NEET Paper Leak; ಮಗನ ಭವಿಷ್ಯ ರೂಪಿಸಲು ಹೋದ ತಂದೆ ಜೈಲುಪಾಲು; ಇಡೀ ದಂಧೆಯನ್ನು ಬಯಲಿಗೆಳೆದ ಆ 12 ಲಕ್ಷದ ಡೀಲ್‌! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ!


Last Updated:

NEET Paper Leak; ಕೋಟಿ ಕೋಟಿ ವ್ಯವಹಾರ ಕುದುರುತ್ತಿದ್ದ ಆ ಅಂಡರ್‌ಗ್ರೌಂಡ್ ಲೋಕಕ್ಕೆ ಕೇವಲ 12 ಲಕ್ಷದ ಅಡ್ವಾನ್ಸ್ ಜೊತೆ ತಂದೆ ಎಂಟ್ರಿ ಕೊಟ್ಟಿದ್ದರು. ಆದರೆ, ಆ ಒಂದು ಡೀಲ್ ಉಲ್ಟಾ ಹೊಡೆದಾಗ ಇಡೀ ಕೇಸ್​​ನಲ್ಲಿ ಬೆಚ್ಚಿಬೀಳುವ ಸತ್ಯ ಹೊರಬಂತು. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.  

ಸಾಂಕೇತಿಕ ಚಿತ್ರ!
ಸಾಂಕೇತಿಕ ಚಿತ್ರ!

ಮಗನನ್ನು (Son) ಡಾಕ್ಟರ್ (Doctor) ಮಾಡುವ ಹಠಕ್ಕೆ ಬಿದ್ದ ಆ ತಂದೆ, ಅದಕ್ಕಾಗಿ ಆರಿಸಿಕೊಂಡಿದ್ದು ಮಾತ್ರ ವಾಮ ಮಾರ್ಗ. ಕೋಟಿ ಕೋಟಿ ವ್ಯವಹಾರ (Business) ಕುದುರುತ್ತಿದ್ದ ಆ ಅಂಡರ್‌ಗ್ರೌಂಡ್ (Underground) ಲೋಕಕ್ಕೆ ಕೇವಲ 12 ಲಕ್ಷದ ಅಡ್ವಾನ್ಸ್ ಜೊತೆ ತಂದೆ ಎಂಟ್ರಿ ಕೊಟ್ಟಿದ್ದರು. ಆದರೆ, ಆ ಒಂದು ಡೀಲ್ (Deal) ಉಲ್ಟಾ ಹೊಡೆದಾಗ ಇಡೀ ಕೇಸ್​​ನಲ್ಲಿ ಬೆಚ್ಚಿಬೀಳುವ ಸತ್ಯ ಹೊರಬಂತು. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.  

ನೀಟ್​ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​!

ದೇಶವ್ಯಾಪಿ ಸಂಚಲನ ಮೂಡಿಸಿರುವ ನೀಟ್​ ಯುಜಿ 2026 ಪೇಪರ್ ಲೀಕ್ ಪ್ರಕರಣದಲ್ಲಿ ಈಗ ಹೊಸ ತಿರುವು ಸಿಕ್ಕಿದೆ. ಮಹಾರಾಷ್ಟ್ರದ ಲಾತೂರ್ ಮೂಲದ ಖ್ಯಾತ ಮಕ್ಕಳ ವೈದ್ಯ ಡಾ. ಮನೋಜ್ ಶಿರೂರೆ ಅವರನ್ನು ಸಿಬಿಐ ಬಂಧಿಸಿದ್ದು, ಈ ಪ್ರಕರಣದಲ್ಲಿ ವಿದ್ಯಾರ್ಥಿಯ ಪೋಷಕನೊಬ್ಬ ನೇರವಾಗಿ ಸಿಕ್ಕಿಬಿದ್ದ ಮೊದಲ ಘಟನೆ ಎನ್ನಲಾಗಿದೆ. ತನ್ನ ಮಗ ವೈದ್ಯನಾಗಬೇಕೆಂಬ ಆಸೆಯಲ್ಲಿ ಅವರು ಲೀಕ್ ಆದ ಪ್ರಶ್ನೆಪತ್ರಿಕೆ ಖರೀದಿಸಿದ್ದಾರೆಯೆಂಬ ಆರೋಪ ತನಿಖೆಯಲ್ಲಿ ಹೊರಬಿದ್ದಿದೆ.

ಸಿಬಿಐ ತನಿಖೆ ಹೇಳುವುದೇನು?

ಸಿಬಿಐ ತನಿಖೆಯ ಪ್ರಕಾರ, ಡಾ. ಶಿರೂರೆ ಲಾತೂರ್‌ನ ಶಿಕ್ಷಣ ವಲಯದಲ್ಲಿ ಪ್ರಭಾವ ಹೊಂದಿದ್ದವರ ಸಂಪರ್ಕಕ್ಕೆ ಬಂದಿದ್ದರು. ವಿಶೇಷವಾಗಿ RCC ಕೋಚಿಂಗ್ ಕ್ಲಾಸ್‌ಗಳ ನಿರ್ದೇಶಕ ಶಿವರಾಜ್ ಮೊಟೇಗಾವ್ಕರ್ ಮತ್ತು ಪುಣೆ ಮೂಲದ ಪ್ರೊಫೆಸರ್ ಪಿ.ವಿ. ಕುಲಕರ್ಣಿ ಅವರ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆಯ ಜಾಲಕ್ಕೆ ಸಂಪರ್ಕ ಬೆಳೆದಿತ್ತು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪರೀಕ್ಷೆಗೆ ಕೆಲ ದಿನಗಳ ಮುನ್ನ ಶಿರೂರೆ ಅವರ ಆಸ್ಪತ್ರೆಯಲ್ಲೇ ಕೆಲವು ವಿಶೇಷ ತರಗತಿಗಳು ನಡೆದಿದ್ದವು. ಇದೇ ವೇಳೆ ವಿದ್ಯಾರ್ಥಿಗಳಿಗೆ ಲೀಕ್ ಆದ ಗೆಸ್ ಪೇಪರ್ ಹಂಚಿಕೆಯಾಗಿದೆ ಎಂದು ತನಿಖೆ ಹೇಳುತ್ತಿದೆ.

ಮಹತ್ವದ ದಾಖಲೆ ಕಲೆಹಾಕಿದ ಅಧಿಕಾರಿಗಳು!

ಈ ವಿಚಾರ ಬಹಿರಂಗವಾಗಿದ್ದು, ಸಿಬಿಐ ಹಲವು ದಿನಗಳಿಂದ ಲಾತೂರ್, ಪುಣೆ ಹಾಗೂ ಅಂಬಾಜೋಗಾಯಿಯಲ್ಲಿ ದಾಳಿ ನಡೆಸಿ ಡಿಜಿಟಲ್ ಸಾಕ್ಷ್ಯ, ಮೊಬೈಲ್‌ಗಳು ಹಾಗೂ ಹಣಕಾಸು ದಾಖಲೆಗಳನ್ನು ಪರಿಶೀಲಿಸಿದ ಬಳಿಕ. ಶಿರೂರೆ ನಿವಾಸ ಮತ್ತು ಆಸ್ಪತ್ರೆಗೆ ನಡೆಸಿದ ಶೋಧದಲ್ಲಿ ಹಲವು ಮಹತ್ವದ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ. ಅವುಗಳಲ್ಲಿನ ಕರೆ ವಿವರಗಳು, ಆನ್‌ಲೈನ್ ಹಣ ವರ್ಗಾವಣೆ ದಾಖಲೆಗಳು ಮತ್ತು ವಿದ್ಯಾರ್ಥಿಗಳ ಪಟ್ಟಿಯು ತನಿಖೆಗೆ ಹೊಸ ಸುಳಿವು ನೀಡಿವೆ.

ನಡೆಯುತ್ತಿದೆ ಫಾರೆನ್ಸಿಕ್​ ಅನಾಲಿಸಿಸ್​!

ಸಿಬಿಐ ಪ್ರತ್ಯೇಕವಾಗಿ ಡಾ. ಶಿರೂರೆ ಅವರ ಮಗ ಹಾಗೂ ಸಂಬಂಧಿಕರನ್ನು ಕೂಡ ವಿಚಾರಣೆಗೊಳಪಡಿಸಿದೆ. ಅವರ ಮಗ ಪರೀಕ್ಷೆಗೆ ಮುನ್ನವೇ ಕೆಲವು ಪ್ರಶ್ನೆಗಳ ಉತ್ತರಗಳನ್ನು ತಿಳಿದಿದ್ದಾನೆಯೇ? ಪರೀಕ್ಷೆಯಲ್ಲಿ ಅವು ಬಂದಿದ್ದವೆಯೇ? ಎಂಬುದರ ಕುರಿತು ಡಿಜಿಟಲ್ ಫಾರೆನ್ಸಿಕ್ ವಿಶ್ಲೇಷಣೆ ನಡೆಯುತ್ತಿದೆ.

ಇದುವರೆಗೂ ಹಲವು ಆರೋಪಿಗಳ ಬಂಧನ!

ಈ ಪ್ರಕರಣದಲ್ಲಿ ಇದುವರೆಗೆ ಹಲವು ಆರೋಪಿಗಳು ಬಂಧಿತರಾಗಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರು, ಅದನ್ನು ಮಾರಾಟ ಮಾಡಿದವರು ಹಾಗೂ ಮಧ್ಯವರ್ತಿಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಸ್ವಂತ ಮಗನ ಭವಿಷ್ಯಕ್ಕಾಗಿ ಪ್ರಶ್ನೆಪತ್ರಿಕೆ ಖರೀದಿಸಿದ ಪೋಷಕನ ಬಂಧನ ಇದೇ ಮೊದಲ ಬಾರಿ. ಇದರಿಂದ ಪ್ರಕರಣ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

ಎನ್​ಟಿಎಯಿಂದ ಸೋರಿಕೆ ಆಗಿಲ್ವಾ?

ಇದರ ನಡುವೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನ್ನ ವ್ಯವಸ್ಥೆಯಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ಎಂದು ಹೇಳಿಕೊಂಡಿದ್ದು, ನಿಜವಾದ ಸೋರಿಕೆ ಕೋಚಿಂಗ್ ಜಾಲ ಹಾಗೂ ಹೊರಗಿನ ಮೂಲಗಳಿಂದ ನಡೆದಿರಬಹುದೆಂದು ಶಂಕಿಸಲಾಗಿದೆ. ಸಂಸತ್ತಿನ ಸಮಿತಿಯೂ ಈ ವಿಚಾರವಾಗಿ ಕಠಿಣ ಪ್ರಶ್ನೆಗಳನ್ನು ಕೇಳಿದೆ. ಒಟ್ಟಿನಲ್ಲಿ, ಮಗನನ್ನು ವೈದ್ಯನಾಗಿಸುವ ಕನಸು ಕಂಡ ತಂದೆ, ಅಕ್ರಮ ಮಾರ್ಗ ಹಿಡಿದು ಈಗ ಕಾನೂನಿನ ಬಲೆಗೆ ಸಿಕ್ಕಿದ್ದಾರೆ. ಈ ಪ್ರಕರಣ ಇನ್ನೂ ಹಲವು ದೊಡ್ಡ ಹೆಸರುಗಳನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ ಎಂದು ಸಿಬಿಐ ಮೂಲಗಳು ಹೇಳುತ್ತಿವೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports