Naveen Shankar: ಚೆಂದ ಇಲ್ಲ ಅಂತ ರಿಜೆಕ್ಟ್; ಗುಲ್ಟು ಬಂದ್ಮೆಲೆ ಇವರೇ ಸೂಪರ್; ನಟ ನವೀನ್ ಸೂಪರ್‌ ಜರ್ನಿ! | | ACTPnews

ಚೆಂದ ಇಲ್ಲ ಅಂತ ರಿಜೆಕ್ಟ್; ಗುಲ್ಟು ಬಂದ್ಮೆಲೆ ಇವರೇ ಸೂಪರ್; ನವೀನ್ ಸೂಪರ್‌ ಜರ್ನಿ!


Last Updated:

ಆ ದಿನ ಒಂದು ಸೀರಿಯಲ್ ಆಡಿಷನ್ ಇತ್ತು. ಆಡಿಷನ್ ಕೊಟ್ಟಾಯಿತ್ತು. ಆದರೆ, ರಿಜೆಕ್ಟ್ ಆಯಿತು. ಕಾರಣ ಗುಡ್ ಲುಕಿಂಗ್ ಇಲ್ಲ ಅನ್ನೋದೇ ಆಗಿತ್ತು. ಗುಲ್ಟು ಚಿತ್ರದ ನಾಯಕ ನವೀನ್ ಶಂಕರ್ ಈ ಸಿನಿ ಜರ್ನಿಯ ಇನ್ನಷ್ಟು ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ.

ಚೆಂದ ಇಲ್ಲ ಅಂತ ರಿಜೆಕ್ಟ್; ಗುಲ್ಟು ಬಂದ್ಮೆಲೆ ಇವರೇ ಸೂಪರ್; ನವೀನ್ ಸೂಪರ್‌ ಜರ್ನಿ!
ಚೆಂದ ಇಲ್ಲ ಅಂತ ರಿಜೆಕ್ಟ್; ಗುಲ್ಟು ಬಂದ್ಮೆಲೆ ಇವರೇ ಸೂಪರ್; ನವೀನ್ ಸೂಪರ್‌ ಜರ್ನಿ!

ನವೀನ್ ಶಂಕರ್ (Naveen Shankar) ಲೈಫ್ ಸ್ಟೋರಿ ಇಂಟ್ರಸ್ಟಿಂಗ್ ಆಗಿದೆ. ಹುಬ್ಬಳ್ಳಿಯಲ್ಲಿ ಮುಂಗಾರು ಮಳೆ ಚಿತ್ರ ನೋಡ್ತಾರೆ. ತಮ್ಮ ಇಳಕಲ್ ಅಲ್ಲಿ ದುನಿಯಾ ಚಿತ್ರ (Duniya Movie) ನೋಡ್ತಾರೆ. ಈ ನಾಯಕರ ಚಿತ್ರಗಳು ಸೂಪರ್ ಹಿಟ್ ಆಗಿರ್ತವೆ. ಇದರಿಂದ ಇವರಿಗೂ ಸಿನಿಮಾ ನಾಯಕ ಆಗ್ಬೇಕು ಅನ್ನುವ ಕನಸು ಹುಟ್ಟಿಕೊಳ್ಳುತ್ತದೆ. ಅದೇ ಆಸೆಯಿಂದಲೇ ಬೆಂಗಳೂರಿಗೆ ಬರ್ತಾರೆ. ಮಾಧ್ಯಮಲೋಕಕ್ಕೂ ಕಾಲಿಡ್ತಾರೆ. ಇಲ್ಲಿದ್ದಾಗಲೆ ಸೀರಿಯಲ್ (Serial) ಟ್ರೈ ಮಾಡ್ತಾರೆ. ಇಲ್ಲೂ ರಿಜೆಕ್ಷನ್ ನೋಡ್ತಾರೆ. ಸಿನಿಮಾ (Movie) ಅವಕಾಶಗಳು ಸಿಗೋದಿಲ್ಲ. ಇದರ ನಡುವೆ ಒಂದು ಕೆಲಸ ಮಾಡ್ತಾರೆ. ಅದೇನು ಅಂತ ಮುಂದೆ ಇದೆ ಓದಿ.

ಚೆಂದ ಇಲ್ಲ ಅಂತ ರಿಜೆಕ್ಟ್

ಒಂದು ಸೀರಿಯಲ್ ಆಡಿಷನ್‌ಗೆ ಹೋಗ್ತಾರೆ. ಅಲ್ಲಿ ಆಡಿಷನ್ ಆಗುತ್ತದೆ. ಸ್ವಲ್ಪ ಹೊರಗಡೆ ಕೂಡಿ ಅಂತಲೂ ಹೇಳ್ತಾರೆ. ಮತ್ಯಾರೋ ಬರ್ತಾರೆ. ಅವರ ಎದುರು ನವೀನ್ ಮತ್ತೊಮ್ಮೆ ಆ ಅಭಿನಯ ಮಾಡಿ ತೋರಿಸೋಕೆ ಹೇಳ್ತಾರೆ.

gultoo naveen shankar film journey unknown facts

ಗಣಿ-ವಿಜಿ ಸ್ಪೂರ್ತಿ

(ಚಿತ್ರ ಕೃಪೆ: ನವೀನ್ ಶಂಕರ್ ಇನ್‌ಸ್ಟಾಗ್ರಾಮ್)

ನವೀನ್ ಅಷ್ಟೆ ಖುಷಿಯಲ್ಲಿಯೇ ಅದನ್ನ ಮಾಡ್ತಾರೆ. ಅದಾದ್ಮೇಲೆ ಆ ಹ್ಯಾಂಡ್ಸಮ್ ಹುಡುಗ ಸೀರಿಯಲ್ ನಾಯಕ ಆಗ್ತಾರೆ. ಇದರಿಂದ ನವೀನ್‌ ಅವರಿಗೆ ತುಂಬಾನೆ ಬೇಸರ ಆಗುತ್ತದೆ. ಆಡಿಷನ್ ಕರೆದವರು ಹೇಳ್ತಾರೆ. ನೀವು ಚೆನ್ನಾಗಿಲ್ಲ. ಅದಕ್ಕೆ ನೀವು ಬೆಸ್ಟ್ ಮಾಡಿದರೂ ತೆಗೆದುಕೊಳ್ಳಿಲ್ಲ ಅಂತ ಹೇಳ್ತಾರೆ.

8 ರಿಂದ 10 ಕಿರು ಚಿತ್ರಗಳು

ನವೀನ್ ಅವರಿಗೆ ಈ ಸೀರಿಯಲ್ ಆಡಿಷನ್ ಅನುಭವ ಸಾಕಷ್ಟು ನೋವು ಕೊಡುತ್ತದೆ. ಅಷ್ಟರಲ್ಲಿಯೇ ನವೀನ್ ಒಂದಷ್ಟು ಕಿರು ಚಿತ್ರಗಳನ್ನ ಮಾಡೋಕೆ ಯೋಚನೆ ಮಾಡ್ತಾರೆ.

ಸುಮಾರು 8 ರಿಂದ 10 ಕಿರು ಚಿತ್ರಗಳನ್ನ ಮಾಡ್ತಾರೆ. ಹಾಗೆ ಮಾಡಿದಲಾಗಲೇ ಒಂದು ಚಿತ್ರದ ಆಫರ್ ಬರುತ್ತದೆ. ಲೀಡ್ ರೋಲ್ ಸಿಗುತ್ತದೆ. ಇದರ ಚಿತ್ರೀಕರಣ ಕೂಡ ಆಗುತ್ತದೆ. ಆದರೆ, ಈ ಸಿನಿಮಾನೇ ಬರಲಿಲ್ಲ ನೋಡಿ.

ಅರವಿಂದ್ ಕೌಶಿಕ್ ಕಾಲ್

ಡೈರೆಕ್ಟರ್ ಅರವಿಂದ್ ಕೌಶಿಕ್ ಕಾಲ್ ಮಾಡ್ತಾರೆ. ಆಗಲೇ ನಾನು ಸೀರಿಯಲ್‌ಗೆ ಬರೋದಿಲ್ಲ ಅಂತ ನವೀನ್ ಹೇಳ್ತಾರೆ. ಸಿನಿಮಾನೇ ಮಾಡ್ತೀನಿ ಅಂತ ಹೇಳ್ತಾರೆ.ಅದಕ್ಕೇನೆ ಕಾಲ್ ಮಾಡಿರೋದು ಅಂತ ಹೇಳ್ತಾರೆ.

gultoo naveen shankar film journey unknown facts

ಚೆಂದ ಇಲ್ಲ ಅಂತ ರಿಜೆಕ್ಟ್

(ಚಿತ್ರ ಕೃಪೆ: ನವೀನ್ ಶಂಕರ್ ಇನ್‌ಸ್ಟಾಗ್ರಾಮ್)

ಹಾಗೆ ಒಂದು ಚಿತ್ರ ಶುರು ಆಗುತ್ತದೆ. ಸ್ಟೀಲ್ ಪಾತ್ರೆ ಸಾಮಾನ್ ಅಂತ ಇದರ ಹೆಸರು ಇರುತ್ತದೆ. ಆದರೆ, ಇದು ಕೂಡ ಆಗೋದಿಲ್ಲ.

ಗಣಿ-ವಿಜಿ ಸ್ಪೂರ್ತಿ

ನವೀನ್ ಶಂಕರ್ ಅವರಿಗೆ ಗಣೇಶ್ ಮತ್ತು ದುನಿಯಾ ವಿಜಯ್ ಸ್ಪೂರ್ತಿ ಆಗಿದ್ದಾರೆ. ಇವರ ಚಿತ್ರಗಳನ್ನ ನೋಡಿಯೇ ಸಿನಿಮಾರಂಗಕ್ಕೂ ಬಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಮುಂಗಾರು ಮಳೆ ನೋಡ್ತಾರೆ. ಇಳಕಲ್ ಅಲ್ಲಿ ದುನಿಯಾ ಸಿನಿಮಾ ನೋಡ್ತಾರೆ. ಹಾಗಾಗಿಯೇ ಈ ಎರಡೂ ಚಿತ್ರದ ನಾಯಕರು ನವೀನ್ ಶಂಕರ್ ಅವರಿಗೆ ಸ್ಪೂರ್ತಿ ಆಗ್ತಾರೆ. ಇವರೆಲ್ಲ ಮಾಡ್ತಿದ್ದಾರೆ. ನಾನೂ ಮಾಡಬಹುದು ಅಂತಲೇ ಬರ್ತಾರೆ.

ನವೀನ್ ಸಿನಿಮಾಗಳು

ನವೀನ್ ಶಂಕರ್ ಸಾಕಷ್ಟು ಕಷ್ಟಪಟ್ಟಿದ್ದಾರೆ. ಗುಲ್ಟು ಚಿತ್ರ ಬರೋ ಮೊದಲು ಅವಕಾಶಕ್ಕಾಗಿ ಅಲೆದಾಡಿದ್ದಾರೆ. ಗುಲ್ಟು ಬಂದ್ಮೇಲೆ ಇವರ ಅಸಲಿ ಪ್ರತಿಭೆ ಏನು ಅನ್ನೋದು ಗೊತ್ತಾಗಿದೆ.

ಆಗ ಧರಣಿ ಮಂಡಲ ಮಧ್ಯದೊಳಗೆ , ಹೊಂಡಿಸಿ ಬರೆಯಿರಿ, ಗುರುದೇವ್ ಹೊಯ್ಸಳ, ಕ್ಷೇತ್ರಪತಿ, ನೋಡಿದವರು ಏನಂತಾರೆ ಈ ಎಲ್ಲ ಚಿತ್ರಗಳು ಹುಡುಕಿ ಬಂದವು ನೋಡಿ.

ಈ ಚಿತ್ರಗಳ ಮೂಲಕ ನವೀನ್ ಶಂಕರ್ ಇಂಡಸ್ಟ್ರಿಯಲ್ಲಿ ಒಂದು ಹಂತಕ್ಕೆ ಬಂದಿದ್ದಾರೆ. ಹೆಚ್ಚು ಕಡಿಮೆ ಸುಮಾರು 13 ವರ್ಷದ ಜರ್ನಿಯಲ್ಲಿ ನವೀನ್ ಶಂಕರ್ ಯಾರು ಅನ್ನೋದು ಗೊತ್ತಾಗಿದೆ. ಹಾಗೆ ತಮ್ಮ ಈ ಒಂದು ಜರ್ನಿಯನ್ನ ರಾಪಿಡ್ ರಶ್ಮಿ ಅವರ ಜಸ್ಟ್ ಕ್ಯೂರಿಯಸ್ ಪಾಡ್ ಕಾಸ್ಟ್ ಅಲ್ಲಿಯೇ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed