Pavithra Gowda: ಸಂಕಷ್ಟಕ್ಕೆ ಸಿಲುಕಿದ್ದ ಪವಿತ್ರಾ ಗೌಡಗೆ ಬಿಗ್ ರಿಲೀಫ್​! ಸೆಷನ್ಸ್ ಕೋರ್ಟ್ ಆದೇಶ ಪಾಲಿಸಿದ ಜೈಲು ಅಧಿಕಾರಿಗಳು! | | ACTPnews

News18


Last Updated:

ಪರಪ್ಪನ ಅಗ್ರಹಾರದಲ್ಲಿ 30 ಮಂದಿ ಕೈದಿಗಳ ನಡುವೆ ಸಂಕಷ್ಟಕ್ಕೆ ಸಿಲುಕಿದ್ದ ಪವಿತ್ರಾ ಗೌಡಗೆ ಇದೀಗ ಆ ಬ್ಯಾರಕ್​ನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ.

News18
News18

ಬೆಂಗಳೂರು (ಸೆ.21): ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಇದೀಗ ಬಿಗ್​ ರಿಲೀಫ್ ಸಿಕ್ಕಿದೆ. ಪರಪ್ಪನ ಅಗ್ರಹಾರದಲ್ಲಿ 30 ಮಂದಿ ಕೈದಿಗಳ ನಡುವೆ ಸಂಕಷ್ಟಕ್ಕೆ ಸಿಲುಕಿದ್ದ ಪವಿತ್ರಾ ಗೌಡಗೆ ಇದೀಗ ಆ ಬ್ಯಾರಕ್​ನಿಂದ ಬಿಡುಗಡೆ ಭಾಗ್ಯ ಲಭಿಸಿದೆ. ಇದೀಗ ಆರೋಪಿಯನ್ನ ಜೈಲು ಅಧಿಕಾರಿಗಳು ಮತ್ತೊಂದು ಬ್ಯಾರಕ್​​ಗೆ ಶಿಫ್ಟ್ ಮಾಡಿದ್ದು, ಪವಿತ್ರಾ ಗೌಡ ಫುಲ್​ ಖುಷ್ ಆಗಿದ್ದಾರೆ.

30 ಮಂದಿ ಜೊತೆ ಪವಿತ್ರಾ ಪರದಾಟ

ಪ್ರಜ್ವಲ್ ರೇವಣ್ಣ ಬಳಿ ಫೋನ್​ ಪತ್ತೆಯಾದ ಬಳಿಕ ಪರಪ್ಪನ ಅಗ್ರಹಾರದಲ್ಲಿ ಜೈಲಿನಲ್ಲಿ ದರ್ಶನ್​, ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳು ಹಾಗೂ ಕೈದಿ ಬ್ಯಾರಕ್​​ಗಳನ್ನ ಬದಲಿಸಲಾಯ್ತು. ಈ ವೇಳೆ ಪವಿತ್ರಾ ಗೌಡ ಅವರನ್ನ 30 ಮಂದಿ ಇರುವ ಸೆಲ್​​ಗೆ ಶಿಫ್ಟ್ ಮಾಡಿದ್ರು. ಅಲ್ಲೇ ಪವಿತ್ರಾ ಗೌಡಗೆ ನಿಜ  ನರಕದ ದರ್ಶನವಾಗಿದೆ. ಬೇಸತ್ತ ಪವಿತ್ರಾ ಬೇರೆ ಸೆಲ್​​ಗೆ ಶಿಫ್ಟ್ ಮಾಡುವಂತೆ ಕೋರ್ಟ್​ ಮೊರೆ ಹೋಗಿದ್ರು.

ಇದೀಗ ಬೇರೆ ಬ್ಯಾರಕ್​ಗೆ ಪವಿತ್ರಾ ಶಿಫ್ಟ್​

ಪವಿತ್ರಾ ಗೌಡ ಅವರನ್ನ ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡಲು ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿತ್ತು. ಕೋರ್ಟ್ ಸೂಚನೆಯಂತೆ ನಾಲ್ಕೈದು ಮಂದಿ ಕೈದಿಗಳಿರುವ ಬ್ಯಾರಕ್​​ಗೆ ಪವಿತ್ರಾ ಗೌಡ ಅವರನ್ನ ಶಿಫ್ಟ್ ಮಾಡಲಾಗಿದೆ. ಕೋರ್ಟ್ ಆದೇಶದಂತೆ ಕಡಿಮೆ ಜನಸಾಂದ್ರತೆ ಇರುವ ಬ್ಯಾರಕ್​ಗೆ ಇದೀಗ ಪವಿತ್ರಾ ಗೌಡ ಅವರನ್ನ ಶಿಫ್ಟ್ ಮಾಡಲಾಗಿದ್ದು, ದರ್ಶನ್ ಗೆಳತಿಗೆ ಇದು ಕೊಂಚ ಸಮಾಧಾನ ತಂದಿದೆ.

ಅನಾರೋಗ್ಯಕ್ಕೀಡಾಗಿದ್ದ ಪವಿತ್ರಾ ಗೌಡ

ಈ ಹಿಂದೆ 30 ಮಂದಿ ಕೈದಿಗಳಿದ್ದ ಬ್ಯಾರಕ್ ನಲ್ಲಿ ಪವಿತ್ರಾ ಗೌಡ ಅವರನ್ನ ಇರಿಸಲಾಗಿತ್ತು. ವಯಸ್ಸಾದ ಹಿರಿಯರು, ನೈಜೀರಿಯಾ ಮೂಲದ ಆರೋಪಿಗಳಿದ್ದ ಬ್ಯಾರಕ್ ನಲ್ಲಿದ್ದ ಪವಿತ್ರಾ ಗೌಡಗೆ ಸೋಂಕಿನ ಭೀತಿ ಹೆಚ್ಚಾಗಿತ್ತು. ಇದ್ರಿಂದ ಆರೋಪಿ ಪವಿತ್ರಾ ಗೌಡ ಅನಾರೋಗ್ಯಕ್ಕೀಡಾಗಿ, ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರಂತೆ. ಬಳಿಕ ಬ್ಯಾರಕ್ ಬದಲಾಯಿಸಲು ಕೋರ್ಟ್ ಮೊರೆ ಹೋಗಿದ್ದರು, ಬೇರೆ ಬ್ಯಾರಕ್​ಗೆ ಬದಲಿಸಲು ಸೆಷನ್ಸ್ ಕೋರ್ಟ್ ಆದೇಶಿಸಿತು. ಇದೀಗ ಜೈಲಾಧಿಕಾರಿಗಳು ಕೋರ್ಟ್ ಆದೇಶ ಪಾಲಿಸಿದ್ದಾರೆ.

(ವರದಿ: ಮುನಿರಾಜು, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed