Rahul Gandhi: ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ಬಗ್ಗೆ ರಾಹುಲ್​ ಗಾಂಧಿ ಆಕ್ರೋಶ! ಸರ್ಕಾರದ ಮೇಲೆ ಸಾಲು ಸಾಲು ಆರೋಪ / Rahul Gandhi Slams Fuel Price Hike | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ಬಗ್ಗೆ ರಾಹುಲ್​ ಗಾಂಧಿ ಆಕ್ರೋಶ!


Last Updated:

ಸತತವಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಈ ಹಿನ್ನಲೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ. ಸರ್ಕಾರ ಸದ್ದಿಲ್ಲದೆ ಸಾಮಾನ್ಯ ಜನರ ಜೇಬನ್ನು ದೋಚುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ಬಗ್ಗೆ ರಾಹುಲ್​ ಗಾಂಧಿ ಆಕ್ರೋಶ!
ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ಬಗ್ಗೆ ರಾಹುಲ್​ ಗಾಂಧಿ ಆಕ್ರೋಶ!

ದೇಶಾದ್ಯಂತ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು (Petrol Diesel Price) ಏರಿಕೆಯಾಗಿವೆ. ಮೇ 25, ಸೋಮವಾರದಂದು ಹೊರಬಂದ ಹೊಸ ದರಗಳ ಪ್ರಕಾರ, ಕೇವಲ 10 ದಿನಗಳಲ್ಲಿ ಇದು 4ನೇ ಬಾರಿ ಇಂಧನ ಬೆಲೆ (Fuel Price) ಏರಿಕೆಯಾಗಿದೆ. ಸರಿಸುಮಾರು ಈವರೆಗೂ 7 ರಿಂದ 8 ರೂಪಾಯಿ ಏರಿಕೆಯಾಗಿದೆ. ಈ ರೀತಿ ನಿರಂತರ ಏರಿಕೆಯಿಂದ ಸಾಮಾನ್ಯ ಜನರ ಮೇಲೆ ದೊಡ್ಡ ಭಾರ ಬಿದ್ದಿದೆ. ಈ ಹಿನ್ನೆಲೆ ರಾಜಕೀಯ ವಲಯದಲ್ಲೂ ತೀವ್ರ ಚರ್ಚೆ, ಟೀಕೆಗಳು ನಡೆಯುತ್ತಿವೆ.

ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಇಂಧನ ಬೆಲೆ ಏರಿಕೆಯ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರ ಸದ್ದಿಲ್ಲದೆ ಜನರ ಜೇಬನ್ನು ದೋಚುತ್ತಿದೆ ಎಂದ ರಾಹುಲ್​ ಗಾಂಧಿ!

ಚುನಾವಣೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಂತುಗಳಲ್ಲಿ ಹೆಚ್ಚಿಸುವ ಮೂಲಕ ಸರ್ಕಾರ ಸದ್ದಿಲ್ಲದೆ ಜನರ ಜೇಬನ್ನು ದೋಚುತ್ತಿದೆ ಎಂದು ರಾಹುಲ್​ ಗಾಂಧಿ ಆರೋಪಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ಜನರಿಗೆ ಸಿಹಿ ಮಾತು, ಭರವಸೆ, ಆದರೆ ಚುನಾವಣೆಯ ಬಳಿಕ ಹಣದುಬ್ಬರದ ಹೊರೆ ಜನರ ಮೇಲೆ ಹಾಕುವುದು ಸರ್ಕಾರದ ರೀತಿಯಾಗಿದೆ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ‘ಹಣದುಬ್ಬರದ ಮನುಷ್ಯ ಮೋದಿ ಮತ್ತೆ ತನ್ನ ಮ್ಯಾಜಿಕ್ ತೋರಿಸಿದ್ದಾರೆ. ಕಂತುಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಹೆಚ್ಚಿಸಿ ನಿಮ್ಮ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ. ನಾನು ತಿಂಗಳುಗಳಿಂದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಎಚ್ಚರಿಸುತ್ತಿದ್ದೆ, ಆದರೆ ಮೋದಿ ಚುನಾವಣೆಗಳಲ್ಲಿ ನಿರತರಾಗಿದ್ದರು. ಚುನಾವಣೆ ಮುಗಿದ ತಕ್ಷಣ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಒಟ್ಟು 8 ರೂ. ಹೆಚ್ಚಿಸಿದ್ದಾರೆ, ಇದು ಮುಂದುವರಿಯಲಿದೆ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ. ಮೋದಿಗೆ ಒಂದೇ ಕೆಲಸ, ಚುನಾವಣೆ ವೇಳೆ ಭರವಸೆ, ಉಳಿದ ಸಮಯದಲ್ಲಿ ಜನರ ಜೇಬಿನ ಮೇಲೆ ದಾಳಿ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರವನ್ನು ಟೀಕಿಸಿದ ಮಲ್ಲಿಕಾರ್ಜುನ್​ ಖರ್ಗೆ!

ಇತ್ತ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯೂ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ‘ಲೂಟಿ ಇನ್ನೂ ಮುಗಿದಿಲ್ಲ. 10 ದಿನಗಳಲ್ಲಿ ಇದು 4ನೇ ಹೆಚ್ಚಳ. ಮೋದಿ ಸರ್ಕಾರ ಸಾಮಾನ್ಯ ಜನರ ಉಳಿತಾಯದ ಮೇಲೆ ಪೆಟ್ರೋಲ್ ಸುರಿದಿದೆ’ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಹಣದುಬ್ಬರ, ನಿರುದ್ಯೋಗ, ಇಂಧನ ಬೆಲೆ ಏರಿಕೆ ಈ ಎಲ್ಲ ವಿಷಯಗಳಲ್ಲಿ ಕಾಂಗ್ರೆಸ್ ನಿರಂತರವಾಗಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿದೆ.

ಇದನ್ನೂ ಓದಿ: Subsidy: ಪೆಟ್ರೋಲ್ ಬೆಲೆ ಏರಿಕೆ ನಡುವೆಯೇ ಗುಡ್​​ ನ್ಯೂಸ್​! ಕೇಂದ್ರ ಸರ್ಕಾರದಿಂದ ದೊಡ್ಡ ಪರಿಹಾರ

ಖರ್ಗೆ, ಯುಪಿಎ ಹಾಗೂ ಎನ್‌ಡಿಎ ಸರ್ಕಾರಗಳ ಅವಧಿಯನ್ನು ಹೋಲಿಸಿ ಮಾತನಾಡಿದ್ದಾರೆ. 2004 ರಿಂದ 2014 ರವರೆಗೆ ಯುಪಿಎ ಆಡಳಿತಕಾಲದಲ್ಲಿ ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆ 175.34% ಏರಿಕೆಯಾಯಿತು ಎಂದು ಹೇಳಿದ್ದಾರೆ. ಆದರೆ ಮೋದಿ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲದ ಅಂತರರಾಷ್ಟ್ರೀಯ ಬೆಲೆಯಲ್ಲಿ ಒಂದೂ ಪೈಸೆಯ ಏರಿಕೆಯಿಲ್ಲವೆಂದೂ, ಆದರೂ 2014 ರಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹71.41 ಇತ್ತು, 2026 ರಲ್ಲಿ ಅದು ₹102.12 ಕ್ಕೆ ಏರಿದೆ; ಇದು 43.01% ಏರಿಕೆಯಾಗಿದೆ ಎಂದು ಆರೋಪಿಸಿದ್ದಾರೆ. ಡೀಸೆಲ್ ಬೆಲೆಯೂ ₹56.71 ರಿಂದ ₹95.20 ಕ್ಕೆ ಏರಿಕೆ ಕಂಡಿದೆ, ಇದು 67.87% ಹೆಚ್ಚಳ ಎಂದು ತಿಳಿಸಿದ್ದಾರೆ.

10 ದಿನಗಳಲ್ಲಿ 4 ಬಾರಿ ಪೆಟ್ರೋಲ್​ ಡೀಸೆಲ್​ ಬೆಲೆ ಏರಿಕೆ

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಈ ಬಾರಿ ಮತ್ತೊಂದು ಬೆಲೆ ಏರಿಕೆ ಘೋಷಿಸಿವೆ. ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ₹2.61 ಏರಿಕೆಗೊಂಡು ₹102.12 ಆಗಿದ್ದು, ಡೀಸೆಲ್ ₹2.71 ಏರಿಕೆಗೊಂಡು ₹95.20 ಆಗಿದೆ. ಮೇ 15 ರಂದು ಲೀಟರ್‌ಗೆ ₹3, ಮೇ 19 ರಂದು 90 ಪೈಸೆ, ಮೇ 23 ರಂದು ಪೆಟ್ರೋಲ್ 87 ಪೈಸೆ, ಡೀಸೆಲ್ 91 ಪೈಸೆ ಹೆಚ್ಚಿಸಲಾಗಿತ್ತು. ಒಟ್ಟಾರೆಯಾಗಿ, ಎರಡು ವಾರಗಳಲ್ಲಿ ಇಂಧನದ ಮೇಲೆ ₹7 ಕ್ಕಿಂತ ಹೆಚ್ಚು ಭಾರ ಹೆಚ್ಚಾಗಿದೆ.

ಇತರೆ ಮಹಾನಗರಗಳಲ್ಲಿಯೂ ಇದೇ ಸ್ಥಿತಿ. ಈ ಎಲ್ಲಾ ಏರಿಕೆಗಳಿಂದ ಸಾರಿಗೆ ವೆಚ್ಚ, ದಿನನಿತ್ಯದ ವಸ್ತುಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಭೀತಿ ಜನರಲ್ಲಿ ಹೆಚ್ಚಾಗಿದೆ. ಇಂಧನ ಬೆಲೆ ಏರಿಕೆ, ರಾಜಕೀಯ ಆರೋಪ-ಪ್ರತ್ಯಾರೋಪಗಳ ಮಧ್ಯೆ, ಸಾಮಾನ್ಯ ನಾಗರಿಕರ ಜೀವನವೇ ಹೆಚ್ಚು ಸಂಕಷ್ಟದ ದಾರಿಗೆ ತಳ್ಳಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed