Last Updated:
ಹೇ ನವಿಲೇ ಅಂತ ಗರಿಬಿಚ್ಚಿ ಕುಣಿದು ಎಡವಟ್ಟು ಮಾಡ್ಕೊಂಡರಾ ಮಾಜಿ ಬಿಗ್ಬಾಸ್ ಸ್ಪರ್ಧಿ ನಿವೇದಿತಾ ಗೌಡ ಹಾಗೂ ಕಿಶನ್? ಅವರಿಬ್ಬರ ವಿರುದ್ಧ ದಾಖಲಾಗಿರೋ ದೂರು ಏನು?
ಇತ್ತೀಚೆಗೆ ಹೇ ನವಿಲೆ ಅಂತ ಕುಣಿದ ಮಾಜಿ ಬಿಗ್ಬಾಸ್ ಸ್ಪರ್ಧಿಗಳಾದ ನಿವೇದಿತಾ ಗೌಡ (Niveditha Gowda) ಹಾಗೂ ಕಿಶನ್ ವಿರುದ್ಧ ಕೇಸ್ ಆಗಿದೆ. ನಟ ಕಿಶನ್ (Kishen) & ಮಾಜಿ ಬಿಗ್ ಬಾಸ್ ಸ್ಪರ್ಧಿ ನಿವೇದಿತ ಗೌಡ ವಿರುದ್ಧ ದೂರು ದಾಖಲಾಗಿದ್ದು ಕಾಸ್ಟ್ಯೂಮ್ಗೆ ನೈಜ ನವಿಲು ಗರಿ ಬಳಕೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದು ಅರಣ್ಯ ಇಲಾಖೆಗೆ ದೂರು ಕೊಟ್ಟಿದ್ದಾರೆ. ನವಿಲು ಗರಿ ಉಡುಪು ಧರಿಸಿ ರೀಲ್ಸ್ ಮಾಡಿದ್ದು ನೈಜ ನವಿಲು ಗರಿ ಧರಿಸಿದ ಅನುಮಾನದ ಹಿನ್ನೆಲೆ ತನಿಖೆ ಮಾಡುವಂತೆ ದೂರು ನೀಡಲಾಗಿದೆ.
ನೈಜ ಅಥವಾ ಕೃತಕ ಗರಿ ಎಂಬುವುದು ವೈಜ್ಞಾನಿಕವಾಗಿ ದೃಢಿಕರಿಸಬೇಕು. ನೈಜವಾಗಿದ್ದರೆ ಅದರ ಮೂಲ, ಸಾಗಣೆ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಚಿತ್ರಗಳಲ್ಲಿ ಮೊದಲೇ ಅದ್ಭುತ ಕ್ರಿಯೇಟಿವಿಟಿ ಇರುತ್ತದೆ. ಕಲಾವಿದ ಚಿತ್ರದ ಹೇ ನವಿಲೇ ಹೆಣ್ಣ ನವೀಲೆ ಹಾಡಿಗೆ ಹೊಸ ರೂಪ ಕೊಡಲಾಗಿತ್ತು. ಇಲ್ಲಿ ಗಂಡು ನವಿಲು ಕಿಶನ್ ಆಗಿದ್ದಾರೆ. ಹೆಣ್ಣು ನವಿಲಾಗಿ ನಿವೇದಿತಾ ಗೌಡ ಇದ್ದರು.
ಈ ಹಾಡಿನಲ್ಲಿ ನವಿಲಿನ ಬಣ್ಣನೆ ಇದೆ. ಹೆಣ್ಣಿಗೆ ಹೋಲಿಸುವ ಕೆಲಸವೂ ಆಗಿದೆ. ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯದ ಈ ಕಲಾವಿದ ಚಿತ್ರದ ಹಾಡು ಇಂದಿಗೂ ತಾಜಾತನದ ಅನುಭವ ಕೊಡುತ್ತದೆ. ಡ್ಯಾನ್ಸರ್ ಕಿಶನ್ ಬಿಳಗಲಿ ನೃತ್ಯ ಇಲ್ಲಿ ಹೊಸದೊಂದು ಕಲ್ಪನೆ ಕಟ್ಟಿಕೊಡುತ್ತದೆ. ಬೆನ್ನಿಗೆ ನವಿಲು ಗರಿಯಗಳನ್ನ ಕಟ್ಟಿಕೊಂಡು ಗಂಡು ನವಿಲಿನಂತೆ ನೃತ್ಯ ಮಾಡಿದ್ದಾರೆ.
ಬೇಬಿ ಡಾಲ್ ನಿವೇದಿತಾ ಗೌಡ ಇಲ್ಲಿ ಹೆಣ್ಣು ನವಿಲು ಆಗಿದ್ದಾರೆ. ಕೆಲವೇ ಕೆಲವು ನವಿಲು ಗರಿಗಳ ಉಡುಪು ತೊಟ್ಟಿದ್ದಾರೆ. ನೀಲಿ ಬಣ್ಣದ ಕಾಸ್ಟೂಮ್ ತೊಟ್ಟು ನವಿಲಿನಂತೆ ನಾಟ್ಯ ಮಾಡಿದ್ದಾರೆ.
ಸದ್ಯ ಈ ವಿಡಿಯೋ ನಿವೇದಿತಾ ಗೌಡ ಹಾಗೂ ಕಿಶನ್ ಬಿಳಗಲಿ ಇಬ್ಬರ ಇನ್ಸ್ಟಾಗ್ರಾಮ್ ಪೇಜ್ನಲ್ಲಿಯೂ ಲಭ್ಯವಿಲ್ಲ.
ವರದಿ: ಪ್ರಗತಿ ಶೆಟ್ಟಿ, ನ್ಯೂಸ್18 ಕನ್ನಡ ಪ್ರತಿನಿಧಿ ಬೆಂಗಳೂರು
Bangalore,Karnataka













