Preity Zinta: ಪ್ರೀತಿ ಜಿಂಟಾ ಜೊತೆ ಡೇಟಿಂಗ್ ಮಾಡಿದ್ದು ನಿಜವೇ? 15 ವರ್ಷಗಳ ಬಳಿಕ ಮೌನ ಮುರಿದ ಆಸ್ಟ್ರೇಲಿಯಾ ಲೆಜೆಂಡರಿ ಕ್ರಿಕೆಟರ್ | | ACTPnews

ಪ್ರೀತಿ ಜಿಂಟಾ


Last Updated:

ಬಾಲಿವುಡ್ ಮತ್ತು ಕ್ರಿಕೆಟ್ ಜಗತ್ತಿನಲ್ಲಿ ಹಲವು ವರ್ಷಗಳ ಹಿಂದೆ ಭಾರೀ ಸದ್ದು ಮಾಡಿದ್ದ ಒಂದು ವದಂತಿಗೆ ಇದೀಗ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ತೆರೆ ಎಳೆದಿದ್ದಾರೆ.

ಪ್ರೀತಿ ಜಿಂಟಾ
ಪ್ರೀತಿ ಜಿಂಟಾ

ಬಾಲಿವುಡ್ ಮತ್ತು ಕ್ರಿಕೆಟ್ ಜಗತ್ತಿನಲ್ಲಿ ಹಲವು ವರ್ಷಗಳ ಹಿಂದೆ ಭಾರೀ ಸದ್ದು ಮಾಡಿದ್ದ ಒಂದು ವದಂತಿಗೆ ಇದೀಗ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ತೆರೆ ಎಳೆದಿದ್ದಾರೆ. ಬಾಲಿವುಡ್ ನಟಿ ಪ್ರೀತಿ ಜಿಂಟಾ (Preity Zinta) ಅವರೊಂದಿಗೆ ಹರಿದಾಡಿದ್ದ ಡೇಟಿಂಗ್ ವದಂತಿ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಪ್ರತಿಕ್ರಿಯಿಸಿರುವ ಬ್ರೆಟ್ ಲೀ, ಆ ಎಲ್ಲ ಸುದ್ದಿಗಳು ಕೇವಲ ವದಂತಿಗಳಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ತಾವು ಯಾವುದೇ ಬಾಲಿವುಡ್ ನಟಿಯೊಂದಿಗೆ ಡೇಟಿಂಗ್ ಮಾಡಿಲ್ಲ ಎಂದು ಹೇಳುವ ಮೂಲಕ ಹಲವು ವರ್ಷಗಳ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಬ್ರೆಟ್ ಲೀ, ಪ್ರೀತಿ ಜಿಂಟಾ ಅವರೊಂದಿಗಿನ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪ್ರೀತಿ ಜಿಂಟಾ ಮತ್ತು ನಾನು ಯಾವಾಗಲೂ ಉತ್ತಮ ಸ್ನೇಹಿತರು. ಅವರು ಪಂಜಾಬ್ ಕಿಂಗ್ಸ್ ತಂಡದ ಒಡತಿಯಾಗಿದ್ದರು. ಅವರು ಅತ್ಯಂತ ಬುದ್ಧಿವಂತ ಮಹಿಳೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನಮ್ಮ ಬಗ್ಗೆ ಹರಿದಾಡಿದ ವದಂತಿಗಳಿಂದ ನಮಗೆ ಯಾವುದೇ ಎಫೆಕ್ಟ್ ಆಗಲಿಲ್ಲ. ಏಕೆಂದರೆ ನಿಜ ಏನೆಂಬುದು ನನಗೂ ಅವರಿಗೂ ಗೊತ್ತಿತ್ತು ಎಂದು ಬ್ರೆಟ್ ಲೀ ಹೇಳಿದ್ದಾರೆ.

ಐಪಿಎಲ್ ಆರಂಭಿಕ ವರ್ಷಗಳಲ್ಲಿ ಬ್ರೆಟ್ ಲೀ, ಆಗಿನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿದ್ದರು. ಅದೇ ವೇಳೆ ತಂಡದ ಸಹ-ಒಡತಿಯಾಗಿದ್ದ ಪ್ರೀತಿ ಜಿಂಟಾ ಮತ್ತು ಬ್ರೆಟ್ ಲೀ ನಡುವೆ ಆತ್ಮೀಯತೆ ಇದೆ ಎಂಬ ಸುದ್ದಿಗಳು ವ್ಯಾಪಕವಾಗಿ ಹರಡಿದ್ದವು.

ಬ್ರೆಟ್ ಲೀ ಅವರು 2006ರಲ್ಲಿ ಎಲಿಜಬೆತ್ ಕೆಂಪ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಒಬ್ಬ ಮಗನಿದ್ದಾನೆ. ಆದರೆ 2009ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ನಂತರ 2014ರಲ್ಲಿ ಲಾನಾ ಆಂಡರ್ಸನ್ ಅವರನ್ನು ಬ್ರೆಟ್ ಲೀ ಎರಡನೇ ಮದುವೆಯಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಅವರು ಕುಟುಂಬದೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ.

ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾದ ಪ್ರೀತಿ

ಕೆಲ ವರ್ಷಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದ ಪ್ರೀತಿ ಜಿಂಟಾ ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಬಟ್ವಾರಾ 1947 ಸಿನಿಮಾದಲ್ಲಿ ಸನ್ನಿ ಡಿಯೋಲ್ ಹಾಗೂ ಶಬಾನಾ ಅಜ್ಮಿ ಅವರೊಂದಿಗೆ ಅವರು ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ಕುನಾಲ್ ಖೇಮು ನಿರ್ದೇಶನದ ವೈಬ್ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಒಟ್ಟಾರೆಯಾಗಿ ಹಲವು ವರ್ಷಗಳಿಂದ ಅಭಿಮಾನಿಗಳಲ್ಲಿ ಚರ್ಚೆಯಾಗುತ್ತಿದ್ದ ಪ್ರೀತಿ ಜಿಂಟಾ ಮತ್ತು ಬ್ರೆಟ್ ಲೀ ನಡುವಿನ ಸಂಬಂಧದ ಕುರಿತು ಇದೀಗ ಬ್ರೆಟ್ ಲೀ ನೀಡಿರುವ ಸ್ಪಷ್ಟನೆ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದೆ. ತಮ್ಮ ನಡುವೆ ಕೇವಲ ಸ್ನೇಹ ಮಾತ್ರ ಇತ್ತು, ಪ್ರೇಮ ಸಂಬಂಧದ ಯಾವುದೇ ಪ್ರಶ್ನೆಯೇ ಇರಲಿಲ್ಲ ಎಂದು ಅವರು ಹೇಳಿರುವುದು, ಹಲವು ವರ್ಷಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ಕೊನೆ ಹಾಡಿದಂತಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed