Ramayana: ‘ರಾಮಾಯಣ’ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್! ಬ್ರಹ್ಮ ಮುಹೂರ್ತದಲ್ಲೇ ಅನಾವರಣ | | ACTPnews

ರಾಮಾಯಣ


Last Updated:

ರಾಮಾಯಣ ಚಿತ್ರದ ನಿರ್ಮಾಪಕರು ಸಾಮಾಜಿಕ ಜಾಲತಾಣಗಳ ಮೂಲಕ ಟ್ರೇಲರ್ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ. ಅದರಂತೆ ಜುಲೈ 30, ಗುರುವಾರ ಬೆಳಿಗ್ಗೆ 4:15ಕ್ಕೆ ವಿಶ್ವದಾದ್ಯಂತ ಟ್ರೇಲರ್ ಬಿಡುಗಡೆಯಾಗಲಿದೆ.

ರಾಮಾಯಣ
ರಾಮಾಯಣ

ಭಾರತೀಯ ಸಿನಿರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ರಾಮಾಯಣ (Ramayana) ಚಿತ್ರದ ಟ್ರೇಲರ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮೊದಲಿಗೆ ಘೋಷಿಸಿದ್ದ ದಿನಾಂಕ ಮುಂದೂಡಲ್ಪಟ್ಟಿದ್ದರಿಂದ ಸಾಕಷ್ಟು ಪ್ರಶ್ನೆಗಳು ಮೂಡಿದ್ದವು. ಇದೀಗ ಚಿತ್ರತಂಡ ಟ್ರೇಲರ್ (Trailer Release) ಬಿಡುಗಡೆಗೆ ಹೊಸ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದು, ಈ ಸುದ್ದಿ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಜುಲೈ 30ರಂದು ಟ್ರೇಲರ್ ಬಿಡುಗಡೆ

ರಾಮಾಯಣ ಚಿತ್ರದ ನಿರ್ಮಾಪಕರು ಸಾಮಾಜಿಕ ಜಾಲತಾಣಗಳ ಮೂಲಕ ಟ್ರೇಲರ್ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ. ಅದರಂತೆ ಜುಲೈ 30, ಗುರುವಾರ ಬೆಳಿಗ್ಗೆ 4:15ಕ್ಕೆ ವಿಶ್ವದಾದ್ಯಂತ ಟ್ರೇಲರ್ ಬಿಡುಗಡೆಯಾಗಲಿದೆ. ಶುಭ ಬ್ರಹ್ಮ ಮುಹೂರ್ತದಂದು ರಾಮಾಯಣದ ಉದಯವನ್ನು ಸ್ವಾಗತಿಸುತ್ತೇವೆ ಎಂದು ಚಿತ್ರತಂಡ ಪೋಸ್ಟ್ ಹಂಚಿಕೊಂಡಿದೆ.

ಹಿಂದೂ ಸಂಪ್ರದಾಯದಲ್ಲಿ ಬ್ರಹ್ಮ ಮುಹೂರ್ತವನ್ನು ಅತ್ಯಂತ ಪವಿತ್ರ ಹಾಗೂ ಆಧ್ಯಾತ್ಮಿಕ ಸಮಯವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣದಿಂದ ರಾಮಾಯಣ ದಂತಹ ಪೌರಾಣಿಕ ಕಥೆಯನ್ನು ಆಧರಿಸಿದ ಚಿತ್ರದ ಟ್ರೇಲರ್ ಅನ್ನು ಆ ಸಮಯದಲ್ಲೇ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Preity Zinta: ಡಿಂಪಲ್ ಗರ್ಲ್‌ ಭರ್ಜರಿ ಕಂಬ್ಯಾಕ್; 9 ವರ್ಷಗಳ ಬಳಿಕ ಪ್ರೀತಿ ಜಿಂಟಾ ಮತ್ತೆ ಬೆಳ್ಳಿತೆರೆಗೆ

ಇನ್ನು ಟ್ರೇಲರ್ ಅನ್ನು ಮೊದಲಿಗೆ ಜುಲೈ 24ರಂದು ಬಿಡುಗಡೆ ಮಾಡುವ ಯೋಜನೆ ಇತ್ತು. ಆದರೆ ನಂತರ ಅದನ್ನು ಮುಂದೂಡಲಾಯಿತು. ಬಳಿಕ ನಿರ್ಮಾಪಕ ನಮಿತ್ ಮಲ್ಹೋತ್ರಾ ಈ ಬಗ್ಗೆ ಸ್ಪಷ್ಟನೆ ನೀಡಿ, ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಜೊತೆಗಿನ ಜಾಗತಿಕ ವಿತರಣಾ ಯೋಜನೆಯ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಏಕಕಾಲದಲ್ಲಿ ಟ್ರೇಲರ್ ಬಿಡುಗಡೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು.

ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ‘ರಾಮಾಯಣ’ ಚಿತ್ರದ ಮೊದಲ ಭಾಗ ಈ ವರ್ಷದ ದೀಪಾವಳಿ ಸಂದರ್ಭದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈಗ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿರುವುದರಿಂದ ಚಿತ್ರದ ಪ್ರಚಾರಕ್ಕೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆಯಿದೆ.

ವಿಶೇಷವಾಗಿ ಬ್ರಹ್ಮ ಮುಹೂರ್ತದಲ್ಲಿ ಟ್ರೇಲರ್ ಅನಾವರಣಗೊಳ್ಳುತ್ತಿರುವುದು ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದು, ಜುಲೈ 30ರ ಬೆಳಗ್ಗಿನ ಕ್ಷಣಕ್ಕಾಗಿ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed