Porsche Car: ಪೋರ್ಷೆ ಕಾರು ಗುದ್ದಿದ ಸರ್ವೀಸ್ ಸೆಂಟರ್ ಸಿಬ್ಬಂದಿ! ರಿಪೇರಿ ಮಾಡ್ಸೋಕೆ ಜೀವನ ಪೂರ್ತಿ ದುಡಿದ್ರೂ ಸಾಲಲ್ಲ | Bengaluru service center staff rams Porsche | ಟ್ರೆಂಡಿಂಗ್ ಸುದ್ದಿ | ACTPnews


Last Updated:

Porsche Car: ಸರ್ವೀಸ್ ಸೆಂಟರ್​ನ ಸ್ಟಾಫ್ ಒಬ್ಬರು ಪೋರ್ಷೆ ಕಾರು ಡ್ರೈವ್ ಮಾಡಿ ಏನು ಮಾಡಿದ್ದಾರೆ ಗೊತ್ತಾ? ಕೋಟಿಗಟ್ಟಲೆ ಬೆಲೆ ಬಾಳುವ ಕಾರನ್ನು ಓಡಿಸಿ ಗುದ್ದಿದ ನಂತರ ಆಗಿದ್ದೇನು?

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಕಾರುಗಳು, ಬೈಕ್​​ಗಳು (Car & Bike) ಎಲ್ಲವೂ ಕೂಡಾ ರಿಪೇರಿ ವಿಚಾರಕ್ಕೆ ಬಂದರೆ ದುಬಾರಿಯಾಗುತ್ತದೆ. ಕಾರು ಓಡಿಸೋರು ತಮ್ಮ ಗಾಡಿ ಡ್ಯಾಮೇಜ್ ಆಗದ ಹಾಗೆ ತುಂಬಾ ಹುಷಾರಾಗಿ ನೋಡ್ತಾರೆ. ತುಂಬಾ ಸಲ ಏನೋ ಸಣ್ಣದಾಗಿ ಗಾಡಿ ಸ್ಕ್ರಾಚ್ ಆದರೂ ಕೂಡಾ ಅಯ್ಯೋ ಅಂತಾರೆ. ಕಾರಣ ಮಧ್ಯಮ ವರ್ಗದ ಕುಟುಂಬಕ್ಕೆ ಒಂದು ಕಾರು ಖರೀದಿಸೋದೆಷ್ಟು ಕಷ್ಟವೋ ಅದನ್ನು ಮೆಂಟೇನ್ ಮಾಡೋದು ಕೂಡಾ ಕಷ್ಟಾನೆ.

ಒಂಚೂರು ಹೆಚ್ಚು ಕಡಿಮೆ ಆದರೆ ಸಂಬಳದಲ್ಲಿಷ್ಟು ಅಂತ ಎತ್ತಿಡೋಕೆ ರೆಡಿಯಾಗಬೇಕು. ಇನ್ನು ದುಬಾರಿ ಕಾರುಗಳ ಕಥೆ ಒಮ್ಮೆ ಊಹಿಸಿ. 2, 3, 4 ಕೋಟಿಗಳ ಕಾರುಗಳನ್ನು ರಪೇರಿ ಮಾಡೋದು ಅಂದ್ರೆ ಹೈ ಸ್ಪೆಷಾಲಿಟಿ ಆಸ್ಪತ್ರೆಗೆ ಹೋದ ಹಾಗೆ. ಸಿಕ್ಕಾಪಟ್ಟೆ ಪೇ ಮಾಡಲೇಬೇಕು. ಈಗ ಬೆಂಗಳೂರಿನ ಯುವಕನೊಬ್ಬ ಎಂಥಾ ಸ್ಥಿತಿಯಲ್ಲಿ ಸಿಕ್ಕಾಕೊಂಡಿದ್ದಾನೆ ಗೊತ್ತಾ?

ಸರ್ವೀಸ್ ಸೆಂಟರ್​ನ ಕೆಲಸಗಾರನೊಬ್ಬ ಪೋರ್ಷೆ ಕಾರನ್ನು ಟೆಸ್ಟ್​ ಡ್ರೈವ್ ಮಾಡೋಕೆ ಅಂತ ಡ್ರೈವ್ ಮಾಡಿ ಕ್ಯಾಬ್​ಗೆ ಡಿಕ್ಕಿ ಹೊಡೆದಿದ್ದಾನೆ. 3ರಿಂದ 4 ಕೋಟಿಯ ಕಾರು ಡಿಕ್ಕಿ ಹೊಡೆದರೆ ಸರ್ವೀಸ್ ಚಾರ್ಜ್ ಯಾವ ರೇಂಜ್​​ನಲ್ಲಿರಬಹುದು ಎಂದು ಊಹಿಸಬಹದು. ತಿಂಗಳಿಗೆ ಸಾವಿಗಳಲ್ಲಿ ಸಂಬಳ ಪಡೆಯೋ ಸರ್ವೀಸ್ ಸೆಂಟರ್ ಯುವಕ ಇದನ್ನು ಪಾವತಿಸೋಕೆ ಸಾಧ್ಯಾನಾ? ಅಷ್ಟಕ್ಕೂ ಆಗಿದ್ದೇನು? ಇಲ್ಲಿ ಓದಿ.

ಇತ್ತೀಚೆಗೆ ಜು. 23ರಂದು ಬೆಳಿಗ್ಗೆ ಸುಮಾರು 10.50ಕ್ಕೆ ಕೆ.ಆರ್. ಪುರದ ಕತಮನಲ್ಲೂರು ಸೇತುವೆ ಬಳಿ ಸರ್ವಿಸ್ ಸೆಂಟರ್ ಒಂದರ ಸಿಬ್ಬಂದಿಯೊಬ್ಬರು ಕಸ್ಟಮರ್​​ನ ಪೋರ್ಷೆ ಕಾರನ್ನು ‘ಟೆಸ್ಟ್ ಡ್ರೈವ್’ಗೆ ತೆಗೆದುಕೊಂಡು ಹೋಗಿದ್ದಾರೆ.

ಟೆಸ್ಟ್ ಡ್ರೈವ್​​ಗೆ ಬಂದು ಎದುರಿನಿಂದ ಬರುತ್ತಿದ್ದ ಕ್ಯಾಬ್‌ಗೆ ಡಿಕ್ಕಿ ಹೊಡೆದಿದ್ದಾರೆ. ಈ ಅಪಘಾತದಲ್ಲಿ ವಾಹನದಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಎರಡೂ ವಾಹನಗಳ ಮುಂಭಾಗದ ಭಾಗಗಳು ಹಾನಿಗೊಂಡಿವೆ. ನಾರ್ಮಲ್ ಕಾರು ಅಂದರೆ ಕೆಲವು ಸಾವಿರಗಳಲ್ಲಿ ಸರ್ವೀಸ್ ಮುಗಿಯಬಹುದೇನೋ.. ಆದರೆ ಪೋರ್ಷೆ ಕಾರಿನ ಕಥೆ ಏನು?

ಕ್ಯಾಬ್ ಚಾಲಕ ಟಿ. ಸಿದ್ದಗೌಡ ಅವರು ದೂರು ನೀಡಿದ್ದು, ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣನಾದ ಎಂದು ಪೋರ್ಷೆ ಚಾಲಕನ ಮೇಲೆ ಆರೋಪಿಸಿದ್ದಾರೆ. ಸಿದ್ದಗೌಡರ ದೂರಿನ ಪ್ರಕಾರ, ಡಾರ್ಕ್ ಮೆಟಾಲಿಕ್ ಗ್ರೇ ಬಣ್ಣದ ಪೋರ್ಷೆ ಕಾರನ್ನು ಸೇವಾ ಕೇಂದ್ರದ ಸಿಬ್ಬಂದಿ ಪ್ರಸನ್ನ ಚಲಾಯಿಸುತ್ತಿದ್ದರು.

ಕಂಟ್ರೋಲ್ ಕಳ್ಕೊಂಡ್ರಾ? ಪೋರ್ಷೆ ಓಡಿಸೋಕ್ಕೆ ಬರಲ್ವಾ?

ತನಿಖಾಧಿಕಾರಿಗಳ ಪ್ರಕಾರ, ಟೆಸ್ಟ್ ಡ್ರೈವ್ ವೇಳೆ ಪ್ರಸನ್ನ ಪೋರ್ಷೆ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡಿರಬಹುದು ಅಥವಾ ಹೈ-ಪರ್ಫಾರ್ಮೆನ್ಸ್ ಕಾರು ಚಲಾಯಿಸುವಲ್ಲಿ ಸಾಕಷ್ಟು ಅನುಭವ ಇರದೆಯೇ ಈ ರೀತಿ ಸಂಭವಿಸುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಕಾರಣ ಏನೇ ಇರಲಿ. ಆದರೆ ಇಷ್ಟೊಂದು ದುಬಾರಿ ಕಾರನ್ನು ಗುದ್ದಿದ ನಂತರ ಸಮಸ್ಯೆಯಾಗೋದಂತೂ ಗ್ಯಾರೆಂಟಿ. ಸರ್ವೀಸ್ ಮಾಡಿಸಬೇಕು ಅಂದ್ರೆ ಜೀವನಪೂರ್ತಿ ದುಡಿದರೂ ಸಾಲಲ್ವೇನೋ ಅಲ್ವಾ..



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports