Priyanka Chopra: ಮಗಳು ಮಾಲ್ತಿಗೆ ‘ಸರ್ವ ಮಂಗಲ ಮಾಂಗಲ್ಯೇ’ ಶ್ಲೋಕ ಕಲಿಸಿದ ಪ್ರಿಯಾಂಕಾ ಚೋಪ್ರಾ; ವೈರಲ್ ವಿಡಿಯೋಗೆ ಫ್ಯಾನ್ಸ್ ಫಿದಾ! | | ACTPnews

ಪ್ರಿಯಾಂಕಾ


Last Updated:

ಮಗಳು ಮಾಲ್ತಿ ಮೇರಿಗೆ ‘ಸರ್ವ ಮಂಗಲ ಮಾಂಗಲ್ಯೇ’ ಶ್ಲೋಕವನ್ನು ಹೇಳಿಕೊಟ್ಟಿರುವ ಪ್ರಿಯಾಂಕಾ ಅವರ ಹಳೆಯ ವಿಡಿಯೋ ಈಗ ಮತ್ತೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಪ್ರಿಯಾಂಕಾ
ಪ್ರಿಯಾಂಕಾ

ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತಮ್ಮದೇ ಆದ ಗುರುತನ್ನು ಮೂಡಿಸಿರುವ ನಟಿ ಪ್ರಿಯಾಂಕಾ ಚೋಪ್ರಾ (Actress Priyanka Chopra) ಮತ್ತೊಮ್ಮೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಬಾರಿ ಅದು ಸಿನಿಮಾ ಅಥವಾ ಫ್ಯಾಷನ್‌ಗಾಗಿ ಅಲ್ಲ, ಬದಲಾಗಿ ಭಾರತೀಯ ಸಂಸ್ಕೃತಿಯನ್ನು ತಮ್ಮ ಪುತ್ರಿಗೆ ಪರಿಚಯಿಸುತ್ತಿರುವ ಕಾರಣಕ್ಕೆ. ಮಗಳು ಮಾಲ್ತಿ ಮೇರಿಗೆ ‘ಸರ್ವ ಮಂಗಲ ಮಾಂಗಲ್ಯೇ’ ಶ್ಲೋಕವನ್ನು ಹೇಳಿಕೊಟ್ಟಿರುವ ಪ್ರಿಯಾಂಕಾ ಅವರ ಹಳೆಯ ವಿಡಿಯೋ ಈಗ ಮತ್ತೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮಾಲ್ತಿಗೆ ಶ್ಲೋಕ ಹೇಳಿಕೊಟ್ಟ ಪ್ರಿಯಾಂಕಾ

ವೈರಲ್ ಆಗಿರುವ ವಿಡಿಯೋದಲ್ಲಿ ನಾಲ್ಕು ವರ್ಷದ ಮಾಲ್ತಿ ಮೇರಿ ತಾಯಿ ಪ್ರಿಯಾಂಕಾ ಚೋಪ್ರಾ ಅವರ ತೊಡೆಯ ಮೇಲೆ ಮಲಗಿರುವ ದೃಶ್ಯ ಕಾಣಿಸುತ್ತದೆ. ಈ ವೇಳೆ ಪ್ರಿಯಾಂಕಾ, ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ, ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೆ ಎಂಬ ಶ್ಲೋಕವನ್ನು ಮಗಳಿಗೆ ಹೇಳಿಕೊಡುತ್ತಾರೆ. ಮಾಲ್ತಿಯೂ ತಾಯಿಯೊಂದಿಗೆ ಶ್ಲೋಕವನ್ನು ಉಚ್ಚರಿಸಲು ಪ್ರಯತ್ನಿಸುವುದು ವಿಡಿಯೋದಲ್ಲಿನ ವಿಶೇಷ ಕ್ಷಣವಾಗಿದೆ.

ಅಮೆರಿಕದಲ್ಲಿ ವಾಸಿಸುತ್ತಿದ್ದರೂ ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಪುತ್ರಿಗೆ ಪರಿಚಯಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಅವರ ನಡೆಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲೇ ಇದ್ದು ಸಂಸ್ಕೃತಿಯನ್ನು ಮರೆಯುವವರು ಹಲವರಿದ್ದಾರೆ. ಆದರೆ ವಿದೇಶದಲ್ಲಿ ಇದ್ದರೂ ಮಗಳಿಗೆ ಭಾರತೀಯ ಪರಂಪರೆಯನ್ನು ಕಲಿಸುತ್ತಿರುವುದು ಶ್ಲಾಘನೀಯ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

2018ರಲ್ಲಿ ನಿಕ್ ಜೋನಸ್ ಜೊತೆ ವಿವಾಹ

ಪ್ರಿಯಾಂಕಾ ಚೋಪ್ರಾ ಅವರು 2018ರಲ್ಲಿ ಅಮೆರಿಕದ ಖ್ಯಾತ ಗಾಯಕ ನಿಕ್ ಜೋನಸ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಹಿಂದೂ ಸಂಪ್ರದಾಯವನ್ನು ಅನುಸರಿಸುವ ಪ್ರಿಯಾಂಕಾ ಮತ್ತು ಕ್ರಿಶ್ಚಿಯನ್ ಧರ್ಮದ ನಿಕ್ ಜೋನಸ್ ತಮ್ಮ ತಮ್ಮ ಧಾರ್ಮಿಕ ಸಂಪ್ರದಾಯಗಳಿಗೆ ಗೌರವ ನೀಡಿ ಎರಡು ಪದ್ಧತಿಗಳಲ್ಲೂ ವಿವಾಹವಾದರು. ಮೊದಲು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ನೆರವೇರಿಸಿದ ಅವರು, ಬಳಿಕ ಹಿಂದೂ ಸಂಪ್ರದಾಯದಂತೆ ಜಾತಕ, ಮುಹೂರ್ತ ಸೇರಿದಂತೆ ಎಲ್ಲಾ ವಿಧಿವಿಧಾನಗಳೊಂದಿಗೆ ಮದುವೆಯಾದರು. ಈ ವಿವಾಹವು ಆ ಸಮಯದಲ್ಲಿ ವಿಶ್ವದಾದ್ಯಂತ ಸಾಕಷ್ಟು ಸುದ್ದಿಯಾಗಿತ್ತು.

2022ರಲ್ಲಿ ಬಾಡಿಗೆ ತಾಯ್ತನದ ಮೂಲಕ ಪ್ರಿಯಾಂಕಾ ಮತ್ತು ನಿಕ್ ದಂಪತಿಗೆ ಹೆಣ್ಣು ಮಗು ಜನಿಸಿತು. ಆಕೆಗೆ ಮಾಲ್ತಿ ಮೇರಿ ಎಂದು ಹೆಸರು ಇಡಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಮಾಲ್ತಿಯೊಂದಿಗಿನ ಮುದ್ದಾದ ಕ್ಷಣಗಳನ್ನು ಈ ಜೋಡಿ ಆಗಾಗ ಹಂಚಿಕೊಳ್ಳುತ್ತಿದ್ದು, ಅವು ಅಭಿಮಾನಿಗಳ ಮನಗೆಲ್ಲುತ್ತಿವೆ.

ಇತ್ತೀಚೆಗೆ ಜೋನಾಸ್ ಬ್ರದರ್ಸ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಪ್ರಿಯಾಂಕಾ, ರಾಜಮೌಳಿ ಅವರಿಂದ ಕರೆ ಬಂದ ಕ್ಷಣವನ್ನು ನೆನಪಿಸಿಕೊಂಡಿದ್ದರು. ಈ ಚಿತ್ರ ಜಾಗತಿಕ ಮಟ್ಟದ ಮಹಾಕಾವ್ಯ ಸಾಹಸ ಕಥೆಯಾಗಿದೆ. ಅವರು ನನಗೆ ಈ ಅವಕಾಶದ ಬಗ್ಗೆ ಹೇಳಿದ ತಕ್ಷಣವೇ ನಾನು ತುಂಬಾ ಉತ್ಸುಕಳಾದೆ. ಈ ಯೋಜನೆಗೆ ಸಾಕಷ್ಟು ಸಮಯ ಬೇಕಾದರೂ ಅದರ ಭಾಗವಾಗಿರುವುದು ಸಂತಸದ ವಿಷಯ ಎಂದು ಹೇಳಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed