ಐವತ್ತು ವರ್ಷಗಳ ಹಿಂದೆ ಇರಾನ್ ತುಂಬಾ ವಿಭಿನ್ನವಾದ ಚಿತ್ರಣವನ್ನು ಹೊಂದಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ನಿಯಮಿತವಾಗಿ ಪಾಶ್ಚಾತ್ಯ ಉಡುಪುಗಳನ್ನು ಧರಿಸಿದ ಮಹಿಳೆಯರನ್ನು ನೀವು ಕಾಣಬಹುದಿತ್ತು. ಆದರೆ, ಇರಾನ್ನಲ್ಲಿ 1979 ರಲ್ಲಿ ಇಸ್ಲಾಮಿಕ್ ಕ್ರಾಂತಿಯು ಪಹ್ಲವಿ ರಾಜವಂಶವನ್ನು ಉರುಳಿಸಿದಾಗ ನಾಟಕೀಯ ಬದಲಾವಣೆಯು ಸಂಭವಿಸಿತು. ಇದು ಇಸ್ಲಾಮಿಕ್ ಗಣರಾಜ್ಯದ ಸ್ಥಾಪನೆಗೆ ಕಾರಣವಾಯಿತು ಮತ್ತು ದೇಶದ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ರೂಢಿಗಳಲ್ಲಿ ಆಳವಾದ ಬದಲಾವಣೆಗಳು, ವಿಶೇಷವಾಗಿ ಮಹಿಳೆಯರ ಸ್ಥಿತಿ ಮತ್ತು ಹಕ್ಕುಗಳ ಮೇಲೆ ಪರಿಣಾಮ ಬೀರಿತು.
1979 ರ ಕ್ರಾಂತಿಯ ನಂತರ ಇರಾನ್ ಸಂಪೂರ್ಣ ಪರಿವರ್ತನೆಗೆ ಒಳಗಾಯಿತು, ಇದು ದೇಶದ ಕೊನೆಯ ದೊರೆ ಮೊಹಮ್ಮದ್ ರೆಜಾ ಪಹ್ಲವಿಯ ಅವನತಿ ಮತ್ತು ಅಯತೊಲ್ಲಾ ಖೊಮೇನಿಯ ಉದಯಕ್ಕೆ ಕಾರಣವಾಯಿತು. ಈ ನಾಟಕೀಯ ಬದಲಾವಣೆಗೆ ಕಾರಣವಾದ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ ಷಾ ಅವರ ಅದ್ದೂರಿ ಪಾರ್ಟಿ, ಇದನ್ನು ಇತಿಹಾಸದಲ್ಲಿ ಅತ್ಯಂತ ಅತಿರಂಜಿತ ಪಾರ್ಟಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಸಂಪತ್ತು ಮತ್ತು ಅಧಿಕಾರದ ಪ್ರದರ್ಶನವು ವ್ಯಾಪಕ ಅಸಮಾಧಾನವನ್ನು ಹುಟ್ಟುಹಾಕಿತು ಮತ್ತು ಇರಾನ್ನ 2,000-ವರ್ಷ-ಹಳೆಯ ರಾಜಪ್ರಭುತ್ವದ ಅಂತಿಮವಾಗಿ ಕುಸಿಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು. 1941 ರಲ್ಲಿ, ಶ್ರೀಮಂತ ದೊರೆ ಮೊಹಮ್ಮದ್ ರೆಜಾ ಷಾ ಅಧಿಕಾರಕ್ಕೆ ಬಂದರು. ಅವರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಮೂಲಕ ದೇಶವನ್ನು ಆಧುನೀಕರಿಸಲು ಪ್ರಯತ್ನಿಸಿದರು, ಉದಾರ ನೀತಿಗಳನ್ನು ಅಳವಡಿಸಿಕೊಂಡರು ಮತ್ತು ಹಿಜಾಬ್ನಂತಹ ಸಾಂಪ್ರದಾಯಿಕ ಆಚರಣೆಗಳನ್ನು ವಿರೋಧಿಸಿದರು. ಆದರೆ, ಅವರ ಪ್ರಗತಿಪರ ನಿಲುವು ಧಾರ್ಮಿಕ ಮುಖಂಡರಿಂದ ತೀವ್ರ ವಿರೋಧವನ್ನು ಎದುರಿಸಿತು ಮತ್ತು ಅವರ ಆಡಳಿತದ ವಿರುದ್ಧ ಮಾತನಾಡಿದ ಅನೇಕರು ಜೈಲುವಾಸ ಮತ್ತು ದಮನಕ್ಕೆ ಒಳಗಾಗಿದ್ದರು ಎಂದು ಹೇಳಲಾಗುತ್ತದೆ.
1971 ರಲ್ಲಿ ಪರ್ಸಿಪೋಲಿಸ್ನಲ್ಲಿ ಪರ್ಷಿಯನ್ ಸಾಮ್ರಾಜ್ಯದ 2,500 ನೇ ವಾರ್ಷಿಕೋತ್ಸವದ ಭವ್ಯವಾದ ಪಾರ್ಟಿಯನ್ನು ಷಾ ನೀಡಿದರು. ಮರುಭೂಮಿಯಲ್ಲಿ ನಡೆದ ಭವ್ಯವಾದ ಆಚರಣೆಯಲ್ಲಿ 65 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ಈವೆಂಟ್ಗೆ $100 ಮಿಲಿಯನ್ ವೆಚ್ಚವಾಯಿತು ಮತ್ತು ಈ ಔತಣಕೂಟ ವ್ಯಾಪಕ ಅಸಮಾಧಾನಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತದೆ. ಈ ಪಾರ್ಟಿಯನ್ನು 1971 ರಲ್ಲಿ ಮಾಡಬೇಕು ಎಂದು ಯೋಚಿಸಿದಾಗ, ಸಿದ್ಧತೆಗಳು ಪ್ರಾರಂಭವಾಗುತ್ತಿದ್ದಂತೆ, ಟೆಹ್ರಾನ್ನಲ್ಲಿ ಅಂತಹ ಭವ್ಯವಾದ ಕಾರ್ಯಕ್ರಮವನ್ನು ಆಯೋಜಿಸಲು ಅಗತ್ಯ ಸೌಲಭ್ಯಗಳ ಕೊರತೆ ಕಂಡುಬಂದಿದ್ದರಿಂದ ಬರಡು ಮರುಭೂಮಿಯಲ್ಲಿ ಆಚರಣೆಯನ್ನು ನಡೆಸಲು ನಿರ್ಧರಿಸಲಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪೆರ್ಸೆಪೋಲಿಸ್ ಎಂದು ಕರೆಯಲ್ಪಡುವ ಈ ಪ್ರದೇಶವು 30 ಕಿಲೋಮೀಟರ್ ವಿಸ್ತಾರದಲ್ಲಿ ಸುಂದರವಾಗಿ ರೂಪಾಂತರಗೊಂಡಿತು, ಇದು ಪರ್ಷಿಯಾದ ಮೊದಲ ಚಕ್ರವರ್ತಿ ಸೈರಸ್ ದಿ ಗ್ರೇಟ್ನ ಸಮಾಧಿಗೆ ನೆಲೆಯಾಗಿದೆ. ಪಾರ್ಟಿ ನೀಡುವ ಸಮಯದಲ್ಲಿ, ದೇಶದ ಇನ್ನೊಂದು ಬದಿಯಲ್ಲಿ, ಸಾಮಾನ್ಯ ಇರಾನಿಯನ್ನರು ಶುದ್ಧ ಕುಡಿಯುವ ನೀರಿನಂತಹ ಮೂಲಭೂತ ಅಗತ್ಯಗಳೊಂದಿಗೆ ಹೋರಾಡುತ್ತಿದ್ದರು. ಈ ಅದ್ದೂರಿ ಪಾರ್ಟಿಯು, ಜನರ ದೈನಂದಿನ ಹೋರಾಟಗಳ ನಡುವಿನ ರಾಜಪ್ರಭುತ್ವದ ಬಗ್ಗೆ ಹೆಚ್ಚುತ್ತಿದ್ದ ಅಸಮಾಧಾನವನ್ನು ಹೆಚ್ಚಿಸಿತು ಎಂದು ಹಲವು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅತಿಥಿಗಳಿಗೆ ಅವಕಾಶ ಕಲ್ಪಿಸಲು ಮರುಭೂಮಿಯಲ್ಲಿ ತಾತ್ಕಾಲಿಕ ಟೆಂಟ್ಗಳ ನಗರವನ್ನು ನಿರ್ಮಿಸಲಾಗಿತ್ತು ಎಂದು ವರದಿಗಳು ಸೂಚಿಸುತ್ತವೆ. ವಿಸ್ಮಯಕಾರಿಯಾಗಿ, ಟೆಂಟ್ಗಳಿಗೆ ಬೇಕಾದ ವಸ್ತುಗಳನ್ನು ಸಾಗಿಸಲು ಫ್ರಾನ್ಸ್ನಿಂದ 40 ಟ್ರಕ್ಗಳು ಮತ್ತು 100 ವಿಮಾನಗಳನ್ನು ತರಲಾಯಿತು. ಈವೆಂಟ್ನ ಪ್ರಮಾಣವು ದಿಗ್ಭ್ರಮೆಗೊಳಿಸುವಂತಿತ್ತು, 18 ಟನ್ ಆಹಾರ, 180 ಬಣಿಸಿಗರು ಮತ್ತು 25,000 ವೈನ್ ಬಟಲ್ಗಳನ್ನು ಒಳಗೊಂಡಿತ್ತು.
ಜಗತ್ತಿನಾದ್ಯಂತ ಭೇಟಿ ನೀಡುವ ರಾಜರು, ರಾಣಿಯರು ಮತ್ತು ರಾಜಕೀಯ ವ್ಯಕ್ತಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಈ ಪಾರ್ಟಿಯನ್ನು ವಿಶ್ವದ ಅತ್ಯಂತ ದುಬಾರಿ ಪಾರ್ಟಿ ಎಂದು ಕರೆಯಲಾಯಿತು.












