ2 ಹಾಗೂ 23ಕ್ಕೆ 1 ವಿಕೆಟ್ ಪಡೆದು ಮಿಂಚಿದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports