Last Updated:
ಬುಲ್ ಬುಲ್ ರಚಿತಾ ರಾಮ್ ಹರಕೆಯ ಕೋಲ ಸೇವೆ ಮಾಡಿದ್ದಾರೆ. ಬಂಟ್ವಾಳದ ಬೆಂಜನಪದವು ಅಲ್ಲಿರೋ ಕೊರಗಜ್ಜನ ಸನ್ನಿಧಾನದಲ್ಲಿ ಈ ಸೇವೆ ಸಲ್ಲಿಸಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಇಂಡಸ್ಟ್ರಿಗೆ ಬಂದು 14 ವರ್ಷ ಆಗಿದೆ. ಇವರ ಮೊದಲ ಬುಲ್ ಬುಲ್ ಚಿತ್ರ (Bulbul Movie) ಬಂದು 14 ವರ್ಷಗಳೇ ಕಳೆದಿವೆ. ಇದರೊಟ್ಟಿಗೆ ರಚಿತಾ ಸಿನಿ ಜರ್ನಿಗೂ 14 ವರ್ಷ ತುಂಬಿದೆ. ಇದರ ನಡುವೆ ರಚಿತಾ ರಾಮ್ (Rachita Ram) ಕೊರಗಜ್ಜನ ಮೊರೆ ಹೋಗಿದ್ದಾರೆ. ದೈವಕ್ಕೆ ಹರಕೆಯ ಕೋಲ ಸೇವೆ (Harake Kola Seve) ಕೂಡ ಮಾಡಿದ್ದಾರೆ. ಮೇ-16 ರಂದು ರಾತ್ರಿ ನಡೆದ ಈ ಸೇವೆಯ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕೊರಗಜ್ಜನ ಬಗ್ಗೆ ಅಪಾರವಾದ ನಂಬಿಕೆ ಇದೆ. ಈ ಅಜ್ಜನಿಗೆ ಸಾಮಾನ್ಯ ಜನರಷ್ಟೆಅಲ್ಲ, ಸೆಲೆಬ್ರಿಟಿಗಳು ನಡೆದುಕೊಳ್ಳುತ್ತಾರೆ. ರಕ್ಷಿತಾ ಪ್ರೇಮ್ ಆಗಾಗ ಕೊರಗಜ್ಜನ ಸನ್ನಿಧಾನಕ್ಕೂ ಬಂದು ಹೋಗ್ತಾರೆ. ಇನ್ನು ಅನೇಕರು ಇಲ್ಲಿ ಕೊರಗಜ್ಜನ ದರ್ಶನ ಪಡೆಯೋದು ಇದೆ.
ಕೊರಗಜ್ಜನ ಸನ್ನಿಧಾನದಲ್ಲಿ ರಚಿತಾ ರಾಮ್ (ಚಿತ್ರ ಕೃಪೆ: ರೀಲ್ಸ್ ಕ್ರಿಯೇಟರ್ ಮೋಕ್ಷಿತ್ ಇನ್ಸ್ಟಾಗ್ರಾಮ್)
ರಚಿತಾ ರಾಮ್ ಅವರು ಇಲ್ಲಿ ಕೊರಗಜ್ಜನಿಗೆ ಹರಕೆಯ ಕೋಲ ಸೇವೆ ಮಾಡಿದ್ದಾರೆ. ಮೇ-16 ರಾತ್ರಿ-8 ಗಂಟೆಗೆ ಈ ಸೇವೆ ಮಾಡಲಾಗಿದೆ.
ರಚಿತಾ ರಾಮ್ ಅವರು ಕೊರಗಜ್ಜನ ಹರಕೆಯ ಕೋಲ ಸೇವೆ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಆಗಿದೆ. ರೀಲ್ಸ್ ಕ್ರಿಯೇಟರ್ ಮೋಕ್ಷಿತ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಈ ಕ್ಷಣದ ವಿಡಿಯೋವನ್ನ ಹಂಚಿಕೊಂಡಿದ್ದಾರೆ.
ರಚಿತಾ ರಾಮ್ ಅವರು ಕೊರಗಜ್ಜನಿಗೆ ಸಲ್ಲಿಸಿದ ಹರಕೆಯ ಕೋಲ ಸೇವೆಯ ಸುಂದರ ಕ್ಷಣದ ವಿಡಿಯೋ ಕೂಡ ಇದಾಗಿದೆ. ಇದನ್ನ ನೋಡಿದ ಅನೇಕರು ಕೊರಗಜ್ಜನ ಸ್ಮರಿಸಿದ್ದಾರೆ.
ಹಾಗೆ ಇದೇ ವಿಡಿಯೋದ ಮೇಲೆ ಒಂದು ಸಾಲು ಕೂಡ ಬರೆಯಲಾಗಿದೆ. ಇಂಗ್ಲಿಷ್ ಅಲ್ಲಿ ಬರೆದ ಈ ಸಾಲಿನ ಕನ್ನಡದ ಅರ್ಥ ಹೀಗಿದೆ. ಸಾವಿರ ಸಮಸ್ಯೆಗೆ ಒಂದೇ ಪರಿಹಾರ, ಅದು ಅಜ್ಜ ಕೊರಗಜ್ಜ ಅಂತಲೇ ಬರೆಯಲಾಗಿದೆ.
ಹರಕೆ ತೀರಿಸಿದ ಡಿಂಪಲ್ ಕ್ವೀನ್ (ಚಿತ್ರ ಕೃಪೆ: ರೀಲ್ಸ್ ಕ್ರಿಯೇಟರ್ ಮೋಕ್ಷಿತ್ ಇನ್ಸ್ಟಾಗ್ರಾಮ್)
ರಚಿತಾ ರಾಮ್ ಅವರು ಸಿನಿಮಾರಂಗಕ್ಕೆ ಬಂದು 14 ವರ್ಷ ಆಗಿದೆ. ರಚಿತಾ ರಾಮ್ ಅಭಿನಯದ ಬುಲ್ ಬುಲ್ ಬಂದು 14 ಆಗಿದೆ. ಈ ಚಿತ್ರ ಮೇ-10, 2013 ರಂದು ರಿಲೀಸ್ ಆಗಿತ್ತು.
ದರ್ಶನ್ ಈ ಹಿಂದೆ ರಚಿತಾ ರಾಮ್ ಬಗ್ಗೆ ಒಂದು ಮಾತು ಹೇಳಿದ್ದರು. ಒಬ್ಬ ನಾಯಕಿ ನಟಿ 10 ವರ್ಷ ಸಿನಿಮಾರಂಗದಲ್ಲಿ ಬೇಡಿಕೆ ಅಲ್ಲಿರೋದು ತುಂಬಾನೆ ಅಪರೂಪವೇ ಆಗಿದೆ. ಆದರೆ, ರಚಿತಾ ರಾಮ್ ಆ ಒಂದು ಸಾಧನೆ ಮಾಡಿದ್ದಾರೆ ಅಂತಲೆ ಹೇಳಿದ್ದರು.
ಹಾಗೆ ರಚಿತಾ ರಾಮ್ ಈಗ 10 ವರ್ಷವನ್ನೂ ದಾಟಿ ಹೋಗಿದ್ದಾರೆ. ಇನ್ನೂ ಹೊಸ ಹೊಸ ಪ್ರಾಜೆಕ್ಟ್ಗಳನ್ನು ಮಾಡುತ್ತಿದ್ದಾರೆ. ಮೊದಲಿದ್ದ ಅದೇ ಬೇಡಿಕೆಯನ್ನೂ ಉಳಿಸಿಕೊಂಡಿದ್ದಾರೆ. ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅಭಿನಯದ ಅಯೋಗ್ಯ-2 ಚಿತ್ರ ಇನ್ನಷ್ಟೆ ಬರಬೇಕಿದೆ.ಈ ಚಿತ್ರದ ಬಗ್ಗೆನೂ ಒಂದು ನಿರೀಕ್ಷೆ ಇದ್ದೇ ಇದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka













