Norovirus: ಬಂದೇ ಬಿಡ್ತು ಮತ್ತೊಂದು ಹೊಸ ಮಹಾಮಾರಿ! ವಾಂತಿ ಮಾಡುತ್ತಲೇ ಅಪಾಯ ಸೃಷ್ಟಿಸೋ ಈ ವೈರಸ್‌ಗೆ ಲಸಿಕೆಯೇ ಇಲ್ಲ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ!


Last Updated:

India Virus Concern: ನೊರೋವೈರಸ್ ಅನ್ನು ಸಾಮಾನ್ಯವಾಗಿ “ವಿಂಟರ್ ವಾಂಟಿಂಗ್ ಬಗ್” ಎಂದೂ ಕರೆಯಲಾಗುತ್ತದೆ. ಇದು ಅತೀ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೈರಸ್ ಆಗಿದ್ದು, ಸೋಂಕಿತ ಆಹಾರ, ನೀರು ಅಥವಾ ಕಲುಷಿತ ಮೇಲ್ಮೈಗಳ ಸಂಪರ್ಕದಿಂದ ಹರಡುತ್ತದೆ. ಕೆಲವೊಮ್ಮೆ ಸೋಂಕಿತ ವ್ಯಕ್ತಿಯ ಸಂಪರ್ಕದಿಂದಲೂ ಇರುವುದರಿಂದಲೂ ವೈರಸ್ ತಗುಲುವ ಸಾಧ್ಯತೆ ಇರುತ್ತದೆ. ಅಮೆರಿಕದ ವಿವಿಧ ರಾಜ್ಯಗಳಲ್ಲಿ ಮಲಿನಜಲ ಪರಿಶೀಲನೆ ವೇಳೆ ವೈರಸ್ ಪ್ರಮಾಣ ಹೆಚ್ಚಿರುವುದು ಪತ್ತೆಯಾಗಿದೆ.  ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಸಾಂಕೇತಿಕ ಚಿತ್ರ!
ಸಾಂಕೇತಿಕ ಚಿತ್ರ!

ಅಮೆರಿಕದಲ್ಲಿ (America) ಮತ್ತೆ ಆತಂಕ ಸೃಷ್ಟಿಸಿರುವ ‘ವಾಂಟಿಂಗ್ ವೈರಸ್’ (Wanting Virus) ಎಂದೇ ಕರೆಯಲಾಗುತ್ತಿರುವ ನೊರೋವೈರಸ್ (Norovirus) ವೇಗವಾಗಿ ಹರಡುತ್ತಿದ್ದು, ಆರೋಗ್ಯ ಇಲಾಖೆ (Health Department) ಎಚ್ಚರಿಕೆ ನೀಡಿದೆ. ಈ ವೈರಸ್ (Virus) ಕಾರಣದಿಂದ ಸಾವಿರಾರು ಮಂದಿ ವಾಂತಿ, ಹೊಟ್ಟೆ ನೋವಿನಿಂದ ಬಳಲುತ್ತಿರುವ ಪ್ರಕರಣಗಳು ವರದಿಯಾಗಿವೆ (Report). ವಿಶೇಷವಾಗಿ ಕ್ಯಾಲಿಫೋರ್ನಿಯಾ, ಸ್ಯಾನ್ ಫ್ರಾನ್ಸಿಸ್ಕೊ ಬೇ ಏರಿಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.

ರೋಗ ಹೇಗೆ ಹರಡುತ್ತೆ?

ನೊರೋವೈರಸ್ ಅನ್ನು ಸಾಮಾನ್ಯವಾಗಿ “ವಿಂಟರ್ ವಾಂಟಿಂಗ್ ಬಗ್” ಎಂದೂ ಕರೆಯಲಾಗುತ್ತದೆ. ಇದು ಅತೀ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೈರಸ್ ಆಗಿದ್ದು, ಸೋಂಕಿತ ಆಹಾರ, ನೀರು ಅಥವಾ ಕಲುಷಿತ ಮೇಲ್ಮೈಗಳ ಸಂಪರ್ಕದಿಂದ ಹರಡುತ್ತದೆ. ಕೆಲವೊಮ್ಮೆ ಸೋಂಕಿತ ವ್ಯಕ್ತಿಯ ಸಂಪರ್ಕದಿಂದಲೂ ಇರುವುದರಿಂದಲೂ ವೈರಸ್ ತಗುಲುವ ಸಾಧ್ಯತೆ ಇರುತ್ತದೆ. ಅಮೆರಿಕದ ವಿವಿಧ ರಾಜ್ಯಗಳಲ್ಲಿ ಮಲಿನಜಲ ಪರಿಶೀಲನೆ ವೇಳೆ ವೈರಸ್ ಪ್ರಮಾಣ ಹೆಚ್ಚಿರುವುದು ಪತ್ತೆಯಾಗಿದೆ.

ವೈದ್ಯರು ಹೇಳುವುದೇನು?

ವೈದ್ಯರ ಪ್ರಕಾರ, ನೊರೋವೈರಸ್ ಸೋಂಕು ತಗುಲಿದ 12ರಿಂದ 48 ಗಂಟೆಗಳೊಳಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ ತೀವ್ರ ವಾಂತಿ, ಜಲದೋಷ, ಹೊಟ್ಟೆ ನೋವು, ದೌರ್ಬಲ್ಯ, ತಲೆನೋವು ಹಾಗೂ ಕೆಲವರಲ್ಲಿ ಜ್ವರ ಕಾಣಿಸಬಹುದು. ಸಾಮಾನ್ಯವಾಗಿ 1ರಿಂದ 3 ದಿನಗಳಲ್ಲಿ ರೋಗ ಕಡಿಮೆಯಾಗುತ್ತದೆ. ಆದರೆ ವೃದ್ಧರು, ಚಿಕ್ಕ ಮಕ್ಕಳು ಮತ್ತು ಈಗಾಗಲೇ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಇದು ಅಪಾಯಕಾರಿಯಾಗಬಹುದು. ದೇಹದಲ್ಲಿ ನೀರಿನ ಕೊರತೆ ಉಂಟಾಗಿ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿಯೂ ಬರಬಹುದು ಎಂದು ತಜ್ಞರು ಹೇಳಿದ್ದಾರೆ.

ಟ್ರೆಕ್ಕಿಂಗ್​ ತೆರಳಿದ ಹಲವರು ವೈರಸ್​ಗೆ ಬಲಿ!

ಇತ್ತೀಚೆಗೆ ಅಮೆರಿಕದ ಪೆಸಿಫಿಕ್ ಕ್ರೆಸ್ಟ್ ಟ್ರೇಲ್‌ನಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಹಲವರು ಈ ವೈರಸ್‌ಗೆ ತುತ್ತಾಗಿದ್ದರು. ಕೆಲವರನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಸುಮಾರು ಎರಡು ಡಜನ್‌ ಮಂದಿಯಲ್ಲಿ ವೈರಸ್ ಲಕ್ಷಣಗಳು ಕಂಡುಬಂದಿದ್ದು, ಹಲವರಿಗೆ ನೊರೋವೈರಸ್ ದೃಢಪಟ್ಟಿದೆ ಎಂದು ವರದಿಯಾಗಿದೆ.

ಭಾರತದಲ್ಲಿಯೂ ಹೆಚ್ಚಾದ ಆತಂಕ!

ಈ ಬೆಳವಣಿಗೆಯ ನಡುವೆ ಭಾರತದಲ್ಲಿಯೂ ಆತಂಕ ಹೆಚ್ಚಾಗಿದೆ. ಯಾಕೆಂದರೆ ವಿದೇಶ ಪ್ರಯಾಣಿಕರ ಮೂಲಕ ಅಥವಾ ಕಲುಷಿತ ಆಹಾರ ಪದಾರ್ಥಗಳ ಮೂಲಕ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಈಗಾಗಲೇ ಬೇಸಿಗೆ ಹಾಗೂ ಮಳೆಗಾಲದ ಸಂದರ್ಭಗಳಲ್ಲಿ ಹೊಟ್ಟೆ ಸಂಬಂಧಿತ ಸೋಂಕುಗಳು ಹೆಚ್ಚಾಗುವ ಹಿನ್ನೆಲೆ, ನೊರೋವೈರಸ್‌ ಬಗ್ಗೆ ಹೆಚ್ಚಿನ ಜಾಗ್ರತೆ ಅಗತ್ಯವಾಗಿದೆ.

ತಜ್ಞರ ಸಲಹೆ ಏನು?

ತಜ್ಞರ ಸಲಹೆಯಂತೆ, ಕೈಗಳನ್ನು ಸಾಬೂನು ಬಳಸಿ ಸರಿಯಾಗಿ ತೊಳೆಯುವುದು, ಹೊರಗಿನ ಅಸ್ವಚ್ಛ ಆಹಾರ ಸೇವನೆ ತಪ್ಪಿಸುವುದು, ಕುದಿಸಿದ ನೀರನ್ನು ಮಾತ್ರ ಕುಡಿಯುವುದು ಹಾಗೂ ಸೋಂಕಿತ ವ್ಯಕ್ತಿಗಳಿಂದ ದೂರವಿರುವುದು ಅತ್ಯಂತ ಮುಖ್ಯ. ಸೋಂಕು ಕಾಣಿಸಿಕೊಂಡರೆ ದೇಹದಲ್ಲಿ ನೀರಿನ ಕೊರತೆ ಆಗದಂತೆ ಸಾಕಷ್ಟು ದ್ರವಪದಾರ್ಥ ಸೇವಿಸಬೇಕು. ಲಕ್ಷಣಗಳು ಗಂಭೀರವಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed