Motherhood: 45ನೇ ವಯಸ್ಸಿನಲ್ಲಿ ತಾಯಿಯಾದ ಶಿವರಾಜ್‌ಕುಮಾರ್ ಸಿನಿಮಾ ನಟಿ; ವರ್ಷದ ಬಳಿಕ ಗುಡ್‌ನ್ಯೂಸ್ ಕೊಟ್ಟ AAP ಪಕ್ಷದ ನಾಯಕನ ಪತ್ನಿ! | | ACTPnews

12 ವರ್ಷಗಳ ಬಳಿಕ ಗುಡ್​​​​ನ್ಯೂಸ್​ ಕೊಟ್ಟ ನಟಿ!


Last Updated:

ಪದ್ಮಪ್ರಿಯಾ 45ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾರೆ. ಮದುವೆಯಾಗಿ 12 ವರ್ಷಗಳ ಬಳಿಕ ಮಗುವಿನ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.

12 ವರ್ಷಗಳ ಬಳಿಕ ಗುಡ್​​​​ನ್ಯೂಸ್​ ಕೊಟ್ಟ ನಟಿ!
12 ವರ್ಷಗಳ ಬಳಿಕ ಗುಡ್​​​​ನ್ಯೂಸ್​ ಕೊಟ್ಟ ನಟಿ!

ಕನ್ನಡ ಸಿನಿಮಾ ಪ್ರೇಮಿಗಳಿಗೆ (Kannada Cinema Lovers) ಪದ್ಮಪ್ರಿಯಾ (Padma Priya Janakiraman) ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈಗಿನ ಸಿನಿಮಾ ಅಭಿಮಾನಿಗಳಿಗೆ ಅವರ ಬಗ್ಗೆ ತಿಳಿದಿಲ್ಲ. ಆದರೆ ಶಿವರಾಜ್‌ಕುಮಾರ್ (Shivarajkumar) ನಟನೆಯ ತಮಸ್ಸು ಸಿನಿಮಾ ನಟಿ ಎಂದರೇ ಹಲವರಿಗೆ ನೆನಪಾಗಬಹುದು. ಈ ಸಿನಿಮಾದೊಂದಿಗೆ ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಪರಿಚಯವಾಗಿದ್ದರು. ಕನ್ನಡ ಸಿನಿಮಾ ಮಾತ್ರವಲ್ಲದೇ, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವ ಸಮಯದಲ್ಲಿಯೇ (Marriage) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಆದರೆ ಮದುವೆಯಾದ 12 ವರ್ಷಗಳ ಬಳಿಕ ತಾಯಿಯಾಗಿರುವ ಗುಡ್ ನ್ಯೂಸ್ ನೀಡಿದ್ದಾರೆ. ಮಗು ಜನಿಸಿದ ಒಂದು ವರ್ಷದ ಬಳಿಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆದರೆ ಹುಟ್ಟಿದ ಮಗು ಗಂಡು ಅಥವಾ ಹೆಣ್ಣು ಅನ್ನೋದನ್ನು ರಿವೀಲ್ ಮಾಡಿಲ್ಲ.

ಪದ್ಮಪ್ರಿಯಾ 2014ರಲ್ಲಿ ಜಾಸ್ಮಿನ್ ಶಾ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದರು. ಇವರು ಆಪ್ ಪಕ್ಷದ ನಾಯಕರಾಗಿದ್ದು, ಮದುವೆಯಾದ ಬಳಿಕ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಅವರ ವಯಸ್ಸು 45 ವರ್ಷ, ಈ ಅವರು ತಾಯಿ ಆಗಿರೋದಾಗಿ ರಿವೀಲ್ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಇವರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಆದರೆ ತಮ್ಮ ಮಗುವಿನ ಬಗ್ಗೆ ಎಲ್ಲಿಯೂ ರಿವೀಲ್ ಮಾಡಿಲ್ಲ. ಈಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿರುವುದರಿಂದ, ಹಲವರು ಅವರಿಗೆ ಶುಭಾಶಯ ತಿಳಿಸಿ ಕಾಮೆಂಟ್ ಮಾಡುತ್ತಿದ್ದಾರೆ.

ಕೇರಳ ಮೂಲದ ಪದ್ಮಪ್ರಿಯಾ, ಟಾಲಿವುಡ್ ಸಿನಿಮಾನಲ್ಲಿ 2004ರಲ್ಲಿ ನಿರ್ಮಾಣವಾಗಿದ್ದ ‘ಸೀನು ವಾಸಂತಿ ಲಕ್ಷ್ಮಿ’ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಮಲಯಾಳಂ ಸಿನಿಮಾಗೆ ಅದೇ ವರ್ಷ ಮುಮ್ಮಟ್ಟಿ ಅವರ ‘ಕಾಳ್ಚ’ ಮೂಲಕ ಗಮನ ಸೆಳೆದಿದ್ದರು. ಕನ್ನಡದಲ್ಲಿ ತಮಸ್ಸು, 5 ಒಂದ್ಲ ಐದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಈ ಸಿನಿಮಾಗಳು ಅಷ್ಟು ಹಿಟ್ ಆಗಿರಲಿಲ್ಲ. ಆದರೆ ಮಲಯಾಳಂನಲ್ಲಿ ಸ್ಟಾರ್ ಡಮ್ ಪಡೆದುಕೊಂಡಿದ್ದು, ಇವರು ಕೊನೆಯದಾಗಿ 2022ರಲ್ಲಿ ‘ವಂಡರ್ ಉಮೆನ್’ ಸಿನಿಮಾದಲ್ಲಿ ನಟಿಸಿದ್ದರು.

ಇದನ್ನೂ ಓದಿ: Education Minister Pralhad Joshi: ಧರ್ಮೇಂದ್ರ ಪ್ರಧಾನ್ ಸ್ಥಾನಕ್ಕೆ ಜೋಶಿಯವರನ್ನೇ ಆಯ್ಕೆ ಮಾಡಿದ್ದೇಕೆ ಮೋದಿ; ಇಲ್ಲಿದೆ ಅಚ್ಚರಿ ಮಾಹಿತಿ!

ಅಂದಹಾಗೇ, ಪದ್ಮಪ್ರಿಯಾ ಅವರು 1980 ಫೆಬ್ರವರಿ 28ರಂದು ದೆಹಲಿಯಲ್ಲಿ ಜನಿಸಿದ್ದರು. ತಂದೆ ಜಾನಕಿರಾಮನ್ ಅವರು ಭಾರತೀಯ ಸೇನೆಯ ಬ್ರಿಗೇಡಿರ್ ಆಗಿದ್ದು, ತಂದೆ-ತಾಯಿ ಇಬ್ಬರು ತಮಿಳುನಾಡು ಮೂಲದವರು ಆಗಿದ್ದಾರೆ. ಎಂಬಿಎ ಪದವಿಯನ್ನು ಪೂರ್ಣಗೊಳಿಸಿರುವ ಅವರು, ನ್ಯೂಯಾರ್ಕ್ ಯೂನಿವರ್ಸಿಟಿ ಮಾಸ್ಟರ್ಸ್ ಇನ್ ಪಬ್ಲಿಕ್ ಅಡ್ಮಿನಿಸ್ಟೇಷನ್ ಪಡೆದುಕೊಂಡಿದ್ದಾರೆ. ಪದ್ಮಪ್ರಿಯಾ ಅವರು ಮಲಯಾಳಂ ಕಾಳ್ಚ, ನ್ಯಾಷನಲ್ ಅವಾರ್ಡ್ ಸ್ಪೆಷಲ್ ಮೆನ್ಷನ್ ಸಿನಿಮಾ ಪಝುಸ್ಸಿ ರಾಜ, ತಮಿಳಿನ ಜೈ ಭೀಮ್, ಒರು ತೆಕ್ಕನ್ ತಲ್ಲು ಕೇಸ್ ಸಿನಿಮಾಗಳಲ್ಲಿ ನಟಿಸಿದ್ದರು. ಇವರಿಗೆ ರಾಷ್ಟ್ರೀಯ ಅವಾರ್ಡ್ ಜೊತೆಗೆ ಕೇರಳ ರಾಜ್ಯ ಪ್ರಶಸ್ತಿ, ಫಿಲ್ಮ್​​ ಫೇರ್ ನಾಮಿನೇಷನ್ ಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ನೃತ್ಯ, ಮಾಡೆಲಿಂಗ್ ಸೇರಿದಂತೆ ಪರಿಸರ ಸಂಬಂಧಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed