Last Updated:
Nepal: ನೇಪಾಳದಲ್ಲಿ ಮತ್ತೊಂದು ಮಹಾ ಕ್ರಾಂತಿ. ಜನಸಾಮಾನ್ಯರ ಭಾಗ್ಯ ಬದಲಾಯಿಸಲು ಪ್ರಧಾನಿ ಬಾಲೆನ್ ಶಾ ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಭಾರತ ಮತ್ತು ಅಮೆರಿಕದ ರಾಜತಾಂತ್ರಿಕ ವಲಯವನ್ನೇ ನಡುಗಿಸಿರುವ ಆ ರಹಸ್ಯ ಫಾರ್ಮುಲಾ ಏನು? ಸಾಮಾನ್ಯ ಜನರಿಗೆ ಸಿಗಲಿರುವ ಆ ಬಂಪರ್ ಆಫರ್ ತಿಳಿಯಲು ಈ ವರದಿ ಓದಿ.
ನೇಪಾಳದ ರಾಜಕೀಯ (Nepal Politics) ಮತ್ತು ರಾಜತಾಂತ್ರಿಕ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯೊಂದು ನಡೆಯುತ್ತಿದೆ. ಇದುವರೆಗೆ ರಾಜಕೀಯ ಪಕ್ಷಗಳ ಪ್ರಭಾವ ಮತ್ತು ಅಧಿಕಾರಿಗಳ ಲಾಬಿಯ ಮೂಲಕ ನಡೆಯುತ್ತಿದ್ದ ರಾಯಭಾರಿ (Ambassador) ನೇಮಕಾತಿ (Requirement) ಪ್ರಕ್ರಿಯೆಯನ್ನು ಈಗ ಸಾಮಾನ್ಯ ನಾಗರಿಕರಿಗೂ (Common Peoples) ತೆರೆದಿಡಲಾಗಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ನೇಪಾಳದ ವಿದೇಶಾಂಗ ಸಚಿವಾಲಯವು ರಾಯಭಾರಿ ಮತ್ತು ಖಾಯಂ ಪ್ರತಿನಿಧಿ ಹುದ್ದೆಗಳಿಗೆ ಸಾರ್ವಜನಿಕರಿಂದ ನೇರ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಕುರಿತು ವಿದೇಶಾಂಗ ಸಚಿವಾಲಯವು ಏಳು ಪುಟಗಳ ಉಲ್ಲೇಖ ನಿಯಮಗಳನ್ನು (ToR) ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಸಲು ಜೂನ್ 5 ಕೊನೆಯ ದಿನಾಂಕ ಎಂದು ಘೋಷಿಸಿದೆ. ಇದನ್ನು ನೇಪಾಳದಲ್ಲಿ “ಅರ್ಹತೆ ಆಧಾರಿತ ರಾಜತಾಂತ್ರಿಕ ನೇಮಕಾತಿ”ಯ ಆರಂಭ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ನೇಪಾಳದ 17 ರಾಯಭಾರಿ ಕಚೇರಿಗಳಲ್ಲಿ ರಾಯಭಾರಿಗಳಿಲ್ಲ. ಆಗಸ್ಟ್ ವೇಳೆಗೆ ಈ ಸಂಖ್ಯೆ 24ಕ್ಕೆ ಏರಬಹುದು ಎಂದು ವರದಿಯಾಗಿದೆ. ಭಾರತ, ಚೀನಾ, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಇಸ್ರೇಲ್, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಓಮನ್, ಮಲೇಷ್ಯಾ, ಬಹ್ರೇನ್ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವು ಪ್ರಮುಖ ದೇಶಗಳಲ್ಲಿ ನೇಮಕಾತಿ ನಡೆಯಲಿದೆ.
ಹೊಸ ನಿಯಮಗಳ ಪ್ರಕಾರ ರಾಯಭಾರಿಯಾಗಲು ಕೆಲವು ಅರ್ಹತೆಗಳನ್ನು ಕಡ್ಡಾಯಗೊಳಿಸಲಾಗಿದೆ.
- ಅಭ್ಯರ್ಥಿಯ ವಯಸ್ಸು ಕನಿಷ್ಠ 35 ವರ್ಷಗಳಾಗಿರಬೇಕು.
- ಅಂತರರಾಷ್ಟ್ರೀಯ ಸಂಬಂಧಗಳು, ರಾಜ್ಯಶಾಸ್ತ್ರ, ಕಾನೂನು, ಅರ್ಥಶಾಸ್ತ್ರ, ಸಾರ್ವಜನಿಕ ಆಡಳಿತ ಅಥವಾ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಇರಬೇಕು.
- ರಾಜತಾಂತ್ರಿಕತೆ, ವಿದೇಶಾಂಗ ನೀತಿ, ಅಂತರರಾಷ್ಟ್ರೀಯ ವ್ಯಾಪಾರ, ಬಹುಪಕ್ಷೀಯ ಮಾತುಕತೆಗಳು ಅಥವಾ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.
- ಭ್ರಷ್ಟಾಚಾರ ಅಥವಾ ನೈತಿಕ ಅಧಃಪತನ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
- ವಿದೇಶದ ಶಾಶ್ವತ ಪೌರತ್ವ ಅಥವಾ ನಿವಾಸ ಹೊಂದಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಈ ನಿಯಮಗಳ ಮೂಲಕ ರಾಜಕೀಯ ಪರಿಚಯಕ್ಕಿಂತ ಅರ್ಹತೆ ಮತ್ತು ಅನುಭವಕ್ಕೆ ಹೆಚ್ಚು ಮಹತ್ವ ನೀಡಲು ನೇಪಾಳ ಸರ್ಕಾರ ಮುಂದಾಗಿದೆ.
ರಾಯಭಾರಿಯ ಕೆಲಸ ಕೇವಲ ರಾಜಕೀಯ ಸಂಪರ್ಕ ಉಳಿಸುವುದಷ್ಟೇ ಅಲ್ಲ. ಹೊಸ ವ್ಯವಸ್ಥೆಯಲ್ಲಿ ರಾಯಭಾರಿಗಳಿಗೆ ಹಲವು ಜವಾಬ್ದಾರಿಗಳನ್ನು ನೀಡಲಾಗಿದೆ.
- ವಿದೇಶದಲ್ಲಿರುವ ನೇಪಾಳದ ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸಬೇಕು.
- ವಿದೇಶಿ ಹೂಡಿಕೆ ಮತ್ತು ವ್ಯಾಪಾರ ಹೆಚ್ಚಿಸಲು ಪ್ರಯತ್ನಿಸಬೇಕು.
- ನೇಪಾಳದ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು.
- ವಿಶ್ವಸಂಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನೇಪಾಳದ ನಿಲುವನ್ನು ಸಮರ್ಥವಾಗಿ ಮಂಡಿಸಬೇಕು.
- ವಿದೇಶಗಳಲ್ಲಿ ವಾಸಿಸುವ ನೇಪಾಳಿ ಸಮುದಾಯದೊಂದಿಗೆ ಉತ್ತಮ ಸಂಪರ್ಕ ಕಾಯ್ದುಕೊಳ್ಳಬೇಕು.
- ಯುದ್ಧ, ಪ್ರಕೃತಿ ವಿಕೋಪ ಅಥವಾ ಇತರ ಬಿಕ್ಕಟ್ಟುಗಳಲ್ಲಿ ಸಿಲುಕಿರುವ ನೇಪಾಳಿ ನಾಗರಿಕರಿಗೆ ನೆರವು ಒದಗಿಸಬೇಕು.
ಅಂದರೆ, ರಾಯಭಾರಿ ಹುದ್ದೆ ಈಗ ಕೇವಲ ಗೌರವದ ಸ್ಥಾನವಲ್ಲ, ದೇಶದ ಆರ್ಥಿಕತೆ, ರಾಜತಾಂತ್ರಿಕತೆ ಮತ್ತು ನಾಗರಿಕರ ಸುರಕ್ಷತೆಯ ಜವಾಬ್ದಾರಿಯೂ ಆಗಿದೆ.
ಇದುವರೆಗೆ ನೇಪಾಳದಲ್ಲಿ ರಾಯಭಾರಿ ಹುದ್ದೆಗಳನ್ನು ಎರಡು ಭಾಗಗಳಾಗಿ ಹಂಚಲಾಗುತ್ತಿತ್ತು. ಅರ್ಧ ಹುದ್ದೆಗಳು ರಾಜಕೀಯ ನೇಮಕಾತಿಗಳಾಗಿದ್ದರೆ, ಉಳಿದವು ವೃತ್ತಿ ರಾಜತಾಂತ್ರಿಕರಿಗೆ ನೀಡಲಾಗುತ್ತಿತ್ತು. ಈ ಪ್ರಕ್ರಿಯೆಯ ಮೇಲೆ ಪಕ್ಷಪಾತ, ರಾಜಕೀಯ ಪ್ರಭಾವ ಮತ್ತು ಪರಿಚಯದ ಆಧಾರದ ನೇಮಕಾತಿಗಳ ಆರೋಪಗಳು ನಿರಂತರವಾಗಿ ಕೇಳಿಬರುತ್ತಿದ್ದವು. ಅಧಿಕಾರದಲ್ಲಿದ್ದ ಪಕ್ಷಗಳು ತಮ್ಮ ಆಪ್ತರಿಗೆ ಪ್ರಮುಖ ದೇಶಗಳ ರಾಯಭಾರಿ ಹುದ್ದೆಗಳನ್ನು ನೀಡುತ್ತಿದ್ದವು ಎಂಬ ಟೀಕೆಗಳೂ ಇದ್ದವು.
ಈ ಹಿನ್ನೆಲೆಯಲ್ಲೇ ಈಗಿನ ಸರ್ಕಾರ ಮುಕ್ತ ಸ್ಪರ್ಧೆ ಮತ್ತು ಅರ್ಹತೆ ಆಧಾರಿತ ಆಯ್ಕೆ ವ್ಯವಸ್ಥೆಯನ್ನು ಪರಿಚಯಿಸಿದೆ. ಆದರೂ ಅಂತಿಮ ನಿರ್ಧಾರ ಸರ್ಕಾರದ ಕೈಯಲ್ಲೇ ಇರುತ್ತದೆ. ವಿದೇಶಾಂಗ ಸಚಿವಾಲಯವು ಅರ್ಜಿಗಳ ಪರಿಶೀಲನೆ ಮತ್ತು ಶಾರ್ಟ್ಲಿಸ್ಟ್ ಮಾಡುವ ಕೆಲಸ ಮಾತ್ರ ಮಾಡುತ್ತದೆ. ನಂತರ ಕ್ಯಾಬಿನೆಟ್ ಅನುಮೋದನೆ ಮತ್ತು ಸಂಬಂಧಿತ ದೇಶದ ಒಪ್ಪಿಗೆಯ ಬಳಿಕವೇ ಅಂತಿಮ ನೇಮಕಾತಿ ನಡೆಯಲಿದೆ.













