Priya Sudeep: ಸಾನ್ವಿ ಸುದೀಪ್​ಗೆ ಅಮ್ಮನ ಲವ್ಲಿ ವಿಶ್! ಕಿಚ್ಚನ ಮಗಳಿಗೆಷ್ಟು ವರ್ಷ? | | ACTPnews

ಮಗಳು ಸಾನ್ವಿ ಜನ್ಮ ದಿನದಂದು ಪ್ರಿಯಾ ಸುದೀಪ್ ಹೇಳಿದ್ದೇನು ಗೊತ್ತಾ?


Last Updated:

ಸುದೀಪ್ ಮಗಳು ಸಾನ್ವಿ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಾನ್ವಿ ಅಮ್ಮ ಪ್ರಿಯಾ ಸುದೀಪ್ ಒಂದು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಆ ಒಂದು ಮಾತು ಕೂಡ ಹೇಳಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.

ಮಗಳು ಸಾನ್ವಿ ಜನ್ಮ ದಿನದಂದು ಪ್ರಿಯಾ ಸುದೀಪ್ ಹೇಳಿದ್ದೇನು ಗೊತ್ತಾ?
ಮಗಳು ಸಾನ್ವಿ ಜನ್ಮ ದಿನದಂದು ಪ್ರಿಯಾ ಸುದೀಪ್ ಹೇಳಿದ್ದೇನು ಗೊತ್ತಾ?

ಕಿಚ್ಚ ಸುದೀಪ್ (Kichcha Sudeepa) ಪುತ್ರಿ ಸಾನ್ವಿ ಸುದೀಪ್ (Sanvi Sudeepa) (ಮೇ-20,2004) 22 ನೇ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ಒಂದು ವಿಶೇಷ ದಿನದಂದು ಮ್ಯಾಂಗೋ ಪಚ್ಚ ಚಿತ್ರ ತಂಡವು ವಿಶ್ ಮಾಡಿದೆ. ಚಿತ್ರಕ್ಕೆ ಹಾಡಿರೋ ಹಾಡಿನ ಒಂದು ಸಾಂಗ್ ರೆಕಾರ್ಡಿಂಗ್ ವಿಡಿಯೋವನ್ನು ಹಂಚಿಕೊಂಡಿದೆ. ಇದರ ನಡುವೆ ಸಾನ್ವಿ ಸುದೀಪ್ (Sanvi Sudeepa) ಅವರ ಅಮ್ಮ ಪ್ರಿಯಾ ಸುದೀಪ್ (Priya Sudeepa) ಕೂಡ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ತಮ್ಮ ಸುಪ್ರಿಯಾನ್ವಿ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿಯೇ ಇದನ್ನ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಏನೆಲ್ಲ ಇದೆ.? ಸಾನ್ವಿ ಬಗ್ಗೆ ಪ್ರಿಯಾ ಸುದೀಪ್ ಹೇಳಿದ್ದೇನು? ಅನ್ನುವ ಆ ಎಲ್ಲ ವಿವರ ಇಲ್ಲಿದೆ ಓದಿ.

ಪ್ರಿಯಾ ಸುದೀಪ್….

ಪ್ರಿಯಾ ಸುದೀಪ್ ಮಗಳಿಗೆ ಜನ್ಮ ದಿನದ ಶುಭಾಶಯ ತಿಳಿಸಿದ್ದಾರೆ. ಮಗಳ ಜೊತೆಗಿನ ವಿಶೇಷ ಕ್ಷಣದ ಫೋಟೋಗಳಿರೋ ಒಂದು ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.

kichcha sudeepa wife priya sudeepa share special video on daughter sanvi sudeepa birthday

ಸಾನ್ವಿ ಸುದೀಪ್

(ಚಿತ್ರ ಕೃಪೆ: ಸುಪ್ರಿಯಾನ್ವಿ ಇನ್‌ಸ್ಟಾಗ್ರಾಮ್)

ಇದರ ಜೊತೆಗೆ ಒಂದು ಲೈನ್ ಕೂಡ ಬರೆದಿದ್ದಾರೆ. ಇಂಗ್ಲಿಷ್ ಅಲ್ಲಿ ಆ ಸಾಲಿದೆ. ಅದು ಈ ರೀತಿ ಇದೆ. “Every year, you shine brighter” ಅಂತಲೇ ಪ್ರಿಯಾ ಸುದೀಪ್ ಬರೆದಿದ್ದಾರೆ. ಇದರ ಅರ್ಥ ಏನು ಅಂದ್ರೆ, ಪ್ರತಿ ವರ್ಷ ನೀನು ಇನ್ನಷ್ಟು ಸಾಧನೆ ಮಾಡ್ತಾ ಇರು ಅನ್ನೋದೇ ಆಗಿದೆ.

ವಿಡಿಯೋದಲ್ಲಿ ಏನಿದೆ

ಪ್ರಿಯಾ ಸುದೀಪ್ ವಿಡಿಯೋದಲ್ಲಿ ಇನ್ನು ಏನೆಲ್ಲ ಇದೆ ಗೊತ್ತಾ? ಹೌದು, ಈ ಒಂದು ವಿಡಿಯೋದ ಹಿನ್ನೆಲೆಯಲ್ಲಿ ಬಳಕೆ ಮಾಡಿರೋ ಹಾಡು ಬೇರೆ ಯಾರದ್ದೂ ಅಲ್ಲ. ಅದು ಸಾನ್ವಿ ಸುದೀಪ್ ಅವರು ಹಾಡಿರೋ ಇಂಗ್ಲಿಷ್ ಹಾಡೇ ಆಗಿದೆ.

ಈ ಒಂದು ವಿಡಿಯೋದಲ್ಲಿ ಸಾನ್ವಿ ಸುದೀಪ್ ಅವರ ಹಲವು ವಿಶೇಷ ಫೋಟೋಗಳಿವೆ. ಸುದೀಪ್, ಸಾನ್ವಿ ಸುದೀಪ್, ಪ್ರಿಯಾ ಸುದೀಪ್ ಇರೋ ಫೋಟೊಗಳನ್ನು ಇದರಲ್ಲಿ ಬಳಕೆ ಮಾಡಲಾಗಿದೆ. ಹಾಗಾಗಿಯೇ ಈ ವಿಡಿಯೋ ಇನ್ನಷ್ಟು ವಿಶೇಷವಾಗಿಯೇ ಕಾಣಿಸುತ್ತಿದೆ.
ಮ್ಯಾಂಗೋ ಪಚ್ಚ

ಮ್ಯಾಂಗೋ ಪಚ್ಚ ಚಿತ್ರ ತಂಡವು ಸಾನ್ವಿ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಸಾನ್ವಿ ಸುದೀಪ್ ಈ ಚಿತ್ರಕ್ಕೂ ಹಾಡಿದ್ದಾರೆ. ಜನ್ಮ ದಿನದ ಪ್ರಯುಕ್ತ ಈ ಹಾಡಿನ ರೆಕಾರ್ಡಿಂಗ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

kichcha sudeepa wife priya sudeepa share special video on daughter sanvi sudeepa birthday

ವಿಡಿಯೋದಲ್ಲಿ ಏನಿದೆ

(ಚಿತ್ರ ಕೃಪೆ: ಸುಪ್ರಿಯಾನ್ವಿ ಇನ್‌ಸ್ಟಾಗ್ರಾಮ್)

ಮ್ಯಾಂಗೋ ಪಚ್ಚ ಚಿತ್ರವನ್ನ ಸುದೀಪ್ ಅವರೇ ನಿರ್ಮಿಸುತ್ತಿದ್ದಾರೆ. ತಮ್ಮ ಸುಪ್ರಿಯಾನ್ವಿ ಸಂಸ್ಥೆ ಮೂಲಕವೇ ಇದನ್ನ ತೆರೆಗೆ ತರ್ತಿದ್ದಾರೆ. ಕೆಆರ್‌ಜಿ ಸಂಸ್ಥೆ ಕೂಡ ಈ ಚಿತ್ರ ನಿರ್ಮಾಣಕ್ಕೆ ಸಾಥ್ ಕೊಟ್ಟಿದೆ. ಜೂನ್-5 ರಂದು ಇದು ರಿಲೀಸ್ ಕೂಡ ಆಗುತ್ತಿದೆ.

ಸಾನ್ವಿ ಸುದೀಪ್

ಸಾನ್ವಿ ಸುದೀಪ್ ತಮ್ಮ ಗಾಯನದ ಮೂಲಕ ಎಲ್ಲರ ಹೃದಯ ಗೆದಿದ್ದಾರೆ. ಮಾರ್ಕ್ ಚಿತ್ರದ ಮಸ್ತ್ ಮಲೈಕಾ ಹಾಡು ಇವರಿಗೆ ಒಳ್ಳೆ ಹೆಸರು ತಂದುಕೊಟ್ಟಿದೆ. ನಕಾಶ್ ಅಜೀಜ್ ಈ ಹಾಡಿಗೆ ಸಾಥ್ ಕೊಟ್ಟಿದ್ದರು. ಅನೂಪ್ ಭಂಡಾರಿ ಇದನ್ನ ಬರೆದಿದ್ದಾರೆ.

ಈ ಒಂದು ಹಾಡು ಸಾನ್ವಿ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿದೆ. ಚಂದನವನ ಕ್ರಿಟಿಕ್ಸ್ ಅವಾರ್ಡ್ ಕೂಡ ಬಂದಿದೆ. ಮೇ-16 ರಂದು ಬೆಂಗಳೂರಿನ ಭಾರತೀಯ ಮಾಲ್ ಅಲ್ಲಿ ಅಜನೀಶ್ ಲೋಕನಾಥ್ ಲೈವ್ ಇನ್ ಕಾನ್ಸರ್ಟ್ ನಡೆದಿದೆ. ಇಲ್ಲಿ ಸಾನ್ವಿ ಸುದೀಪ್ ಹಾಡು ಕೂಡ ಹಾಡಿದ್ದಾರೆ. ಈ ಮೂಲಕ ಎಲ್ಲರನ್ನೂ ರಂಜಿಸಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports