New Airport Rules: ವಿಮಾನ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್! ಏರ್‌ಪೋರ್ಟ್‌ನಲ್ಲಿ ಹೀಗೆಲ್ಲಾ ಮಾಡಿದ್ರೆ ಹುಷಾರ್ ಹುಷಾರ್! | ವ್ಯಾಪಾರ ಸುದ್ದಿ | ACTPnews

News18


Last Updated:

New Airport Rules: ವಿಮಾನ ಪ್ರಯಾಣಿಕರಿಗೆ ಶಾಕಿಂಗ್​ ನ್ಯೂಸ್​! ವಿಮಾನ ನಿಲ್ದಾಣದಲ್ಲಿ ಇನ್ಮಂದೇ ರೀಲ್ಸ್​ ಮಾಡುದ್ರೆ ಹುಷಾರ್​; DGCA ಯಿಂದ ಹೊಸ ರೂಲ್ಸ್​

News18
News18

ದೆಹಲಿ: ವಿಮಾನ ನಿಲ್ದಾಣಗಳಲ್ಲಿ (Airport) ಇನ್‌ಸ್ಟಾಗ್ರಾಮ್ ರೀಲ್ಸ್ (Instagram Reels), ವ್ಲಾಗ್ಸ್ (Vlogs) ಅಥವಾ ಸೆಲ್ಫಿಗಳನ್ನು ತೆಗೆದುಕೊಳ್ಳುವ ಅಭ್ಯಾಸ ನಿಮಗಿದ್ದರೆ, ಈ ಸುದ್ದಿ ನಿಮಗಾಗಿಯೇ! ಯಾಕಂದ್ರೆ, ಕೇಂದ್ರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA – Directorate General of Civil Aviation) ಮತ್ತು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (Bureau of Civil Aviation Security) ಹೊರಡಿಸಿರುವ ಹೊಸ ಕಟ್ಟುನಿಟ್ಟಾದ ಮಾರ್ಗಸೂಚಿಗಳ ಪ್ರಕಾರ, ವಿಮಾನ ನಿಲ್ದಾಣದಲ್ಲಿ ನೀವು ಅನಧಿಕೃತವಾಗಿ ಚಿತ್ರೀಕರಣ ಮಾಡಿದ್ರೆ ಭಾರೀ ಪರಿಣಾಮಗಳನ್ನ ಎದರಿಸಬೇಕಾಗಬಹುದು! ಆ ಕುರಿತ ವರದಿ ಇಲ್ಲಿದೆ.

ಹೌದು, ಕೇಂದ್ರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ವಿಮಾನ ನಿಲ್ದಾಣಗಳಲ್ಲಿ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಯ ನಿಯಮಗಳನ್ನು ಬಿಗಿಗೊಳಿಸಿದೆ. ಅದರಂತೆ, ನೀವು ವಿಮಾನ ನಿಲ್ದಾಣದ ಈ ಸ್ಥಳಗಳಲ್ಲಿ ವೀಡಿಯೊ ರೆಕರ್ಡ್​ ಮಾಡಿದ್ರೆ, ಕೇವಲ ಅದನ್ನ ಡಿಲಿಟ್​ ಮಾಡಿಸುವುದು ಮಾತ್ರವಲ್ಲ, ಬದಲಾಗಿ, ಸ್ಥಳದಲ್ಲೇ ಫೈನ್​ ಹಾಗೂ ನಿಮ್ಮ ಮೊಬಲೈ ಫೋನ್​ ಅನ್ನು ವಶಕ್ಕೆ ಪಡೆಯುವ ಇಲ್ಲಾ, ವಿಮಾನ ಹಾರಟದ ನೋ-ಫ್ಲೈ ಲೀಸ್ಟ್​ಗೆ ಸೇರಿಸಬಹುದು ಎನ್ನಲಾಗಿದೆ.

ಹಾಗಾದ್ರೆ, ಡಿಜಿಸಿಎ ಏನು ಬದಲಾಯಿಸಿದೆ?

ವಿಮಾನ ನಿಲ್ದಾಣಗಳ ಹಲವಾರು ನಿರ್ಬಂಧಿತ ಪ್ರದೇಶಗಳಲ್ಲಿ ಪೂರ್ವಾನುಮತಿ ಇಲ್ಲದೆ ಪ್ರಯಾಣಿಕರು ಮತ್ತು ಸಂದರ್ಶಕರು ಫೋಟೋ ಅಥವಾ ವೀಡಿಯೊಗಳನ್ನು ತೆಗೆದುಕೊಳ್ಳುವುದನ್ನು ವಾಯುಯಾನ ನಿಯಂತ್ರಕ ನಿಷೇಧಿಸಿದೆ.

ಹಾಗಾದ್ರೆ, ಯಾವುದನ್ನ ರೆಕಾರ್ಡ್​ ಮಾಡುವುದು ನಿಷೇಧ?

ಹೊಸ ಮಾರ್ಗಸೂಚಿಯ ಪ್ರಕಾರ, ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ಸುರಕ್ಷತೆಯ ರಹಸ್ಯಗಳು ಸೋರಿಕೆಯಾಗದಂತೆ ತಡೆಯಲು ಈ ಕೆಳಗಿನ ಜಾಗಗಳಲ್ಲಿ ಕ್ಯಾಮೆರಾ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅವುಗಳು…

  • ಸುರಕ್ಷತಾ ತಪಾಸಣಾ ವಲಯ: ಪ್ರಯಾಣಿಕರು ಮತ್ತು ಲಗೇಜ್ ತಪಾಸಣೆ ಮಾಡುವ (CISF ಸಿಬ್ಬಂದಿ ಇರುವ) ಜಾಗ.
  • ಬೋರ್ಡಿಂಗ್ ಗೇಟ್‌ಗಳು: ವಿಮಾನ ಏರುವ ಮುನ್ನ ಕಾಯುವ ಮತ್ತು ಟಿಕೆಟ್ ಪರಿಶೀಲಿಸುವ ಸ್ಥಳ.
  • ರನ್‌ವೇ ಮತ್ತು ಏಪ್ರನ್: ವಿಮಾನಗಳು ನಿಲ್ಲುವ, ಚಲಿಸುವ ಅಥವಾ ಇಂಧನ ತುಂಬಿಸುವ ತಾಂತ್ರಿಕ ಪ್ರದೇಶಗಳು.
  • ರನ್‌ವೇ ಬಸ್‌ಗಳು: ಟರ್ಮಿನಲ್‌ನಿಂದ ವಿಮಾನದ ಬಳಿಗೆ ಪ್ರಯಾಣಿಕರನ್ನು ಕರೆದೊಯ್ಯುವ ಬಸ್‌ಗಳ ಒಳಗೆ ಮತ್ತು ಹೊರಗೆ.
ಹಾಗಾದ್ರೆ, ಡಿಜಿಸಿಎ ಯಾಕೆ ಕ್ರಮ ಕೈಗೊಳ್ಳುತ್ತಿದೆ?

ಎಕನಾಮಿಕ್ಸ್​ ಟೈಮ್ಸ್​ ವರದಿ ಮಾಡಿರುವಂತೆ, ವಿಮಾನ ನಿಲ್ದಾಣದ ಆವರಣದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಷಯಗಳು ಸೃಷ್ಟಿಯಾಗುತ್ತಿರುವುದು ದೊಡ್ಡ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Monthly Allowances: ಲೇಡಿಸ್​​ಗೆ ಶಾಕ್,​ ಮಹಿಳಾ ಮಾಸಿಕ ಸಹಾಯಧನ ಲಿಸ್ಟ್​ನಿಂದ 80 ಲಕ್ಷ ಮಹಿಳೆಯರ ಹೆಸರು ಡಿಲೀಟ್! ಯಾಕೆ?

ಅದರಂತೆ, ಟ್ರಾವೆಲ್​ ರೀಲ್‌ಗಳು, ವ್ಲಾಗ್‌ಗಳಂತಹ ವೀಡಿಯೊಗಳಲ್ಲಿ ವಿಮಾನ ನಿಲ್ದಾಣವಿರುವಂತಹ ವೀಡಿಯೋಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಆದಾಗ್ಯೂ, ಇಂತಹ ವೀಡಿಯೋಗಳ ಅಪ್‌ಲೋಡ್‌ಗಳಲ್ಲಿ ಕೆಲವು ಭದ್ರತಾ ಮೂಲಸೌಕರ್ಯ, ಸೈನಿಕರ ಕಾರ್ಯಾಚರಣೆಗಳು ಬಹಿರಂಗವಾಗಿದೆ. ಅದರಂತೆ, ಕೆಲವು ವೀಡಿಯೊಗಳು ಖುಷಿಗಾಗಿ ಮಾಡಿದ್ರೂ ಸಹ ಆ ವೀಡಿಯೋದಲ್ಲಿ ಸೂಕ್ಷ್ಮ ಮಾಹಿತಿಯು ಸಾರ್ವಜನಿಕವಾಗಿ ಲಭ್ಯವಾದರೆ ಅದು ಭದ್ರತಾ ಅಪಾಯಗಳನ್ನು ಸೃಷ್ಟಿಸಬಹುದು ಎಂದು ಅಧಿಕಾರಿಗಳು ನಂಬುತ್ತಾರೆ.

ರೆಕಾರ್ಡ್​ ಮಾಡಿದ್ರೆ ಶಿಕ್ಷೆ ಏನು?

ಕೇವಲ ವಿಡಿಯೋ ಡಿಲೀಟ್ ಮಾಡುವುದರಿಂದ ನೀವು ಈ ನಿಯಮದಿಂದ ಪಾರಾಗಲು ಸಾಧ್ಯವಿಲ್ಲ. ಸುರಕ್ಷತಾ ಸಿಬ್ಬಂದಿಗೆ ವ್ಯಾಪಕ ಅಧಿಕಾರ ನೀಡಲಾಗಿದ್ದು, ಈ ಕೆಳಗಿನ ಕ್ರಮ ಜರುಗಿಸಬಹುದು:

  • ವಿಡಿಯೋಗಳ ತಕ್ಷಣದ ಡಿಲೀಷನ್: ಸ್ಥಳದಲ್ಲೇ ಭದ್ರತಾ ಸಿಬ್ಬಂದಿ ನಿಮ್ಮ ರೆಕಾರ್ಡಿಂಗ್‌ಗಳನ್ನು ಅಳಿಸಲು ಆದೇಶಿಸುತ್ತಾರೆ.
  • ಮೊಬೈಲ್/ಕ್ಯಾಮೆರಾ ಜಪ್ತಿ: ತನಿಖೆಯ ಉದ್ದೇಶಗಳಿಗಾಗಿ ನಿಮ್ಮ ಫೋನ್ ಅಥವಾ ರೆಕಾರ್ಡಿಂಗ್ ಸಾಧನಗಳನ್ನು ವಶಪಡಿಸಿಕೊಳ್ಳಬಹುದು.
  • ಹಣಕಾಸಿನ ದಂಡಗಳು: ನಿಯಮ ಉಲ್ಲಂಘನೆಗಾಗಿ ಭಾರಿ ಪ್ರಮಾಣದ ಆರ್ಥಿಕ ದಂಡ ವಿಧಿಸಲಾಗುತ್ತದೆ.
  • ‘ನೋ-ಫ್ಲೈ ಲಿಸ್ಟ್’ (No-Fly List) ಸೇರ್ಪಡೆ: ಅತ್ಯಂತ ಗಂಭೀರ ಅಥವಾ ಸಿಬ್ಬಂದಿ ಜೊತೆ ಅಶಿಸ್ತಿನಿಂದ ವರ್ತಿಸಿದರೆ, ನಿಮ್ಮನ್ನು 3 ತಿಂಗಳಿಂದ 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ವಿಮಾನ ಪ್ರಯಾಣ ಮಾಡದಂತೆ ಬ್ಯಾನ್ ಮಾಡಬಹುದು.
  • ಕಾನೂನು ಕ್ರಮ: ವಿಮಾನಯಾನ ಕಾಯ್ದೆಯಡಿ ನಿಮ್ಮ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗುವ ಸಾಧ್ಯತೆಯೂ ಇರುತ್ತದೆ.

ಹಾಗಾದರೆ ಏನ್​ ರೆಕಾರ್ಡ್​ ಮಾಡಬಹುದು?

  • ವಿಮಾನ ನಿಲ್ದಾಣದ ಸಾಮಾನ್ಯ ಸಾರ್ವಜನಿಕ ಪ್ರದೇಶಗಳಾದ ಚೆಕ್-ಇನ್ ಹಾಲ್‌ಗಳು ಮತ್ತು ಫುಡ್ ಕೋರ್ಟ್‌ಗಳಲ್ಲಿ ವೈಯಕ್ತಿಕ ಫೋಟೋ/ಸೆಲ್ಫಿ ತೆಗೆದುಕೊಳ್ಳಬಹುದು.
  • ನಾಗರಿಕ (Civilian) ವಿಮಾನ ಹಾರಾಟದ ಸಮಯದಲ್ಲಿ ನಿಮ್ಮ ಸೀಟಿನಲ್ಲಿ ಕುಳಿತು ಸಾಮಾನ್ಯ ಫೋಟೋ ಅಥವಾ ವಿಡಿಯೋ ಮಾಡಬಹುದು. ಆದರೆ, ಕ್ಯಾಬಿನ್ ಕ್ರೂ (Cabin Crew) ಸಿಬ್ಬಂದಿ ಕ್ಯಾಮೆರಾ ಆಫ್ ಮಾಡಲು ಸೂಚಿಸಿದರೆ ತಕ್ಷಣ ಪಾಲಿಸಬೇಕು.
  • ಯಾವುದೇ ವಾಣಿಜ್ಯ ಸಂಸ್ಥೆಗಳು, ಬ್ರ್ಯಾಂಡ್‌ಗಳು ಅಥವಾ ಇನ್‌ಫ್ಲುಯೆನ್ಸರ್‌ಗಳು ಚಿತ್ರೀಕರಣ ಮಾಡಬೇಕಿದ್ದರೆ ಕನಿಷ್ಠ 2 ತಿಂಗಳು ಮುಂಚಿತವಾಗಿ EGCA ಪೋರ್ಟಲ್ ಮೂಲಕ ಅಧಿಕೃತ ಅನುಮತಿ ಪಡೆಯುವುದು ಕಡ್ಡಾಯ.

ಹಾಗಾಗಿ, ಮುಂದಿನ ಬಾರಿ ವಿಮಾನ ಪ್ರಯಾಣ ಮಾಡುವಾಗ ನಿಮ್ಮ ಸಾಮಾಜಿಕ ಜಾಲತಾಣದ “ವೈರಲ್ ಕ್ಷಣ”ಗಳಿಗಿಂತ ವಿಮಾನ ನಿಲ್ದಾಣದ ಸುರಕ್ಷತೆ ಮತ್ತು ನಿಮ್ಮ ಪ್ರಯಾಣದ ಹಕ್ಕಿಗೆ ಆದ್ಯತೆ ನೀಡಿ. ಅನುಮಾನವಿದ್ದರೆ ಕ್ಯಾಮೆರಾ ಆನ್ ಮಾಡುವ ಮುನ್ನ ಅಲ್ಲಿನ ಸಿಬ್ಬಂದಿಯನ್ನು ಕೇಳಿ ಖಚಿತಪಡಿಸಿಕೊಳ್ಳಿ.

Generated image



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports